ಜಿಯೋ ನಂತರ LTE ವೋಲ್ಟ್ ತಂದ ಎರಡನೇ ಟೆಲಿಕಾಂ!!..ಯಾವುದು ಗೊತ್ತಾ?

ಇನ್ಮುಂದೆ ಜಿಯೋಗಿಂತಲೂ ಕಡಿಮೆಯಾಗಲಿವೆ ಏರ್‌ಟೆಲ್ ದರಗಳು!..ಕಾರಣ ಇಲ್ಲಿದೆ!!

|

ಭಾರತದ ಪ್ರಮುಖ ಟೆಲಿಕಾಂ ಕಂಪೆನಿ ಏರ್‌ಟೆಲ್ ಮುಂದಿನ ವಾರದೊಳಗೆ ವೋಲ್ಟ್ ಸೇವೆಗಳನ್ನು ಪ್ರಾರಂಭಿಸಲಿದೆ.! ಹೌದು, ಜಿಯೋ ವಿರುದ್ದ ಸೆಡ್ಡು ಹೊಡೆಯಲು ಏರ್‌ಟೆಲ್ ವೋಲ್ಟ್ ಸೇವೆಯನ್ನು ಹೊರತರುತ್ತಿರುವುದಾಗಿ ವರದಿಗಳು ತಿಳಿಸಿದ್ದು, ಜಿಯೋ ನಂತರ ಎಲ್‌ಟಿಇ ತಂತ್ರಜ್ಞಾನವನ್ನು ತರುತ್ತಿರುವ ಎರಡನೇ ಟೆಲಿಕಾಂ ಇದಾಗಿದೆ.!!

ಇನ್ನು ಏರ್‌ಟೆಲ್ ಎಲ್‌ಟಿಇ ಸೇವೆಯನ್ನು ತರುತ್ತಿರುವ ಸುದ್ದಿಯ ಜೊತೆಯಲ್ಲಿಯೇ,ಟೆಲಿಕಾಂ ಕಂಪೆನಿಗಳ ಕಾಲ್ ಮಾಡಲು ಬಳಕೆ ಮಾಡುತ್ತಿರುವ ಹಳೆಯ ಸರ್ಕ್ಯೂಟ್-ಸ್ವಿಚ್ ತಂತ್ರಜ್ಞಾನವನ್ನು ಕೊನೆಗಳಿಸಲಿ ಏರ್‌ಟೆಲ್ ಚಿಂತಿಸಿದೆ ಎನ್ನಲಾಗಿದೆ. ಹಾಗಾಗಿ, ಏರ್‌ಟೆಲ್ ಜಿಯೋಗಿಂತಲೂ ಕಡಿಮೆ ಬೆಲೆಯಲ್ಲಿ ಟೆಲಿಕಾಂ ಸೇವೆಗಳನ್ನು ನೀಡಲಿದೆ ಎನ್ನುವ ಸುದ್ದಿ ಕೂಡ ವೈರಲ್ ಆಗಿದೆ.!!

ಹಾಗಾದರೆ, ವೋಲ್ಟ್ ಸೇವೆಯಿಂದ ಏರ್‌ಟೆಲ್ ಜಿಯೋಗಿಂತಲೂ ಕಡಿಮೆ ಬೆಲೆಯಲ್ಲಿ ಸೆವೆಯನ್ನು ನೀಡಬಹುದೆ? ವೋಲ್ಟ್ ಸೇವೆಯಿಂದ ಏರ್‌ಟೆಲ್ ಮತ್ತೆ ತನ್ನ ಗ್ರಾಹಕರನ್ನು ಸೆಳೆದುಕೊಳ್ಳುತ್ತದೆಯೇ? ಇತರ ಕಂಪೆನಿಗಳ ಕಥೆಯೇನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

402 ಕೋಟಿ ರೂ. ಬಂಡವಾಳ ಹೂಡಿಕೆ!!

