ಚೀನಾದಲ್ಲಿ ಅಂಗಡಿ ಮುಚ್ಚಿದ ಅಮೇಜಾನ್: ಭಾರತವೇ ಈಗ ದೊಡ್ಡ ಮಾರುಕಟ್ಟೆ!

By Gizbot Bureau
|

ಅಮೇಜಾನ್ ಇದೀಗ ಚೀನಾದಲ್ಲಿ ತನ್ನ ಆನ್ ಲೈನ್ ಶಾಪಿಂಗ್ ಮಾರುಕಟ್ಟೆಯನ್ನು ಸ್ಥಗಿತಗೊಳಿಸುತ್ತಿದೆ. ಅಮೇಜಾನ್.ಸಿಎನ್ ಅನ್ನು ಸ್ಥಗಿತಗೊಳಿಸುವ ಬಗ್ಗೆ ಈಗಾಗಲೇ ಅಮೇಜಾನ್ ಪ್ರಕಟಪಡಿಸಿದೆ.ಆಂದರೆ ಅಮೇಜಾನ್ ವೆಬ್ ಸರ್ವೀಸ್ ಮತ್ತು, ಕಿಂಡಲ್ ಡಿವೈಸ್ಗಳು ಮತ್ತು ಅಮೇಜಾನ್ ಗ್ಲೋಬಲ್ ಸ್ಟೋರ್ ನ ವಸ್ತುಗಳನ್ನು ಚೀನಾದಲ್ಲಿ ಮಾರುವುದನ್ನು ಮುಂದುವರಿಸಲಿದೆ. ಹಾಗಾದ್ರೆ ಅಮೇಜಾನಿನ ಚೀನಾ ಬೆಳವಣಿಗೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವ ಕೆಲವು ಅಂಶಗಳು ಮತ್ತು ಇದು ಭಾರತಕ್ಕೆ ಯಾವ ಸಂದೇಶ ನೀಡುತ್ತದೆ ಎಂಬ ಕುರಿತ ಕೆಲವು ಮಾಹಿತಿಗಳನ್ನು ನಾವಿಲ್ಲಿ ನಿಮಗೆ ವಿವರಿಸುತ್ತಿದ್ದೇವೆ.

ಜುಲೈ 18 ರಿಂದ ಅಮೇಜಾನ್.ಸಿಎನ್ ಕಾರ್ಯ ನಿರ್ವಹಣೆ ಸ್ಥಗಿತ

ಜುಲೈ 18 ರಿಂದ ಅಮೇಜಾನ್.ಸಿಎನ್ ಕಾರ್ಯ ನಿರ್ವಹಣೆ ಸ್ಥಗಿತ

ಅಮೇಜಾನ್ ಚೀನಾವನ್ನು ಭಾಗಶಃ ತೊರೆಯುತ್ತಿದೆ. ಕಂಪೆನಿಯು ಈಗಾಗಲೇ ಚೀನಾದಲ್ಲಿರುವ ತನ್ನ ಮಾರಾಟಗಾರರಿಗೆ ಈ ವಿಚಾರವನ್ನು ತಿಳಿಸಿದೆ ಮತ್ತು ಇನ್ನು ಮುಂದೆ ಮಾರಾಟದ ಸೇವೆಯನ್ನು ನೀಡಲಾಗುವುದಿಲ್ಲ ಎಂಬುದನ್ನು ಹೇಳಿದೆ. ಚೀನಾದ ಅಮೇಜಾನ್ ವೆಬ್ ಸೈಟ್ ನಲ್ಲಿ ಅಮೇಜಾನ್.ಸಿಎನ್ ಜುಲೈ 118 ರಿಂದ ಕಾರ್ಯ ನಿರ್ವಹಿಸುವುದಿಲ್ಲ ಎಂಬುದನ್ನು ಪ್ರಕಟಿಸಿದೆ.

