Subscribe to Gizbot

ಏರ್‌ಟೆಲ್‌ 4G LTE ಇಂಟರ್ನೆಟ್ ವೇಗದ ಕಂಪ್ಲೀಟ್ ವಿವರ ಇಲ್ಲಿದೆ!

Written By:

ಭಾರತಿ ಏರ್‌ಟೆಲ್‌ ಇತ್ತೀಚೆಗೆ ತಾನೆ 4G LTE(4'th Generation Long Term Evolution) ನೆಟ್‌ವರ್ಕ್‌ ಅನ್ನು ಭಾರತದಲ್ಲಿ ಲಾಂಚ್‌ ಮಾಡಿರುವುದು ಬಹುಸಂಖ್ಯಾತ ಮೊಬೈಲ್‌ ಬಳಕೆದಾರರಿಗೆ ತಿಳಿದಿದೆ. 4G LTE ನೆಟ್‌ವರ್ಕ್‌ ಅನ್ನು ಮೊದಲು ಕೊಲ್ಕತ್ತದಲ್ಲಿ ಲಾಂಚ್‌ ಮಾಡಲಾಯಿತು. ಜೊತೆಗೆ ಡಾಟಾ ಪ್ಲಾನ್, ಟ್ಯಾರಿಫ್ ವಿವರಣೆ, ಅಗತ್ಯ ಡಿವೈಸ್‌ಗಳಾದ USB ಮೊಡೆಮ್ ಅಥವಾ ಇನ್‌ಡೋರ್‌ ವೈರ್‌ಲೆಸ್‌ ಗೇಟ್‌ವೇ ಮತ್ತು ಇತರೆ ಮಾಹಿತಿಗಳನ್ನು ಸಹ ಬಿಡುಗಡೆ ಮಾಡಿತು. ಆದರೆ ಗ್ರಾಹಕರಿಗೆ ಕಾಡುತ್ತಿರುವ ಒಂದು ಪ್ರಶ್ನೆ ಎಂದರೆ ಏರ್‌ಟೆಲ್‌ 4G LTE ವೇಗ ಎಷ್ಟು ಎಂಬುದು.

ಏರ್‌ಟೆಲ್‌ ಲಾಂಚ್‌ ಮಾಡಿರುವ 4G LTE ನೆಟ್‌ವರ್ಕ್‌ನ ಪ್ರಯೋಗಿಕ ವೇಗ ಎಷ್ಟು, ಯಾವ ಯಾವ ಸಿಟಿಗಳಲ್ಲಿ ಡಾಟಾ ಪ್ಲಾನ್‌ಗಳು ಹೇಗಿವೆ, ದರ ಎಷ್ಟು, ಎಂಬ ಮಾಹಿತಿಯನ್ನು ಏರ್‌ಟೆಲ್‌ ಪ್ರಿಯ ಗ್ರಾಹಕರು ಒಮ್ಮೆ ಲೇಖನದ ಸ್ಲೈಡರ್‌ನಲ್ಲಿ ಓದಿ ತಿಳಿಯಿರಿ.

ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಖರೀದಿಸುವವರಿಗೆ ಏರ್‌ಟೆಲ್‌ನಿಂದ 10GB 4G ಡಾಟಾ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏರ್‌ಟೆಲ್‌ 4G ವೆಬ್‌ಪೇಜ್‌

ಏರ್‌ಟೆಲ್‌ 4G ವೆಬ್‌ಪೇಜ್‌

ಏರ್‌ಟೆಲ್‌ 4G ವೆಬ್‌ಪೇಜ್‌ ಪ್ರಕಾರ, ಕಂಪನಿಯು ತನ್ನ ಗ್ರಾಹಕರಿಗೆ 40Mbps ಡೌನ್‌ಲೋಡ್‌ ವೇಗವನ್ನು 4G LTE-TD(Time Division LTE) ರೀತಿಯಲ್ಲಿ ಆಫರ್‌ ಮಾಡುತ್ತಿದೆ. ಈ ಟೆಕ್ನಾಲಜಿಯು 100Mbps ಡೌನ್‌ಲೋಡ್‌ ವೇಗ ಮತ್ತು 40Mbps ಅಪ್‌ಲೋಡ್ ವೇಗವನ್ನು ಆಫರ್‌ ಮಾಡುತ್ತಿದೆ. ಆದರೆ ಪ್ರಶ್ನೆ ಎಂದರೆ ಇದೇ ವೇಗವನ್ನು 4G ಡಿವೈಸ್‌ನಲ್ಲಿ ವೆಬ್‌ ಸರ್ಫಿಂಗ್‌ ಮಾಡುವ ವೇಳೆ ಗ್ರಾಹಕನು ಪಡೆಯುವನೇ ಎಂಬುದಾಗಿದೆ.

4G LTE

4G LTE

4G LTE ನೆಟ್‌ವರ್ಕ್‌ ಈಗಾಗಲೇ ಪ್ರಪಂಚದಾದ್ಯಂತ ಅಮೇರಿಕ, ಬ್ರಿಟನ್‌ ಮತ್ತು ಇತರೆ ದೇಶಗಳಲ್ಲಿ ಲಭ್ಯವಿದೆ. ಆದರೆ ಈಗಾಗಲೇ 4G LTE ನೆಟ್‌ವರ್ಕ್‌ ಬಳಸುತ್ತಿರುವ ಗ್ರಾಹಕರು ಕೇವಲ 20Mbps ಇಂಟರ್ನೆಟ್ ವೇಗವನ್ನು ಸಹ ಪಡೆಯುತ್ತಿಲ್ಲ.

ಇಂಟರ್ನೆಟ್ ವೇಗ ಪರಿಶೀಲನೆ

ಇಂಟರ್ನೆಟ್ ವೇಗ ಪರಿಶೀಲನೆ

LTE ನೆಟ್‌ವರ್ಕ್‌ ಒದಗಿಸುವವರ ಪ್ರಕಾರ ಇಂಟರ್ನೆಟ್ ವೇಗವು ಡಿವೈಸ್‌, ವೆಬ್‌ಪೇಜ್‌ ಆಕ್ಸೆಸ್‌, ದಿನದ ಸಮಯ, ಏಕಕಾಲದಲ್ಲಿ ಬಳಕೆದಾರರ ಸಂಖ್ಯೆಯ ಆಧಾರದಲ್ಲಿ ಮಾತ್ರವಲ್ಲದೇ ಟೆಲಿಕಾಂ ನೆಟ್‌ವರ್ಕ್‌ ಮತ್ತು ನೀವು ಇರುವ ಸ್ಥಳದ ಅಂತರವು ಸಹ ಪ್ರಮುಖ ಪಾತ್ರವಹಿಸುತ್ತದೆ ಎಂದು ಹೇಳಿದ್ದಾರೆ.

LTE ಸಿಗ್ನಲ್‌

LTE ಸಿಗ್ನಲ್‌

LTE ಸಿಂಗಲ್ ಟವರ್‌ 100 km ಪ್ರದೇಶಕ್ಕೆ ಆಸರೆಯಾಗಿದ್ದರೆ ಸಿಗ್ನಲ್‌ ಸಾಮರ್ಥ್ಯ ಖಂಡಿತ ಕಣ್ಮರೆಯಾಗುತ್ತದೆ. ಅಲ್ಲದೇ ಇನ್ನೂ ಸಿಟಿಗಳಲ್ಲಂತೂ ಹೆಚ್ಚು ಗೊಂದಲ ಉಂಟಾಗುತ್ತದೆ.

ಏರ್‌ಟೆಲ್‌ 4G LTE ಸಂಪರ್ಕದಿಂದ ಏನನ್ನು ನಿರೀಕ್ಷೆ ಮಾಡಬಹುದು?

ಏರ್‌ಟೆಲ್‌ 4G LTE ಸಂಪರ್ಕದಿಂದ ಏನನ್ನು ನಿರೀಕ್ಷೆ ಮಾಡಬಹುದು?

