ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ ದೀಪಾವಳಿ ಸೇಲ್‌ ಶುರುವಾಗುವ ಮುನ್ನ ಈ ಸಂಗತಿ ತಿಳಿಯಿರಿ!

|

ಹಬ್ಬಗಳು ಬಂದರೇ ಸಾಕು ಇ ಕಾಮರ್ಸ್‌ ಮಾರುಕಟ್ಟೆ ಆಫರ್‌ಗಳಿಂದ ಕಂಗೊಳಿಸುತ್ತದೆ. ಮುಖ್ಯವಾಗಿ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರ್ಮ್ ಗಳು ಭರ್ಜರಿ ರಿಯಾಯಿತಿ ಘೋಷಿಸಿ ಗ್ರಾಹಕರನ್ನು ಸೆಳೆಯುತ್ತವೆ. ಅದೇ ರೀತಿ ಇದೀಗ ದೀಪಾವಳಿ ಹಬ್ಬ ಸನಿಹ ಇದ್ದು, ಈ ನಿಟ್ಟಿನಲ್ಲಿ ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ತಾಣಗಳು ವಿಶೇಷ ಸೇಲ್ ಮೇಳವನ್ನು ಆಯೋಜನೆಗೆ ತಯಾರಿ ಮಾಡಿಕೊಂಡಿವೆ. ಆದರೆ ಅದಕ್ಕೂ ಮೊದಲು ಶಾಪಿಂಗ್ ಪ್ರಿಯ ಗ್ರಾಹಕರು ಕೆಲವು ಸಂಗತಿಗಳ ಬಗ್ಗೆ ತಿಳಿಯಬೇಕಿದೆ. ಆ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ ಸೇಲ್‌ ಶುರುವಾಗುವ ಮುನ್ನ ಈ ಸಂಗತಿ ತಿಳಿಯಿರಿ!

ಸೇಲ್‌ ಯಾವಾಗ ಶುರು
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಇದೇ ಅಕ್ಟೋಬರ್ 4 ರಿಂದ ಶುರುವಾಗಲಿದೆ. ಆದರೆ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಎಷ್ಟು ದಿನ ನಡೆಯಲಿದೆ ಎಂದು ಘೋಷಿಸಿಲ್ಲ. ಇನ್ನು ಫ್ಲಿಪ್‌ಕಾರ್ಟ್ನ ಬಿಗ್ ಬಿಲಿಯನ್ ಡೇ ಸೇಲ್ ಇದೇ ಅಕ್ಟೋಬರ್ 7 ರಿಂದ ಪ್ರಾರಂಭವಾಗಲಿದ್ದು, ಇದೇ ಅಕ್ಟೋಬರ್ 12 ರವರೆಗೆ ನಡೆಯಲಿದೆ. ಅಮೆಜಾನ್ ಪ್ರೈಮ್ ಸದಸ್ಯರಿಗೆ ಒಂದು ದಿನ ಮುಂಚಿತವಾಗಿ ಸೇಲ್ ಲಭ್ಯ ಆಗಲಿದೆ.

ಬ್ಯಾಂಕ್‌ ಕೊಡುಗೆಗಳೆನು
ಹೆಚ್‌ಡಿಎಫ್‌ಸಿ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಖರೀದಿಸುವ ಗ್ರಾಹಕರಿಗೆ 10 % ತ್ವರಿತ ರಿಯಾಯಿತಿ ನೀಡಲು ಅಮೆಜಾನ್ ಬ್ಯಾಂಕ್ ಜೊತೆ ಪಾಲುದಾರಿಕೆ ಹೊಂದಿದೆ. ಹಾಗೆಯೇ EMI ವಹಿವಾಟುಗಳಿಗೂ ಕೊಡುಗೆ ಇದೆ. ಇನ್ನು ಫ್ಲಿಪ್‌ಕಾರ್ಟ್ ತಾಣವು ಆಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಗಳ ಪಾಲುದಾರಿಕೆ ಹೊಂದಿದ್ದು, ಈ ಬ್ಯಾಂಕ್‌ಗಳ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಖರೀದಿದಾರರಿಗೆ ಶೇಕಡಾ 10 ರಷ್ಟು ತ್ವರಿತ ರಿಯಾಯಿತಿ ನೀಡುತ್ತದೆ.

ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ ಸೇಲ್‌ ಶುರುವಾಗುವ ಮುನ್ನ ಈ ಸಂಗತಿ ತಿಳಿಯಿರಿ!

ಅಮೆಜಾನ್‌ ಪೇ ಹಾಗೂ ಪೇಟಿಎಮ್‌ನಲ್ಲೂ ಕೊಡುಗೆ
ಫ್ಲಿಪ್‌ಕಾರ್ಟ್ ತಾಣದಲ್ಲಿ ಪೇಟಿಎಂ ಮೂಲಕ ವಾಲೆಟ್ ಮತ್ತು ಯುಪಿಐ ವಹಿವಾಟುಗಳ ಮೇಲೆ ಕ್ಯಾಶ್‌ಬ್ಯಾಕ್ ಲಭ್ಯವಾಗಲಿದೆ. ಹಾಗೆಯೇ ಅಮೆಜಾನ್ ತಾಣವು ಅಮೆಜಾನ್ ಪೇ ಯುಪಿಐ ಪೇಮೆಂಟ್ ಆಯ್ಕೆಯನ್ನು ಒಳಗೊಂಡಿದೆ.

