ಜನವರಿ 20 ರಿಂದ ಅಮೇಜಾನ್ ಗ್ರೇಟ್ ಇಂಡಿಯನ್ ಸೇಲ್ ಗೆ ಚಾಲನೆ

|

ಯುಸ್ ಮೂಲದ ಇ-ಕಾಮರ್ಸ್ ಸಂಸ್ಥೆ ಅಮೇಜಾನ್ ಭಾರತದಲ್ಲಿನ ಮುಂಬರುವ ತನ್ನ ರಿಯಾಯಿತಿ ಮಾರಾಟದ ದಿನಾಂಕವನ್ನು ಪ್ರಕಟಿಸಿದ್ದು ಅದನ್ನು ಅಮೇಜಾನ್ ಗ್ರೇಟ್ ಇಂಡಿಯನ್ ಸೇಲ್ ಎಂದು ಕರೆದಿದೆ. ಜನವರಿ 20 ರಿಂದ ಜನವರಿ 23 ರ ವರೆಗೆ ನಾಲ್ಕು ದಿನಗಳ ಕಾಲ ಈ ಸೇಲ್ ನಡೆಯಲಿದೆ.

ಪ್ರೈಮ್ ಸದಸ್ಯರ ಆಫರ್:

ಪ್ರೈಮ್ ಸದಸ್ಯರ ಆಫರ್:

ಕಂಪೆನಿಯು ತನ್ನ ಪ್ರೈಮ್ ಸದಸ್ಯರಿಗೆ 12 ತಾಸುಗಳ ಮುನ್ನವೇ ಎಲ್ಲಾ ರಿಯಾಯಿತಿ ವಸ್ತುಗಳನ್ನು ಪ್ರದರ್ಶಿಸಲಿದೆ ಅಂದರೆ ಜನವರಿ 19,2019 ರ ಮಧ್ಯಾಹ್ನ 12 ಘಂಟೆಗೆ ಪ್ರೈಮ್ ಸದಸ್ಯರು ಯಾವೆಲ್ಲ ವಸ್ತುಗಳಿಗೆ ರಿಯಾಯಿತಿ ಎಷ್ಟಿದೆ ಎಂಬುದನ್ನು ನೋಡಿ ಖರೀದಿಸಬಹುದು.

ಬ್ಯಾಂಕ್ ಆಫರ್ ಗಳು:

ಬ್ಯಾಂಕ್ ಆಫರ್ ಗಳು:

ಯಾವ ಗ್ರಾಹಕರು ಹೆಚ್ ಡಿಎಫ್ ಸಿ ಕ್ರೆಡಿಟ್/ಡೆಬಿಟ್ ಕಾರ್ಡ್/ಇಎಂಐ ಬಳಸಿ ಗ್ರೇಟ್ ಇಂಡಿಯನ್ ಸೇಲ್ ನಲ್ಲಿ ಖರೀದಿಸುತ್ತಾರೋ ಅವರಿಗೆ ಹೆಚ್ಚುವರಿ 10% ರಿಯಾಯಿತಿ ದೊರೆಯುತ್ತದೆ. ಬಜಾಜ್ ಫಿನ್ ಸರ್ವ್ ಇಎಂಐ ಕಾರ್ಡ್ ಬಳಸಿ ಶಾಪಿಂಗ್ ಮಾಡಿದರೆ ನೋ ಕಾಸ್ಟ್ ಇಎಂಐ ಕೂಡ ಲಭ್ಯವಾಗುತ್ತದೆ ಮತ್ತು ಕೆಲವು ಆಯ್ದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳಲ್ಲೂ ಈ ಸೌಲಭ್ಯವಿದೆ.

ಯಾವೆಲ್ಲ ಫೋನ್ ರಿಯಾಯಿತಿ ಬೆಲೆಯಲ್ಲಿ ಲಭ್ಯ:

ಯಾವೆಲ್ಲ ಫೋನ್ ರಿಯಾಯಿತಿ ಬೆಲೆಯಲ್ಲಿ ಲಭ್ಯ:

ಅಮೇಜಾನ್ ಗ್ರೇಟ್ ಇಂಡಿಯನ್ ಸೇಲ್ ನಲ್ಲಿ ನೋ ಕಾಸ್ಟ್ ಇಎಂಐ ಮತ್ತು ಎಕ್ಸ್ ಚೇಂಜ್ ಆಫರ್ ಗಳು ಹಲವು ಸ್ಮಾರ್ಟ್ ಫೋನ್ ಗಳಿಗೆ ಲಭ್ಯವಾಗುತ್ತದೆ ಅದರಲ್ಲಿ ಒನ್ ಪ್ಲಸ್ 6ಟಿ, ಶಿಯೋಮಿ ರೆಡ್ಮಿ ವೈ2, ಹುವಾಯಿ ನೋವಾ 3ಐ, ಹಾನರ್ 8ಎಕ್ಸ್, ವಿವೋ ವಿ9 ಪ್ರೋ, ಐಫೋನ್ ಎಕ್ಸ್ ಮತ್ತು ಇತ್ಯಾದಿಗಳು ಸೇರಿವೆ.

ಯಾವುದಕ್ಕೆ ಎಷ್ಟು ರಿಯಾಯಿತಿ?

ಯಾವುದಕ್ಕೆ ಎಷ್ಟು ರಿಯಾಯಿತಿ?

ಲ್ಯಾಪ್ ಟಾಪ್, ಹೆಡ್ ಫೋನ್, ಹಾರ್ಡ್ ಡ್ರೈವ್, ಕ್ಯಾಮರಾ ಗಳಿಗೆ 60% ದ ವರೆಗೆ ರಿಯಾಯಿತಿ ಲಭ್ಯವಿದೆ. ಟಿವಿ ಮತ್ತು ಅಪ್ಲಯನ್ಸಸ್ ಗಳ ಮೇಲೆ 50% ರಿಯಾಯಿತಿ ಇದೆ, ದಿನಬಳಕೆ ವಸ್ತುಗಳಿಗೆ 70% ರಿಯಾಯಿತಿ, ಫ್ಯಾಷನ್ ಪ್ರೊಡಕ್ಟ್ ಗಳಿಗೆ 80%ದ ವರೆಗೆ ರಿಯಾಯಿತಿ, ಮನೆ ಮತ್ತು ಅಡುಗೆ ವಸ್ತುಗಳನ್ನು ಶಾಪಿಂಗ್ ಮಾಡುವವವರಿಗೆ 75%ದ ವರೆಗೆ ರಿಯಾಯಿತಿಯು ಈ ಸೇಲ್ ನಲ್ಲಿ ಲಭ್ಯವಾಗುತ್ತದೆ.

ಮನೀಷ್ ತಿವಾರಿ ಹೇಳಿಕೆ:

ಮನೀಷ್ ತಿವಾರಿ ಹೇಳಿಕೆ:

ಈ ಸೇಲ್ ನ ಬಗ್ಗೆ ಮಾತನಾಡಿರುವ ಅಮೇಜಾನ್ ಇಂಡಿಯಾದ ಉಪಾಧ್ಯಕ್ಷರಾಗಿರುವ ಮನೀಷ್ ತಿವಾರಿ " ಬಹಳ ನಂಬಿಕೆ ಮತ್ತು ಅತೀ ಹೆಚ್ಚು ಮಂದಿ ಭೇಟಿ ನೀಡುವ ಇಕಾಮರ್ಸ್ ಸೈಟ್ ಆಗಿ ಗುರುತಿಸಿಕೊಂಡಿರುವ ಅಮೇಜಾನ್ ತನ್ನ ಗ್ರಾಹಕರಿಗೆ ಲಕ್ಷಗಟ್ಟಲೆ ಮಾರಾಟಗಾರರಿಂದ ಉತ್ತಮ ರಿಯಾಯಿತಿ ಬೆಲೆಯಲ್ಲಿ ವಸ್ತುಗಳನ್ನು ಈ ಸೇಲ್ ನಲ್ಲಿ ನೀಡಲಾಗುತ್ತದೆ. ಸ್ಮಾರ್ಟ್ ಫೋನ್, ಎಲೆಕ್ಟ್ರಾನಿಕ್ಸ್, ಫ್ಯಾಷನ್, ಮನೆ ಮತ್ತು ಅಡುಗೆ ವಸ್ತುಗಳು, ದೊಡ್ಡ ದೊಡ್ಡ ಅಪ್ಲಯನ್ಸಸ್ ಗಳು, ದಿನಬಳಕೆ ವಸ್ತುಗಳು ಸೇರಿದಂತೆ ಹಲವು ವಿಧಧ ವಸ್ತುಗಳು ಈ ಸೇಲ್ ನಲ್ಲಿ ಭಾರೀ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ.

ನೋ ಕಾಸ್ಟ್ ಇಎಂಐ, ಡೆಬಿಟ್/ಕ್ರೆಡಿಟ್ ಕಾರ್ಡ್ ಗಳಲ್ಲಿ ರಿಯಾಯಿತಿ, ಬಜಾಜ್ ಫಿನ್ ಸರ್ವ್ ಕಾರ್ಡ್ಸ್ ನಲ್ಲಿ ರಿಯಾಯಿತಿ, ಎಕ್ಸ್ ಚೇಂಜ್ ಆಫರ್ ಗಳು, ಕ್ಯಾಷ್ ಬ್ಯಾಕ್ ಆಫರ್ ಗಳು, ಇನ್ಸೆಂಟ್ ಬ್ಯಾಂಕ್ ರಿಯಾಯತಿಗಳು ಸೇರಿದಂತೆ ಹಲವು ಲಾಭಗಳನ್ನು ಈ ಸೇಲ್ ನಲ್ಲಿ ಗ್ರಾಹಕರು ಪಡೆದುಕೊಳ್ಳಬಹುದು" ಎಂದು ತಿಳಿಸಿದ್ದಾರೆ.

Best Mobiles in India

Read more about:
English summary
Amazon Great Indian Sale starts January 20: Get discounts on Xiaomi, Apple, OnePlus phones

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X