Subscribe to Gizbot

ಏರ್‌ಟೆಲ್‌ನಿಂದ ರೂ.60 ಕ್ಕೆ 1GB 3G/4G ಡಾಟಾ ಆಫರ್ ಲಾಂಚ್‌!

Written By:

2016 ಭಾರತದ ಇಂಟರ್ನೆಟ್‌ ಬಳಕೆದಾರರಿಗೆ ಒಂಥರಾ ಗೋಲ್ಡೆನ್ ಪೀರಿಯಡ್ ಎಂದರೆ ತಪ್ಪಾಗಲಾರದು. ಯಾಕಂದ್ರೆ ರಿಲಾಯನ್ಸ್ ಜಿಯೋ 4G ಸಿಮ್‌ ಪ್ರಿವೀವ್ ಆಫರ್‌ ಆರಂಭವಾದಾಗಿನಿಂದಲೂ ಸಹ ಏರ್‌ಟೆಲ್‌, ಬಿಎಸ್‌ಎನ್‌ಎಲ್‌, ವೊಡಾಫೋನ್‌, ಐಡಿಯಾ, ಏರ್‌ಸೆಲ್‌ ಸೇರಿದಂತೆ ಹಲವು ಟೆಲಿಕಾಂಗಳು ತಮ್ಮ ಗ್ರಾಹಕರಿಗೆ ಉತ್ತಮ ಡಾಟಾ ಆಫರ್‌ಗಳನ್ನು ನಾ ಮುಂದು ತಾಮುಂದು ಎಂದು ನೀಡುತ್ತಿವೆ.

ಗ್ರಾಹಕ ಆಕ್ಟಿವೇಟ್ ಮಾಡಿಸಿರೋ ಆಫರ್‌ ಮುಗಿಯುವ ಮುನ್ನವೇ ಇನ್ನೊಂದು ಉತ್ತಮ ಆಫರ್ ಲಾಂಚ್‌ ಆಗುತ್ತಿರುವ ಸನ್ನಿವೇಶಗಳು ಸಹ ಟೆಲಿಕಾಂಗಳ ಕ್ಷೇತ್ರದಲ್ಲಿ ನಡೆಯುತ್ತಿದೆ. ಅದಕ್ಕೆ ಸಾಕ್ಷಿಯಾಗಿ ಈಗ ರಿಲಾಯನ್ಸ್‌ಗೆ ಪ್ರತಿಸ್ಪರ್ಧಿಯಾಗಿ ಏರ್‌ಟೆಲ್‌ ತನ್ನ ಗ್ರಾಹಕರಿಗೆ 'ಮೆಗಾ ಸೇವರ್‌ ಪ್ಯಾಕ್ಸ್' ಅನ್ನು ಆಫರ್‌ ಮಾಡುತ್ತಿದೆ. ನೀವು ಏರ್‌ಟೆಲ್‌ ಗ್ರಾಹಕರೇ ಆಗಿದ್ದಲ್ಲಿ, ನಿಮ್ಮ ಮೆಗಾ ಆಫರ್‌ಗಳು ಯಾವುವು ಎಂಬ ಕಂಪ್ಲೀಟ್‌ ಡೀಟೈಲ್‌ ಅನ್ನು ಸ್ಲೈಡರ್‌ಗಳನ್ನು ಓದಿ ತಿಳಿಯಿರಿ.

ಏರ್‌ಟೆಲ್‌ 4G LTE ಇಂಟರ್ನೆಟ್ ವೇಗದ ಕಂಪ್ಲೀಟ್ ವಿವರ ಇಲ್ಲಿದೆ!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏರ್‌ಟೆಲ್‌ ಮೆಗಾ ಸೇವರ್ ಆಫರ್

ಏರ್‌ಟೆಲ್‌ ಮೆಗಾ ಸೇವರ್ ಆಫರ್

ಇದು ರಿಲಾಯನ್ಸ್ ಜಿಯೋ ಎಫೆಕ್ಟ್‌. ಆದ್ದರಿಂದ ಏರ್‌ಟೆಲ್‌ ತನ್ನ ಗ್ರಾಹಕರಿಗೆ ಕೇವಲ ರೂ.60 ಕ್ಕೆ 1GB 3G, 4G ಇಂಟರ್ನೆಟ್‌ ಡಾಟಾ ಆಫರ್ ಮಾಡಿದೆ.

ಮೆಗಾ ಸೇವರ್‌ ಪ್ಯಾಕ್ಸ್

ಮೆಗಾ ಸೇವರ್‌ ಪ್ಯಾಕ್ಸ್

ಏರ್‌ಟೆಲ್‌ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ 'ಟ್ರಾಯ್‌'ನ ಹೊಸ ನೀತಿ ದೀರ್ಘಕಾಲದ ವ್ಯಾಲಿಡಿಟಿ ನೀಡುವ ಅವಕಾಶವನ್ನು ಉಪಯೋಗಿಸಿಕೊಂಡು 'ಮೆಗಾ ಸೇವರ್‌ ಪ್ಯಾಕ್ಸ್‌' ಅನ್ನು ಲಾಂಚ್‌ ಮಾಡಿದೆ. 1GB 3G, 4G ಇಂಟರ್ನೆಟ್‌ ಡಾಟಾ ಕೇವಲ ಈಗ ರೂ 60 ಕ್ಕೆ ದೊರೆಯಲಿದೆ. ಏರ್‌ಟೆಲ್‌ನ ಪ್ರಿಪೇಡ್‌ ಗ್ರಾಹಕರಿಗೆ ಹೊಸ ಡಾಟಾ ಪ್ಲಾನ್‌ಗಳು ಯಾವುವು, ಹೇಗೆ ಬಳಸಿಕೊಳ್ಳುವುದು ಎಂಬುದರ ಬಗ್ಗೆ ತಿಳಿಯಲು ಮುಂದಿನ ಸ್ಲೈಡರ್‌ ಓದಿರಿ.

