ಅಮೇಜಾನ್, ಫ್ಲಿಪ್ ಕಾರ್ಟ್, ಸ್ವಿಗ್ಗಿ, ಪೇಟಿಎಂ, ಓಲಾ, ಜೋಮಾಟೋದಲ್ಲಿ ಈ ಹುದ್ದೆಗಳು ಖಾಲಿ ಇದೆ!

|

ಹಿರಿಯ ಪ್ರತಿಭೆಗಳಿಗೆ ಅಂದರೆ ಅನುಭವವಿರುವ ಮಂದಿಗೆ ಕೆಲಸದ ಮಾರುಕಟ್ಟೆಯಲ್ಲಿ ಅದರಲ್ಲೂ ಇಕಾಮರ್ಸ್ ವೆಬ್ ಸೈಟ್ ಗಳಲ್ಲಿ ಕೆಲಸ ಖಾಲಿ ಇದೆ. ಸುಧಾರಿತ ಹಣಕಾಸು ವಲಯ,ಎಂ ಮತ್ತು ಎ ಆಕ್ಟಿವಿಟಿಗಳು, ಮೊಬೈಲ್ ಡಾಟಾ ಬಳಕೆ ಹೆಚ್ಚಳ ಮತ್ತು ಇಕಾಮರ್ಸ್ ಮತ್ತು ವಹಿವಾಟು ಮಾದರಿಗಳ ಆಯಸ್ಸು ವೃದ್ಧಿಸುವಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹಿರಿಯ ಅಧಿಕಾರಿಗಳ ಅಗತ್ಯತೆಯನ್ನು ಇಕಾಮರ್ಸ್ ವೆಬ್ ಸೈಟ್ ಗಳು ಎದುರಿಸುತ್ತಿದೆ. ಇದೀಗ ಈ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಉದ್ದೇಶವನ್ನು ಇಕಾಮರ್ಸ್ ವೆಬ್ ಸೈಟ್ ಗಳು ಹೊಂದಿವೆ ಎಂದು ಹೇಳಲಾಗುತ್ತಿದೆ.

ಅಮೇಜಾನ್, ಸ್ವಿಗ್ಗಿ, ಪೇಟಿಎಂ, ಓಲಾ, ಜೋಮಾಟೋದಲ್ಲಿ ಈ ಹುದ್ದೆಗಳು ಖಾಲಿ ಇದೆ!

ಅಮೇಜಾನ್, ಫ್ಲಿಪ್ ಕಾರ್ಟ್, ಸ್ವಿಗ್ಗಿ, ಪೇಟಿಎಂ, ಓವೈಓ, ಓಲಾ ಅಥವಾ ಝೋಮಾಟೋ ಸೇರಿದಂತೆ ಹಲವು ಇಕಾಮರ್ಸ್ ಸೈಟ್ ಗಳು ಕಳೆದೊಂದು ವರ್ಷದಲ್ಲಿ 40-100 ಶೇಕಡಾ ಅಭಿವೃದ್ಧಿಯನ್ನು ಬಯಸುತ್ತಿದ್ದು ಆ ನಿಟ್ಟಿನಲ್ಲಿ ಹೆಚ್ಚಿನ ಅನುಭವದ ವ್ಯಕ್ತಿಗಳನ್ನು ತಮ್ಮ ಕಂಪೆನಿಯ ಪ್ರಮುಖ ಹುದ್ದೆಗಳಿಗೆ ಸೇರಿಸಿಕೊಳ್ಳುತ್ತಿವೆ.

ಕಳೆದ ಏಳೆಂಟು ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅತೀ ಹೆಚ್ಚು ಮಂದಿಯನ್ನು ಈ ಬಾರಿ ಇಕಾಮರ್ಸ್ ವೆಬ್ ಸೈಟ್ ಗಳು ಕೆಲಸಕ್ಕೆ ತೆಗೆದುಕೊಳ್ಳುತ್ತಿವೆಯಂತೆ.

ಬೆಂಗಳೂರು ಮೂಲದ ಲಾಂಗ್ ಹೌಸ್ ಕನ್ಸಲಿಂಗ್ ಹೇಳುವ ಪ್ರಕಾರ ಇತ್ತೀಚಿನ ದಿನಗಳಲ್ಲಿ 30 ಹುದ್ದೆಗಳ ಬದಲಾಗಿ 75 ಹುದ್ದೆಗಳು ಇತ್ತೀಚಿನ ದಿನಗಳಲ್ಲಿ ಇಕಾಮರ್ಸ್ ನಲ್ಲಿ ಭರ್ತಿ ಮಾಡಲಾಗುತ್ತಿದೆಯಂತೆ. ಕಳೆದ ಆರೇಳು ತಿಂಗಳಲ್ಲಿ ಸುಮಾರು 350 ರಿಂದ 400 ಹುದ್ದೆಗಳು ಇಕಾಮರ್ಸ್ ನಲ್ಲಿ ಭರ್ತಿಯಾಗಿವೆ ಎಂದು ಅಂದಾಜಿಸಲಾಗುತ್ತಿದೆ.

ಕಳೆದ ಒಂದೇ ವಾರದಲ್ಲಿ ಓವೈಓ ಹೋಟೆಲ್ಸ್ ಎಕ್ಸ್-ಇಂಡಿಗೋ ಅಧ್ಯಕ್ಷ ಆಧಿತ್ಯ ಘೋಷ್ ಅವರನ್ನು ಭಾರತ ಮತ್ತು ಸೌತ್ ಏಷಿಯಾದ ಸಿಇಓ ಆಗಿ ಆಯ್ಕೆ ಮಾಡಿಕೊಂಡಿದೆ.ಫ್ಲಿಪ್ ಕಾರ್ಟ್ ಹ್ಯೂಮನ್ ರಿಸೋರ್ಸ್ ಹೆಡ್ ಆಗಿ ಸ್ಮೃತಿ ಸಿಂಗ್ ಅವರನ್ನು ಆಯ್ಕೆ ಮಾಡಿಕೊಂಡಿದೆ. ಮೇಕ್ ಮೈ ಟ್ರಿಪ್ ವಿಪುಲ್ ಸಿಂಗ್ ಅವರನ್ನು ಚೀಫ್ ಆಪರೇಟಿಂಗ್ ಆಫೀಸರ್ ಆಗಿ ಆಯ್ಕೆ ಮಾಡಿದೆ.ಇನ್ ಕ್ರೆಡ್ ರಾಹುಲ್ ಭಾರ್ಗವ ಅವರನ್ನು ಚೀಫ್ ಟೆಕ್ನಾಲಜಿ ಆಫೀಸರ್ ಆಗಿ ಆಯ್ಕೆ ಮಾಡಿದೆ. ಹೀಗೆ ಇನ್ನೂ ಅನೇಕ ಕಂಪೆನಿಗಳು ಉತ್ತಮ ಹುದ್ದೆಗಳನ್ನು ಭರ್ತಿ ಮಾಡಿದೆ.

ಕನ್ಸಲೆಂಟ್ ಗಳು ಹೇಳುವ ಪ್ರಕಾರ ಫ್ಲಿಪ್ ಕಾರ್ಟ್, ಅಮೇಜಾನ್ , ಸ್ವಿಗ್ಗಿ ಸೇರಿದಂತೆ ಹಲವು ಕಂಪೆನಿಗಳು ಅತೀ ಹೆಚ್ಚು ಮಂದಿಯನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಿವೆಯಂತೆ. ಅನೇಕ ಕಂಪೆನಿಗಳು ಇದೀಗ ತಮ್ಮದೇ ತಂಡಗಳನ್ನು ರಚಿಸುತ್ತಿವೆಯಂತೆ ಮತ್ತು ಆ ಮೂಲಕ ಅಭಿವೃದ್ಧಿ ಕಾಣಲು ಚಿಂತನೆ ನಡೆಸಿವೆ ಎನ್ನಲಾಗುತ್ತಿದೆ.