ಸೇಲ್‌ ವೇಳೆ ನೂತನ ಡಿವೈಸ್‌ ಬಿಡುಗಡೆ
ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಕಂಪನಿಯ ಪ್ರಕಾರ ಸುಮಾರು 50 ಅಧಿಕ ಲಾಂಚ್‌ಗಳ ನಡೆಯಲಿವೆ ಎನ್ನಲಾಗಿದೆ. ಮುಖ್ಯವಾಗಿ ಈ ಲಾಂಚ್‌ಗಳು ಟಿವಿಗಳು, ರೆಫ್ರಿಜರೇಟರ್‌ಗಳು, ವಾಶಿಂಗ್ ಮಿಷಿನ್ ಸೇರಿದಂತೆ ಇತರೆ ಡಿವೈಸ್ ಒಳಗೊಂಡಿರುತ್ತವೆ. ಅಮೆಜಾನ್ ತಾಣವು ಫ್ಯಾಶನ್ ಉತ್ಪನ್ನಗಳು, ಸ್ಮಾರ್ಟ್‌ಫೋನ್‌ಗಳು, ಟಿವಿಗಳು, ಗ್ರಾಹಕ ಎಲೆಕ್ಟ್ರಾನಿಕ್ಸ್ ಸೇರಿದಂತೆ ಸುಮಾರು 1,000 ಕ್ಕಿಂತ ಅಧಿಕ ಹೊಸ ಉತ್ಪನ್ನ ಲಾಂಚ್ ಮಾಡಲಿದೆ ಎನ್ನಲಾಗಿದೆ.

ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ ಸೇಲ್‌ ಶುರುವಾಗುವ ಮುನ್ನ ಈ ಸಂಗತಿ ತಿಳಿಯಿರಿ!

ವಿಶೇಷ ಆಕ್ಸಸ್ ಅವಕಾಶ
ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಈ ಎರಡೂ ತಾಣಗಳು ತಮ್ಮ ಸದಸ್ಯರಿಗೆ ಸೇಲ್‌ಗೂ ಮುನ್ನ ಪ್ರವೇಶ/ಆಕ್ಸಸ್ ನೀಡುತ್ತವೆ. ಅಮೆಜಾನ್‌ನಿಂದ ಅಮೆಜಾನ್ ಪ್ರೈಮ್ ಗ್ರಾಹಕರು ಮತ್ತು ಫ್ಲಿಪ್‌ಕಾರ್ಟ್‌ನಿಂದ ಫ್ಲಿಪ್‌ಕಾರ್ಟ್ ಪ್ಲಸ್ ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು.

ಲೆನೊವೊ V15 AMD
15.6 ಇಂಚು ಲೆನೊವೊ V15 ಲ್ಯಾಪ್‌ಟಾಪ್‌ 1920 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 15.6 ಡಿಸ್ಪ್ಲೇಯನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ ಎಎಮ್‌ಡಿ ಅಥ್ಲಾನ್ ಗೋಲ್ಡ್ 3150 ಯು ಪ್ರೊಸೆಸರ್ ಹೊಂದಿದೆ. ಜೊತೆಗೆ ಈ ಲ್ಯಾಪ್‌ಟಾಪ್‌ 4GB RAM ಮತ್ತು 1TB HDD ಸ್ಟೋರೇಜ್‌ ಅನ್ನು ಹೊಂದಿದೆ. ಇದು 5.5 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಸದ್ಯ ಅಮೆಜಾನ್‌ನಲ್ಲಿ ಈ ಲ್ಯಾಪ್‌ಟಾಪ್ 29,990ರೂ ಗಳಿಗೆ ಲಭ್ಯವಿದೆ.

ಹೆಚ್‌ಪಿ ಕ್ರೋಮ್‌ಬುಕ್‌
14 ಇಂಚು 30,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಲ್ಯಾಪ್‌ಟಾಪ್‌ಗಳಲ್ಲಿ ಹೆಚ್‌ಪಿ ಕ್ರೋಮ್‌ಬುಕ್‌ 14 ಇಂಚಿನ ಲ್ಯಾಪ್‌ಟಾಪ್‌ ಕೂಡ ಅತ್ಯುತ್ತಮ ಆಯ್ಕೆಯಾಗಿದೆ. ಇನ್ನು ಈ ಲ್ಯಾಪ್‌ಟಾಪ್‌ ಅಮೆಜಾನ್‌ನಲ್ಲಿ 27,990ರೂ ಗಳಿಗೆ ಲಭ್ಯವಾಗಲಿದೆ. ಈ ಲ್ಯಾಪ್ಟಾಪ್ 14 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಟಚ್ ಸ್ಕ್ರೀನ್ ಡಿಸ್ಪ್ಲೇ ಹೊಂದಿರುವ ತೆಳುವಾದ ಮತ್ತು ಹಗುರವಾದ ಲ್ಯಾಪ್ ಟಾಪ್ ಆಗಿದೆ. ಇನ್ನು ಈ ಲ್ಯಾಪ್‌ಟಾಪ್‌ ಇಂಟೆಲ್ ಸೆಲೆರಾನ್ ಎನ್ 4020 ಪ್ರೊಸೆಸರ್ ಹೊಂದಿದೆ. ಈ ಲ್ಯಾಪ್‌ಟಾಪ್‌ ನಲ್ಲಿ ಮೈಕ್ರೊ ಎಸ್ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ವಿಸ್ತರಿಸಬಹುದಾದ 64ಜಿಬಿ ಇಂಟರ್‌ ಸ್ಟೋರೇಜ್‌ ಹೊಂದಿದೆ.

Most Read Articles
Best Mobiles in India

English summary
Amazon And Flipkart Festival Sales: You Should know Everything.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X