ಮೇಲೆ ತಿಳಿಸಿದ ಕಾರಣಗಳ ಜೊತೆಗೆ ಇತರೆ 4G LTE ಸೇವೆ ಒದಗಿಸುವವರ ರೀತಿಯಲ್ಲಿ ಏರ್‌ಟೆಲ್‌ ಸಹ 5Mbps ನಿಂದ 15Mbps ಇಂಟರ್ನೆಟ್‌ ವೇಗವನ್ನು ನೀಡುತ್ತದೆ. ಈ ವೇಗವು ಬೃಹತ್‌ ಗೇಮ್‌ಗಳನ್ನು ಡೌನ್‌ಲೋಡ್‌ ಮಾಡುವವರಿಗೆ, HD ವೀಡಿಯೊ ಅಪ್‌ಲೋಡ್‌ ಮಾಡುವವರಿಗೆ, ದೊಡ್ಡ ಸ್ಕ್ರೀನ್‌ಗಳಲ್ಲಿ ಸ್ಟ್ರೀಮ್‌ ಮಾಡುವವರಿಗೆ, ಆನ್‌ಲೈನ್ ಟಿವಿ ಸ್ಟ್ರೀಮ್ ಮಾಡುವವರಿಗೆ ಉತ್ತಮವಾಗಿದೆ.

ಏರ್‌ಟೆಲ್‌ 4G LTE ಬಳಸಿದವರು ಹೇಳಿದ್ದೇನು?

ಏರ್‌ಟೆಲ್‌ 4G LTE ಬಳಸಿದವರು ಹೇಳಿದ್ದೇನು?

ಅಂದಹಾಗೆ ಏರ್‌ಟೆಲ್ 4G LTE ಖರೀದಿಸಿದ್ದರು ಸಹ ಪ್ರದೇಶದಿಂದ ಪ್ರದೇಶಕ್ಕೆ ವೇಗವು ಹಲವು ಕಾರಣಗಳ ಆಧಾರಿತವಾಗಿದ್ದು, 2Mbps ವೇಗ ಪಡೆದರೂ ಸಹ ಆಶ್ಚರ್ಯಪಡುವಹಾಗಿಲ್ಲ ಎಂದು ಹಲವರು ಹೇಳಿದ್ದಾರೆ.

ಏರ್‌ಟೆಲ್‌ 4G ಮತ್ತು 3G ದರಗಳ ಹೋಲಿಕೆ

ಏರ್‌ಟೆಲ್‌ 4G ಮತ್ತು 3G ದರಗಳ ಹೋಲಿಕೆ

ಏರ್‌ಟೆಲ್‌ 4G ಮತ್ತು 3G ದರಗಳ ಹೋಲಿಕೆ ಕುರಿತು ಫೋಟೋ ನೋಡಿ.

rn

ನೆಟ್‌ವರ್ಕ್‌ ವೇಗ ಪರಿಶೀಲನೆ

ಅಂದಹಾಗೆ ಇಂಟರ್ನೆಟ್‌ ವೇಗ ಪರಿಶೀಲನೆಗೆ www.speedtest.net ಗೆ ಭೇಟಿ ನೀಡಬೇಕು. ವೀಡಿಯೋ ನೋಡಿ.
ಯಾವ ಯಾವ ನಗರಗಳಲ್ಲಿ ಏರ್‌ಟೆಲ್‌ 4G LTE ಡಾಟಾ ಪ್ಲಾನ್ ದರ ಎಷ್ಟು ಎಂದು ತಿಳಿಯಲು ವೆಬ್‌ಸೈಟ್‌ www.airtel.in/4g/index ಗೆ ಭೇಟಿ ನೀಡಿ.

ಗಿಜ್‌ಬಾಟ್‌

ಗಿಜ್‌ಬಾಟ್‌

ಏರ್‌ಟೆಲ್ 4ಜಿ ಯನ್ನೂ ಮೂಲೆಗುಂಪಾಗಿಸಿತೇ ರಿಲಾಯನ್ಸ್ ಜಿಯೋ

ಏರ್‌ಟೆಲ್‌ ಗ್ರಾಹಕರಿಗೆ ಡಾಟಾ ಬೆನಿಫಿಟ್ಸ್‌ಗಳ ಸುರಿಮಳೆ

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
What is actual speed of Airtel 4G LTE. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot