Airtel, VI, Jio: ಸ್ಟ್ರೀಮಿಂಗ್‌ ಸೇವೆ ನೀಡುವ ಬೆಸ್ಟ್‌ ಪ್ರಿಪೇಯ್ಡ್‌ ಪ್ಲಾನ್‌ಗಳು!

|

ಭಾರತದಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿವೆ. ಇದರಲ್ಲಿ ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌ ವಿಡಿಯೋ,ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌ಗಳು ಮುಂಚೂಣಿಯಲ್ಲಿ ಗುರುತಿಸಿಕೊಂಡಿವೆ. ಇನ್ನು ಈ ಸ್ಟ್ರೀಮಿಂಗ್‌ ಅಪ್ಲಿಕೇಶನ್‌ಗಳು ತಮ್ಮ ಬಳಕೆದಾರರಿಗೆ ಹಲವು ಚಂದಾದಾರಿಕೆಗಳನ್ನು ಪರಿಚಯಿಸಿವೆ. ಸದ್ಯ ಇದೀಗ ನೆಟ್‌ಫ್ಲಿಕ್ಸ್‌ ತನ್ನ ಚಂದಾದಾರಿಕೆ ಪ್ಲಾನ್ ಬೆಲೆ ಕಡಿತಗೊಳಿಸಿದೆ. ಆದರೆ ಅಮೆಜಾನ್‌ ತನ್ನ ಚಂದಾದಾರಿಕೆ ಪ್ಲಾನ್‌ಗಳ ಬೆಲೆಯಲ್ಲಿ ಹೆಚ್ಚಳ ಮಾಡಿದೆ.

ಪ್ಲಾನ್‌

ಹೌದು, ನೆಟ್‌ಫ್ಲಿಕ್ಸ್‌ ತನ್ನ ಚಂದಾದಾರಿಕೆ ಪ್ಲಾನ್‌ಗಳ ಬೆಲೆಗಳನ್ನು ಕಡಿತಗೊಳಿಸಿದೆ. ಆದರೆ ಅಮೆಜಾನ್ ಪ್ರೈಮ್‌ ಚಂದಾದಾರಿಕೆ ಶುಲ್ಕವನ್ನು ಹೆಚ್ಚಳ ಮಾಡಿದೆ. ಏರ್‌ಟೆಲ್, ವೊಡಾಫೋನ್ ಐಡಿಯಾ ಮತ್ತು ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಪ್ಲಾನ್‌ಗಳ ಮೂಲಕ ಸ್ಟ್ರೀಮಿಂಗ್‌ ಸೇವೆಗಳನ್ನು ಉಚಿತವಾಗಿ ಪಡೆಯಬಹುದಾಗಿದೆ. ಸದ್ಯ ನೀವು ಏರ್‌ಟೆಲ್‌, ವಿ, ಜಿಯೋ ಟೆಲಿಕಾಂಗಳ ಮೂಲಕ ಪಡೆಯಬಹುದಾದ ಸ್ಟ್ರೀಮಿಂಗ್ ಸೇವೆಗಳ ಚಂದಾದಾರಿಕೆಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಏರ್‌ಟೆಲ್‌

ಏರ್‌ಟೆಲ್‌

ಏರ್‌ಟೆಲ್ ಟೆಲಿಕಾಂ ಪ್ರಸ್ತುತ ಅಮೆಜಾನ್‌ ಪ್ರೈಮ್ ವಿಡಿಯೋ ಮತ್ತು ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಗಳನ್ನು ನೀಡುವ ಹಲವು ಪ್ರಿಪೇಯ್ಡ್ ಪ್ಲಾನ್‌ಗಳ ನೀಡುತ್ತದೆ. ಇದರಲ್ಲಿ 108ರೂ.ಗಳ ಆಡ್-ಆನ್ ಪ್ಲಾನ್ ಕೂಡ ಒಂದು. ಈ ಪ್ಲಾನ್‌ನಲ್ಲಿ ನೀವು ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಯನ್ನು 30 ದಿನಗಳವರೆಗೆ ಪಡೆಯಬಹುದಾಗಿದೆ. ಇನ್ನು 599ರೂ. ಬೆಲೆಯ ಪ್ರಿಪೇಯ್ಡ್‌ ಪ್ಲಾನ್‌ ಮತ್ತು 838ರೂ.ಗಳ ಪ್ಲಾನ್‌ಗಳು ನಿಮಗೆ ಒಂದು ವರ್ಷದವರೆಗೆ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ನೀಡುತ್ತವೆ.

ಇದಲ್ಲದೆ ಏರ್‌ಟೆಲ್‌ ಟೆಲಿಕಾಂ ಅಮೆಜಾನ್ ಪ್ರೈಮ್ ಸದಸ್ಯತ್ವ ನೀಡುವ ಕೆಲವು ಪ್ರಿಪೇಯ್ಡ್ ಯೋಜನೆಗಳನ್ನು ಹೊಂದಿದೆ. ಇದರಲ್ಲಿ 359ರೂ. ಪ್ಲಾನ್‌ ಕೂಡ ಒಂದಾಗಿದೆ. ಇದು ದಿನಕ್ಕೆ 2GB ಡೇಟಾವನ್ನು ನೀಡಲಿದ್ದು, 28 ದಿನಗಳವರೆಗೆ ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಚಂದಾದಾರಿಕೆ ನೀಡಲಿದೆ. ಇನ್ನು 699 ರೂ. ಪ್ರಿಪೆಯ್ಡ್‌ ಪ್ಲಾನ್‌ ನಿಮಗೆ 56 ದಿನಗಳವರೆಗೆ Amazon Prime ಮೊಬೈಲ್ ಚಂದಾದಾರಿಕೆಯನ್ನು ನೀಡಲಿದೆ. ಆದರೆ Amazon Prime Video ಮೊಬೈಲ್ ಚಂದಾದಾರಿಕೆಯನ್ನು ಮೊಬೈಲ್ ಸಾಧನದಲ್ಲಿ ಮಾತ್ರ ಪ್ರವೇಶಿಸಬಹುದು.

ವೊಡಾಫೋನ್ ಐಡಿಯಾ

ವೊಡಾಫೋನ್ ಐಡಿಯಾ

ವೊಡಾಫೋನ್ ಐಡಿಯಾ ಸ್ಟ್ರೀಮಿಂಗ್‌ ಸೇವೆಗಳನ್ನು ನೀಡುವ ನಾಲ್ಕು ಪ್ರಿಪೇಯ್ಡ್ ಪ್ಲಾನ್‌ಗಳನ್ನು ಒಳಗೊಂಡಿದೆ. ಇದರಲ್ಲಿ 501ರೂ. ಪ್ರಿಪೇಯ್ಡ್‌ ಪ್ಲಾನ್, 701ರೂ.ಪ್ರಿಪೇಯ್ಡ್‌ ಪ್ಲಾನ್‌ ಹಾಗೂ 901ರೂ. ಬೆಲೆಯ ಪ್ರಿಪೇಯ್ಡ್‌ ಪ್ಲಾನ್ ಗಳು ಸೇರಿವೆ. ಈ ಎಲ್ಲಾ ಪ್ಲಾನ್‌ಗಳು ಒಂದು ವರ್ಷದವರೆಗೆ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಪ್ಲಾನ್ ಚಂದಾದಾರಿಕೆಯೊಂದಿಗೆ ಬರುತ್ತವೆ. ಇದಲ್ಲದೆ ವಿ ಟೆಲಿಕಾಂನ ಪೋಸ್ಟ್‌ಪೇಯ್ಡ್ ಬಳಕೆದಾರರು 499ರೂ.ಬೆಲೆಯ ಪ್ಲಾನ್‌ ಮೂಲಕ ಒಂದು ವರ್ಷದ ಅವಧಿಗೆ ಅಮೆಜಾನ್ ಪ್ರೈಮ್ ಚಂದಾದಾರಿಕೆ ಮತ್ತು Disney + Hotstar ಮೊಬೈಲ್ ಚಂದಾದಾರಿಕೆ ಪಡೆಯಬಹುದಾಗಿದೆ.

