ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌: 50% ಡಿಸ್ಕೌಂಟ್‌ನಲ್ಲಿ ಗೇಮಿಂಗ್‌ ಅಕ್ಸಸರಿಸ್ ಲಭ್ಯ

|

ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ ಈಗ ಗ್ರಾಹಕರಿಗೆ ಮುಕ್ತವಾಗಿದೆ. ಈ ಪ್ಲ್ಯಾಟ್‌ಫಾರ್ಮ್‌ನಲ್ಲಿ ಇಂದಿನಿಂದ (ಸೆ.23) ಭರ್ಜರಿ ಡಿಸ್ಕೌಂಟ್‌ನಲ್ಲಿ ಸ್ಮಾರ್ಟ್‌ಫೋನ್‌, ಟಿವಿ, ಲ್ಯಾಪ್‌ಟಾಪ್‌ ಸೇರಿದಂತೆ ಎಲ್ಲಾ ರೀತಿಯ ಪ್ರೊಡಕ್ಟ್‌ಗಳನ್ನು ಕೊಂಡುಕೊಳ್ಳಬಹುದಾಗಿದೆ.

ಅಮೆಜಾನ್‌

ಹೌದು, ಅಮೆಜಾನ್‌ನ ಈ ಆಫರ್‌ ಕೆಲವೇ ದಿನಗಳು ಇದ್ದು, ಗೇಮಿಂಗ್‌ ಪಿಸಿ ಇರುವವರಿಗೆ ಇದೊಂದು ಸುವರ್ಣಾವಕಾಶ ಎಂದೇ ಹೇಳಬಹುದು. ಗೇಮಿಂಗ್‌ ಕೀಬೋರ್ಡ್‌, ಮೌಸ್‌, ಹೆಡ್‌ಸೆಟ್‌ ಸೇರಿದಂತೆ ಪ್ರಮುಖ ಬ್ರಾಂಡ್‌ಗಳ ಡಿವೈಸ್‌ಗಳು ಕಡಿಮೆ ಬೆಲೆಗೆ ಲಭ್ಯ ಇವೆ. ಈ ಲೇಖನದಲ್ಲಿ ನೀವು 5,000 ರೂ. ಒಳಗಿರುವ ಪ್ರಮುಖ ಗೇಮಿಂಗ್‌ ಉಪಕರಣಗಳ ಬಗ್ಗೆ ತಿಳಿದುಕೊಳ್ಳಬಹುದು.

HP ಗೇಮಿಂಗ್‌ ಕೀಬೋರ್ಡ್

HP ಗೇಮಿಂಗ್‌ ಕೀಬೋರ್ಡ್

HP K500F ಬ್ಯಾಕ್‌ಲಿಟ್ ಮೆಂಬರೇನ್ ವೈರ್ಡ್ ಗೇಮಿಂಗ್ ಕೀಬೋರ್ಡ್ ಅತ್ಯಾಕರ್ಷಕ ಬೆಲೆಯಲ್ಲಿ ಲಭ್ಯವಿದೆ. ಈ ಡಿವೈಸ್‌ಗೆ 36% ರಿಯಾಯಿತಿ ಇದ್ದು, 1,148 ರೂ.ಗಳಲ್ಲಿ ನೀವು ಕೊಂಡುಕೊಳ್ಳಬಹುದಾಗಿದೆ. ಇದು ರೇನ್‌ಬೋ ಬ್ಯಾಕ್‌ಲೈಟ್ ಹಾಗೂ ಮೆಟಲ್‌ ಪ್ಯಾನಲ್‌ ಒಳಗೊಂಡಿದೆ.

ರೆಗ್ಯುಲರ್‌ GC-100 ಕೀಬೋರ್ಡ್+ಮೌಸ್

ರೆಗ್ಯುಲರ್‌ GC-100 ಕೀಬೋರ್ಡ್+ಮೌಸ್

ರೆಗ್ಯುಲರ್‌ GC-100 ಕೀಬೋರ್ಡ್ ಹಾಗೂ ಮೌಸ್ ಕಾಂಬೊಗೆ 55% ರಿಯಾಯಿತಿ ನೀಡಲಾಗಿದೆ. ಡಿಸ್ಕೌಂಟ್‌ನ ನಂತರ 899 ರೂ.ನಲ್ಲಿ ಇದು ಲಭ್ಯವಿದೆ. ಮೂರು ಮಿಶ್ರ ಎಲ್‌ಇಡಿ ಬಣ್ಣಗಳ ಆಯ್ಕೆ ಪಡೆದಿದ್ದು, ಕೀಬೋರ್ಡ್‌ ನೋಡಲು ಹಾಗೂ ಬಳಕೆ ಮಾಡಲು ತುಂಬಾನೆ ಅತ್ಯಾಕರ್ಷಕವಾಗಿದೆ. ವಿಂಡೋಸ್ ಕೀಲಾಕ್, ಫ್ಲೋಟಿಂಗ್ ಕೀಕ್ಯಾಪ್‌ಗಳು, ಆರ್‌ಜಿಬಿ ಮೋಡ್, ಗೇಮಿಂಗ್ ಗ್ರೇಡ್ ಸೆನ್ಸರ್‌ಗಳೊಂದಿಗೆ ಕೆಲಸ ಮಾಡುತ್ತವೆ.

ಕೋರ್ಸೇರ್ K55 RGB Pro (Corsair K55 RGB PRO )

ಕೋರ್ಸೇರ್ K55 RGB Pro (Corsair K55 RGB PRO )

ಈ ಡಿವೈಸ್‌ 57% ರಿಯಾಯಿತಿ ಪಡೆದು 2,899 ರೂ.ಗಳಲ್ಲಿ ಲಭ್ಯವಿದೆ. ಇದರಲ್ಲಿ ಐದು ಬಣ್ಣದ ಬೆಳಕಿನ ಡೈನಾಮಿಕ್ ಆರ್‌ಜಿಬಿ ಬ್ಯಾಕ್‌ಲೈಟಿಂಗ್ ಇದೆ. ಎಲ್ಗಾಟೊ ಸ್ಟ್ರೀಮ್ ಡೆಕ್ ಸಾಫ್ಟ್‌ವೇರ್‌ಗೆ ಬೆಂಬಲ ಪಡೆದಿದ್ದು, ಇದರಲ್ಲಿ ಆರು ಮ್ಯಾಕ್ರೋ ಕೀಗಳಿವೆ.

ಕೊರ್ಸೇರ್ ಹಾರ್ಪೂನ್ ಪ್ರೊ RGB

ಕೊರ್ಸೇರ್ ಹಾರ್ಪೂನ್ ಪ್ರೊ RGB

ಕೊರ್ಸೇರ್ ಹಾರ್ಪೂನ್ ಪ್ರೊ RGB ಮೌಸ್‌ಗೆ 52% ರಿಯಾಯಿತಿ ನೀಡಲಾಗಿದ್ದು, 1,499 ರೂ.ಗಳಲ್ಲಿ ಲಭ್ಯವಿದೆ. ಇದರ ತೂಕ ಕೇವಲ 85 ಗ್ರಾಂ. ಇದೆ. ಇದರಲ್ಲಿ ದೀರ್ಘ ಸಮಯದ ಗೇಮಿಂಗ್ ಸೆಷನ್‌ಗಳಿಗೆ ಅನುಕೂಲ ಆಗುವ ಫೀಚರ್ಸ್‌ಗಳನ್ನು ನೀಡಲಾಗಿದೆ. ಇದು ಆರು ಪ್ರೊಗ್ರಾಮೆಬಲ್ ಕೀಗಳೊಂದಿಗೆ 12000 DPI ಆಪ್ಟಿಕಲ್ ಸಂವೇದಕವನ್ನು ಪಡೆದಿದೆ.

ರೇಜರ್ ಡೆತ್ ಆಡ್ಡರ್ ಮೌಸ್

ರೇಜರ್ ಡೆತ್ ಆಡ್ಡರ್ ಮೌಸ್

ರೇಜರ್ ಡೆತ್ ಆಡ್ಡರ್ ಎಸೆನ್ಷಿಯಲ್ ಗೇಮಿಂಗ್ ಮೌಸ್ 68% ರಿಯಾಯಿತಿ ಪಡೆದಿದ್ದು, 1,499 ರೂ.ನಲ್ಲಿ ಲಭ್ಯವಿದೆ. ಈ ಮೌಸ್ ಎರಡು ಬಣ್ಣದಲ್ಲಿದೆ, ಒಂದು ಕಪ್ಪು ಮತ್ತೊಂದು ಬಿಳಿ. 6,400 DPI ಸಂವೇದಕ ಮತ್ತು 5 ಹೈಪರ್‌ಸ್ಪಾನ್ಸ್ ಬಟನ್‌ಗಳು ಈ ಮೌಸ್‌ನಲ್ಲಿವೆ.

