Subscribe to Gizbot

ಬಜೆಟ್ ಬೆಲೆಯಲ್ಲಿ ಉತ್ತಮ ಟ್ಯಾಬ್ಲೆಟ್ ‘ಅಲ್ಕಾಟೆಲ್ A3 10 ಟ್ಯಾಬ್’

By: Precilla Dias

ಫೆಬ್ರವರಿಯಲ್ಲಿ ನಡೆದಂತಹ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಸಮಾವೇಶದಲ್ಲಿ ಅಲ್ಕಾಟೆಲ್ ತನ್ನ A3 10 ಟ್ಯಾಬ್ ಅನ್ನು ಬಿಡುಗಡೆ ಮಾಡಿತ್ತು. ಇದೇ ಮಾದರಿಯಲ್ಲಿ ಅಲ್ಕಾಟೆಲ್ ಸಂಸ್ಥೆಯೂ ಈ ಟಾಬ್ ಅನ್ನು ಬಿಡುಗಡೆ ಮಾಡಿದ್ದು, ರೂ.9,999ಕ್ಕೆ ಮಾರಾಟ ಮಾಡಲು ಮುಂದಾಗಿದೆ.

ಬಜೆಟ್ ಬೆಲೆಯಲ್ಲಿ ಉತ್ತಮ ಟ್ಯಾಬ್ಲೆಟ್ ‘ಅಲ್ಕಾಟೆಲ್ A3 10 ಟ್ಯಾಬ್’

ಅಲ್ಕಾಟೆಲ್ A3 10 ಟ್ಯಾಬ್ ಕೇವಲ ಫ್ಲಿಪ್ ಕಾರ್ಟಿನಲ್ಲಿ ಮಾತ್ರವೇ ಮಾರಾಟವಾಗುತ್ತಿದ್ದು, ಈ ಟ್ಯಾಬ್ ಹೈಲೆಟ್ ಎಂದರೆ ಇದು ನೂತನ ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿದೆ. ಅದುವೇ ಬಜೆಟ್ ಬೆಲೆಯಲ್ಲಿ ದೊರೆಯುತ್ತಿರುವುದು ಮತ್ತೊಂದು ಹೈಲೆಟ್ ಆಗಿದೆ.

ಅಲ್ಕಾಟೆಲ್ A3 10 ಟ್ಯಾಬ್ ನಲ್ಲಿ 10 ಇಂದಿನ IPS ಡಿಸ್ ಪ್ಲೇಯನ್ನು ಕಾಣಬಹುದಾಗಿದೆ. ಇದು 1280x800 ಪಿಕ್ಸಲ್ ಗುಣಮಟ್ಟವನ್ನು ಹೊಂದಿದ್ದು, ಸಿಲ್ಕಿಕ್ ವಿನ್ಯಾಸವನ್ನು ಹೊಂದಿರುವ ಈ ಟ್ಯಾಬ್ ನಲ್ಲಿ 1.1GHz ವೇಗದ ಕ್ವಾಡ್ ಕೋರ್ ಪ್ರೋಸೆಸರ್ ಕಾಣಬಹುದಾಗಿದ್ದು, 4GB RAM ಮತ್ತು 16 GB ಇಂಟರ್ನಲ್ ಮೆಮೊರಿ ಇದೆ.

128GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವು ಈ ಟ್ಯಾಬಿನಲ್ಲಿದ್ದು, ಹಿಂಭಾಗದಲ್ಲಿ 5MP ಕ್ಯಾಮೆರಾವನ್ನು ಮುಂಭಾಗದಲ್ಲಿ 2 MP ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದಲ್ಲದೇ ಸಿಮ್ ಕಾರ್ಡ್ ಹಾಕಬಹುದಾಗಿದ್ದು, 4G LET ಸಫೋರ್ಟ್ ಮಾಡಲಿದೆ.

ಈ ಟ್ಯಾಬಿನಲ್ಲಿ 4600mAh ಬ್ಯಾಟರಿಯನ್ನು ಅಳವಡಿಲಾಗಿದ್ದು, ಒಟ್ಟು 7 ಗಂಟೆಗಳ ಕಾಲ ನಿರಂತರವಾಗಿ ಬಳಕೆ ಮಾಡಬಹುದಾಗಿದೆ. ಇದರೊಂದಿಗೆ ವೈಫೈ, GPS, USB OTG, ಬ್ಲೂಟೂತ್ ಸೇವೆಗಳನ್ನು ಕಾಣಬಹುದಾಗಿದೆ.

English summary
Alcatel A3 10 tablet running Android 7.0 Nougat has been launched in India as a Flipkart exclusive at Rs. 9,999.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot