ಭಾರತಕ್ಕೆ ಸದ್ಯದಲ್ಲೇ ಎಂಟ್ರಿ ಕೊಡಲಿದೆ ಅಮಾಜ್‌ಫಿಟ್‌ ಪಾಪ್‌ 2 ಸ್ಮಾರ್ಟ್‌ವಾಚ್!..ಬೆಲೆ?

|

ಜನಪ್ರಿಯ ಸ್ಮಾರ್ಟ್‌ವಾಚ್‌, ಸ್ಮಾರ್ಟ್‌ ಬ್ಯಾಂಡ್‌ ತಯಾರಿಕಾ ಸಂಸ್ಥೆಗಳಲ್ಲಿ ಅಮಾಜ್‌ಫಿಟ್‌ ಸಂಸ್ಥೆಯು ಸಹ ಒಂದಾಗಿದ್ದು, ಇದು ಇತ್ತೀಚಿಗಷ್ಟೆ ಭಾರತದಲ್ಲಿ ಹೊಸದಾಗಿ ಅಮಾಜ್‌ಫಿಟ್‌ ಬ್ಯಾಂಡ್ 7 (Amazfit Band 7) ಡಿವೈಸ್‌ ಅನ್ನು ಬಿಡುಗಡೆ ಮಾಡಿದೆ. ಇದೀಗ ಅಮಾಜ್‌ಫಿಟ್‌ ಸಂಸ್ಥೆಯು ಮತ್ತೊಂದು ನೂತನ ಸ್ಮಾರ್ಟ್‌ ವೇರಿಯಬಲ್ ಡಿವೈಸ್‌ ಪರಿಚಯಿಸಲು ಸಜ್ಜಾಗಿದ್ದು, ಅದುವೇ ಅಮಾಜ್‌ಫಿಟ್‌ ಪಾಪ್‌ 2 (Amazfit Pop 2) ಆಗಿದೆ.

Amazfit Pop 2

ಹೌದು, ಅಮಾಜ್‌ಫಿಟ್‌ ಸಂಸ್ಥೆಯು ಭಾರತದಲ್ಲಿ ಸದ್ಯದಲ್ಲಿಯೇ ನೂತನವಾಗಿ ಅಮಾಜ್‌ಫಿಟ್‌ ಪಾಪ್‌ 2 (Amazfit Pop 2) ಹೆಸರಿನಲ್ಲಿ ಸ್ಮಾರ್ಟ್‌ವಾಚ್‌ ಪರಿಚಯಿಸಲಿದೆ ಎಂದು ವರದಿಯಾಗಿದೆ. ಈ ಬಗ್ಗೆ ಕಂಪನಿಯ ಪೇಜ್‌ನಲ್ಲಿ 'ಶೀಘ್ರದಲ್ಲೇ ಬರಲಿದೆ' ಎಂದು ಪಟ್ಟಿಮಾಡಲಾಗಿದೆ. ಆದರೆ ಯಾವಾಗ ಬಿಡುಗಡೆ ಆಗಲಿದೆ ಎನ್ನುವ ಬಗ್ಗೆ ನಿಖರವಾದ ಲಾಂಚ್ ದಿನಾಂಕವನ್ನು ತಿಳಿಸಿಲ್ಲ. ಅಂದಹಾಗೆ ಈ ಸ್ಮಾರ್ಟ್‌ವಾಚ್‌ ಅನ್ನು ಇತ್ತೀಚೆಗೆ ಬ್ಲೂಟೂತ್ ಲಾಂಚ್ ಸ್ಟುಡಿಯೋದಲ್ಲಿ ಪ್ರದರ್ಶಿಸಲಾಯಿದೆ.

AMOLED

ಇನ್ನು ಈ ಹೊಸ ಸ್ಮಾರ್ಟ್ ವಾಚ್‌ನ ಕೆಲವು ಫೀಚರ್ಸ್‌ಗಳು ಬಹಿರಂಗ ಆಗಿವೆ. ಲಭ್ಯ ಮಾಹಿತಿ ಪ್ರಕಾರ, ಅಮಾಜ್‌ಫಿಟ್‌ ಪಾಪ್ 2 ಸ್ಮಾರ್ಟ್‌ ವಾಚ್ 1.78-ಇಂಚಿನ (45-ಮಿಮೀ) ಹೆಚ್‌ಡಿ AMOLED ಡಿಸ್‌ಪ್ಲೇಯನ್ನು ಒಳಗೊಂಡಿರಲಿದೆ. ಅಲ್ಲದೇ ಇದು 150 ಕ್ಕೂ ಹೆಚ್ಚು ವಾಚ್ ಫೇಸ್‌ಗಳ ಆಯ್ಕೆ ಅನ್ನು ಹೊಂದಿರಲಿದೆ. ಕರೆ ಮಾಡುವಿಕೆ, ರಿಮೋಟ್ ಮ್ಯೂಸಿಕ್ ಪ್ಲೇಬ್ಯಾಕ್ ಕಂಟ್ರೋಲ್ ಆಯ್ಕೆಗಳನ್ನು ಪಡೆದಿರಲಿದೆ.

ಅಪ್ಲಿಕೇಶನ್

ಹಾಗೆಯೇ ಈ ಸ್ಮಾರ್ಟ್‌ ವಾಚ್ ಅಪ್ಲಿಕೇಶನ್ ಅಧಿಸೂಚನೆಗಳು ಮತ್ತು ವಾಯಿಸ್‌ ಅಸಿಸ್ಟಂಟ್‌ ನಂತಹ ಸಾಮರ್ಥ್ಯಗಳಿಗೆ ಸಪೋರ್ಟ್ ಮಾಡುತ್ತದೆ ಮತ್ತು ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗೆ ಡಿವೈಸ್‌ ಕನೆಕ್ಟ್ ಮಾಡಲು ಬ್ಲೂಟೂತ್ 5.2 ಅನ್ನು ಬಳಸಬಹುದು ಎನ್ನಲಾಗಿದೆ. ಇನ್ನು ಈ ಡಿವೈಸ್ ಆರೋಗ್ಯದ ಮೇಲು ನಿಗಾ ಇಡುವ ಆಯ್ಕೆ ಪಡೆದಿದ್ದು, ರಕ್ತದ ಆಮ್ಲಜನಕ ಮಟ್ಟದ ಮಾನಿಟರ್ ಅನ್ನು ಒಳಗೊಂಡಿದೆ.

100 ಕ್ಕೂ ಅಧಿಕ ಸ್ಪೋರ್ಟ್ಸ್‌ ಮೋಡ್‌ ಆಯ್ಕೆ

ಇದರೊಂದಿಗೆ ಅಮಾಜ್‌ಫಿಟ್‌ ಪಾಪ್ 2 ಸ್ಮಾರ್ಟ್‌ ವಾಚ್ 100 ಕ್ಕೂ ಅಧಿಕ ಸ್ಪೋರ್ಟ್ಸ್‌ ಮೋಡ್‌ ಆಯ್ಕೆಗಳನ್ನು ಪಡೆದಿದ್ದು, ಬಳಕೆದಾರರ ವ್ಯಾಯಾಮವನ್ನು ಟ್ರ್ಯಾಕ್ ಮಾಡಲು ನೆರವಾಗಲಿದೆ. ಹೆಚ್ಚುವರಿಯಾಗಿ, ಬಳಕೆದಾರರು ಸಂಸ್ಥೆಯ Zepp ಸಕ್ರಿಯ ಅಪ್ಲಿಕೇಶನ್‌ನಲ್ಲಿ ನಿಮ್ಮ ವ್ಯಾಯಾಮ ಮತ್ತು ಆರೋಗ್ಯ ಡೇಟಾವನ್ನು ಚೆಕ್ ಮಾಡಬಹುದು. ಅಲ್ಲದೇ ಕೆಲವೊಂದು ಆಯ್ಕೆಗಳ ಸೆಟ್ಟಿಂಗ್‌ಗಳನ್ನು ಬದಲಾಯಿಸಬಹುದು.

ಒದಗಿಸಲಿದೆ

ಸಂಸ್ಥೆಯ ಪ್ರಕಾರ ಈ ಸ್ಮಾರ್ಟ್ ವಾಚ್‌ನ ಒಂದು ಚಾರ್ಜ್ 10 ದಿನಗಳ ವರೆಗೆ ಬ್ಯಾಟರಿ ಬ್ಯಾಕ್‌ಅಪ್‌ ಒದಗಿಸಲಿದೆ. ಹಾಗೆಯೇ ಈ ಡಿವೈಸ್ IP68 ರೇಟಿಂಗ್ ಇದ್ದು, ಜಲನಿರೋಧಕವಾಗಿದೆ. ಇದು ಮೆಟಲ್ ಬಾಡಿ, ಸ್ಟೇನ್‌ಲೆಸ್ ಸ್ಟೀಲ್ ಬಟನ್ ಮತ್ತು ಸಿಲಿಕೋನ್ ಸ್ಟ್ರಾಪ್‌ ರಚನೆ ಪಡೆದಿದ್ದು, ಎರಡು ಬಣ್ಣಗಳ ಆಯ್ಕೆ ಪಡೆದಿದೆ. ಅಮಾಜ್‌ಫಿಟ್ ಪಾಪ್ 2 ಬ್ಲ್ಯಾಕ್‌ ಮತ್ತು ಪಿಂಕ್ ಬಣ್ಣಗಳಲ್ಲಿ ಬಿಡುಗಡೆ ಆಗಲಿದ್ದು, ಇನ್ನು ಈ ಸ್ಮಾರ್ಟ್ ವಾಚ್‌ನ ಬೆಲೆ ಬಗ್ಗೆ ಮಾಹಿತಿ ಇಲ್ಲ.

ಅಮಾಜ್‌ಫಿಟ್‌ ಬ್ಯಾಂಡ್ 7 ಫೀಚರ್ಸ್

ಅಮಾಜ್‌ಫಿಟ್‌ ಬ್ಯಾಂಡ್ 7 ಫೀಚರ್ಸ್

ಇತ್ತೀಚಿಗೆ ಭಾರತದಲ್ಲಿ ಬಿಡುಗಡೆ ಆಗಿರುವ ಅಮಾಜ್‌ಫಿಟ್‌ ತನ್ನ ನೂತನ ಅಮಾಜ್‌ಫಿಟ್‌ ಬ್ಯಾಂಡ್ 7 (Amazfit Band 7) 1.47 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು ಒಂದೇ ಚಾರ್ಜ್‌ನಲ್ಲಿ 2 ವಾರಗಳವರೆಗೆ ಬ್ಯಾಕ್‌ಅಪ್‌ ನೀಡಲಿದೆ. ಇನ್ನು ಈ ಫಿಟ್ನೆಸ್‌ ಟ್ರ್ಯಾಕರ್ ಎರಡು ಬಣ್ಣಗಳಲ್ಲಿ ಆಯ್ಕೆಯನ್ನು ಒಳಗೊಂಡಿದ್ದು, ಅವುಗಳು ಕ್ರಮವಾಗಿ ಕ್ಲಾಸಿಕ್ ಬ್ಲ್ಯಾಕ್‌ ಮತ್ತು ಎಲಿಗೆಂಟ್‌ ಬೀಜ್ ಆಗಿವೆ. ಹಾಗೆಯೇ ಪಿಂಕ್, ಆರೆಂಜ್, ಬ್ಲೂ ಹಾಗೂ ಗ್ರೀನ್‌ ಬಣ್ಣಗಳ ಸ್ಟ್ರಾಪ್ (strap) ಆಯ್ಕೆ ಹೊಂದಿದೆ.

Best Mobiles in India

Read more about:
English summary
Amazfit Pop 2 smartwatch with 100+ sports modes to launch soon in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X