2019 ರ ಅಮೇಜಾನ್ ಗ್ರೇಟ್ ಇಂಡಿಯನ್ ಸೇಲ್ ಗೆ ಕ್ಷಣಗಣನೆ : ದಿನಾಂಕ, ರಿಯಾಯಿತಿ ಮತ್ತು ಇತ್ಯಾದಿ ವಿವರ ಇಲ್ಲಿದೆ

By Gizbot Bureau
|

ಅಮೇಜಾನ್ ತನ್ನ ಮುಂದಿನ ದೊಡ್ಡ ಮಾರಾಟ ಮೇಳದ ದಿನಾಂಕವನ್ನು ಪ್ರಕಟಿಸಿದ್ದು ಅದರ ಹೆಸರು ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್. 2019 ರ ಅಮೇಜಾನ್ ಗ್ರೇಟ್ ಇಂಡಿಯನ್ ಸೇಲ್ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವ ಅಂಶಗಳು ಇಲ್ಲಿವೆ ನೋಡಿ.

ಅಮೇಜಾನ್ ಪ್ರೈಮ್

ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ದಿನಾಂಕ: ಸೆಪ್ಟೆಂಬರ್ 29-ಅಕ್ಟೋಬರ್ 4

ಅಮೇಜಾನ್ ಪ್ರೈಮ್ ಸದಸ್ಯರಿಗೆ ಒಂದು ದಿನ ಮುಂಚಿತವಾಗಿಯೇ ಸೇಲ್ ಆರಂಭವಾಗುತ್ತದೆ. ಅಂದರೆ ಸೆಪ್ಟೆಂಬರ್ 28ರ ಮಧ್ಯಾಹ್ನ 12 ಘಂಟೆಗೆ ಪ್ರೈಮ್ ಸದಸ್ಯರು ಈ ಸೇಲ್ ನಲ್ಲಿ ಖರೀದಿ ಪ್ರಾರಂಭಿಸಿ, ಆಫರ್ ಗಳನ್ನು ಪಡೆದುಕೊಳ್ಳಬಹುದು.

ಒನ್ ಪ್ಲಸ್, ಸ್ಯಾಮ್ ಸಂಗ್, ಫೋಸಿಲ್ ಮತ್ತು ಇತ್ಯಾದಿಗಳಿಂದ ಹೊಸ ಹೊಸ ಡಿವೈಸ್ ಗಳ ಬಿಡುಗಡೆಯು ಈ ಸೇಲ್ ನಲ್ಲಿ ನಡೆಯಲಿದೆ.

ಅಮೇಜಾನ್ ನಲ್ಲಿ “ಫೆಸ್ಟೀವ್ ಕ್ಯಾಷ್ ಬ್ಯಾಕ್ ಆಫರ್“

ಅಮೇಜಾನ್ ನಲ್ಲಿ “ಫೆಸ್ಟೀವ್ ಕ್ಯಾಷ್ ಬ್ಯಾಕ್ ಆಫರ್“

ಈ ಸೇಲ್ ನಲ್ಲಿ ಅಮೇಜಾನ್ ಕ್ಯಾಷ್ ಬ್ಯಾಕ್ ಆಫರ್ ನ್ನು ನೀಡುತ್ತಿದ್ದು ಅದನ್ನು ನೀವು ಮುಂದಿನ ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ನಲ್ಲಿ ಬಳಸಿಕೊಳ್ಳಬಹುದು. ಕ್ಯಾಷ್ ಬ್ಯಾಕ್ ಮೊತ್ತವನ್ನು 72 ಘಂಟೆಗಳ ಒಳಗಾಗಿ ಬಳಕೆದಾರರ ಖಾತೆಗೆ ಕ್ರೆಡಿಟ್ ಮಾಡಲಾಗುತ್ತದೆ.

7 ಲಕ್ಷ ಪ್ರೊಡಕ್ಟ್ ಗಳಿಗೆ ಅಮೇಜಾನ್ ನಲ್ಲಿ ವಿಶೇಷ ರಿಯಾಯಿತಿ ಕೂಪನ್ ಗಳನ್ನು ಈ ಸೇಲ್ ನಲ್ಲಿ ಆಫರ್ ಮಾಡಲಾಗಿದೆ.

ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಲ್ಲಿ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಆಫರ್ ಗಳು: ಎಸ್ ಬಿಐ ಕಾರ್ಡ್ಸ್ ನಲ್ಲಿ ಶಾಪ್ ಮಾಡುವವರಿಗೆ ಇನ್ಸೆಂಟ್ ರಿಯಾಯಿತಿ ಮತ್ತು ಬೋನಸ್ ಆಫರ್ ಗಳು ಲಭ್ಯವಾಗುತ್ತದೆ.

ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್

ಹೆಚ್ ಡಿಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಎಸ್ ಬಿಐ ಕ್ರೆಡಿಟ್ ಕಾರ್ಡ್ಸ್ ಹೊಂದಿರುವವರಿಗೆ ಅಮೇಜಾನ್ ನಲ್ಲಿ ನೋ ಕಾಸ್ಟ್ ಇಎಂಐ ಆಫರ್ ಇರುತ್ತದೆ.

