ಏರ್ ಟೆಲ್, ವಡಾಫೋನ್ ನಲ್ಲಿ 169 ರೂಪಾಯಿ ಪ್ಲಾನ್ ನಲ್ಲಿ ಬದಲಾವಣೆ:

By Gizbot Bureau
|

ಟೆಲಿಕಾಂ ಇಂಡಸ್ಟ್ರಿಯಲ್ಲಿ ಡಾಟಾ ನೀಡುವ ಬಗೆಗಿನ ಯುದ್ಧವು ಅಂತ್ಯಗೊಳ್ಳುವ ಲಕ್ಷಣಗಳೇ ಕಾಣುತ್ತಿಲ್ಲ. ತಮ್ಮ ಚಂದಾದಾರರನ್ನು ಉಳಿಸಿಕೊಳ್ಳುವುದಕ್ಕಾಗಿ ಮತ್ತು ಹೊಸ ಚಂದಾದಾರಿಕೆಯನ್ನು ಪಡೆದುಕೊಳ್ಳುವುದಕ್ಕಾಗಿ ಎಲ್ಲಾ ಟೆಲಿಕಾಂ ಸಂಸ್ಥೆಗಳು ಕೂಡ ತಮ್ಮ ಪ್ಲಾನ್ ಗಳನ್ನು ಬದಲಾಯಿಸುವುದು ಮತ್ತು ಹೊಸ ಪ್ಲಾನ್ ಗಳನ್ನು ಪರಿಚಯಿಸುವುದನ್ನು ಮಾಡುತ್ತಿವೆ.

169 ರುಪಾಯಿ ಪ್ಲಾನ್ ನಲ್ಲಿ ಬದಲಾವಣೆ:

169 ರುಪಾಯಿ ಪ್ಲಾನ್ ನಲ್ಲಿ ಬದಲಾವಣೆ:

ಕಳೆದ ವಾರವಷ್ಟೇ ಬಿಎಸ್ಎನ್ಎಲ್ ತನ್ನ ಪ್ರಿಪೇಯ್ಡ್ ಪ್ಲಾನ್ ಗಳನ್ನು ಬದಲಾಯಿಸಿತ್ತು. ಇದೀಗ ದೇಶದ ಪ್ರಮುಖ ಟೆಲಿಕಾಂ ಸಂಸ್ಥೆಗಳು ಎನ್ನಿಸಿರುವ ಏರ್ ಟೆಲ್ ಮತ್ತು ವಡಾಫೋನ್ ಕೂಡ ತಮ್ಮಲ್ಲಿ ಸದ್ಯ ಲಭ್ಯವಿರುವ 169 ರುಪಾಯಿ ಪ್ರಿಪೇಯ್ಡ್ ಪ್ಲಾನ್ ನಲ್ಲಿ ಬದಲಾವಣೆಯನ್ನು ಮಾಡುತ್ತಿವೆ.

ಬದಲಾದ ಪ್ಲಾನಿನ ಆಫರ್ ಗಳು:

ಬದಲಾದ ಪ್ಲಾನಿನ ಆಫರ್ ಗಳು:

ಟೆಲಿಕಾಂ ಟಾಕ್ ನ ವರದಿಯು ತಿಳಿಸುವಂತೆ, ಏರ್ ಟೆಲ್ ಮತ್ತು ವಡಾಫೋನ್ ಎರಡೂ ಕೂಡ ತಮ್ಮ 169 ರುಪಾಯಿ ಪ್ರಿಪೇಯ್ಡ್ ಪ್ಲಾನ್ ನ್ನು ಬದಲಾಯಿಸಿದೆ. ಬದಲಾವಣೆಯ ನಂತರ ವಡಾಫೋನ್ 1ಜಿಬಿ ಡಾಟಾವನ್ನು 169 ರುಪಾಯಿ ಪ್ಲಾನಿನ ಅಡಿಯಲ್ಲಿ ಪ್ರತಿದಿನ ನೀಡುತ್ತದೆ. 28 ದಿನಗಳ ಅವಧಿಯನ್ನು ಈ ಪ್ಲಾನ್ ಹೊಂದಿರುತ್ತದೆ ಮತ್ತು 28ಜಿಬಿ ಡಾಟಾವನ್ನು ಈ ಅವಧಿಯಲ್ಲಿ ಚಂದಾದಾರರು ಬಳಸುವುದಕ್ಕೆ ಸಾಧ್ಯವಿದೆ. ಇದೇ ರೀತಿ ಏರ್ ಟೆಲ್ ಕೂಡ 1ಜಿಬಿ ಡಾಟಾವನ್ನು ಪ್ರತಿದಿನ ತನ್ನ ಬದಲಾದ ಪ್ಲಾನಿನ ಅಡಿಯಲ್ಲಿ ನೀಡುತ್ತಿದೆ. ಈ ಮೊದಲು ಏರ್ ಟೆಲ್ 1ಜಿಬಿ ಡಾಟಾವನ್ನು 28 ದಿನಗಳ ಒಟ್ಟಾರೆ ಅವಧಿಗೆ ನೀಡುತ್ತಿತ್ತು. ಇದೀಗ ಪ್ರತಿದಿನ ಲಿಮಿಟ್ ಫಿಕ್ಸ್ ಮಾಡಿದ್ದು 1ಜಿಬಿ ಡಾಟಾವನ್ನು ದಿನಂಪ್ರತಿ ಬಳಕೆ ಮಾಡುವುದಕ್ಕೆ ಏರ್ ಟೆಲ್ ಅವಕಾಶ ನೀಡಿದೆ. ಡಾಟಾ ಜೊತೆಗೆ ಅನಿಯಮಿತ ರಾಷ್ಟ್ರೀಯ ಮತ್ತು ಸ್ಥಳೀಯ ಕರೆಗಳ ಬೆನಿಫಿ ನ್ನು ಕೂಡ ಇವು ನೀಡುತ್ತಿವೆ ಜೊತೆಗೆ 100 ಎಸ್ಎಂಎಸ್ ಗಳನ್ನು ಉಚಿತವಾಗಿ ಕಳಿಸುವುದಕ್ಕೂ ಅವಕಾಶವಿದೆ..

