ಟ್ವಿಟ್ಟರ್ ಹಾದಿ ಹಿಡಿದ ಅಮೆಜಾನ್‌; ಕೆಲಸ ಕಳೆದುಕೊಳ್ಳುವ ಆತಂಕದಲ್ಲಿ 10,000 ಉದ್ಯೋಗಿಗಳು!

|

ಟೆಕ್‌ ವಲಯದಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುತ್ತಿರುವ ಸಂಪ್ರದಾಯ ಹೆಚ್ಚಾಗುತ್ತಿದೆ. ಈ ಹಿಂದೆ ಟ್ವಿಟ್ಟರ್‌ ನಲ್ಲಿ ಸಾವಿರಾರು ಉದ್ಯೋಗಿಗಳನ್ನು ವಜಾ ಮಾಡಲಾಗಿತ್ತು, ಬಳಿಕ ಮೆಟಾ ಸಂಸ್ಥೆಯಲ್ಲಿಯೂ ಉದ್ಯೋಗಿಗಳನ್ನು ವಜಾ ಮಾಡುವ ಪ್ರಕ್ರಿಯೆ ಜರುಗುತ್ತಿದೆ. ಈ ಸಾಲಿಗೆ ಈಗ ಅಮೆಜಾನ್‌ ಕೂಡ ಸೇರಿಕೊಳ್ಳುತ್ತಿದೆ. ಪ್ರಮುಖ ಇ- ಕಾಮರ್ಸ್‌ ತಾಣವಾಗಿರುವ ಅಮೆಜಾನ್‌ ತನ್ನ ಉದ್ಯೋಗಿಗಳನ್ನು ವಜಾಮಾಡುವ ಗುರಿ ಹೊಂದಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಮುಂಬರುವ ದಿನಗಳಲ್ಲಿ ಬರೋಬ್ಬರಿ 10,000 ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಅಮೆಜಾನ್‌ ಎಲ್ಲಾ ರೀತಿಯ ನಿರ್ಧಾರ ತೆಗೆದುಕೊಂಡಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಇನ್ನು ವಜಾಮಾಡಲು ಮುಂದಾಗಿರುವ 10,000 ಉದ್ಯೋಗಿಗಳು ಅಮೆಜಾನ್‌ ಉದ್ಯೋಗ ವಲಯದಲ್ಲಿ ಮೂರು ಪ್ರತಿಶತವನ್ನು ಪ್ರತಿನಿಧಿಸಲಿದ್ದಾರೆ.

ಡಿವೈಸ್‌

ಈ ಪ್ರಕ್ರಿಯೆಯು ಅಮೆಜಾನ್‌ನ ಡಿವೈಸ್‌ ಸಂಸ್ಥೆಗಳ ವಿಭಾಗದ ಮೇಲೆ ಕೇಂದ್ರೀಕರಿಸಲಿದೆ ಎಂದು ಹೇಳಲಾಗಿದೆ. ಅಂದರೆ, ಈ ವಿಭಾಗದಲ್ಲಿನ ವಾಯ್ಸ್‌ ಅಸಿಸ್ಟೆಂಟ್‌, , ಅಲೆಕ್ಸಾ ಸೇರಿದಂತೆ ಇತರ ವಿಭಾಗ ಹಾಗೂ ಮಾನವ ಸಂಪನ್ಮೂಲಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಈ ಪ್ರಕ್ರಿಯೆಯಲ್ಲಿ ತಮ್ಮ ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

'ಟ್ವಿಟ್ಟರ್‌ ಫಾಲೋ ಮಾಡಿದ ಅಮೆಜಾನ್'

'ಟ್ವಿಟ್ಟರ್‌ ಫಾಲೋ ಮಾಡಿದ ಅಮೆಜಾನ್'

ಟ್ವಿಟರ್‌ನ ಬಿಲಿಯನೇರ್ ಎಲಾನ್ ಮಸ್ಕ್ ಟ್ವಿಟ್ಟರ್‌ ಉದ್ಯೋಗಿಗಳಲ್ಲಿ ಅರ್ಧದಷ್ಟು ಕಡಿಮೆಗೊಳಿದ್ದಾರೆ. ಇದಾದ ಕೆಲವೇ ವಾರಗಳ ಬಳಿಕ ಅಮೆಜಾನ್‌ ನ ಈ ವಿಷಯ ಹೊರಬಿದ್ದಿದೆ. ಇದಕ್ಕೂ ಮುನ್ನ ಮೆಟಾ ಸಹ ಈ ರೀತಿಯ ಕೆಲಸ ಮಾಡಲು ಮುಂದಾಗಿದ್ದು, ಇದರಲ್ಲಿ ತನ್ನ ಉದ್ಯೋಗಿಗಳ 13 ಪ್ರತಿಶತ ಅಥವಾ 11,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಣೆ ಮಾಡಿದೆ.