ಈ ವರ್ಷದ ನೂತನ ಸ್ಮಾರ್ಟ್ ಫೋನ್ ಗಳಿಗೆ ಅಮೇಜಾನ್ ನಲ್ಲಿ 40%ದ ವರೆಗೆ ರಿಯಾಯಿತಿ

ಈಗಾಗಲೇ ಅಮೇಜಾನ್ ತಿಳಿಸಿರುವಂತೆ 15 ಹೊಸ ಸ್ಮಾರ್ಟ್ ಫೋನ್ ಗಳು ಮತ್ತು ಆಕ್ಸಿಸರೀಸ್ ಗಳು ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಲ್ಲಿ ಲಭ್ಯವಾಗುತ್ತದೆ. 6,000ದ ವರೆಗೆ ಎಕ್ಸ್ ಚೇಂಜ್ ಆಫರ್ ನ್ನು ಕೂಡ ನೀಡಲಾಗುತ್ತಿದೆ.

200 ಬ್ರ್ಯಾಂಡಿನ ಸುಮಾರು 6000 ಎಲೆಕ್ಟ್ರಾನಿಕ್ ವಸ್ತುಗಳಿಗೆ ಅಮೇಜಾನ್ ಆಫರ್

200 ಬ್ರ್ಯಾಂಡಿನ ಸುಮಾರು 6000 ಎಲೆಕ್ಟ್ರಾನಿಕ್ ವಸ್ತುಗಳಿಗೆ ಅಮೇಜಾನ್ ಆಫರ್

ಈ ಮಾರಾಟದ ಭಾಗವಾಗಿ ಅಮೇಜಾನ್ ನಲ್ಲಿ ಹೆಡ್ ಫೋನ್ ಮತ್ತು ಸ್ಪೀಕರ್ ಗಳಿಗೆ 60%ದ ವರೆಗೆ ರಿಯಾಯಿತಿ,ಡಿಎಸ್ಎಲ್ಆರ್ ಮತ್ತು ಮಿರರ್ ಲೆಸ್ ಕ್ಯಾಮರಾಗಳಿಗೆ ಕನಿಷ್ಟ 10,000ದ ವರೆಗೆ ರಿಯಾಯಿತಿ ಮತ್ತು ಲ್ಯಾಪ್ ಟಾಪ್ ಗಳಿಗೆ 40,000 ರುಪಾಯಿವರೆಗೆ ರಿಯಾಯಿತಿ ಇರುತ್ತದೆ. ಹೆಚ್ ಪಿ, ಕೆನಾನ್, ಲೆನೊವಾ ಮತ್ತು ಬೋಟ್ ಸಂಸ್ಥೆಯ ಪ್ರೊಡಕ್ಟ್ ಗಳು ಈ ಕೆಟಗರಿಯಲ್ಲಿ ಲಭ್ಯವಾಗಲಿವೆ.

ಟಿವಿ ಮತ್ತು ಅಪ್ಲಯನ್ಸಸ್ ಗಳಿಗೆ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಲ್ಲಿ ಅಮೇಜಾನ್ ನೀಡುತ್ತಿದೆ 75% ರಿಯಾಯಿತಿ

ಅಮೇಜಾನ್ ಮೈಕ್ರೋಸೈಟ್ ಬಹಿರಂಗಪಡಿಸಿರುವಂತೆ ಸ್ಯಾಮ್ ಸಂಗ್, ಒನ್ ಪ್ಲಸ್ ಟಿವಿ, ಎಲ್ ಜಿ ಮತ್ತು ಇತ್ಯಾದಿಗಳಿಗೆ ಭರ್ಜರಿ ಆಫರ್ ಇರಲಿದೆ. ಟೆಲಿವಿಷನ್ ಗೆ 50% ರಿಯಾಯಿತಿ, ರೆಫ್ರಿಜರೇಟರ್ ಗಳಿಗೆ 40% ದ ವರೆಗೆ ರಿಯಾಯಿತಿ, ಏರ್ ಕಂಡೀಷನರ್ ಗಳಿಗೆ 45% ದ ವರೆಗೆ ರಿಯಾಯಿತಿ ಸಿಗಲಿದೆ.

45% ರಿಯಾಯಿತಿಯಲ್ಲಿ ಸಿಗಲಿದೆ ಅಮೇಜಾನ್ ಡಿವೈಸ್ ಗಳಾಗಿರುವ ಫೈಯರ್ ಟಿವಿ ಸ್ಟಿಕ್, ಇಕೋ ಮತ್ತು ಕಿಂಡಲ್.

ಅಮೇಜಾನ್ ಇಕೋ ಡಿವೈಸ್ ಜೊತೆಗೆ ಸ್ಮಾರ್ಟ್ ಸ್ಕ್ರೀನ್ ಗಳಿಗೆ 35%ದ ವರೆಗಿನ ಆಫರ್ ನ ಭರವಸೆ ನೀಡಿದೆ. ಅಮೇಜಾನ್ ಫೈಯರ್ ಟಿವಿ ಸ್ಟಿಕ್ 1,200 ರುಪಾಯಿಯ ಆಫರ್ ನಲ್ಲಿ ಸಿಗುತ್ತದೆ. ಇನ್ನು ಕಿಂಡಲ್ ಡಿವೈಸ್ ಗಳು 1,750 ರುಪಾಯಿ ಆಫರ್ ಬೆಲೆಯಲ್ಲಿ ಖರೀದಿಗೆ ಲಭ್ಯವಾಗುತ್ತದೆ.

Best Mobiles in India

Read more about:
English summary
Amazon Great Indian Festival Sale 2019 to go live on September 29

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X