99 ರುಪಾಯಿ ಎಂಟ್ರಿ ಲೆವೆಲ್ ಪ್ಲಾನ್ ನಲ್ಲೂ ಬದಲಾವಣೆ:

99 ರುಪಾಯಿ ಎಂಟ್ರಿ ಲೆವೆಲ್ ಪ್ಲಾನ್ ನಲ್ಲೂ ಬದಲಾವಣೆ:

ಇದರ ಹೊರತಾಗಿ ಏರ್ ಟೆಲ್ ತನ್ನ 99 ರುಪಾಯಿಯ ಎಂಟ್ರಿ ಲೆವೆಲ್ ಪ್ಲಾನ್ ನ್ನು ಕೂಡ ಬದಲಾಯಿಸಿದೆ.99 ರುಪಾಯಿ ಪ್ಲಾನ್ ನ್ನು 119 ರುಪಾಯಿ ಪ್ಲಾನ್ ಆಗಿ ಕಂಪೆನಿ ಬದಲಾವಣೆ ಮಾಡಿದೆ. ಈ ಪ್ಲಾನ್ ಕೂಡ 28 ದಿನಗಳ ಅವಧಿಯನ್ನು ಹೊಂದಿರುತ್ತದೆ. ಈ ಅವಧಿಯಲ್ಲಿ ಬಳಕೆದಾರರಿಗೆ 2ಜಿಬಿ ಡಾಟಾ ಉಚಿತವಾಗಿ ಸಿಗುತ್ತದೆ. ಈ ಪ್ಲಾನಿನ ಅಡಿಯಲ್ಲಿ ಬಳಕೆದಾರರಿಗೆ ಅನಿಯಮಿತ ಕಾಲಿಂಗ್ ಬೆನಿಫಿಟ್ ಮತ್ತು 300 ಎಸ್ಎಂಎಸ್ ಗಳನ್ನು ಉಚಿತವಾಗಿ 28 ದಿನಗಳ ಅವಧಿಯಲ್ಲಿ ಬಳಸಲು ಅವಕಾಶವಿರುತ್ತದೆ. ಮೈ ಏರ್ ಟೆಲ್ ಆಪ್ ಮೂಲಕ ಕೂಡ ಗ್ರಾಹಕರು ಈ ಪ್ಲಾನ್ ನ್ನು ಆಯ್ಕೆ ಮಾಡಿಕೊಳ್ಳಬಹುದು.

ಜಿಯೋ ಜೊತೆಗೆ ಸ್ಪರ್ಧೆ:

ಜಿಯೋ ಜೊತೆಗೆ ಸ್ಪರ್ಧೆ:

ಏರ್ ಟೆಲ್ ಮತ್ತು ವಡಾಫೋನಿನ ರುಪಾಯಿ 169 ಪ್ಲಾನ್ ರಿಲಯನ್ಸ್ ಜಿಯೋ ಸಂಸ್ಥೆಯ 149 ರುಪಾಯಿ ಪ್ಲಾನಿನೊಂದಿಗೆ ಸ್ಪರ್ಧೆಯೊಡ್ಡಲಿದೆ. ಮುಖೇಶ್ ಅಂಬಾನಿ ಮಾಲೀಕತ್ವದ ಟೆಲಿಕಾಂ ಆಪರೇಟರ್ 149 ರುಪಾಯಿ ಪ್ಲಾನಿನ ಅಡಿಯಲ್ಲಿ 1.5ಜಿಬಿ ಡಾಟಾವನ್ನು ಪ್ರತಿದಿನ, ಅನಿಯಮಿತ ಸ್ಥಳೀಯ ಮತ್ತು ರಾಷ್ಟ್ರೀಯ ಕರೆಗಳು ಮತ್ತು 100ಎಸ್ಎಂಎಸ್ ನ್ನು ಪ್ರತಿದಿನ ಬಳಸುವುದಕ್ಕೆ ಅವಕಾಶ ನೀಡುತ್ತದೆ.149 ರುಪಾಯಿಯ ಜಿಯೋ ಪ್ಲಾನ್ ಕೂಡ 28 ದಿನಗಳ ಅವಧಿಯನ್ನು ಹೊಂದಿರುತ್ತದೆ ಮತ್ತು 42ಜಿಬಿ ಡಾಟಾ ಬಳಕೆಗೆ ಈ ಅವಧಿಯಲ್ಲಿ ಅವಕಾಶ ನೀಡುತ್ತದೆ. ಇದೆಲ್ಲದರ ಜೊತೆಗೆ ಜಿಯೋ ಚಂದಾದಾರರು ಉಚಿತವಾಗಿ ಜಿಯೋ ಸ್ಯೂಟ್ ಆಪ್ಸ್ -ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಇತರೆ ಹಲವು ಅಂಶಗಳನ್ನು ಬಳಸುವುದಕ್ಕೆ ಅವಕಾಶ ನೀಡುತ್ತದೆ.

Best Mobiles in India

Read more about:
English summary
Airtel, Vodafone revamp Rs 169 plan: Here's how it now compares to Reliance Jio’s Rs 149 plan

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X