ಅಮೆಜಾನ್, ಫ್ಲಿಪ್‌ಕಾರ್ಟ್‌ಗೆ ಭಯ ಹುಟ್ಟಿಸಿದ ಮುಕೇಶ್ ಅಂಬಾನಿ!!

In what might be called as a major joint venture (JV), China’s Alibaba has reportedly initiated talks with Mukesh Ambani’s Reliance Retail. Alibaba, the Chinese e-commerce giant is all set to invest

|

ಭಾರತದಲ್ಲಿ ಎಲ್ಲವನ್ನು ತನ್ನ ಬುಟ್ಟಿಗೆ ಹಾಕಿಕೊಂಡಿರುವ ರಿಲಯನ್ಸ್ ಸಮೂಹದ ಮುಖ್ಯಸ್ಥ ಮುಖೇಶ್ ಅಂಬಾನಿಗೆ ಇನ್ನು ಬಾಕಿ ಉಳಿದುಕೊಂಡಿರುವುದು ಇ ಕಾಮರ್ಸ್ ಮಾರುಕಟ್ಟೆ ಮಾತ್ರ ಎನ್ನಲಾಗುತ್ತಿದೆ. ಆದರೆ, ಇನ್ನೇನು ಕೆಲವೇ ವರ್ಷಗಳಲ್ಲಿ ಭಾರತದ ಇ ಕಾಮರ್ಸ್ ಮಾರುಕಟ್ಟೆ ಕೂಡ ಅಂಬಾನಿಯ ಪಾಲಾಗುವ ಸಾಧ್ಯತೆ ಇದೆ. ಇದೇ ಸಾಧ್ಯತೆಯನ್ನು ಮುಂದಿಟ್ಟುಕೊಂಡು ಚೀನಾದ 'ಜಾಕ್ ಮಾ' ಭಾರತದಲ್ಲಿ ತಮ್ಮ ವ್ಯವಹಾರ ಕುದುರಿಸಲು ಎದುರುನೋಡುತ್ತಿದ್ದಾರೆ.!

ಹೌದು, ವಿಶ್ವದಲ್ಲೇ ದೊಡ್ಡ ಇ ಕಾಮರ್ಸ್ ಅನ್ನು ಕಟ್ಟುವ ಕನಸನ್ನು ಹೊಂದಿರುವ ಪ್ರಖ್ಯಾತ ಅಲಿಬಾಬಾ ಇ ಕಾಮರ್ಸ್ ಸಂಸ್ಥೆಯ ಮುಖ್ಯಸ್ಥ ಜಾಕ್ ಮಾ ಅವರು ಇದೀಗ ಅಂಬಾನಿಯನ್ನು ನಂಬಿ ಅವರ ಜೊತೆ ವ್ಯವಹಾರಕ್ಕೆ ಇಳಿಯಲು ಸಿದ್ದರಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಭಾರತದ ಇ ಕಾಮರ್ಸ್ ಕ್ಷೇತ್ರದಲ್ಲಿ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಕಂಪೆನಿಗಳ ಮಧ್ಯೆ ಅಲಿಬಾಬಾ ಇಲ್ಲಿ ಹೇಳಹೆಸರಿಲ್ಲದಂತಾಗಿದೆ. ಇದರಿಂದ ಕಂಗೆಟ್ಟಿರುವ ಜಾಕ್ ಮಾ ಅಂಬಾನಿಯ ಜೊತೆಗೂಡಿ ಭಾರತದ ಇ ಕಾಮರ್ಸ್ ಮಾರುಕಟ್ಟೆಗೆ ಭಾರೀ ಹಣ ಹೂಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಅಮೆಜಾನ್, ಫ್ಲಿಪ್‌ಕಾರ್ಟ್‌ಗೆ ಭಯ ಹುಟ್ಟಿಸಿದ ಮುಕೇಶ್ ಅಂಬಾನಿ!!

ಜಿಯೋ ಮೂಲಕ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಅಧಿಪತ್ಯ ಸಾಧಿಸಿರುವ ಅಂಬಾನಿ, ಇ ಕಾಮರ್ಸ್ ನಲ್ಲೂ ಯಶಸ್ಸನ್ನು ವಿಸ್ತರಿಸುವ ನಂಬಿಕೆಯನ್ನು ಅವರು ಹೊಂದಿದ್ದಾರೆ. ಭಾರತದಲ್ಲಿ ಯಶಸ್ವಿ ಉದ್ಯಮಿಯಾಗಿರುವ ಅಂಬಾನಿಯ ಮೂಲಕ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವ ಯೋಜನೆಯನ್ನು ಜಾಕ್ ಮಾ ಹೊಂದಿದ್ದಾರೆ. ಹಾಗಾದರೆ, ಏನಿದು ವರದಿ? ಜಾಕ್ ಮಾ ಅಂಬಾನಿಯ ಹೊಸ ಇ ಕಾಮರ್ಸ್‌ಗೆ ಹೂಡಿಕೆ ಮಾಡುತ್ತಿರುವ ಹಣವೆಷ್ಟು? ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಕಂಪೆನಿಗಳಿಗೆ ಭಯ ಉಂಟಾಗಿರುವುದು ಎಕೆ ಎಂಬುದನ್ನು ಮುಂದೆ ತಿಳಿಯಿರಿ.