ರೇಜರ್ ಬೆಸಿಲಿಸ್ಕ್ ಎಕ್ಸ್ ಗೇಮಿಂಗ್ ಮೌಸ್

ರೇಜರ್ ಬೆಸಿಲಿಸ್ಕ್ ಎಕ್ಸ್ ಗೇಮಿಂಗ್ ಮೌಸ್

ರೇಜರ್ ಬೆಸಿಲಿಸ್ಕ್ ಎಕ್ಸ್ ಹೈಪರ್‌ಸ್ಪೀಡ್ ವೈರ್‌ಲೆಸ್ ಗೇಮಿಂಗ್ ಮೌಸ್ 41% ರಿಯಾಯಿತಿ ಪಡೆದಿದ್ದು, ಇದು 3,249 ರೂ.ಗಳಲ್ಲಿ ಲಭ್ಯವಿದೆ. ಈ ಮೌಸ್‌ಬ್ಲೂಟೂತ್ ಹಾಗೂ ರೇಜರ್‌ನ ಹೈಪರ್‌ಸ್ಪೀಡ್ ವೈರ್‌ಲೆಸ್ ತಂತ್ರಜ್ಞಾನಕ್ಕೆ ಸಪೋರ್ಟ್‌ ಮಾಡಲಿದೆ. ಇತರೆ ವೈರ್‌ಲೆಸ್ ಮೌಸ್‌ಗಿಂತ ಇದು 25% ವೇಗದಲ್ಲಿ ಕೆಲಸ ಮಾಡಲಿದೆ. ಇದರಲ್ಲಿ ಆರು ಪ್ರೊಗ್ರಾಮೆಬಲ್ ಬಟನ್‌ಗಳಿವೆ.

ರೆಡ್‌ಗೇರ್‌ ರ್ಕಾಸ್ಮೊ 7.1 USB ಹೆಡ್‌ಫೋನ್‌

ರೆಡ್‌ಗೇರ್‌ ರ್ಕಾಸ್ಮೊ 7.1 USB ಹೆಡ್‌ಫೋನ್‌

ರೆಡ್‌ಗೇರ್ ಕಾಸ್ಮೊ 7.1 USB ಗೇಮಿಂಗ್ ವೈರ್ಡ್ ಓವರ್ ಇಯರ್ ಹೆಡ್‌ಫೋನ್ 52% ರಿಯಾಯಿತಿ ಪಡೆದಿದೆ. ಇದರ ಬೆಲೆ 1,499 ರೂ.ಗಳಾಗಿದೆ. ಈ ಹೆಡ್‌ಫೋನ್‌ ವರ್ಚುವಲ್ ಸರೌಂಡ್ ಸೌಂಡ್‌ ನೀಡಲಿದೆ. ಇದು 50mm ಡ್ರೈವರ್, RGB ಲೈಟಿಂಗ್ ಮತ್ತು ರಿಮೋಟ್ ಕಂಟ್ರೋಲ್ ಅನ್ನು ಒಳಗೊಂಡಿದೆ. ರೆಡ್‌ಗೇರ್ ಕಾಸ್ಮೊ 7.1 ತ್ವರಿತ ಮತ್ತು ಸ್ಥಿರ ಸಂವಹನಕ್ಕಾಗಿ ಉತ್ತಮ ಗುಣಮಟ್ಟದ ಅಂತರ್ನಿರ್ಮಿತ ನಾಯ್ಸ್ ಕ್ಯಾನ್ಸಲೇಶನ್‌ ಮೈಕ್ರೊಫೋನ್ ಅನ್ನು ಸಹ ಹೊಂದಿದೆ.

