ಅಮಾಜ್‌ಫಿಟ್‌ ಬ್ಯಾಂಡ್ 7 ಲಾಂಚ್; 18 ದಿನ ಬ್ಯಾಟರಿ ಬ್ಯಾಕ್‌ಅಪ್‌ ಫಿಕ್ಸ್‌!

|

ಜನಪ್ರಿಯ ಅಮಾಜ್‌ಫಿಟ್‌ ಕಂಪೆನಿ ಹೊಸ ಅಮಾಜ್‌ಫಿಟ್‌ ಬ್ಯಾಂಡ್ 7 (Amazfit Band 7) ಡಿವೈಸ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಬ್ಯಾಂಡ್‌ AMOLED ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಸುಮಾರು 100 ಕ್ಕೂ ಅಧಿಕ ಸ್ಪೋರ್ಟ್ಸ್‌ ಮೋಡ್‌ ಆಯ್ಕೆಗಳನ್ನು ಪಡೆದಿದೆ. ಇದರೊಂದಿಗೆ ದೀರ್ಘ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಸಹ ಒಳಗೊಂಡಿದ್ದು, ಆಕರ್ಷಕ ಡಿಸೈನ್‌ ಪಡೆದಿದೆ.

ಅಮಾಜ್‌ಫಿಟ್‌ ಬ್ಯಾಂಡ್ 7

ಹೌದು, ಅಮಾಜ್‌ಫಿಟ್‌ ತನ್ನ ನೂತನ ಅಮಾಜ್‌ಫಿಟ್‌ ಬ್ಯಾಂಡ್ 7 (Amazfit Band 7) ಅನ್ನು ದೇಶಿ ಮಾರುಕಟ್ಟೆಗೆ ಲಾಂಚ್ ಮಾಡಿದೆ. ಈ ಡಿವೈಸ್‌ ಒಂದೇ ಚಾರ್ಜ್‌ನಲ್ಲಿ 2 ವಾರಗಳವರೆಗೆ ಬ್ಯಾಕ್‌ಅಪ್‌ ನೀಡಲಿದೆ. ಇನ್ನು ಈ ಫಿಟ್ನೆಸ್‌ ಟ್ರ್ಯಾಕರ್ ಎರಡು ಬಣ್ಣಗಳಲ್ಲಿ ಆಯ್ಕೆಯನ್ನು ಒಳಗೊಂಡಿದ್ದು, ಅವುಗಳು ಕ್ರಮವಾಗಿ ಕ್ಲಾಸಿಕ್ ಬ್ಲ್ಯಾಕ್‌ ಮತ್ತು ಎಲಿಗೆಂಟ್‌ ಬೀಜ್ ಆಗಿವೆ. ಹಾಗೆಯೇ ಪಿಂಕ್, ಆರೆಂಜ್, ಬ್ಲೂ ಹಾಗೂ ಗ್ರೀನ್‌ ಬಣ್ಣಗಳ ಸ್ಟ್ರಾಪ್ (strap) ಆಯ್ಕೆ ಹೊಂದಿದೆ.

ಬ್ಯಾಂಡ್ 7

ಅಮಾಜ್‌ಫಿಟ್‌ ಬ್ಯಾಂಡ್ 7 ಭಾರತದಲ್ಲಿ 3,499 ರೂ. ಗಳ ಪ್ರೈಸ್‌ ಟ್ಯಾಗ್‌ ಹೊಂದಿದ್ದು, ಕೊಡುಗೆಯಲ್ಲಿ 2,999ರೂ. ಗಳಿಗೆ ಲಭ್ಯವಾಗಲಿದೆ. ಈ ಡಿವೈಸ್‌ ನವೆಂಬರ್ 8 ರಿಂದ ಅಮೆಜಾನ್ (Amazon) ಮತ್ತು ಅಮಾಜ್‌ಫಿಟ್‌ (Amazfit) ನ ಅಧಿಕೃತ ವೆಬ್‌ಸೈಟ್ ಮೂಲಕ ಮಾರಾಟವಾಗಲಿದೆ. ಹಾಗಾದರೇ ಅಮಾಜ್‌ಫಿಟ್‌ ಬ್ಯಾಂಡ್ 7 ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

198 × 368

ಅಮಾಜ್‌ಫಿಟ್‌ ಬ್ಯಾಂಡ್ 7 ಬ್ಯಾಂಡ್‌ 1.47 ಇಂಚಿನ ಡಿಸ್‌ಪ್ಲೇ ಹೊಂದಿರಲಿದೆ. ಇದು 2.5D ಅಮೋಲೆಡ್‌ ಡಿಸ್‌ಪ್ಲೇ ಆಗಿದ್ದು, 198 × 368 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಈ ಡಿಸ್‌ಪ್ಲೇ 282ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದ್ದು, 50 ಕ್ಕೂ ಹೆಚ್ಚು ವಾಚ್ ಫೇಸ್‌ಗಳೊಂದಿಗೆ ಪ್ರೀ ಲೋಡ್‌ ಆಗಿದೆ. ಇದರಲ್ಲಿ 8 ವಾಚ್ ಫೇಸ್‌ಗಳನ್ನು ಎಡಿಟ್‌ ಮಾಡಬಹುದಾಗಿದೆ. ಇದು ಆಲ್‌ವೇಸ್‌ ಆನ್‌ ಡಿಸ್‌ಪ್ಲೇ ಕಾರ್ಯವನ್ನು ಸಹ ಬೆಂಬಲಿಸುತ್ತೆ.

ಆಪ್ಟಿಕಲ್ ಹಾರ್ಟ್‌

ಇನ್ನು ಅಮಾಜ್‌ಫಿಟ್‌ ಬ್ಯಾಂಡ್‌ 7 ಆಪ್ಟಿಕಲ್ ಹಾರ್ಟ್‌ ರೇಟ್‌ ಮಾನಿಟರ್‌, ಬ್ಲಡ್‌ ಆಕ್ಸಿಜನ್‌ ಸೆನ್ಸಾರ್‌ ಮತ್ತು ಮೋಷನ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದರೊಂದಿಗೆ ನಿರಂತರ ಹೃದಯ ಬಡಿತ ಟ್ರ್ಯಾಕಿಂಗ್, ನಿರಂತರ ರಕ್ತ ಆಮ್ಲಜನಕದ ಮೇಲ್ವಿಚಾರಣೆ, ನಿರಂತರ ಒತ್ತಡ ಮಟ್ಟದ ಮೇಲ್ವಿಚಾರಣೆ, ನಿದ್ರೆ ಟ್ರ್ಯಾಕಿಂಗ್, ಸ್ಟೆಪ್ಸ್‌ ಟ್ರ್ಯಾಕಿಂಗ್, ಸ್ತ್ರೀ ಆರೋಗ್ಯ ಟ್ರ್ಯಾಕಿಂಗ್ ಅನ್ನು ಕೂಡ ಬೆಂಬಲಿಸುವ ಫೀಚರ್ಸ್‌ಗಳನ್ನು ಬೆಂಬಲಿಸುತ್ತೆ.

ಅಲ್ಗಾರಿದಮ್‌

ಅಮಾಜ್‌ಫಿಟ್‌ ಬ್ಯಾಂಡ್ 7 ಕಂಪನಿಯು ಅಭಿವೃದ್ಧಿಪಡಿಸಿದ ಪೀಕ್‌ಬೀಟ್ಸ್, ಎಕ್ಸರ್‌ಸೆನ್ಸ್ ಮತ್ತು ಸೊಮ್ನಸ್‌ಕೇರ್ ಅಲ್ಗಾರಿದಮ್‌ ಅನ್ನು ಹೊಂದಿದೆ. ಇದು 120 ವರ್ಕ್‌ಔಟ್ ಮೋಡ್‌ಗಳನ್ನು ಬೆಂಬಲಿಸುತ್ತೆ. ಅಲ್ಲದೆ ಕಂಪನಿ ಸ್ವಾಮ್ಯದ ಅಲ್ಗಾರಿದಮ್‌ನೊಂದಿಗೆ ವಾಕಿಂಗ್, ರನ್ನಿಂಗ್, ಎಲಿಪ್ಟಿಕಲ್ ಮತ್ತು ರೋ ಮೆಷಿನ್ ಆಕ್ಟಿವಿಟಿಗಳನ್ನು ಆಟೋ ಡಿಟೆಕ್ಟ್‌ ಮಾಡಲಿದೆ. ಇದು 10 ಮಿನಿ ಅಪ್ಲಿಕೇಶನ್‌ಗಳನ್ನು ನೀಡುವ Zepp OS ನೊಂದಿಗೆ ಫ್ರೀ ಲೋಡ್ ಆಗಿದೆ.

232mAh

ಅಮಾಜ್‌ಫಿಟ್‌ ಬ್ಯಾಂಡ್‌ 7 ಸಾಧನವು 232mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಸಿಂಗಲ್‌ ಚಾರ್ಜ್‌ನಲ್ಲಿ 18 ದಿನಗಳ ಬಾಳಿಕೆ ನೀಡಲಿದೆ. ಆದರೆ ಲಾಂಚ್‌ ಮೈಕ್ರೋ-ಸೈಟ್‌ನಲ್ಲಿ ಉಲ್ಲೇಖಿಸಿದಂತೆ ಬಳಕೆದಾರರು ಸುಮಾರು 12 ದಿನಗಳ ಬ್ಯಾಟರಿ ಅವಧಿಯನ್ನು ನಿರೀಕ್ಷಿಸಬಹುದು. ಈ ಬ್ಯಾಂಡ್ 7 ಬ್ಯಾಟರಿ ಸೇವರ್ ಮೋಡ್‌ನಲ್ಲಿ 28 ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಬ್ರ್ಯಾಂಡ್ ಹೇಳಿಕೊಂಡಿದೆ. ಇನ್ನು ಕನೆಕ್ಟವಿಟಿ ಆಯ್ಕೆಗಳಲ್ಲಿ ಬ್ಲೂಟೂತ್‌ 5.2 ಅನ್ನು ಬೆಂಬಲಿಸಲಿದೆ.

Best Mobiles in India

English summary
Amazfit Band 7 with 18 Days Battery Life Launched in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X