ಮೊನ್ನೆಯಷ್ಟೇ ಸಿಹಿ ಸುದ್ದಿ ನೀಡಿದ್ದ ಅಮೆಜಾನ್ ಸ್ಥಾಪಕ

ಮೊನ್ನೆಯಷ್ಟೇ ಸಿಹಿ ಸುದ್ದಿ ನೀಡಿದ್ದ ಅಮೆಜಾನ್ ಸ್ಥಾಪಕ

ಇನ್ನು ಈ ವಿಷಯ ಹೊರಬರುವ ಮುನ್ನ ಅಮೆಜಾನ್‌ನ ಸಂಸ್ಥಾಪಕ ಜೆಫ್ ಬೆಜೋಸ್ ಅವರು ಸಿಹಿ ಸುದ್ದಿಯನ್ನು ನೀಡಿದ್ದರು. ಅದೇನೆಂದರೆ ತನ್ನ ಜೀವಿತಾವಧಿಯಲ್ಲಿ $124 ಬಿಲಿಯನ್ (ಸುಮಾರು ರೂ. 10,04,100 ಕೋಟಿ) ನಿವ್ವಳ ಮೊತ್ತವನ್ನು ಚಾರಿಟಿಗೆ ನೀಡಲು ಯೋಜಿಸಿದ್ದೇನೆ ಎಂದು ಹೇಳುವ ಮೂಲಕ ಜಗತ್ತಿನಾದ್ಯಂತ ಸುದ್ದಿಯಾಗಿದ್ದರು. ಆದರೆ, ಈ ವಿಷಯ ಮಾಸುವ ಮುನ್ನವೇ ಈಗ ಉದ್ಯೋಗಿಗಳಿಗೆ ಕಹಿ ವಿಷಯ ನೀಡಲು ಮುಂದಾಗಿದ್ದಾರೆ.

ನೇಮಕಾತಿ ಪ್ರಕ್ರಿಯೆ ಸ್ಥಗಿತ

ನೇಮಕಾತಿ ಪ್ರಕ್ರಿಯೆ ಸ್ಥಗಿತ

ಅಮೆಜಾನ್ ಸೆಪ್ಟೆಂಬರ್‌ನಲ್ಲಿ ಹಲವಾರು ಸಣ್ಣ ವಿಭಾಗಗಲ್ಲಿ ತನ್ನ ನೇಮಕವನ್ನು ಸ್ಥಗಿತಗೊಳಿಸಿತ್ತು. ಹಾಗೆಯೇ ಅಕ್ಟೋಬರ್‌ನಲ್ಲಿ ತನ್ನ ಪ್ರಮುಖ ಚಿಲ್ಲರೆ ವ್ಯಾಪಾರದಲ್ಲಿ 10,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಸಹ ತಡೆಹಿಡಿದಿತ್ತು. ಇದರ ಜೊತೆಗೆ ಮುಂದಿನ ಕೆಲವು ತಿಂಗಳುಗಳವರೆಗೆ ಕ್ಲೌಡ್ ಕಂಪ್ಯೂಟಿಂಗ್ ವಿಭಾಗ ಸೇರಿದಂತೆ ಕಂಪೆನಿಯಾದ್ಯಂತ ಕಾರ್ಪೊರೇಟ್ ನೇಮಕಾತಿಯನ್ನು ಸ್ಥಗಿತಗೊಳಿಸಿತ್ತು.

