ಪ್ರೈಮ್ ಸದಸ್ಯರಿಗೆ ಒಂದು ದಿನ ಮುಂಚಿತವಾಗಿ ಆರಂಭವಾಗುತ್ತದೆ ಅಮೇಜಾನ್ ಫ್ರೀಡಂ ಸೇಲ್

By Gizbot Bureau
|

ಅಮೇಜಾನ್ ಫ್ರೀಡಂ ಸೇಲ್ ಅಗಸ್ಟ್ 8 ರ ಮಧ್ಯರಾತ್ರಿ 12 ಘಂಟೆಯಿಂದ ಆರಂಭವಾಗುತ್ತದೆ ಮತ್ತು ಅಗಸ್ಟ್ 11 ರ ವರೆಗೂ ನಡೆಯಲಿದೆ. ಹಲವು ಪ್ರೊಡಕ್ಟ್ ಗಳಿಗೆ ಈ ಸೇಲ್ ನಲ್ಲಿ ಭರ್ಜರಿ ರಿಯಾಯಿತಿ ಇದ್ದು, ಅದರಲ್ಲಿ ಸ್ಮಾರ್ಟ್ ಫೋನ್ ಗಳು, ಮೊಬೈಲ್ ಆಕ್ಸಸರೀಸ್ ಗಳು, ಗೆಡ್ಜೆಟ್ಸ್ ಗಳಾದ ಸ್ಪೀಕರ್ ಗಳು, ಪವರ್ ಬ್ಯಾಕ್ ಗಳು ಮತ್ತು ಇತರೆ ಎಲೆಕ್ಟ್ರಾನಿಕ್ ವಸ್ತುಗಳು ಕೂಡ ಸೇರಿವೆ.

ಪ್ರೈಮ್ ಸದಸ್ಯರಿಗೆ ಒಂದು ದಿನ ಮುಂಚಿತವಾಗಿ ಆರಂಭವಾಗುತ್ತದೆ ಅಮೇಜಾನ್ ಫ್ರೀಡಂ ಸೇಲ್

ಈ ಸೇಲ್ ನಲ್ಲಿ ಖರೀದಿಸುವವರಿಗೆ ಎಸ್ ಬಿಐ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ 10% ಇನ್ಸೆಂಟ್ ರಿಯಾಯಿತಿ ಲಭ್ಯವಾಗುತ್ತದೆ. ಇದು ಇಎಂಐ ಟ್ರಾನ್ಸ್ಯಾಕ್ಷನ್ ನ್ನು ಕೂಡ ಒಳಗೊಂಡಿದೆ. ನೋ ಕಾಸ್ಟ್ ಇಎಂಐ ಆಯ್ಕೆಯನ್ನು ಕೂಡ ಖರೀದಿದಾರರಿಗೆ ಪಡೆಯುವ ಅವಕಾಶವಿದ್ದು ಅಮೇಜಾನ್ ಪೇ ಐಸಿಐಸಿಐ ಕ್ರೆಡಿಟ್ ಕಾರ್ಡ್, ಬಜಾಜ್ ಫಿನ್ ಸರ್ವ್ ಇಎಂಐ ಕಾರ್ಡ್ ಮತ್ತು ಆಯ್ದ ಕೆಲವು ಡೆಬಿಟ್, ಕ್ರೆಡಿಟ್ ಕಾರ್ಡ್ ನಲ್ಲಿ ಈ ಸೌಲಭ್ಯವನ್ನು ಪಡೆಯಬಹುದು.

ಅಗಸ್ಟ್ 8 ರಂದು ಸೇಲ್ ಲೈವ್ ಆಗುತ್ತದೆ. ಆದರೆ ಅಮೇಜಾನ್ ಪ್ರೈಮ್ ಸದಸ್ಯರಿಗೆ ಬೇಗನೆ ಆಕ್ಸಿಸ್ ಸಿಗಲಿದೆ.ಪ್ರೈಮ್ ಸದಸ್ಯರಿಗೆ ಇಂದು ಮಧ್ಯಾಹ್ನ 12 ಗಂಟೆಯಿಂದಲೇ ಆಕ್ಸಿಸ್ ಇರುತ್ತದೆ. ಕೆಲವು ಪ್ರಮುಖ ಡೀಲ್ಸ್ ಗಳ ಬಗ್ಗೆ ವಿವರ ಇಲ್ಲಿದೆ ನೋಡಿ.

