ಅಮೆಜಾನ್‌ನಲ್ಲಿ ಭರ್ಜರಿ ಆಫರ್‌; ಈ ಡಿವೈಸ್‌ಗಳ ಮೇಲೆ 75% ವರೆಗೆ ರಿಯಾಯಿತಿ!

|

ಇ-ಕಾಮರ್ಸ್‌ ತಾಣವಾದ ಅಮೆಜಾನ್‌ ಈಗಾಗಲೇ ಹಲವಾರು ರೀತಿಯ ಆಫರ್‌ಗಳನ್ನು ಘೋಷಣೆ ಮಾಡಿ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಆಕರ್ಷಕ ಡಿವೈಸ್‌ ಕೊಂಡುಕೊಳ್ಳಲು ಅನುಕೂಲ ಮಾಡಿಕೊಟ್ಟಿತ್ತು. ಇದೀಗ ಮತ್ತೆ 'ಅಮೆಜಾನ್‌ ಡೀಲ್ಸ್‌ ಆಫ್‌ ದಿ ಡೇ' ಮೂಲಕ ಭರ್ಜರಿ ಆಫರ್‌ ಘೋಷಿಸಿದೆ. ಇದರಲ್ಲಿ ನೀವು ಅಗತ್ಯ ಡಿವೈಸ್‌ಗಳನ್ನು ಆಫರ್‌ ಬೆಲೆಯಲ್ಲಿ ಖರೀದಿ ಮಾಡಬಹುದು.

ಅಮೆಜಾನ್‌

ಹೌದು, ಅಮೆಜಾನ್‌ನ ಈ ಆಫರ್‌ನಲ್ಲಿ ಗೇಮಿಂಗ್ ಹೆಡ್‌ಫೋನ್‌ಗಳು, ಇಯರ್‌ಬಡ್‌ಗಳು, ಇಯರ್‌ಫೋನ್‌ಗಳು ಹಾಗೂ ವಾಯರ್‌ಲೆಸ್‌ ಗ್ಯಾಜೆಟ್‌ಗಳು ಸೇರಿದಂತೆ ಇನ್ನಿತರೆ ಡಿವೈಸ್‌ಗಳ ಮೇಲೆ ಅಮೆಜಾನ್ ಬರೋಬ್ಬರಿ 75% ವರೆಗೆ ರಿಯಾಯಿತಿ ನೀಡಿದೆ. ಅಂತೆಯೇ ಕಿಂಗೋನ್ ವೈರ್‌ಲೆಸ್ ಚಾರ್ಜಿಂಗ್ ಪೆನ್ಸಿಲ್, ಬೌಲ್ಟ್ ಆಡಿಯೊ ಏರ್ಬಾಸ್ ಪ್ರಮುಖವಾಗಿವೆ. ಹಾಗಿದ್ರೆ ಯಾವ ಡಿವೈಸ್‌ಗೆ ಎಷ್ಟು ಬೆಲೆ ಎಂಬುದನ್ನು ಇಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಕಿಂಗೋನ್ ವೈರ್‌ಲೆಸ್ ಚಾರ್ಜಿಂಗ್ ಪೆನ್ಸಿಲ್ (2ನೇ ಜನ್)

ಕಿಂಗೋನ್ ವೈರ್‌ಲೆಸ್ ಚಾರ್ಜಿಂಗ್ ಪೆನ್ಸಿಲ್ (2ನೇ ಜನ್)

ಕಿಂಗೋನ್ ವೈರ್‌ಲೆಸ್ ಚಾರ್ಜಿಂಗ್ ಪೆನ್ಸಿಲ್ (2ನೇ ಜನ್) ಡಿವೈಸ್‌ 4,400ರೂ ಗಳ ರಿಯಾಯಿತಿ ಪಡೆದುಕೊಂಡಿದ್ದು, ನಿಮಗೆ 2,599 ರೂ. ಗಳಲ್ಲಿ ಸಿಗಲಿದೆ. ಇನ್ನು ಈ ಡಿವೈಸ್‌ ಆಪಲ್‌ ಐ ಪ್ಯಾಡ್‌ ಪ್ರೊ 11 1/2/3, ಐ ಪ್ಯಾಡ್‌ ಪ್ರೊ 12.9 3/4/, ಐಪ್ಯಾಡ್‌ ಏರ್ 4/5 ಹಾಗೂ ಮಿನಿ6 ಸೇರಿದಂತೆ ಇತ್ತೀಚಿನ ಐಪ್ಯಾಡ್‌ಗಳಿಗೆ ಇದು ಹೊಂದಿಕೊಳ್ಳುತ್ತದೆ. ಆಪಲ್ ಪೆನ್ಸಿಲ್ 2 ರಂತೆಯೇ ಆಟೋಮ್ಯಾಟಿಕ್‌ ಆಗಿ ಬ್ಲೂಟೂತ್ ಜೊತೆ ಸಂಪರ್ಕಿಸಿಕೊಳ್ಳಲಿದ್ದು, ಚಾರ್ಜಿಂಗ್ ಆಯ್ಕೆಯನ್ನು ಪಡೆದುಕೊಂಡಿದೆ.