ರಿಲಯನ್ಸ್ ಜಿಯೋ

ರಿಲಯನ್ಸ್ ಜಿಯೋ

ರಿಲಯನ್ಸ್ ಜಿಯೋ ಸ್ಟ್ರೀಮಿಂಗ್‌ ಸೇವೆ ನೀಡುವ ನಾಲ್ಕು ಪ್ರಿಪೇಯ್ಡ್ ಬಂಡಲ್‌ ಪ್ಲಾನ್‌ಗಳನ್ನು ಹೊಂದಿದೆ. ಇದರಲ್ಲಿ 601 ರೂ, 799ರೂ, 1,066ರೂ ಮತ್ತು 3,119ರೂ. ಪ್ರಿಪೇಯ್ಡ್‌ ಪ್ಲಾನ್‌ಗಳು ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ಒಂದು ವರ್ಷದ ಅವಧಿಗೆ ನೀಡಲಿವೆ. ಇನ್ನು 601ರೂ. ಪ್ರಿಪೇಯ್ಡ್‌ ಪ್ಲಾನ್‌ 28 ದಿನಗಳ ಮಾನ್ಯತೆ ಹೊಂದಿದ್ದು, ದೈನಂದಿನ 3GB ಡೇಟಾವನ್ನು ನೀಡುತ್ತದೆ. ಹಾಗೆಯೇ 799ರೂ. ಪ್ಲಾನ್‌ 56 ದಿನಗಳವರೆಗೆ ದೈನಂದಿನ 2GB ಡೇಟಾವನ್ನು ನೀಡುತ್ತದೆ. ಇನ್ನು 1,066ರೂ.ಪ್ಲಾನ್‌ ದೈನಂದಿನ 2GB ಡೇಟಾವನ್ನು 84 ದಿನಗಳವರೆಗೆ ನೀಡುತ್ತದೆ.

ಇದಲ್ಲದೆ ಜಿಯೋ ಟೆಲಿಕಾಂ ತನ್ನ ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ಅನೇಕ ಸ್ಟ್ರೀಮಿಂಗ್‌ ಯೋಜನೆಗಳನ್ನು ಪರಿಚಯಿಸಿದೆ. ಇದರಲ್ಲಿ 75GB ನೀಡುವ 399ರೂ. ಪ್ಲಾನ್, 100GB ನೀಡುವ 599ರೂ. ಪ್ಲಾನ್, 150GB ನೀಡುವ 799ರೂ. ಪ್ಲಾನ್, 200GB ನೀಡುವ 999ರೂ. ಪ್ಲಾನ್ ಮತ್ತು 300GB ಡೇಟಾವನ್ನು ನೀಡುವ 1,499ರೂ. ಪ್ಲಾನ್‌ಗಳು ಸೇರಿವೆ. ಈ ಎಲ್ಲಾ ಪ್ಲಾನ್‌ಗಳು ಮಾಸಿಕವಾಗಿ ಪಾವತಿಸಲ್ಪಡುತ್ತವೆ. ಅಲ್ಲದೆ ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌ ವಿಡಿಯೋ, ಮತ್ತು ಡಿಸ್ನಿ + ಹಾಟ್‌ಸ್ಟಾರ್‌ ನ ಒಂದು ವರ್ಷದ ಚಂದಾದಾರಿಕೆಯನ್ನು ಒಳಗೊಂಡಿರುತ್ತದೆ.

Best Mobiles in India

English summary
Airtel, VI and Jio: prepaid plans that offer subscriptions for streaming services.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X