ಅಂಬಾನಿಯ ರಂಗ ಪ್ರವೇಶ!

ಅಂಬಾನಿಯ ರಂಗ ಪ್ರವೇಶ!

ಈಗಾಗಲೇ ರಿಲಯನ್ಸ್ ಟ್ರೆಂಡ್ಸ್, ರಿಲಯನ್ಸ್ ಮಾರ್ಟ್, ರಿಲಯನ್ಸ್ ಡಿಜಿಟಲ್‌ ಮೊದಲಾದ ಮುಖೇಶ್ ಅಂಬಾನಿಯ ಇ-ಕಾಮರ್ಸ್ ತಾಣಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ, ಇ ಕಾಮರ್ಸ್ ತಾಣಗಳೆಲ್ಲಾ ಸಣ್ಣ ಪ್ರಮಾಣದ ಮಾರುಕಟ್ಟೆಗಳನ್ನು ಆಕ್ರಮಿಸಿಕೊಂಡಿರುವುದರಿಂದ, ದೇಶದ ದೊಡ್ಡ ಮಾರುಕಟ್ಟೆ ಪಡೆಯಲು ಅಂಬಾನಿ 'ರಿಲಯನ್ಸ್ ರಿಟೇಲ್' ಇ ಕಾಮರ್ಸ್ ಸ್ಥಾಪಿಸಲು ಮುಂದಾಗಿದ್ದಾರೆ. ಇದು ಇನ್ನೇನು ಕೆಲವೇ ತಿಂಗಳುಗಳಲ್ಲಿ ಅಂಬಾನಿಯ ರಿಲಯನ್ಸ್ ರೀಟೇಲ್ ವ್ಯಾಪಾರ ಆರಂಭಗೊಳ್ಳಲಿದೆ.

ಅಂಬಾನಿ ಹಿಂದೆ ಬಿದ್ದಿದೆ ಆಲಿಬಾಬ!

ಅಂಬಾನಿ ಹಿಂದೆ ಬಿದ್ದಿದೆ ಆಲಿಬಾಬ!

ಭಾರತದ ಇ- ಕಾಮರ್ಸ್ ಮಾರುಕಟ್ಟೆಗೆ 'ರಿಲಯನ್ಸ್ ರೀಟೇಲ್' ಎಂಬ ಹೆಸರಿನಲ್ಲಿ ಮುಖೇಶ್ ಅಂಬಾನಿ ಎಂಟ್ರಿ ನೀಡಲು ಮುಂದಾಗಿರುವ ಸುದ್ದಿ ಈಗಾಗಲೇ ಹೊರಬಿದ್ದಿದೆ. ಈಗಾಗಲೇ ಭಾರೀ ಹೆಸರುಗಳಿಸಿರುವ ಅಂಬಾನಿಯ 'ರಿಲಯನ್ಸ್ ರೀಟೇಲ್' ಯೋಜನೆ ಯಶಸ್ವಿಯಾಗುವ ಸೂಚನೆಯನ್ನು ಪಡೆದಿರುವ ಚೀನೀ ಇ-ಕಾಮರ್ಸ್ ದೈತ್ಯ ಅಲಿಬಾಬಾವು 'ರಿಲಯನ್ಸ್ ರೀಟೇಲ್'ನಲ್ಲಿ ಹೂಡಿಕೆ ಮಾಡಲು ಸಿದ್ಧವಾಗಿದೆ. ರಿಲಯನ್ಸ್ ಹೆಸರಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಪ್ರವೇಶ ಪಡೆಯಲು ಕೆಲವು ಪಾಲನ್ನು ಕೇಳಿದೆ ಎಂದು ಹೇಳಲಾಗಿದೆ.

'ರಿಲಯನ್ಸ್ ರೀಟೇಲ್'ಗೆ ಜಾಕ್ ಮಾ ಹೂಡಿಕೆ!

'ರಿಲಯನ್ಸ್ ರೀಟೇಲ್'ಗೆ ಜಾಕ್ ಮಾ ಹೂಡಿಕೆ!

ಅಂಬಾನಿ ನೇತೃತ್ವದ ರಿಲಯನ್ಸ್ ರೀಟೇಲ್ ವ್ಯಾಪಾರದಲ್ಲಿ ಜಾಕ್ ಮಾ 5 ಶತಕೋಟಿ ಡಾಲರ್ ಅನ್ನು ಹೂಡಿಕೆ ಮಾಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ರಿಲಯನ್ಸ್ ರೀಟೇಲ್ ನಲ್ಲಿ ದೊಡ್ಡ ಪ್ರಮಾಣದ ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಜಾಕ್ ಮಾ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಅಲಿಬಾಬಾ ಕಂಪೆನಿಯು ರಿಲಯನ್ಸ್ ರಿಟೇಲ್ ವ್ಯಾಪಾರದಲ್ಲಿ 50% ನಷ್ಟು ಪಾಲನ್ನು ಪಡೆದುಕೊಳ್ಳಲು ಸಿದ್ಧವಾಗಿದೆ ಎಂಬ ಮಾಹಿತಿಯನ್ನು ಜಾಕ್ ಮಾ ಹೊರಹಾಕಿರುವ ಬಗ್ಗೆ ಸುದ್ದಿ ಹೊರಬಿದ್ದಿದೆ.

ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗೆ ಭಯ!

ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗೆ ಭಯ!

ಭಾರತದ ಇ- ಕಾಮರ್ಸ್ ಮಾರುಕಟ್ಟೆಗೆ 'ರಿಲಯನ್ಸ್ ರೀಟೇಲ್' ಕಾಲಿಡುತ್ತಿರುವುದರಿಂದಲೇ ಭಯಪಟ್ಟಿರುವ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಜಾಲತಾಣಗಳಿಗೆ ಈ ಸುದ್ದಿ ಮತ್ತೆ ಭಯವನ್ನು ಹುಟ್ಟಿಹಾಕಿದೆ. ಚೀನಾದ ಬಹುದೊಡ್ಡ ಸಂಸ್ಥೆಯೊಂದು 'ರಿಲಯನ್ಸ್ ರೀಟೇಲ್'ಗೆ ಬಾರೀ ಬಂಡವಾಳ ಹೂಡಿಕೆ ಮಾಡುವುದರಿಂದ 'ರಿಲಯನ್ಸ್ ರೀಟೇಲ್' ಸಾಮರ್ಥ್ಯ ದುಪ್ಪಟ್ಟಾಗಲಿದೆ. ಇ ಕಾಮರ್ಸ್ ಜಗತ್ತಿನಲ್ಲಿ ಅಲಿಬಾಬಾ ಹೊಂದಿರುವ ಅನುಭವ ಕೂಡ ರಿಲಯನ್ಸ್ ರೀಟೇಲ್‌ಗೆ ಸಹಾಯವಾಗಲಿದೆ ಎಂಬುದನ್ನು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಕಂಪೆನಿಗಳು ತಿಳಿದಿವೆ.

ಶುರುವಾಗಲಿದೆ ಬಿಗ್‌ಫೈಟ್!

ಶುರುವಾಗಲಿದೆ ಬಿಗ್‌ಫೈಟ್!

ಅಂಬಾನಿ ನೇತೃತ್ವದ ರಿಲಯನ್ಸ್ ರೀಟೇಲ್ ವ್ಯಾಪಾರದಲ್ಲಿ ಜಾಕ್ ಮಾ ಹೂಡಿಕೆ ಮಾಡುವುದು ಖಚಿತವಾದರೆ, ಭಾರತದ ಇ ಕಾಮರ್ಸ್ ಮಾರುಕಟ್ಟೆಯಲ್ಲಿ ಮತ್ತೊಂದು ಮೆಗಾ ಬಿಗ್‌ಫೈಟ್ ಶುರುವಾಗಲಿದೆ. ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಕಂಪೆನಿಗಳನ್ನು ಮೀರಿ ಭಾರತದ ಇ ಕಾಮರ್ಸ್ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳಲು ರಿಲಯನ್ಸ್ ರೀಟೇಲ್ ಮುಂದಾಗಲಿದೆ. ಇದಕ್ಕಾಗಿ ಭಾರೀ ಆಫರ್ಸ್ ಅನ್ನು ರಿಲಯನ್ಸ್ ರೀಟೇಲ್ ಸೇರಿದಂತೆ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಕಂಪೆನಿಗಳು ಪ್ರಕಟಿಸಲಿವೆ ಎಂದರೆ ಆಶ್ಚರ್ಯ ಪಡುವಂತದ್ದು ಏನಿಲ್ಲ.

ಆಫರ್ ಅನ್ನು ಒಪ್ಪಿಕೊಳ್ತಾರ ಅಂಬಾನಿ?

ಆಫರ್ ಅನ್ನು ಒಪ್ಪಿಕೊಳ್ತಾರ ಅಂಬಾನಿ?

ರಿಲಯನ್ಸ್ ರೀಟೇಲ್ ವ್ಯಾಪಾರದಲ್ಲಿ ಜಾಕ್ ಮಾ ಹೂಡಿಕೆ ಮಾಡುವುದನ್ನು ಏಷ್ಯಾದ ಶ್ರೀಮಂತ ಮುಖೇಶ್ ಅಂಬಾನಿ ಒಪ್ಪಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾರತದಲ್ಲಿ ತಳವೂರಿರುವ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಕಂಪೆನಿಗಳನ್ನು ಎದುರಿಸಲು ಅಲಿಬಾಬಾ ಸಹಯೋಗ ಅಂಬಾನಿಗೆ ಬೇಕಾಗುತ್ತದೆ ಎಂದು ಹೇಳಲಾಗಿದೆ. ಅಲಬಾಬಾ ಸಹಯೋಗದಿಂದಾಗಿ ರಿಲಯನ್ಸ್ ರೀಟೇಲ್ ವ್ಯಾಪಾರಕ್ಕೆ ವಿಶ್ವದಾದ್ಯಂತ ಷೇರುದಾರರು ಕಂಪೆನಿ ಮೇಲೆ ವಿಶ್ವಾಸವನ್ನು ಹೊಂದಲಿದ್ದಾರೆ ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗಿದೆ.

ಇ-ಕಾಮರ್ಸ್ ಪಾಲಿಸಿಯನ್ನು ನೋಡಬೇಕಿದೆ.

ಇ-ಕಾಮರ್ಸ್ ಪಾಲಿಸಿಯನ್ನು ನೋಡಬೇಕಿದೆ.

ಕೇಂದ್ರ ಸರಕಾರನೂತನ ಇ-ಕಾಮರ್ಸ್ ಪಾಲಿಸಿ ತರಲು ಹೊರಟಿದೆ. ಇದರ ಕರಡು ಕೂಡ ಸಿದ್ಧವಾಗಿದೆ. ಆನ್‌ಲೈನ್‌ ಮಾರುಕಟ್ಟೆಯ ಮೇಲೆ ‘ಸರಕಾರದ ನಿಯಂತ್ರಣ' ಸಾಧಿಸಲು ಕಾನೂನುಗಳನ್ನು ರೂಪಿಸಲಾಗುತ್ತಿದೆ. 'ಇಂಡಿಯಾ ಫಸ್ಟ್‌' ನೀತಿಗೆ ಒತ್ತು ನೀಡುವ ಸಲುವಾಗಿ ದೇಶಿಯ ಉತ್ಪಾದನೆಯನ್ನು ಉತ್ತೇಜಿಸುವಂತಹ ನಿಯಮಗಳನ್ನು ತರಲು ಸರ್ಕಾರ ನಿರ್ಧರಿಸಿದೆ. ದೇಶದಾದ್ಯಂತ ಇರುವ ಇ ಕಾಮರ್ಸ್ ಮಾರುಕಟ್ಟೆಗಾಗಿ ಸರ್ಕಾರದ ವೇದಿಕೆಯನ್ನು ರಿಲಾಯನ್ಸ್ ಕಂಪನಿ ಸಿದ್ಧಪಡಿಸಿಕೊಂಡಿದೆ ಎಂದು ಹೇಳಲಾಗಿದೆ.

ಅಲಿಬಾಬಾವನ್ನು ಒಪ್ಪಲ್ಲವೇ ಅಂಬಾನಿ?

ಅಲಿಬಾಬಾವನ್ನು ಒಪ್ಪಲ್ಲವೇ ಅಂಬಾನಿ?

ಭಾರತೀಯ ಮೂಲದ ಆನ್‌ಲೈನ್‌ ಕಂಪನಿಗಳಿಗೆ ಶೇ.100ರಷ್ಟು ದೇಶೀಯವಾಗಿ ಉತ್ಪಾದಿಸಿದ ಉತ್ಪನ್ನಗಳನ್ನು ದಾಸ್ತಾನು ಇಟ್ಟುಕೊಳ್ಳಲು ಅವಕಾಶ ನೀಡಬೇಕು ಎಂದು ಇ-ಕಾಮರ್ಸ್ ಪಾಲಿಸಿ ಯಲ್ಲಿ ಹೇಳಲಾಗಿದೆ. ಈ ರಿಯಾಯಿತಿ ವಿದೇಶಿ ಮೂಲದ ಇ-ಕಾಮರ್ಸ್ ಕಂಪನಿಗಳಾದ ಅಮೆಜಾನ್‌ ಮತ್ತು ವಿದೇಶಿ ಹೂಡಿಕೆಯ ಪ್ರಾಬಲ್ಯ ಹೊಂದಿರುವ ಫ್ಲಿಪ್‌ಕಾರ್ಟ್‌ಗೆ ಸಿಗಲಾರದು. ಇದು ಬರಲಿರುವ ರಿಲಯನ್ಸ್ ರಿಟೇಲ್‌ಗೆ ಮಾತ್ರವೇ ಅತ್ಯುತ್ತಮ ಅವಕಾಶವನ್ನು ಒದಗಿಸಿದಂತಾಗುತ್ತದೆ. ಇದರಿಂದ ಅಲಿಬಾಬಾ ಆಫರ್ ಅನ್ನು ಅಂಬಾನಿ ಒಪ್ಪುವುದಿಲ್ಲ ಎಂದು ಹೇಳಲಾಗುತ್ತಿದೆ.

ಪೈಪೋಟಿಗೆ ಕಡಿವಾಣ!

ಪೈಪೋಟಿಗೆ ಕಡಿವಾಣ!

ಬಿಗ್‌ ಬಿಲಿಯನ್ ಆಫರ್‌ಗಳು ಮತ್ತು ಇ ಕಾಮರ್ಸ್ ಕಂಪೆನಿಗಳು ಘೋಷಿಸುವ ಭಾರಿ ದರ ಕಡಿತಗಳಿಗೆ ನಿರ್ದಿಷ್ಟ ಗರಿಷ್ಠ ಅವಧಿಯನ್ನು ನಿಗದಿಪಡಿಸಬೇಕು ಎಂದು ಇ-ಕಾಮರ್ಸ್ ಪಾಲಿಸಿ ಯಲ್ಲಿ ಹೇಳಲಾಗಿದೆ, ಮಾರುಕಟ್ಟೆಯಲ್ಲಿ ದರಗಳ ಮೇಲೆ ಪ್ರಭಾವ ಬೀರುವುದನ್ನು ನಿಷೇಧಿಸಲಾಗಿದೆ. ಇದು ದೇಶದ ಶೇಕಡಾ 55-60ರಷ್ಟು ಆನ್‌ಲೈನ್‌ ಮಾರುಕಟ್ಟೆಯನ್ನು ಆಳುತ್ತಿರುವ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್ ಕಂಪೆನಿಗಳನ್ನು ಕಂಟ್ರೋಲ್ ಮಾಡಲು ಇರುವ ನೀತಿ ಎಂದು ವಿಶ್ಲೇಷಣೆಗಳು ನಡೆಯುತ್ತಿವೆ. ಇದರಿಂದ ಜಾಕ್‌ ಮಾ ಮತ್ತು ಅಂಬಾನಿ ಸಹಯೋಗ ಸಾಧ್ಯವಾಗದು ಎನ್ನಲಾಗುತ್ತಿದೆ.

ಪ್ರಖ್ಯಾತ ಇ-ಕಾಮರ್ಸ್ ಅಲಿಬಾಬ ಸೃಷ್ಟಿಕರ್ತ

ಪ್ರಖ್ಯಾತ ಇ-ಕಾಮರ್ಸ್ ಅಲಿಬಾಬ ಸೃಷ್ಟಿಕರ್ತ "ಜಾಕ್ ಮಾ" ಜೀವನ ಮೊದಲು ಹೇಗಿತ್ತು ಗೊತ್ತಾ?..ರೋಚಕ ಕಥೆ.!!

90ನೇ ದಶಕದಲ್ಲಿ ಚೀನಾ ದೇಶಕ್ಕೆ ಅಂತರಾಷ್ಟ್ರೀಯ ಸಂಸ್ಥೆ ಕೆಎಫ್​ಸಿ ಕಾಲಿಟ್ಟು ಉದ್ಯೋಗಿಗಳಿಗಾಗಿ ಕೆಲಸಕ್ಕೆ ಆಹ್ವಾನವನ್ನು ನೀಡಿತ್ತು. ಉದ್ಯೋಗಕ್ಕಾಗಿ ಒಟ್ಟು 24 ಜನರು ಅರ್ಜಿ ಸಲ್ಲಿಸಿದ್ದರು. ಆ 24 ಜನರಲ್ಲಿ 23 ಜನರಿಗೆ ಕೆಲಸ ಸಿಕ್ಕಿತ್ತು. ಆದರೆ, ಅಂದು ಉದ್ಯೋಗ ಪಡೆಯಲು ಸಾಧ್ಯವಾಗದ ಒರ್ವ ವ್ಯಕ್ತಿ ಇಂದು ಕೆಎಫ್‌ಸಿ ಕಂಪೆನಿಗಿಂತಲೂ ಬೆಳೆದುನಿಂತಿದ್ದಾನೆ!!
ಹೌದು, ಇದು ಒಂದು ಸಿನಿಮಾ ಕಥೆ ಎಂದು ನಿಮಗನಿಸಬಹುದು. ಆದರೆ, ಕೆಎಫ್‌ಸಿಯಲ್ಲಿ ಕೆಲಸ ಗಿಟ್ಟಿಸಲು ಸಾಧ್ಯವಾಗದ ಚೀನಾದ ಝೆಜಿಯಾಂಗ್ ಪ್ರಾಂತ್ಯದಲ್ಲಿ ಹುಟ್ಟಿದ ಬಡಕುಟುಂಬದಲ್ಲಿ ಹುಟ್ಟಿದ ಮಾ ಯುನ್ ( ಜಾಕ್ ಮಾ) ಇಂದು ಪ್ರಪಂಚದ ನಂಬರ್ 20 ಶ್ರೀಮಂತರಲ್ಲಿ ಒಬ್ಬ ಎಂದರೆ ನೀವು ನಂಬಲೇಬೇಕು.!!

ತನ್ನ ಇಂಗ್ಲೀಷ್ ಭಾಷಾಜ್ಞಾನ ಮತ್ತು ಉದ್ದಿಮೆಯ ಗುಣಗಳಿಂದಲೇ ಚೀನಾದ ನಂಬರ್ ಒನ್ ಶ್ರೀಮಂತನಾಗಿ ಬೆಳೆದುನಿಂತ.! ವಿಶ್ವದ ಟಾಪ್ ಇ-ಕಾಮರ್ಸ್ ಕಂಪೆನಿಯೊಂದನ್ನು ಕಟ್ಟಿ ಬೆಳೆಸಿದ ಜಾಕ್ ಮಾ ಬಗ್ಗೆ ಹೇಳುತ್ತಾ ಹೋದರೆ ಅವನ ಜೀವನವೇ ಒಂದು ರೋಚಕ ಕಥೆ.! ಆತ್ಮವಿಶ್ವಸವೊಂದಿದ್ದರೆ ಒಬ್ಬ ವ್ಯಕ್ತಿ ಏನೆಲ್ಲಾ ಸಾಧಿಸಬಹುದು ಎಂಬುದನ್ನು ಇವನೇ ಉದಾಹರಣೆ.!!

ಮಾ ಯುನ್ ಬದಲಾಗಿ ಜಾಕ್ ಮಾ!!

ಮಾ ಯುನ್ ಬದಲಾಗಿ ಜಾಕ್ ಮಾ!!

ಅವನ ಮೊದಲ ಹೆಸರು ಮಾ ಯುನ್ ಎಂದು. ಆದರೆ, ಅವನು ಇಂಗ್ಲೀಷ್ ಕಲಿಯಲು ಪ್ರವಾಸಿಗರ ಬಳಿ ತೆರಳುತ್ತಿದ್ದಾಗ ಹಲವರು ಮಾ ಯುನ್ ಎಂಬ ಹೆಸರನ್ನು ಉಚ್ಚರಿಸಲು ಕಷ್ಟವಾಗಿ ಜಾಕ್ ಎಂದು ಕರೆಯಲು ಪ್ರಾರಂಭಿಸಿದರು. ನಂತರ ಜಾಕ್ ಮಾ ಎಂಬ ಹೆಸರೇ ಅವನಿಗೆ ಫೈನಲ್ ಆಯಿತು!

ಜಾಕ್ ಮಾ ಬಾಲ್ಯ ಹೀಗಿತ್ತು.!!

ಜಾಕ್ ಮಾ ಬಾಲ್ಯ ಹೀಗಿತ್ತು.!!

ಬಡಕುಟುಂಬದಲ್ಲಿ ಹುಟ್ಟಿ ಹನ್ನೆರಡರ ಪೋರ ಮಾ ಯುನ್‌ಗೆ ಇಂಗ್ಲಿಷ್ ಕಲಿಯುವ ಆಸೆ ಹೆಚ್ಚಿತ್ತು. ಹಾಗಾಗಿ, ತನ್ನೂರಿನ ಹತ್ತಿರದ ನಗರವೊಂದಕ್ಕೆ ಆತ ನಲವತ್ತು ನಿಮಿಷಗಳ ಕಾಲ ಸೈಕಲ್ ತುಳಿದುಕೊಂಡು ಬರುತ್ತಿದ್ದ. ಅಲ್ಲಿಗೆ ಬರುತ್ತಿದ್ದ ವಿದೇಶಿ ಯಾತ್ರಿಗಳಿಗೆ ಹಣಪಡೆಯದೇ ಮಾರ್ಗದರ್ಶಿಯಾಗಿ ಕೆಲಸ ಮಾಡುತ್ತಿದ್ದ. ಇದೇ ಅವನನ್ನು ಇಷ್ಟು ಎತ್ತರಕ್ಕೆ ತಂದುನಿಲ್ಲಿಸಿತು.!!

ಇಂಗ್ಲೀಷ್ ಪದವಿ ಗಳಿಸಿದ.!!

ಇಂಗ್ಲೀಷ್ ಪದವಿ ಗಳಿಸಿದ.!!

ಜಾಕ್ ಮಾಗೆ ಇಂಗ್ಲೀಷ್ ಕಲಿಯುವ ಕನಸಿತ್ತು. ಅದರಂತೆಯೇ ಜಾಕ್ ಮಾ ಇಂಗ್ಲಿಷ್​ನಲ್ಲಿ ಪದವಿ ಪಡೆದ. ಇಂಗ್ಲಿಷ್​ನಲ್ಲಿ ಪದವಿ ಪಡೆದ ನಂತರ ಕಾಲೇಜೊಂದರಲ್ಲಿ ಕೆಲಸ ಸಿಕ್ಕಿತು. ರಾತ್ರಿ ತರಗತಿಗಳನ್ನೂ ತೆಗೆದುಕೊಳ್ಳುತ್ತಿದ್ದ ಜಾಕ್ ಕಾಲೇಜು ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಸುಕೊಡುವ ಕೆಲಸ ಮಾಡುತ್ತಿದ್ದ.!!

ರೋಡಿನಲ್ಲಿ ಹೂ ಮಾರುತ್ತಿದ್ದ!!

ರೋಡಿನಲ್ಲಿ ಹೂ ಮಾರುತ್ತಿದ್ದ!!

ಜಾಕ್ ಮಾಗೆ ಇಂಗ್ಲೀಷ್ ಪಾಠ ಹೇಳಿಕೊಡುವುದು ಶಾಶ್ವತವಾದ ಕೆಲಸವೇನು ಆಗಿರಲಿಲ್ಲ. ಮತ್ತು ಆದಾಯವಿಲ್ಲದ ಬಳಲಿದ್ದ. ನಂತರ ಜೀವನ ನಿರ್ವಹಣೆಗಾಗಿ ಜಾಕ್ ರಸ್ತೆಯ ಮೇಲೆ ಪುಸ್ತಕ, ಹೂವು, ಬಟ್ಟೆ ಎಲ್ಲವನ್ನೂ ಮಾರಾಟ ಮಾಡಿದ್ದನೆಂದರೆ ಅಂದು ಜಾಕ್ ಮಾ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಊಹಿಸಬಹುದು.!!

ಅಮೆರಿಕಾಕ್ಕೆ ತೆರಳುವ ಆಫರ್!!

ಅಮೆರಿಕಾಕ್ಕೆ ತೆರಳುವ ಆಫರ್!!

ಮೊದಲೇ ಹೇಳಿದಂತೆ ಜಾಕ್‌ಮಾನ ಇಂಗ್ಲೀಷ್ ಕಲಿಕೆಯೇ ಅವನನ್ನು ಇಷ್ಟು ಎತ್ತರಕ್ಕೆ ತಂದು ನಿಲ್ಲಿಸಿತು ಎನ್ನಬಹುದು. 1995ರಲ್ಲಿ ಅಮೆರಿಕದ ಹೂಡಿಕೆದಾರನೊಬ್ಬನಿಗೆ ಭಾಷಾಂತರಕಾರನಾಗಿ ಜಾಕ್ ಅಮೆರಿಕಕ್ಕೆ ಕಳುಹಿಸಲ್ಪಟ್ಟ. ಜಾಕ್ ಇಂಗ್ಲಿಷ್​ನಲ್ಲಿ ಪರಿಣಿತನೇ ಹೊರತು ಕಂಪ್ಯೂಟರ್​ನಲ್ಲ. ಹಾಗಾಗಿ, ಅವನು ಅಲ್ಲಿ ಕಂಪ್ಯೂಟರ್ ಭವಿಷ್ಯವನ್ನು ತಿಳಿದುಕೊಂಡನು.!!

ಇಂಟರ್‌ನೆಟ್ ತಲೆಕೆಡಿಸಿತು!!

ಇಂಟರ್‌ನೆಟ್ ತಲೆಕೆಡಿಸಿತು!!

ಇಂಟರ್​ನೆಟ್​ನಲ್ಲಿ ಶಬ್ದವೊಂದನ್ನು ಹುಡುಕುವಾಗ ಚೀನಾಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಇಲ್ಲದಿರುವುದು ಆತನ ಗಮನಕ್ಕೆ ಬಂತು. ಜಾಕ್​ಗೆ ಆ ಕ್ಷಣವೇ ತನ್ನ ಮುಂದಿನ ಹಾದಿ ಗೋಚರಿಸಿತು!ಅಂತರ್ಜಾಲದ ಅಪಾರ ಸಾಮರ್ಥ್ಯದ ಬಗ್ಗೆ ನಂಬಿಕೆ ಮೂಡಿದ್ದರಿಂದ ಇಂಟರ್‌ನೆಟ್ ಅವನ ತಲೆಕೆಡಿಸಿತು.!!

ಇ-ಕಾಮರ್ಸ್ ಸಂಸ್ಥೆ ಶುರು!!

ಇ-ಕಾಮರ್ಸ್ ಸಂಸ್ಥೆ ಶುರು!!

‘ನಾವೊಂದು ಐತಿಹಾಸಿಕ ಇ-ಕಾಮರ್ಸ್ ಕಂಪನಿಯನ್ನು ಸ್ಥಾಪಿಸಲಿದ್ದೇವೆ. ಆ ಇ-ಕಾಮರ್ಸ್ ಸಂಸ್ಥೆ ಕನಿಷ್ಠ 100 ವರ್ಷಗಳ ಕಾಲ ಅದು ಬಾಳಬೇಕು. ವಿಶ್ವದ ಅಂತರ್ಜಾಲ ಸೈಟ್​ಗಳಲ್ಲಿ ಮೊದಲ ಹತ್ತರೊಳಗಿರಬೇಕು ಎಂದು ಹೇಳಿದ. ಅದೇ ರೀತಿ ವಿಶ್ವದ ಟಾಪ್ 10 ಅಂತರ್ಜಾಲ ಸೈಟ್‌ಗಳಲ್ಲಿ ಒಂದಾದ ಅಲಿಬಾಬ.ಕಾಮ್ ಅನ್ನು ಜಾಕ್ ಮಾ ರೂಪಿಸಿದ.!!

ಚೀನಾದಲ್ಲಿ ಅಲಿಬಾಬ!!

ಚೀನಾದಲ್ಲಿ ಅಲಿಬಾಬ!!

ಈವರೆಗೂ ಹಲವರಿಗೆ ಪ್ರರ್ಶನೆಯಾಗಿಯೇ ಉಳಿದಿರುವುದು ಚೀನಾದಲ್ಲಿ ಅಲಿಬಾಬ ಎಂಬ ಹೆಸರು ಬಂದಿದ್ದೇಗೆ ಎಂಬುದು. ಆದರೆ, ನಿಮಗೆ ಗೊತ್ತಾ? ಜಾಕ್ ಈ ಹೆಸರನ್ನು ಕಂಪನಿಗೆ ಇಟ್ಟ ಉದ್ದೇಶವೆಂದರೆ ಅರೇಬಿಯನ್ ನೈಟ್ಸ್​ನಲ್ಲಿ ಬರುವ ಅಲಿಬಾಬನ ಹೆಸರು ಜಗತ್ತಿನ ಜನರೆಲ್ಲರಿಗೂ ತೀರಾ ಪರಿಚಿತ ಎನ್ನುವುದು! ವಿವಿಧ ದೇಶಗಳ 30 ಜನರನ್ನು ನಿಮಗೆ ಅಲಿಬಾಬಾ ಗೊತ್ತೇ ಎಂದು ಕೇಳಿದಾಗ ಎಲ್ಲರೂ ಗೊತ್ತಿದೆ ಎಂದೇ ಹೇಳಿದ್ದರಂತೆ.!!

ಅಲಿಬಾಬ.ಕಾಮ್!

ಅಲಿಬಾಬ.ಕಾಮ್!

18 ಜನರ ಟೀಮ್ ತಮ್ಮ ಉಳಿತಾಯದ 60,000 ಡಾಲರ್​ಗಳನ್ನು ಕೂಡಿಸಿದ ನಂತರ ಜಾಕ್ ಮಾ ನೇತೃತ್ವದಲ್ಲಿ 1999ರಲ್ಲಿ ಅಲಿಬಾಬ.ಕಾಮ್ ಶುರುವಾಯಿತು. ಅಲಿಬಾಬಾ.ಕಾಮ್‌ನಲ್ಲಿ ಮಾರಾಟಗಾರನೊಬ್ಬ ಆನ್‌ಲೈನ್ ಮೂಲಕ ಎಕೆ 47 ಅನ್ನು ಮಾರಾಟ ಮಾಡಲು ಹೊರಟಿದ್ದು ನೆಗೆಟಿವ್ ಪ್ರಚಾರವಾದರೂ ಕಂಪೆನಿ ಹೆಸರು ನಿಧಾನಕ್ಕೆ ಬೆಳೆಯುತ್ತಾ ಹೋಯಿತು.!!

ಹಿಂದಿರುಗಿ ನೋಡಲೇ ಇಲ್ಲ!!

ಹಿಂದಿರುಗಿ ನೋಡಲೇ ಇಲ್ಲ!!

2000ದ ಹೊತ್ತಿಗೆ ಅಲಿಬಾಬಾದಲ್ಲಿ 25 ಮಿಲಿಯನ್​ಗಿಂತ ಹೆಚ್ಚು ಹೂಡಿಕೆಯಾಗಿತ್ತು. ಅಲ್ಲಿಂದ ಮುಂದೆ ಜಾಕ್ ಮತ್ತು ಸ್ನೇಹಿತರು ಹಿಂದಿರುಗಿ ನೋಡಲೇ ಇಲ್ಲ. ಇಂದು ಅಲಿಬಾಬಾ, ವಾಲ್​ವಾರ್ಟ್ ಅನ್ನೂ ಹಿಂದಿಕ್ಕಿ 200ಕ್ಕೂ ಅಧಿಕ ದೇಶಗಳಲ್ಲಿ ಕಾರ್ಯನಿರ್ವಹಿಸುವ ಜಗತ್ತಿನ ಅತೀ ದೊಡ್ಡ ರೀಟೇಲರ್ ಕಂಪನಿಯಾಗಿದೆ 2017ರಲ್ಲಿ ಅಲಿಬಾಬಾದ ಮಾರುಕಟ್ಟೆ ಮೌಲ್ಯ 360 ಬಿಲಿಯನ್ ಅಮೆರಿಕನ್ ಡಾಲರ್​ಗಳು ಎಂದರೆ ನೀವು ನಂಬಲೇಬೇಕು!

Best Mobiles in India

English summary
In what might be called as a major joint venture (JV), China’s Alibaba has reportedly initiated talks with Mukesh Ambani’s Reliance Retail. Alibaba, the Chinese e-commerce giant is all set to invest in Reliance Retail, and acquire some stake to make an entry into the Indian market.to know more visit to kannada.gizbot.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X