 ಬೌಲ್ಟ್ ಆಡಿಯೊ ಏರ್‌ಬಾಸ್ Z20 TWS

ಬೌಲ್ಟ್ ಆಡಿಯೊ ಏರ್‌ಬಾಸ್ Z20 TWS

ಬೌಲ್ಟ್ ಆಡಿಯೊ ಏರ್‌ಬಾಸ್ Z20 TWS ಡಿವೈಸ್‌ 4,124ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, ನಿಮಗೆ 1,399ರೂ. ಗಳಲ್ಲಿ ಲಭ್ಯವಿದೆ. ಹಾಗೆಯೇ ಈ ಇಯರ್‌ಬಡ್ಸ್‌, ಮಲ್ಟಿಫಂಕ್ಷನ್ ಆಯ್ಕೆ ಇರುವ ಒಂದೇ ಬಟನ್ ಅನ್ನು ಹೊಂದಿದ್ದು, ಮ್ಯೂಸಿಕ್ ಪ್ಲೇ ಮಾಡಲು/ವಿರಾಮಗೊಳಿಸಲು, ಕರೆಗಳಿಗೆ ಉತ್ತರಿಸಲು/ವಜಾಗೊಳಿಸಲು ಸಹಾಯ ಮಾಡಲಿದೆ. ಹಾಗೆಯೇ ಮೈಕ್ರೊಫೋನ್ ಆಯ್ಕೆಯ ಜೊತೆಗೆ ಒಂದು ಪೂರ್ಣ ಚಾರ್ಜ್‌ನಲ್ಲಿ 40 ಗಂಟೆಗಳವರೆಗೆ ಪ್ಲೇಬ್ಯಾಕ್ ಸಮಯವನ್ನು ನೀಡುತ್ತವೆ.

Ptron ಸ್ಟುಡಿಯೋ ಪಿಕ್ಸೆಲ್ಸ ಹೆಡ್‌ಫೋನ್

Ptron ಸ್ಟುಡಿಯೋ ಪಿಕ್ಸೆಲ್ಸ ಹೆಡ್‌ಫೋನ್

Ptron ಸ್ಟುಡಿಯೋ ಪಿಕ್ಸೆಲ್ಸ ಓವರ್ ಇಯರ್ ವೈರ್‌ಲೆಸ್ ಗೇಮಿಂಗ್ ಹೆಡ್‌ಫೋನ್‌ 3,000ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 999 ರೂ. ಗಳಲ್ಲಿ ಲಭ್ಯವಿದೆ. ಈ ಹೆಡ್‌ಫೋನ್‌ ಹೆಚ್‌ ಡಿ ಮೈಕ್ರೊಫೋನ್‌, ಬ್ಲೂಟೂತ್ ಆವೃತ್ತಿ v5.3 ಜೊತೆಗೆ 30ms ನ ಕಡಿಮೆ ಲೇಟೆನ್ಸಿ ಮೋಡ್‌ನ ಫೀಚರ್ಸ್‌ ಪಡೆದಿದೆ. ಜೊತೆಗೆ ಒಂದು ಪೂರ್ಣ ಚಾರ್ಜ್‌ನಲ್ಲಿ 40 ಗಂಟೆಗಳವರೆಗೆ ಪ್ಲೇಟೈಮ್ ನೀಡಲಿದೆ.

ಮಿವಿ ಕಾಲರ್ ಫ್ಲ್ಯಾಶ್ ಬ್ಲೂಟೂತ್ ವಾಯರ್‌ಲೆಸ್‌ ಇಯರ್‌ಫೋನ್‌

ಮಿವಿ ಕಾಲರ್ ಫ್ಲ್ಯಾಶ್ ಬ್ಲೂಟೂತ್ ವಾಯರ್‌ಲೆಸ್‌ ಇಯರ್‌ಫೋನ್‌

ಮಿವಿ ಕಾಲರ್ ಫ್ಲ್ಯಾಶ್ ಬ್ಲೂಟೂತ್ ವಾಯರ್‌ಲೆಸ್‌ ಇಯರ್‌ಫೋನ್‌ 2,100 ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 899 ರೂ. ಗಳಿಗೆ ಸಿಗಲಿದೆ. ಹಾಗೆಯೇ ಈ ಇಯರ್‌ಫೋನ್‌ ವಾಟರ್‌ ರೆಸಿಸ್ಟೆಂಟ್‌ಗಾಗಿ IPX4 ರೇಟಿಂಗ್ ಪಡೆದುಕೊಂಡಿದೆ ಮತ್ತು ನಾಯ್ಸ್‌ ಕ್ಯಾನ್ಸಲೇಶನ್‌ ಫೀಚರ್ಸ್‌ ಇದರಲ್ಲಿದ್ದು, ಬ್ಲೂಟೂತ್ ಆವೃತ್ತಿ v5.0 ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನುಳಿದಂತೆ ಒಂದು ಪೂರ್ಣ ಚಾರ್ಜ್‌ನಲ್ಲಿ 24 ಗಂಟೆಗಳ ಬ್ಯಾಟರಿ ಬ್ಯಾಕ್ಅಪ್‌ ನೀಡಲಿದೆ.

PTron ಬುಲೆಟ್ ವಾಯರ್‌ಲೆಸ್‌ WX21 15W ಫಾಸ್ಟ್ ಚಾರ್ಜಿಂಗ್ ಪ್ಯಾಡ್

PTron ಬುಲೆಟ್ ವಾಯರ್‌ಲೆಸ್‌ WX21 15W ಫಾಸ್ಟ್ ಚಾರ್ಜಿಂಗ್ ಪ್ಯಾಡ್

PTron ಬುಲೆಟ್ ವಾಯರ್‌ಲೆಸ್‌ WX21 15W ಫಾಸ್ಟ್ ಚಾರ್ಜಿಂಗ್ ಪ್ಯಾಡ್ 1,200 ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 799 ರೂ. ಗಳಲ್ಲಿ ಲಭ್ಯವಾಗಲಿದೆ. ಈ ಕಾಂಪ್ಯಾಕ್ಟ್ ವಾಯರ್‌ಲೆಸ್‌ ಚಾರ್ಜರ್ ಕಡಿಮೆ ತಾಪಮಾನ ಮತ್ತು ಓವರ್ ವೋಲ್ಟೇಜ್ ಪ್ರೊಟೆಕ್ಟ್‌ ಫೀರ್ಸ್‌ ಅನ್ನು ಪಡೆದುಕೊಂಡಿದ್ದು, 15W ವರೆಗೆ ವೇಗದ ವಾಯರ್‌ಲೆಸ್‌ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಹಾಗೆಯೇ ಕೆಳಭಾಗದಲ್ಲಿ ನಾನ್-ಸ್ಲಿಪ್ ಸಿಲಿಕೋನ್ ಪ್ಯಾಡ್‌ಗಳನ್ನು ಹೊಂದಿದೆ.

ಅಮೆಜಾನ್ ಬೇಸಿಕ್ಸ್ ವಾಯರ್‌ಲೆಸ್‌ ಮೌಸ್

ಅಮೆಜಾನ್ ಬೇಸಿಕ್ಸ್ ವಾಯರ್‌ಲೆಸ್‌ ಮೌಸ್

ಅಮೆಜಾನ್ ಬೇಸಿಕ್ಸ್ ವಾಯರ್‌ಲೆಸ್‌ ಮೌಸ್ 850 ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 349 ರೂ. ಗಳಿಗೆ ಲಭ್ಯವಾಗಲಿದೆ. ಇದು ಸುಧಾರಿತ ಆಪ್ಟಿಕಲ್ ಟ್ರ್ಯಾಕಿಂಗ್ ಫೀಚರ್ಸ್‌ ಪಡೆದಿದ್ದು, ಪಿಸಿ, ಮ್ಯಾಕ್, ಲ್ಯಾಪ್‌ಟಾಪ್ ಮತ್ತು ಟ್ಯಾಬ್ಲೆಟ್‌ಗೆ ಹೊಂದಿಕೊಳ್ಳುತ್ತದೆ. ಜೊತೆಗೆ ಪ್ಲಗ್ ಮತ್ತು ಫರ್ಗೆಟ್ USB ಮಿನಿ ರಿಸೀವರ್‌ನೊಂದಿಗೆ ಪ್ಯಾಕ್‌ ಆಗಿದ್ದು, 10 ಮೀಟರ್‌ಗಳಷ್ಟು ವೈರ್‌ಲೆಸ್ ಸಂಪರ್ಕ ವ್ಯಾಪ್ತಿಯನ್ನು ಹೊಂದಿದೆ.

Best Mobiles in India

English summary
Amazon had already announced various offers. Meanwhile, it has now announced a huge offer on some devices.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X