ರೇಜರ್ ಬ್ಲ್ಯಾಕ್‌ಶಾರ್ಕ್ V2 X ಗೇಮಿಂಗ್ ಹೆಡ್‌ಸೆಟ್

ರೇಜರ್ ಬ್ಲ್ಯಾಕ್‌ಶಾರ್ಕ್ V2 X ಗೇಮಿಂಗ್ ಹೆಡ್‌ಸೆಟ್

ರೇಜರ್ ಬ್ಲ್ಯಾಕ್‌ಶಾರ್ಕ್ V2 X ಗೇಮಿಂಗ್ ಹೆಡ್‌ಸೆಟ್ 50% ರಿಯಾಯಿತಿ ಪಡೆದಿದ್ದು, 3,999 ರೂ.ಗಳಿಗೆ ಲಭ್ಯವಿದೆ. ಈ ಡಿವೈಸ್‌ 50mm ಡ್ರೈವರ್‌ಗಳು ಮತ್ತು 7.1 ಸರೌಂಡ್ ಸೌಂಡ್‌ ಆಯ್ಕೆಯನ್ನು ಪಡೆದಿದೆ. ಈ ಸಾಧನ ಪಿಸಿ, ಪಿಎಸ್‌4, ಪಿಎಸ್‌5, Xbox ಒನ್, ಸರಣಿ Xbox ಎಕ್ಸ್/ಎಸ್, ನಿಂಟೆಂಡೊ ಸ್ವಿಚ್ ಮತ್ತು ಸ್ಮಾರ್ಟ್‌ಫೋನ್‌ಗಳೊಂದಿಗೆ ಹೊಂದಿಕೊಳ್ಳುತ್ತದೆ.

ಸ್ಟೀಲ್ ಸೀರೀಸ್ ಆರ್ಕ್ಟಿಸ್ 1 ಹೆಡ್‌ಸೆಟ್ (SteelSeries Arctis 1 Wired Gaming Headset)

ಸ್ಟೀಲ್ ಸೀರೀಸ್ ಆರ್ಕ್ಟಿಸ್ 1 ಹೆಡ್‌ಸೆಟ್ (SteelSeries Arctis 1 Wired Gaming Headset)

ಸ್ಟೀಲ್ ಸೀರೀಸ್ ಆರ್ಕ್ಟಿಸ್ 1 ವೈರ್ಡ್ ಗೇಮಿಂಗ್ ಹೆಡ್‌ಸೆಟ್ 60% ರಿಯಾಯಿತಿ ಪಡೆದಿದ್ದು, 3,999 ರೂ. ಗಳಲ್ಲಿ ಲಭ್ಯವಿದೆ. ಈ ಹೆಡ್‌ಸೆಟ್ ಡಿಟ್ಯಾಚೇಬಲ್ ಮೈಕ್ರೊಫೋನ್, ಹಗುರವಾದ ಸ್ಟೀಲ್ ಬಲವರ್ಧಿತ ಹೆಡ್‌ಬ್ಯಾಂಡ್ ಅನ್ನು ಪಡೆದಿದೆ. ಈ ಸಾಧನ ಪಿಸಿ, , ಪಿಎಸ್4, ಪಿಎಸ್5, ಪನಿಂಟೆಂಡೊ ಸ್ವಿಚ್ ಮತ್ತು ಸ್ಮಾರ್ಟ್‌ಫೋನ್‌ಗಳೊಂದಿಗೆ ಹೊಂದಿಕೊಳ್ಳುತ್ತದೆ.

ರೆಡ್‌ಗೇರ್ ಪ್ರೊ ವೈರ್‌ಲೆಸ್ ಗೇಮ್‌ಪ್ಯಾಡ್

ರೆಡ್‌ಗೇರ್ ಪ್ರೊ ವೈರ್‌ಲೆಸ್ ಗೇಮ್‌ಪ್ಯಾಡ್

ರೆಡ್‌ಗೇರ್ ಪ್ರೊ ವೈರ್‌ಲೆಸ್ ಗೇಮ್‌ಪ್ಯಾಡ್ 28% ರಿಯಾಯಿತಿ ಪಡೆದಿದ್ದು, 1,299 ರೂ. ಗಳಲ್ಲಿ ಲಭ್ಯವಿದೆ. ಇದು 2.4GHz ವೈರ್‌ಲೆಸ್ ತಂತ್ರಜ್ಞಾನದೊಂದಿಗೆ ಕಾರ್ಯನಿರ್ವಹಿಸಲಿದ್ದು, ವಿಂಡೋಸ್‌ 7/8/8.1/10 ಗೆ ಮಾತ್ರ ಹೊಂದಿಕೊಳ್ಳುತ್ತದೆ. ಈ ಗೇಮ್‌ಪ್ಯಾಡ್‌ನಲ್ಲಿ ಇನ್‌ಬಿಲ್ಟ್ ಬ್ಯಾಟರಿ ಇದ್ದು, 30 ನಿಮಿಷ ಚಾರ್ಜ್‌ ಮಾಡಿದರೆ 2 ಗಂಟೆಗಳವರೆಗೆ ಬ್ಯಾಕ್‌ಅಪ್‌ ನೀಡಲಿದೆ.

Best Mobiles in India

English summary
Amazon Great Indian Festival Sale is now open for customers. in this article Information is given about the major gaming equipment.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X