ಸೇಲಿಗಿದೆ ಫ್ಲಿಪ್‌ಕಾರ್ಟ್: ಕೊಳ್ಳಲು ಅಮೆಜಾನ್-ವಾಲ್‌ಮಾರ್ಟ್ ನಡುವೆ ಸ್ಪರ್ಧೆ..!
ದೇಶಿಯ ಮಾರುಕಟ್ಟೆಯ ಇ-ಕಾರ್ಮಸ್ ವಿಭಾಗದಲ್ಲಿ ಹೊಸ ಭಾಷ್ಯವನ್ನು ಬರೆದಿದ್ದ ಬೆಂಗಳೂರು ಮೂಲದ ಫ್ಲಿಪ್‌ಕಾರ್ಟ್, ಹಂತ ಹಂತವಾಗಿ ಅತೀ ದೊಡ್ಡ ಕಂಪನಿಯಾಗಿ ರೂಪುಗೊಂಡಿದೆ. ಅಲ್ಲದೇ ಅತೀ ಹೆಚ್ಚಿನ ಬಳಕೆದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೇ ಮಾದರಿಯಲ್ಲಿ ಮಾರುಕಟ್ಟೆಯಲ್ಲಿ ಅಮೆರಿಕ ಮೂಲದ ಇ ಕಾಮರ್ಸ್ ಸಂಸ್ಥೆ ಅಮೆಜಾನ್‌ಗೆ ಸೆಡ್ಡು ಹೊಡೆದಿರುವ ಫ್ಲಿಪ್‌ಕಾರ್ಟ್ ಹೆಚ್ಚಿನ ಪಾಲನ್ನು ಮಾರುಕಟ್ಟೆಯಲ್ಲಿ ಹೊಂದಿದೆ. ಈ ಹಿನ್ನಲೆಯಲ್ಲಿ ಫ್ಲಿಪ್‌ಕಾರ್ಟ್ ಖರೀದಿಗೆ ವಾಲ್‌ಮಾರ್ಟ್ ಆಸಕ್ತಿ ತೋರಿಸಿದೆ.

ವಾಲ್‌ಮಾರ್ಟ್ ಭಾರತೀಯ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುವ ಸಲುವಾಗಿ ಫ್ಲಿಪ್‌ಕಾರ್ಟ್ ನಲ್ಲಿ ಬಹುದೊಡ್ಡ ಪಾಲನ್ನು ಖರೀದಿ ಮಾಡಲು ಮಾತುಕತೆ ನಡೆಸುತ್ತಿದೆ. ಈಗಾಗಲೇ ಅಮೆರಿಕಾದಲ್ಲಿ ವಾಲ್‌ಮಾರ್ಟ್‌ಗೆ ಅಮೆಜಾನ್ ಹೆಚ್ಚಿನ ಪ್ರಮಾಣದಲ್ಲಿ ಸ್ಪರ್ಧೆಯನ್ನು ನೀಡುತ್ತಿದೆ. ಈ ಹಿನ್ನಲೆಯಲ್ಲಿ ಭಾರತದಲ್ಲಿ ವಾಲ್‌ಮಾರ್ಟ್ ಆಗಮನಕ್ಕೆ ತಡೆ ಒಡ್ಡುವ ಸಲುವಾಗಿ ಫ್ಲಿಪ್‌ಕಾರ್ಟ್ ಅನ್ನು ತಾನೇ ಖರೀದಿಸುವ ಯೋಜನೆಯನ್ನು ಅಮೆಜಾನ್ ರೂಪಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಅಮೆರಿಕಾದ ರಿಟೇಲ್ ಉದ್ಯಮದಲ್ಲಿ ಅತೀ ದೊಡ್ಡ ಬಂಡವಾಳವನ್ನು ಹೊಂದಿರುವ ವಾಲ್‌ಮಾರ್ಟ್, ಭಾರತದ ಅತಿ ದೊಡ್ಡ ಆನ್ಲೈನ್ ಶಾಪಿಂಗ್ ಸಂಸ್ಥೆ ಫ್ಲಿಪ್‌ಕಾರ್ಟ್ ಅನ್ನು ಖರೀದಿಸಲು ಮಾತುಕತೆ ನಡೆಸುತ್ತಿದೆ. ಈ ಮಾತುಕತೆ ಫಲಪ್ರದವಾಗುವ ಸಾಧ್ಯತೆಗಳೂ ಇವೆ ಎನ್ನಲಾಗಿದ್ದು, ಇದೇ ಸಂದರ್ಭದಲ್ಲಿ ಮತ್ತೊಂದು ಹೊಸ ಸಾಧ್ಯತೆಯ ಮಾಹಿತಿಯೂ ಲೀಕ್ ಆಗಿದೆ.

ಭಾರತದ ಇ ಕಾಮರ್ಸ್ ಸಂಸ್ಥೆ ಫ್ಲಿಪ್‌ಕಾರ್ಟ್ ಅನ್ನು ಖರೀದಿಸಲು ಅಮೆರಿಕಾ ಮೂಲದ ಅಮೆಜಾನ್ ಸಹ ಪ್ರಸ್ತಾವನೆ ಸಲ್ಲಿಸಿರುವ ಬಗ್ಗೆ 'ಲೈಲಿಮಿಂಟ್ವರದಿ ಮಾಡಿದೆ. ಆದರೆ ಈ ಕುರಿತು ಅಮೆಜಾನ್ ಆಗಲಿ, ಫ್ಲಿಪ್‌ಕಾರ್ಟ್ ಆಗಲಿ ಯಾವುದೇ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ ಎನ್ನಲಾಗಿದೆ.
ಫ್ಲಿಪ್ಕಾರ್ಟ್ನ ಶೇ. 40ರಷ್ಟು ಪಾಲುದಾರಿಕೆಯನ್ನು ವಾಲ್‌ಮಾರ್ಟ್ ಖರೀದಿಸುತ್ತಿದೆ. ಇದರಿಂದಗಿ ಅಮೆಜಾನ್‌ಗೆ ಇನ್ನು ಹೆಚ್ಚಿನ ಸ್ಪರ್ಧೆಯನ್ನು ಎದುರಿಸಬೇಕಾದ ಅನಿವಾರ್ಯತೆ ಉಂಟಾಗಲಿದೆ. ಇದರಿಂದ ಹೊರಬರುವ ಯೋಜನೆಯನ್ನು ರೂಪಿಸಿ, ಫ್ಲಿಪ್‌ಕಾರ್ಟ್ ಅನ್ನು ತೆಕ್ಕೆಗೆ ತೆಗೆದುಕೊಂಡು ಭಾರತದ ಅತೀ ದೊಡ್ಡ ಇ ಕಾರ್ಮಸ್ ಸಂಸ್ಥೆ ಎನ್ನಿಸಿಕೊಳ್ಳುವ ತವಕದಲ್ಲಿದೆ.


Click it and Unblock the Notifications