ಬ್ಯುಸಿನೆಸ್, ಸೇಲ್ಸ್, ಮತ್ತು ತಂತ್ರಜ್ಞಾನ ಸೇರಿದಂತೆ ಹತ್ತು ಹಲವು ಪ್ರಮುಖ ಹುದ್ದೆಗಳಿಗೆ ಸೀನಿಯರ್ ಗಳ ಅಗತ್ಯತೆ ಇದ್ದು ಅವುಗಳನ್ನು ಮುಂದಿನ ದಿನಗಳಲ್ಲಿ ಭರ್ತಿ ಮಾಡುವ ಉದ್ದೇಶವನ್ನು ಸ್ವಿಗ್ಗಿ ಸಂಸ್ಥೆ ಹೊಂದಿದೆ ಎಂದು ಸ್ವಿಗ್ಗಿ ಸಂಸ್ಥೆಗೆ ಇತ್ತೀಚೆಗೆ ಸೇರಿಕೊಂಡಿರುವ ವಿವೇಕ್ ಸುಂದರ್ ತಿಳಿಸಿದ್ದಾರೆ. ಇವರು ಇತ್ತೀಚೆಗೆ ಅಮೇಜಾನ್ ಸಂಸ್ಥೆಯಿಂದ ಹೊರಬಂದಿದ್ದಾರೆ ಮತ್ತು ಸ್ವಿಗ್ಗಿ ಸಂಸ್ಥೆಗೆ ಸೇರಿಕೊಂಡಿದ್ದಾರೆ.

ಅಮೇಜಾನ್ ವಕ್ತಾರರು ತಿಳಿಸಿರುವಂತೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಹಿಂದಿನ ಉದ್ದೇಶವೇನೆಂದರೆ ಎಲ್ಲಾ ರೀತಿಯಲ್ಲೂ ಅಮೇಜಾನ್ ನ್ನು ಅಭಿವೃದ್ಧಿ ಪಡಿಸುವುದು ಮತ್ತು ಬ್ಯುಸಿನೆಸ್ ನ್ನು ಇನ್ನೂ ಉತ್ತಮ ಮಟ್ಟಕ್ಕೆ ಕೊಂಡೊಯ್ಯುವುದಾಗಿದೆ.

ಸಪ್ಲೈ ಚೈನ್ ಮ್ಯಾನೇಜ್ ಮೆಂಟ್, ಟೆಕ್ನಾಲಜಿ, ಮಾರ್ಕೆಟಿಂಗ್, ಹ್ಯೂಮರ್ ರಿಸೋರ್ಸ್ ಮತ್ತು ಪ್ರೊಡಕ್ಟ್ ಸೇರಿದಂತೆ ಫ್ಲಿಪ್ ಕಾರ್ಟ್ ನ ಹಲವು ವಿಭಾಗಗಳಲ್ಲಿ ಕೆಲಸ ಖಾಲಿ ಇರುವ ಬಗ್ಗೆ ಇತ್ತೀಚೆಗೆ ಇಟಿಯಲ್ಲಿ ಸ್ಟೋರಿ ಬಂದಿತ್ತು.

ಫಿನ್ ಟೆಕ್ ಇತ್ತೀಚೆಗೆ ಪರೋಮಾ ಚಟರ್ಜಿ ಅವರನ್ನು ಚೀಫ್ ಬ್ಯುಸಿನೆಸ್ ಆಫೀಸರ್ ಆಗಿ ಮತ್ತು ಅಭಿಜಿತ್ ಜಾದವ್ ಅವರನ್ನು ವಿಪಿ ಆಫ್ ಸಪ್ಲೈ ಚೈನ್ ಫೈನಾನ್ಸ್ ಆಗಿ ಅಕ್ಟೋಬರ್ ನಲ್ಲಿ ನೇಮಕ ಮಾಡಿತ್ತು. ಒಟ್ಟಾರೆ ಎಲ್ಲಾ ಪ್ರಮುಖ ಕಂಪೆನಿಗಳಲ್ಲಿ ಹುದ್ದೆಗಳು ಖಾಲಿ ಇದ್ದು ಅನುಭವವಿರುವ ಅಭ್ಯರ್ಥಿಗಳ ನೇಮಕಾತಿಯ ಭರಾಟೆ ಜೋರಾಗಿ ನಡೆಯುತ್ತಿದೆ. ನೀವೂ ಅನುಭವವಿರುವವರಾಗಿದ್ದಲ್ಲಿ ಕೂಡಲೇ ಅರ್ಜಿ ಸಲ್ಲಿಸಿ.

Best Mobiles in India

English summary
Amazon, Flipkart, Swiggy, Paytm, Oyo, Ola and Zomato are hiring for these positions

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X