ಚೀನಾದಲ್ಲಿ ಕಾರ್ಯನಿರ್ವಹಿಸಲು ನಿಲ್ಲಿಸಿದ ಮೊದಲ ಯುಎಸ್ ಕಂಪೆನಿ ಅಮೇಜಾನ್ ಅಲ್ಲ, ವಾಲ್ ಮಾರ್ಟ್ ಮತ್ತು ಇಬೇಗಳು ಕೂಡ ತಮ್ಮ ಬ್ಯುಸಿನೆಸ್ ನ್ನು ಚೀನಾದಲ್ಲಿ ನಿಲ್ಲಿಸಿವೆ

ಚೀನಾದಲ್ಲಿ ಅಮೇರಿಕಾದ ರಿಟೇಲ್ ಕಂಪೆನಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಹೈಲೆಟ್ ಮಾಡಿದೆ - ವಾಲ್ ಮಾರ್ಟ್ ಕೂಡ ಇದೇ ರೀತಿಯ ಸಮಸ್ಯೆಯನ್ನು ಎದುರಿಸಿದೆ. 2006 ರಲ್ಲಿ ಇಬೇ ಕೂಡ ಚೀನಾವನ್ನು ತೊರೆದಿದೆ ಮತ್ತು 2016 ರಲ್ಲಿ ವಾಲ್ ಮಾರ್ಟ್ ಚೀನಾದಿಂದ ಹೊರಬಂದಿದೆ.

ಅಮೇಜಾನ್ ಮಾರ್ಕೆಟ್ ಶೇರ್ 1% ಕ್ಕಿಂತ ಇಳಿಕೆ

ಅಮೇಜಾನ್ ಮಾರ್ಕೆಟ್ ಶೇರ್ 1% ಕ್ಕಿಂತ ಇಳಿಕೆ

ಗ್ರಾಹಕರ ಸಂಶೋಧನಾ ಸಂಸ್ಥೆ ಆಗಿರುವ ಐರೀಸರ್ಚ್ ಗ್ಲೋಬಲ್ ಹೇಳುವ ಪ್ರಕಾರ ಚೀನಾದಲ್ಲಿ ಅಮೇಜಾನ್ ಇ-ಕಾಮರ್ಸ್ ಶೇರ್ 1% ಕ್ಕಿಂತ ಇಳಿಕೆಯಾಗಿದೆ. ಅಲಿಬಾಬಾರ ಟಿಮಾಲ್ ಮಾರ್ಕೆಟ್ ಪ್ಲೇಸ್ ಮತ್ತು ಜೆಡಿ.ಕಾಮ್ ಗಳು ಚೀನಾ ಇ-ಕಾಮರ್ಸ್ ಮಾರುಕಟ್ಟೆಯ 82% ಪಾಲನ್ನು ಹೊಂದಿದೆ.

ಸ್ಥಳೀಯ ಪ್ಲೇಯರ್ ಜೊತೆಗೆ ಸ್ಪರ್ಧಿಸುವುದಕ್ಕೆ ಅಮೇಜಾನ್ ಗೆ ಕಷ್ಟ

2004 ರಲ್ಲಿ ಅಮೇಜಾನ್ ಚೀನಾ ಮಾರುಕಟ್ಟೆಯನ್ನು ಪ್ರವೇಶಿಸಿತು. ಆದರೆ ಸ್ಥಳೀಯ ಸಂಸ್ಥೆಗಳ ಜೊತೆಗೆ ಅಮೇಜಾನ್ ಸ್ಪರ್ಧೆ ನಡೆಸುವುದಕ್ಕೆ ಬಹಳ ಕಷ್ಟಪಡಬೇಕಾಯಿತು. ಕಡಿಮೆ ಬೆಲೆಯ ವಸ್ತುಗಳಿಗೂ ಕೂಡ ಉಚಿತ ಶಿಪ್ಪಿಂಗ್ ವ್ಯವಸ್ಥೆಯನ್ನು ಸ್ಥಳೀಯ ಸಂಸ್ಥೆಗಳು ಒದಗಿಸುತ್ತಿದ್ದವು.ಅಮೇಜಾನ್ ನಲ್ಲಿ ಉಚಿತ ಶಿಪ್ಪಿಂಗ್ ಗಾಗಿ ಖರೀದಿಯ ನಿರ್ಧಿಷ್ಟ ಮೊತ್ತವನ್ನು ಗ್ರಾಹಕ ತಲುಪುವ ಅಗತ್ಯವಿರುತ್ತು.