402 ಕೋಟಿ ರೂ. ಬಂಡವಾಳ ಹೂಡಿಕೆ!!

ಇತರೆ ನೆಟ್‌ವರ್ಕ್ ಆಪರೇಟರ್‌ಗಳಿಗಿಂತ ಏರ್‌ಟೆಲ್ ಜಿಯೋಗೆ ಕಠಿಣ ಸ್ಪರ್ಧೆಯ ಒಡ್ಡುತ್ತಿದ್ದು, ಪ್ರಸ್ತುತ 402 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ಏರ್‌ಟೆಲ್ ವೋಲ್ಟ್ ಕಾಲಿಂಗ್ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಖರ್ಚು ಮಾಡಿದೆ. ಜೊತೆಗೆ ಇತರ ಟೆಲಿಕಾಂಗಳಿಗಿಂತಲೂ ಬಹುಬೇಗ ಏರ್‌ಟೆಲ್ ವೋಲ್ಟ್ ಕಾಲಿಂಗ್ ಸೇವೆಯನ್ನು ಬಿಡುಗಡೆ ಮಾಡುತ್ತಿದೆ.!!

ಕಡಿಮೆಯಾಗಲಿವೆ ಏರ್‌ಟೆಲ್ ಬೆಲೆಗಳು?

ಕಡಿಮೆಯಾಗಲಿವೆ ಏರ್‌ಟೆಲ್ ಬೆಲೆಗಳು?

ವೋಲ್ಟ್ ಕಾಲಿಂಗ್ ತಂತ್ರಜ್ಞಾನ ಹೊಂದಿದ್ದ ಜಿಯೋ ಕರೆಗಳಿಗೆ ದರ ವಿಧಿಸದೇ ಕೇವಲ ಡೇಟಾಗೆ ಮಾತ್ರ ದರಗಳನ್ನು ವಿಧಿಸುತ್ತಿತ್ತು( ಬರಿ ಕರೆಗಳಿಗೆ ಚಾರ್ಜ್ ಮಾಡಲಾಗುತ್ತಿತ್ತು). ಹಾಗಾಗಿ, ಕಡಿಮೆ ಬೆಲೆಯಲ್ಲಿ ಜಿಯೋ ಸೇವೆ ಒದಗಿಸುತ್ತಿತ್ತು. ಇನ್ನು ಏರ್‌ಟೆಲ್ ಕೂಡ ವೋಲ್ಟ್ ಸೇವೆಯನ್ನು ತರುತ್ತಿರುವುದರಿಂದ ಏರ್‌ಟೆಲ್ ಬೆಲೆಗಳು ಕಡಿಮೆಯಾಗಲಿವೆ ಎನ್ನಲಾಗಿದೆ.!!

ಮೊದಲು ಕೊಲ್ಕತ್ತಾದಲ್ಲಿ!!

ಮೊದಲು ಕೊಲ್ಕತ್ತಾದಲ್ಲಿ!!

ಏರ್‌ಟೆಲ್ ಬಿಡುಗಡೆ ಮಾಡುತ್ತಿರುವ ವೋಲ್ಟ್ ಸೇವೆಯು ಮೊದಲು ಕೊಲ್ಕತ್ತಾದಲ್ಲಿ ಲಭ್ಯವಾಗಲಿದೆ.!!ನಂತರ ಒಂದು ವರ್ಷದ ವೇಳೆಗೆ ದೇಶದಾಧ್ಯಂತ ಏರ್‌ಟೆಲ್ ವೋಲ್ಟ್ ಸೇವೆಯು ಲಭ್ಯವಾಗಲಿದ್ದು, ಈ ಕಾರ್ಯವು ವೇಗವಾಗಿ ಸಾಗುತ್ತಿದೆ ಎಂದು ರಿಪೋರ್ಟ್‌ಗಳು ತಿಳಿಸಿವೆ.!!

ಏರ್‌ಟೆಲ್ ಕಡೆಗೆ ಮುಖ ಮಾಡಬಹುದು!!

ಏರ್‌ಟೆಲ್ ಕಡೆಗೆ ಮುಖ ಮಾಡಬಹುದು!!

ಇನ್ನೊಂದೆ ವಾರದಲ್ಲಿ ಏರ್‌ಟೆಲ್ ವೋಲ್ಟ್ ಸೇವೆಯನ್ನು ತರುತ್ತಿರುವುದು ಟೆಲಿಕಾಂನಲ್ಲಿ ಮತ್ತೊಂದು ಭಾರಿ ಬದಲಾವಣೆ ತರುವ ಸಾಧ್ಯತೆ ಹೆಚ್ಚಿದೆ.!! ಕಡಿಮೆ ಬೆಲೆಗೆ ಏರ್‌ಟೆಲ್ ಕೂಡ ಸೇವೆಯನ್ನು ಒದಗಿಸಿದರೆ ಜಿಯೋ ಗ್ರಾಹಕರು ಮತ್ತೆ ಏರ್‌ಟೆಲ್ ಕಡೆಗೆ ಮುಖ ಮಾಡಬಹುದು.!!

ಮೂರು ಫೋನ್‌ಗಳಲ್ಲಿ ಒಂದು VoLTE ಪೋನ್!

ಮೂರು ಫೋನ್‌ಗಳಲ್ಲಿ ಒಂದು VoLTE ಪೋನ್!

ಭಾರತದಲ್ಲಿ ಜೂನ್ ತ್ರೈಮಾಸಿಕದಲ್ಲಿ ಮಾರಾಟವಾದ ಪ್ರತಿ ಮೂರು ಫೋನ್‌ಗಳಲ್ಲಿ ಒಂದು VoLTE ಸಾಧನವಾಗಿದೆ ಎಂದು ಕೌಂಟರ್ಪಾಯಿಂಟ್ ರಿಸರ್ಚ್ ತಿಳಿಸಿದೆ. ಹಾಗಾಗಿ, ಭವಿಷ್ಯದ ವೋಲ್ಟ್ ಸರ್ವಿಸ್‌ ಮೇಲೆ ಎಲ್ಲಾ ಟೆಲಿಕಾಂಗಳು ಕಣ್ಣಿಟ್ಟಿದ್ದು, ವೋಲ್ಟ್ ಸೇವೆ ಮುಖ್ಯವಾಹಿನಿಗೆ ಬರಲಿದೆ.!!

ಒಂದಕ್ಕಿಂತ ಹೆಚ್ಚು ಜಿಯೋ ಉಚಿತ ಫೋನ್ ಬುಕ್ ಮಾಡುವುದು ಹೇಗೆ?
ವೋಡಾಫೋನ್ ಕೂಡ ವೋಲ್ಟ್ ತರುತ್ತಿದೆ.!!

ವೋಡಾಫೋನ್ ಕೂಡ ವೋಲ್ಟ್ ತರುತ್ತಿದೆ.!!

ಏರ್‌ಟೆಲ್ ವೋಲ್ಟ್ ತರುತ್ತಿರುವ ಬೆನ್ನಿನಲ್ಲಿಯೇ ವೋಡಾಫೋನ್ ಕೂಡ ವೋಲ್ಟ್ ಸೇವೆಯನ್ನು ತರುವಲ್ಲಿ ಬಹಳ ಶ್ರಮಿಸುತ್ತಿದೆ.!! ಆದರೆ, ಏರ್‌ಟೆಲ್ ತಂದಿರುವಷ್ಟು ವೇಗವಾಗಿ ವೋಡಾಫೋನ್ ವೋಲ್ಟ್ ಸೇವೆಯನ್ನು ತರುತ್ತದೆಯೇ? ಎಂಬುದನ್ನು ಕಾದುನೋಡಬೇಕಿದೆ.!!

Best Mobiles in India

English summary
India's VoLTE user base is estimated to reach 370 million by 2022.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X