ಕೊರೊನಾ ಸಂದರ್ಭದಲ್ಲಿ ದಾಖಲೆ ಮಟ್ಟದ ಲಾಭ

ಕೊರೊನಾ ಸಂದರ್ಭದಲ್ಲಿ ದಾಖಲೆ ಮಟ್ಟದ ಲಾಭ

ಕೊರೊನಾ ಸಂದರ್ಭದಲ್ಲಿ ಅಮೆಜಾನ್‌ ದಾಖಲೆ ಮಟ್ಟದಲ್ಲಿ ಲಾಭ ಗಳಿಸಿಕೊಂಡಿತ್ತು. ಇದಾದ ಬಳಿಕ ನಿಧಾನವಾಗಿ ಲಾಭದಾಯಕ ಪ್ರಕ್ರಿಯೆ ಇಳಿಯತೊಡಗಿದೆ. ಅದರಲ್ಲೂ ಸಾಂಕ್ರಾಮಿಕ ಸಮಯದಲ್ಲಿ ಅಮೆಜಾನ್‌ನ ಕ್ಲೌಡ್ ಕಂಪ್ಯೂಟಿಂಗ್ ಸಂಬಂಧ ಗ್ರಾಹಕರು ಹೆಚ್ಚಾಗುವುದರ ಜೊತೆಗೆ ಕಂಪೆನಿಗಳಿಗೆ ಸೇರಿಕೊಂಡ ಉದ್ಯೋಗಿಗಳು ಸಹ ಹೆಚ್ಚಾಗಿದ್ದರು. ನಂತರ ಅಮೆಜಾನ್ ಎರಡು ವರ್ಷಗಳಲ್ಲಿ ತನ್ನ ಉದ್ಯೋಗಿಗಳನ್ನು ದ್ವಿಗುಣಗೊಳಿಸಿತ್ತು. ಹಾಗೆಯೇ ಇದನ್ನು ವಿಸ್ತರಿಸಲು ಪ್ಲ್ಯಾನ್‌ ಕೂಡ ಮಾಡಿತ್ತು.

ಹೂಡಿಕೆ

ಅಮೆಜಾನ್‌ ಅತಿಯಾದ ಹೂಡಿಕೆ ಮತ್ತು ವೇಗವಾಗಿ ವಿಸ್ತರಿಸುವ ನಿರ್ಧಾರಗಳಿಂದ ಹೆಚ್ಚಿನ ವೆಚ್ಚದ ಸಮಸ್ಯೆ ಎದುರಿಸುವಂತಾಗಿದೆ. ಈ ಎಲ್ಲಾ ಕಾರಣಕ್ಕೆ ಅಮೆಜಾನ್ ತನ್ನ ವಿಸ್ತರಣಾ ಯೋಜನೆಗಳನ್ನು ಹಿಂತೆಗೆದುಕೊಂಡಿದ್ದು, ಈ ಬಗ್ಗೆ ಹೂಡಿಕೆದಾರರಿಗೆ ಮಾಹಿತಿ ನೀಡಿದೆ. ಜೊತೆಗೆ ಗ್ರಾಹಕರೊಂದಿಗೆ ಅನಿಶ್ಚಿತತೆಯನ್ನು ಎದುರು ನೋಡುತ್ತಿದೆ.

ವಾಯ್ಸ್‌ ಅಸಿಸ್ಟೆಂಟ್‌

ಈ ಹಿಂದೆ ಮುಂಚೂಣಿಯಲ್ಲಿರುವ ವಾಯ್ಸ್‌ ಅಸಿಸ್ಟೆಂಟ್‌ ಸೇವೆಯನ್ನು ಅಮೆಜಾನ್‌ ಹೆಚ್ಚಾಗಿ ನೀಡಲು ರಾಕೆಟ್‌ ವೇಗವನ್ನು ಪಡೆದಕೊಂಡಿತ್ತು. ಈ ವಾಯ್ಸ್‌ ಅಸಿಸ್ಟೆಂಟ್‌ ಸೇವೆ ಮುಂದಿನ ಅಗತ್ಯ ಗ್ರಾಹಕ ಇಂಟರ್ಫೇಸ್ ಆಗಿ ಮೊಬೈಲ್ ಫೋನ್‌ಗಳಲ್ಲಿ ಯಶಸ್ವಿಯಾಗಬಹುದೆಂದು ಭಾವಿಸಲಾಗಿತ್ತು. ಹಾಗೆಯೇ 2017 ರಿಂದ 2018 ರವರೆಗೆ ತನ್ನ ಅಲೆಕ್ಸಾ ಮತ್ತು ಎಕೋ ಡಿವೈಸ್‌ ವಿಭಾಗಕ್ಕೆ 10,000 ಎಂಜಿನಿಯರ್‌ಗಳಿಗೆ ದ್ವಿಗುಣಗೊಳಿಸಿತ್ತು.

Best Mobiles in India

English summary
Layoffs culture are a growing trend in the tech sector. Amazon Plans to Lay Off 10,000 Employees Days After Twitter Trimmed Jobs.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X