ಚೀನಾದಿಂದ ಹೊರಬಂದಿರುವ ಅಮೇಜಾನ್ ಗೆ ಏಷ್ಯಾದಲ್ಲಿ ಭಾರತ ಮಾತ್ರವೇ ಅತೀ ದೊಡ್ಡ ಮಾರುಕಟ್ಟೆ

ಚೀನಾದಿಂದ ಹೊರಬಂದಿರುವ ಅಮೇಜಾನ್ ಗೆ ಏಷ್ಯಾದಲ್ಲಿ ಭಾರತ ಮಾತ್ರವೇ ಅತೀ ದೊಡ್ಡ ಮಾರುಕಟ್ಟೆ

ಭಾರತವನ್ನು ಹೊರತುಪಡಿಸಿ ಚೀನಾ ಸೇರಿದಂತೆ ಅಮೇಜಾನ್ ಏಷ್ಯಾದ ಎಲ್ಲಾ ಭಾಗದಲ್ಲೂ ಕೂಡ ತನ್ನ ವ್ಯವಹಾರವನ್ನು ನಿಲ್ಲಿಸಿದೆ. ಆಗ್ನೇಯ ಏಷ್ಯಾದಲ್ಲಿ ಅಲಿಬಾಬಾ ಸೇರಿದಂತೆ ಪ್ರಮುಖ ಇ-ಕಾಮರ್ಸ್ ಸೈಟ್ ಗಳು 46% ಶೇರ್ ನ್ನು ಹೊಂದಿದೆ.ಆದರೆ ಅಮೇಜಾನ್ ತನ್ನ ಮಾರಾಟವನ್ನು ಇಲ್ಲಿ ವೃದ್ಧಿಸಿಕೊಳ್ಳುತ್ತಿದೆ. ಚೀನಾದಿಂದ ಅಮೇಜಾನ್ ಹೊರಬರುತ್ತಿರುವುದರಿಂದಾಗಿ ಭಾರತದಲ್ಲಿ ಅಮೇಜಾನ್ ತನ್ನ ವ್ಯವಹಾರಕ್ಕೆ ಹೆಚ್ಚು ಒತ್ತು ನೀಡುವ ಸಾಧ್ಯತೆ ಇದೆ.

ಯುಎಸ್ ನಿಂದ ಹೊರಗಡೆ ಭಾರತ ಮಾತ್ರವೇ ಅಮೇಜಾನ್ ಗೆ ಅತೀ ದೊಡ್ಡ ಮಾರುಕಟ್ಟೆ

ಎಫ್ ಡಿಐ ನಿಯಮಗಳು

ಎಫ್ ಡಿಐ ನಿಯಮಗಳು

ಐರೀಚರ್ಸ್ ರಿಪೋರ್ಟ್ ನ ಪ್ರಕಾರ ಅಮೇಜಾನ್ ಇಂಡಿಯಾದ ಮಾರಾಟದ ಒಟ್ಟಾರೆ ವ್ಯವಹಾರವು 2018 ರಲ್ಲಿ ಫ್ಲಿಪ್ ಕಾರ್ಟ್ ಗಿಂತಲೂ ಅಧಿಕವಾಗಿದೆ.

ಹೊಸ ಎಫ್ ಡಿಐ ನಿಯಮಗಳು ಭಾರತದಲ್ಲಿ ಫ್ಲಿಪ್ ಕಾರ್ಟ್ ಮತ್ತು ಅಮೇಜಾನ್ ಗೆ ಕಠಿಣವಾಗಿದೆ.

ಹೊಸ ಎಫ್ ಡಿಐ ನಿಯಮಾವಳಿಗಳು ವಿದೇಶಿ ಸಂಸ್ಥೆಗಳಿಗೆ ಭಾರತದಲ್ಲಿ ಕಠಿಣವಾಗುತ್ತಿದೆ. ಅಮೇಜಾನ್, ಫ್ಲಿಪ್ ಕಾರ್ಟ್ ಸೇರಿದಂತೆ ಎಲ್ಲಾ ವಿದೇಶಿ ಕಂಪೆನಿಗಳು ಭಾರತೀಯ ನಿಯಮಾವಳಿಗಳನ್ನು ಅನುಸರಿಸುವುದು ಕಷ್ಟವಾಗುತ್ತಿದೆ.ಮುಖೇಶ್ ಅಂಬಾನಿಯ ರಿಲಯನ್ಸ್ ಜಿಯೋ ಸಂಸ್ಥೆ ಇವರಿಗೆ ಕಠಿಣ ಸವಾಲನ್ನು ನೀಡುತ್ತಿದೆ.

Best Mobiles in India

Read more about:
English summary
Amazon 'shuts' shop in China: What it means for India and more

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X