ಸ್ಮಾರ್ಟ್ ಫೋನ್ ಗಳಿಗೆ 40% ದ ವರೆಗೆ ರಿಯಾಯಿತಿ :

ಸ್ಮಾರ್ಟ್ ಫೋನ್ ಗಳಿಗೆ 40% ದ ವರೆಗೆ ರಿಯಾಯಿತಿ :

ಈ ಸೇಲ್ ನಲ್ಲಿ ಬಿಸಿ ಕೇಕಿನಂತೆ ಮಾರಾಟವಾಗುವ ಪ್ರಮುಖ ವಸ್ತು ಎಂದರೆ ಅದು ಸ್ಮಾರ್ಟ್ ಫೋನ್ ಗಳು. ಅಮೇಜಾನ್ ಎಕ್ಸ್ ಚೇಂಜ್ ಆಫರ್ ನ್ನು ಪ್ರಕಟಿಸಿದ್ದು 6,000 ರುಪಾಯಿ ವರೆಗೆ ಹಳೆಯ ಮೊಬೈಲ್ ನ್ನು ಮಾರಾಟ ಮಾಡುವ ಮೂಲಕ ಹೊಸತನ್ನ ಖರೀದಿಸುವುದಕ್ಕೆ ಅವಕಾಶವಿದೆ. ಜೊತೆಗೆ ನೋ ಕಾಸ್ಟ್ ಇಎಐ ಆಯ್ಕೆಯು ಪ್ರತಿ ತಿಂಗಳಿಗೆ 1,499 ರುಪಾಯಿಯಿಂದ ಆರಂಭವಾಗುತ್ತದೆ.

ಒನ್ ಪ್ಲಸ್ 7

ಒನ್ ಪ್ಲಸ್ 7

ನೂತನ ಒನ್ ಪ್ಲಸ್ 7 ಸರಣಿಯ ಸ್ಮಾರ್ಟ್ ಫೋನ್ ಗಳನ್ನು 3,000 ರುಪಾಯಿವರೆಗಿನ ಎಕ್ಸ್ ಚೇಂಜ್ ಆಫರ್ ನಲ್ಲಿ ಖರೀದಿಸಬಹುದು. ಹುವಾಯಿ ವೈ9 ಪ್ರೈಮ್ ಮೊದಲ ಬಾರಿಗೆ ಅಮೇಜಾನ್ ಪೇ ಕ್ಯಾಷ್ ಬ್ಯಾಕ್ ಮತ್ತು ಎಕ್ಸ್ ಚೇಂಜ್ ಆಫರ್ ನಲ್ಲಿ ಸಿಗುತ್ತದೆ. ಹಾನರ್ ಮತ್ತು ವಿವೋ ಸ್ಮಾರ್ಟ್ ಫೋನ್ ಗಳಿಗೆ 20,000 ದ ವರೆಗೆ ರಿಯಾಯಿತಿ ಇದೆ. ಸ್ಯಾಮ್ ಸಂಗ್ ಫೋನ್ ಗಳಿಗೆ 18,000 ದ ವರೆಗೆ ರಿಯಾಯಿತಿ ಮತ್ತು ವಿವೋ ಮೊಬೈಲ್ ಗಳಿಗೆ 9,000 ಆಫರ್ ಇದೆ.

ಶಿಯೋಮಿ ಸ್ಮಾರ್ಟ್ ಫೋನ್

ಶಿಯೋಮಿ ಸ್ಮಾರ್ಟ್ ಫೋನ್

ಶಿಯೋಮಿ ಸ್ಮಾರ್ಟ್ ಫೋನ್ ಗಳು 7,500ರುಪಾಯಿವರೆಗಿನ ರಿಯಾಯಿತಿಯಲ್ಲಿ ಸಿಗುತ್ತಿದ್ದು ರೆಡ್ಮಿ 7 ಮತ್ತು ರೆಡ್ಮಿ ವೈ3 ಗಳನ್ನು ಖರೀದಿಸಬಹುದಾಗಿದೆ. ಹುವಾಯಿ ಫೋನ್ ಗಳು ಅತೀ ಹೆಚ್ಚಿನ ರಿಯಾಯಿತಿ ಅಂದರೆ 23,000 ರುಪಾಯಿವರೆಗಿನ ರಿಯಾಯಿತಿಯಲ್ಲಿ ಲಭ್ಯವಾಗುತ್ತದೆ.

ಮೊಬೈಲ್ ಆಕ್ಸಸರೀಸ್

ಮೊಬೈಲ್ ಆಕ್ಸಸರೀಸ್

ಮೊಬೈಲ್ ಆಕ್ಸಸರೀಸ್ ಗಳು 69 ರುಪಾಯಿ ಮೇಲ್ಪಟ್ಟು ಮಾರಾಟ ಕಾಣುತ್ತಿವೆ. ಪವರ್ ಬ್ಯಾಂಕ್ 499 ರುಪಾಯಿ ಮೇಲ್ಪಟ್ಟು ದೊರಕುತ್ತದೆ. ಕೊನೆಯದಾಗಿ ಬ್ಲೂಟೂತ್ ಮತ್ತು ವಯರ್ಡ್ ಇಯರ್ ಫೋನ್ ಗಳಿಗೆ 75% ದ ವರೆಗಿನ ರಿಯಾಯಿತಿಯಲ್ಲಿ ಸಿಗುತ್ತದೆ. ಈ ಯಾರಿಗುಂಟು ಯಾರಿಗಿಲ್ಲ ಆಫರ್ ನಲ್ಲಿ ನೀವು ಖರೀದಿಸಿ ಲಾಭ ಪಡೆಯಬಹುದು.

Best Mobiles in India

Read more about:
English summary
Amazon Freedom Sale For Prime Members: Attractive Deals You Can Get

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X