ಮೆಗಾ ಸೇವರ್ ಪ್ಯಾಕ್ಸ್‌

ಮೆಗಾ ಸೇವರ್ ಪ್ಯಾಕ್ಸ್‌

ಮೆಗಾ ಸೇವರ್ ಪ್ಯಾಕ್ಸ್ ಎರಡು ರೀತಿಯಲ್ಲಿ ರೂ. 1,498 ಮತ್ತು ರೂ.748 ಕ್ಕೆ ದೊರೆಯಲಿದೆ. ರೂ. 1,498 ರ ಮೆಗಾ ಸೇವರ್‌ ಪ್ಯಾಕ್ಸ್ 4G/3G ಡಾಟಾ 28 ದಿನಗಳು ವ್ಯಾಲಿಡಿಟಿ ಹೊಂದಿದೆ. ಡಾಟಾ ಪ್ಯಾಕ್‌ಗಳು ಮುಗಿದ ನಂತರ ತಿಂಗಳಿಗೆ ರೂ. 51 ರೀಚಾರ್ಚ್‌ ಮಾಡಿಸಿ 1GB 3G/4G ಡಾಟಾವನ್ನು 28 ದಿನಗಳ ವ್ಯಾಲಿಡಿಟಿಯೊಂದಿಗೆ ಪಡೆಯಬಹುದಾಗಿದೆ.

ಇತರೆ ಡಾಟಾ ಪ್ಲಾನ್

ಇತರೆ ಡಾಟಾ ಪ್ಲಾನ್

ಗ್ರಾಹಕರು ರೂ.99 ರಿಚಾರ್ಜ್‌ ಮಾಡಿಸಿ 2GB ಮತ್ತು ರೂ.259 ಕ್ಕೆ 5GB ಡಾಟಾ ಪಡೆಯಬಹುದು. ಈ ಡಾಟಾ ಪ್ಲಾನ್‌ಗಳು 28 ದಿನ ವ್ಯಾಲಿಡಿಟಿ ಹೊಂದಿವೆ.

ಪ್ರತಿ ತಿಂಗಳು 10GB 3G/4G ಡಾಟಾ

ಪ್ರತಿ ತಿಂಗಳು 10GB 3G/4G ಡಾಟಾ

ನಿಮ್ಮ ಸ್ಮಾರ್ಟ್‌ಫೋನ್‌ಗೆ ಪ್ರತಿ ತಿಂಗಳು 10GB 3G/4G ಡಾಟಾ ಪಡೆಯಬಹುದಾಗಿದೆ. ಏರ್‌ಟೆಲ್‌ 10GB 3G/4G ಡಾಟಾ ಬಳಸಲು ರೂ.999 ಚಾರ್ಜ್‌ ಮಾಡುತ್ತದೆ. ಇದರ ವ್ಯಾಲಿಡಿಟಿ 28 ದಿನಗಳು ಇರುತ್ತದೆ. ಅಲ್ಲದೇ ಬಳಕೆದಾರರು 51 ರೂಗೆ 1GB 3G/4G ಡಾಟಾವನ್ನು 28 ದಿನಗಳ ವ್ಯಾಲಿಡಿಟಿಯೊಂದಿಗೆ ಪಡೆಯಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಏರ್‌ಟೆಲ್‌ ಸ್ಟೋರ್‌ಗಳಿಗೆ ಭೇಟಿ ನೀಡಿ. ಹಾಗೂ 2G ದರಕ್ಕಿಂತಲೂ ಕಡಿಮೆ ದರದಲ್ಲಿ 4G/3G ಡಾಟಾ ಪಡೆದುಕೊಳ್ಳಿ.

ಗಿಜ್‌ಬಾಟ್‌

ಗಿಜ್‌ಬಾಟ್‌

ರಿಲಾಯನ್ಸ್ ಜಿಯೋ 4G, ಸಿಮ್ ಉಚಿತದ ಬಗ್ಗೆ ತಿಳಿಯಲೇಬೇಕಾದ 5 ಮಾಹಿತಿಗಳು

ರಿಲಾಯನ್ಸ್ ಜಿಯೋ 4G, ಸಿಮ್ ಉಚಿತದ ಬಗ್ಗೆ ತಿಳಿಯಲೇಬೇಕಾದ 5 ಮಾಹಿತಿಗಳು

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Airtel ‘Mega Saver Packs’ that offer 1GB of 3G, 4G data for Rs 60. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot