ಅಮಾಜ್‌ಫಿಟ್‌ POP 2 ಸ್ಮಾರ್ಟ್‌ವಾಚ್‌ ಲಾಂಚ್‌! ಬಜೆಟ್‌ ಬೆಲೆಯಲ್ಲಿ ಅಚ್ಚರಿಯ ಫೀಚರ್ಸ್‌!

|

ಸ್ಮಾರ್ಟ್‌ವಾಚ್‌ ಪ್ರಿಯರ ನೆಚ್ಚಿನ ಬ್ರ್ಯಾಂಡ್‌ಗಳಲ್ಲಿ ಅಮಾಜ್‌ಫಿಟ್‌ ಕೂಡ ಒಂದು. ಅಮಾಜ್‌ಫಿಟ್‌ ಸ್ಮಾರ್ಟ್‌ವಾಚ್‌ಗಳು ಸ್ಟೈಲಿಶ್‌ ಲುಕ್‌ ಮತ್ತು ಫೀಚರ್ಸ್‌ಗಳ ಮೂಲಕ ಗಮನಸೆಳೆದಿವೆ. ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ ಅಮಾಜ್‌ಫಿಟ್‌ ವಾಚ್‌ಗಳಿಗೆ ಸಿಕ್ಕಾಪಟ್ಟೆ ಕ್ರೇಜ್‌ ಇದೆ. ಅದಕ್ಕೆ ತಕ್ಕಂತೆ ಅಮಾಜ್‌ಫಿಟ್‌ ಹೊಸ ಮಾದರಿಯ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ ಅದರ ಮುಂದುವರೆದ ಭಾಗವಾಗಿ ಹೊಸ ಅಮಾಜ್‌ಫಿಟ್‌ POP 2 ಅನ್ನು ಬಿಡುಗಡೆ ಮಾಡಿದೆ.

ಅಮಾಜ್‌ಫಿಟ್‌

ಹೌದು, ಅಮಾಜ್‌ಫಿಟ್‌ POP 2 ಸ್ಮಾರ್ಟ್‌ವಾಚ್‌ ಭಾರತಕ್ಕೆ ಎಂಟ್ರಿ ನೀಡಿದೆ. ಈ ಸ್ಮಾರ್ಟ್‌ವಾಚ್‌ ಬಜೆಟ್‌ ಬೆಲೆಯ ವಾಚ್‌ ಆಗಿದೆ. ಇದು ನಾಯ್ಸ್ ಕಂಪೆನಿಯ ನಾಯ್ಸ್‌ ಕಲರ್ ಫಿಟ್ ಪ್ರೊ 4, ರಿಯಲ್‌ಮಿ ವಾಚ್ 3 ಪ್ರೊ, ಒನ್‌ಪ್ಲಸ್ ನಾರ್ಡ್ ವಾಚ್‌ಗಳಿಗೆ ಪೈಪೋಟಿ ನೀಡುವ ಗುರಿಯನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ವಾಚ್‌ನಲ್ಲಿ 150+ ಕಸ್ಟಮೈಸೆಬಲ್‌ ವಾಚ್‌ಫೇಸ್‌ಗಳನ್ನು ನೀಡಲಾಗಿದೆ. ಇನ್ನುಳಿದಂತೆ ಈ ಹೊಸ ಸ್ಮಾರ್ಟ್‌ವಾಚ್‌ ಏನೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಅಮಾಜ್‌ಫಿಟ್‌

ಅಮಾಜ್‌ಫಿಟ್‌ POP 2 ಸ್ಮಾರ್ಟ್‌ವಾಚ್‌ 1.78 ಇಂಚಿನ ಹೆಚ್‌ಡಿ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ ಸ್ಕ್ವೇರ್‌ ಡಯಲ್ ಅನ್ನು ಹೊಂದಿದೆ. ಇದು ಆಲ್‌ವೇಸ್‌ ಆನ್ ಡಿಸ್‌ಪ್ಲೇ ಫೀಚರ್ಸ್‌ ಒಳಗೊಂಡಿದ್ದು, 150+ ಕಸ್ಟಮೈಸೆಬಲ್‌ ವಾಚ್ ಫೇಸ್‌ಗಳನ್ನು ನೀಡುತ್ತದೆ. ಇನ್ನು ಸ್ಮಾರ್ಟ್‌ವಾಚ್ ಬಾಡಿ ಅಲ್ಯೂಮಿನಿಯಂ ಮಿಶ್ರಲೋಹದಿಂದ ಕೂಡಿದ್ದು, ಬಲಭಾಗದಲ್ಲಿ ಬಟನ್‌ನೊಂದಿಗೆ ಬರಲಿದೆ. ಇದು ನೀರಿನಲ್ಲಿ 5 ಮೀಟರ್‌ಗಳವರೆಗೆ ಕೂಡ ವಾಟರ್‌ ಪ್ರೂಫ್‌ ವ್ಯವಸ್ಥೆಯನ್ನು ಹೊಂದಿದೆ.

ಸ್ಮಾರ್ಟ್‌ವಾಚ್‌

ಇನ್ನು ಈ ಸ್ಮಾರ್ಟ್‌ವಾಚ್‌ ಬಜೆಟ್‌ ಬೆಲೆ ಹೊಂದಿದ್ದರೂ ಕೂಡ ಹೆಚ್ಚಿನ ಫೀಚರ್ಸ್‌ಗಳನ್ನು ನೀಡಲಿದೆ. ಇದರಲ್ಲಿ ನೀವು ಹೃದಯ ಬಡಿತ ಮಾನಿಟರ್, SpO2 ಸೆನ್ಸಾರ್‌, ಸ್ಲಿಪ್‌ ಟ್ರ್ಯಾಕರ್ ಮತ್ತು ರಿಮೈಂಡರ್‌ನಂತಹ ಫೀಚರ್ಸ್‌ಗಳನ್ನು ಪಡೆದುಕೊಳ್ಳಬಹುದು. ಜೊತೆಗೆ 100 ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳನ್ನು ಟ್ರ್ಯಾಕ್ ಮಾಡುವ ಸಾಮರ್ಥ್ಯವನ್ನು ಈ ಸ್ಮಾರ್ಟ್‌ವಾಚ್‌ ಒಳಗೊಂಡಿದೆ. ಅಮಾಜ್‌ಫಿಟ್‌ POP 2 ಬ್ಲೂಟೂತ್ ಫೋನ್ ಕರೆಗಳಿಗಾಗಿ ಇನ್‌ಬಿಲ್ಟ್‌ ಸ್ಪೀಕರ್ ಮತ್ತು ಮೈಕ್ರೊಫೋನ್ ಅನ್ನು ಒಳಗೊಂಡಿದೆ.

ಸ್ಮಾರ್ಟ್‌ವಾಚ್‌

ಇದಲ್ಲದೆ ಈ ಸ್ಮಾರ್ಟ್‌ವಾಚ್‌ ವಾಯ್ಸ್‌ ಅಸಿಸ್ಟೆಂಟ್‌ ಅನ್ನು ಕೂಡ ಒಳಗೊಂಡಿದೆ. ಇದರ ಮೂಲಕ ಬಳಕೆದಾರರು ಮ್ಯೂಸಿಕ್‌ ಪ್ಲೇಬ್ಯಾಕ್ ಮತ್ತು ಕ್ಯಾಮರಾ ಶಟರ್ ಅನ್ನು ಕಂಟ್ರೋಲ್‌ ಮಾಡಬಹುದಾಗಿದೆ. ಈ ಸ್ಮಾರ್ಟ್ ವಾಚ್ ಸೊಶೀಯಲ್‌ ಮೀಡಿಯಾ ನೋಟಿಫಿಕೇಶನ್‌, ವೆದರ್‌ ಅಪ್ಡೇಟ್ಸ್‌, ಕ್ಯಾಲೆಂಡರ್ ರಿಮೈಂಡರ್‌ ಸೇರಿದಂತೆ ಇನ್ನು ಹಲವು ಉಪಯುಕ್ತ ಫೀಚರ್ಸ್‌ಗಳನ್ನು ಇದರಲ್ಲಿ ಪಡೆದುಕೊಳ್ಳಬಹುದಾಗಿದೆ.

ಬ್ಯಾಟರಿ

ಈ ಡಿವೈಸ್‌ 270mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು ಫುಲ್‌ ಚಾರ್ಜ್‌ನಲ್ಲಿ 10 ದಿನಗಳ ಬ್ಯಾಟರಿ ಬ್ಯಾಕ್‌ಅಪ್‌ ನೀಡಲಿದೆ ಎಂದು ಹೇಳಲಾಗಿದೆ. ಇನ್ನು ಸ್ಮಾರ್ಟ್‌ವಾಚ್‌ ಬ್ಲೂಟೂತ್ 5.2 ಬೆಂಬಲಿಸಲಿದೆ. ಇದು ಬಾಕ್ಸ್ ಹೊರಗೆ Zepp OS ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗಿದೆ. ಈ ಸ್ಮಾರ್ಟ್‌ವಾಚ್‌ ನಾಯ್ಸ್‌ ಕಲರ್ ಫಿಟ್ ಪ್ರೊ 4, ರಿಯಲ್‌ಮಿ ವಾಚ್ 3 ಪ್ರೊ, ಒನ್‌ಪ್ಲಸ್ ನಾರ್ಡ್ ವಾಚ್‌ಗಳಿಗೆ ಪೈಪೋಟಿ ನೀಡುವ ಗುರಿಯನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಅಮಾಜ್‌ಫಿಟ್‌ POP 2 ಸ್ಮಾರ್ಟ್‌ವಾಚ್‌ ಭಾರತದಲ್ಲಿ 3,999ರೂ. ಬೆಲೆಯಲ್ಲಿ ಬರಲಿದೆ. ಆದರೆ ಈ ಸ್ಮಾರ್ಟ್‌ವಾಚ್‌ ಲಾಂಚ್‌ ಆಫರ್‌ನಲ್ಲಿ 3,299ರೂ. ಬೆಲೆಗೆ ಖರೀದಿಸಬಹುದಾಗಿದೆ. ಇದು ಫ್ಲಿಪ್‌ಕಾರ್ಟ್ ಮತ್ತು ಅಮಾಜ್‌ಫಿಟ್‌ನ ಅಧಿಕೃತ ವೆಬ್‌ಸೈಟ್‌ ಮೂಲಕ ಇದೇ ನವೆಂಬರ್ 22 ರಂದು ಮಾರಾಟಕ್ಕೆ ಬರಲಿದೆ. ಈ ಸ್ಮಾರ್ಟ್ ವಾಚ್ ಅನ್ನು ಬಳಕೆದಾರರು ಕಪ್ಪು ಮತ್ತು ಗುಲಾಬಿ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ.

Best Mobiles in India

English summary
Amazfit POP 2 with 100 sports modes launched in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X