ಆಂಡ್ರಾಯ್ಡ್‌ 13 ನಲ್ಲಿ ಆಕರ್ಷಕ ಫೀಚರ್ಸ್: ಪ್ರತಿ ಆಪ್‌ಗೂ ಬೇಕಾದ ಭಾಷೆ ಬದಲಾಯಿಸಿ!

|

ಗೂಗಲ್‌ ತನ್ನ ಸ್ಮಾರ್ಟ್‌ಫೋನ್‌ಗಳಲ್ಲಿ ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸುವುದರ ಜೊತೆಗೆ ಟೆಕ್‌ ವಲಯದಲ್ಲಿ ಭಾರೀ ಜನಮನ್ನಣೆ ಗಳಿಸಿಕೊಂಡಿದೆ. ಇದರ ಜತೆಗೆ ಈಗ ವಿಶೇಷ ಫೀಚರ್ಸ್ ಒಂದನ್ನು ಪರಿಚಯಿಸಿದ್ದು, ಈ ಫೀಚರ್ಸ್‌ ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಗ್ರಾಹಕರಿಗೆ ವಿಶೇಷ ಆಸಕ್ತಿಯನ್ನು ಹುಟ್ಟುಹಾಕುವಂತೆ ಮಾಡಿದೆ. ಅದುವೇ ಆಪ್‌ಗಳಿಗೆ ಬಹುಭಾಷೆ ಹೊಂದಿಸುವ ಫೀಚರ್ಸ್‌.

ಗೂಗಲ್‌

ಹೌದು, ಗೂಗಲ್‌ ತನ್ನ ಫೀಚರ್ಸ್‌ಗಳನ್ನು ಅಪ್‌ಗ್ರೇಡ್‌ ಮಾಡುವ ಕೆಲಸ ಮುಂದುವರೆಸುತ್ತಲೇ ಬರುತ್ತಿದೆ. ಈಗ ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್‌ ನಲ್ಲಿ ಭಾಷೆಯ ಫೀಚರ್ಸ್‌ ಅನ್ನು ಸೇರಿಸಿದ್ದು, ಟೆಕ್‌ ವಲಯದಲ್ಲಿ ಹೆಚ್ಚು ಟಾಕ್‌ ಆಗುವ ಮ್ಯಾಟರ್‌ ಆಗಿದೆ. ಇದೆಲ್ಲಕ್ಕಿಂತಲೂ ಮಿಗಿಲಾಗಿ ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸುವ ಸ್ಮಾರ್ಟ್‌ಫೋನ್‌ಗಳ ಪ್ರತಿ ಪ್ರತಿ ಅಪ್ಲಿಕೇಶನ್ ಭಾಷೆಯ ಬದಲಾವಣೆ ಸಾಫ್ಟ್‌ವೇರ್‌ ವಲಯದಲ್ಲಿ ಗೇಮ್ ಚೇಂಜರ್ ಎಂದೇ ಹೇಳಬಹುದು.

ಸ್ಮಾರ್ಟ್‌ಫೋನ್‌

ಇಂದಿಗೂ ಸಹ ಸ್ಮಾರ್ಟ್‌ಫೋನ್‌ನಲ್ಲಿ ಭಾಷೆಯ ಬದಲಾವಣೆ ಆಯ್ಕೆ ಇದೆಯಾದರೂ ಪ್ರಮುಖವಾಗಿ ನಿಮಗೆ ಇಷ್ಟವಾದ ಆಪ್‌ ಮಾತ್ರ ಬೇಕಾದ ಭಾಷೆಗೆ ಬದಲಾಗುತ್ತಿರಲಿಲ್ಲ. ಈ ಕಾರಣಕ್ಕೆ ಗೂಗಲ್‌ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದ್ದು, ಇದರಲ್ಲಿ ನಿಮಗೆ ಯಾವ ಆಪ್‌ ಯಾವ ಭಾಷೆಯಲ್ಲಿ ತೆರೆದುಕೊಳ್ಳಬೇಕು ಎಂಬ ನಿರ್ಧಾರವನ್ನು ನೀವೇ ಮಾಡಬಹುದಾಗಿದೆ. ಆದರೆ, ಈ ಸೌಲಭ್ಯ ಆಂಡ್ರಾಯ್ಡ್ 13 ಡಿವೈಸ್‌ಗಳಲ್ಲಿ ಮಾತ್ರ.

ಪ್ರಿ-ಆಪ್ ಅಪ್ಲಿಕೇಶನ್ ಎಂದರೇನು?

ಪ್ರಿ-ಆಪ್ ಅಪ್ಲಿಕೇಶನ್ ಎಂದರೇನು?

ಪ್ರಿ-ಆಪ್ ಅಪ್ಲಿಕೇಶನ್ ಎಂದರೆ, ನಿಮ್ಮ ಫೋನ್‌ನಲ್ಲಿರುವ ಪ್ರತಿಯೊಂದು ಅಪ್ಲಿಕೇಶನ್‌ಗೆ ಭಾಷೆಯ ಆದ್ಯತೆಯನ್ನು ಇದು ನೀಡುತ್ತದೆ. ಬದಲಾಗಿ ಇಡೀ ಡಿವೈಸ್‌ ಭಾಷೆ ಬದಲಾಗುವುದಿಲ್ಲ. ಹೀಗಾಗಿ ಬೇಕಾದ ಆಪ್‌ಗೆ ಬೇಕಾದ ಭಾಷೆಯನ್ನು ಸೆಟ್‌ ಮಾಡಿಕೊಳ್ಳಬಹುದಾಗಿದೆ.

ಇಂಗ್ಲಿಷ್‌

ಈ ಫೀಚರ್ಸ್‌ ಬಹುಭಾಷೆ ತಿಳಿದವರಿಗೆ ಸದುಪಯೋಗ ಆಗಲಿದೆ. ಅಥವಾ ಬೇರೆ ಭಾಷೆಯ ಕಲಿಯಬೇಕು ಎಂದುಕೊಂಡವರಿಗೂ ಸಹಕಾರಿಯಾಗಲಿದೆ. ಉದಾಹರಣೆಗೆ ನಿಮಗೆ ಇಂಗ್ಲಿಷ್‌ ಅಥವಾ ಕನ್ನಡ ಎರಡೂ ಭಾಷೆ ಬರುತ್ತದೆ ಎಂದರೆ ನೀವು ಕೆಲವು ಆಪ್‌ಗಳನ್ನು ಇಂಗ್ಲಿಷ್‌ನಲ್ಲೂ ಇನ್ನೂ ಕೆಲವು ಆಪ್‌ಗಳನ್ನು ಕನ್ನಡದಲ್ಲೂ ಬಳಕೆ ಮಾಡಬಹುದು. ಇಂಗ್ಲಿಷ್‌ ಆಪ್‌ನಲ್ಲಿ ಏನಾದರೂ ನಿಮಗೆ ಅರ್ಥವಾಗದ ವಿಷಯ ಇದ್ದರೆ ಅದನ್ನು ಕನ್ನಡಕ್ಕೆ ಬದಲಾಯಿಸಿಕೊಂಡು ಬಳಕೆ ಮಾಡಬಹುದಾಗಿದೆ.

ಹೊಸ ಭಾಷೆ

ಮೊದಲೇ ತಿಳಿಸಿದಂತೆ ನೀವು ಹೊಸ ಭಾಷೆಯನ್ನು ಕಲಿಯುತ್ತಿದ್ದರೆ, ಯಾವ ಭಾಷೆಯನ್ನು ಕಲಿಯಬೇಕೋ ಆ ಭಾಷೆಯನ್ನು ಕೆಲವು ಆಪ್‌ಗಳಿಗೆ ಅನ್ವಯಿಸಿ. ಆಗ ಆದ್ಯತೆಯ ಪದಕೋಶದೊಂದಿಗೆ ನಿಮ್ಮನ್ನು ಆ ಆಪ್‌ನಲ್ಲಿ ತೊಡಗುವಂತೆ ಮಾಡಲಾಗುತ್ತದೆ.

ಈ ಫೀಚರ್ಸ್‌ ಬಳಕೆ ಹೇಗೆ ಹೇಗೆ?

ಈ ಫೀಚರ್ಸ್‌ ಬಳಕೆ ಹೇಗೆ ಹೇಗೆ?

ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಮೊದಲು ಇತ್ತೀಚಿನ ಆಂಡ್ರಾಯ್ಡ್ 13 ಸಾಫ್ಟ್‌ವೇರ್‌ಗೆ ಅಪ್‌ಗ್ರೇಡ್ ಮಾಡುವುದು ಅನಿವಾರ್ಯ. ಇದಾದ ನಂತರ ಕೆಲವು ಮಾರ್ಗಗಳನ್ನು ಈ ಕೆಳಗೆ ನೀಡಲಾಗಿದೆ. ಇಲ್ಲಿ ನೀಡಲಾದ ಹಂತಗಳ ಪ್ರಕಾರ ನಿಮ್ಮ ಇಷ್ಟವಾದ ಭಾಷೆಯಲ್ಲಿ ಆಪ್‌ಗಳಿಗೆ ಸೆಟ್ ಮಾಡಿ.

  • * ನಿಮ್ಮ ಸ್ಮಾರ್ಟ್‌ಫೋನ್ ಅಪ್‌ಗ್ರೇಡ್‌ ಆದ ನಂತರ ಸೆಟ್ಟಿಂಗ್‌ ಮೆನು ತೆರೆಯಿರಿ
  • * ಇದಾದ ನಂತರ ಸ್ಕ್ರಾಲ್ ಮಾಡಿದರೆ ಅಲ್ಲಿ 'ಸಿಸ್ಟಮ್ ಆಯ್ಕೆ' ಎಂದು ಕಾಣುತ್ತದೆ ಅದರ ಮೇಲೆ ಟ್ಯಾಪ್‌ ಮಾಡಿ.
  • * ಬಳಿಕ, 'ಭಾಷೆಗಳು ಮತ್ತು ಇನ್‌ಪುಟ್ ಆಯ್ಕೆ'ಯನ್ನು ಟ್ಯಾಪ್ ಮಾಡಿ.
  • * ನಂತರದಲ್ಲಿ ಅಲ್ಲಿ ತೋರಿಸುವ 'ಅಪ್ಲಿಕೇಶನ್ ಭಾಷೆ'ಗಳನ್ನು ಆಯ್ಕೆಮಾಡಿ.
  • * ನಂತರ ಯಾವ ಆಪ್‌ಗೆ ಭಾಷೆಯನ್ನು ಸೆಟ್‌ ಮಾಡಬೇಕೋ ಆ ಆಪ್‌ಗಳನ್ನು ಪರಿಶೀಲಿಸಿಕೊಳ್ಳಿ.
  • * ಪರಿಶೀಲನೆ ನಡೆಸಿದ ನಂತರ 'ಅಪ್ಲಿಕೇಶನ್' ಅನ್ನು ಟ್ಯಾಪ್ ಮಾಡಿ ಹೊಸ ಭಾಷೆಯನ್ನು 'ಸೆಲೆಕ್ಟ್'‌ ಮಾಡಿ.
  • ತಕ್ಷಣಕ್ಕೆ ಬದಲಾಗುವುದಿಲ್ಲ

    ಈ ಹಂತಗಳನ್ನು ಮುಗಿಸಿದ ನಂತರ ಕೆಲವು ಭಾಷೆಗಳು ತಕ್ಷಣಕ್ಕೆ ಬದಲಾಗುವುದಿಲ್ಲ. ಪರಿಣಾಮ ನೀವು ಯಾವುದೇ ಗೊಂದಲಕ್ಕೆ ಒಳಗಾಗದೆ ಸ್ವಲ್ಪ ಸಮಯ ಕಾಯಿರಿಅ ಥವಾ ಸ್ಮಾರ್ಟ್‌ಫೋನ್‌ ರಿ ಸ್ಟಾರ್ಟ್ ಮಾಡಿ. ಬಳಿಕ ನಿಮ್ಮ ಆಪ್‌ನ ಭಾಷೆ ಖಂಡಿತಾ ಬದಲಾಗಿರುತ್ತದೆ.

    ಫೀಚರ್ಸ್‌

    ಇನ್ನು ಈ ಫೀಚರ್ಸ್‌ಗೆ ಟೆಕ್‌ ವಲಯದಲ್ಲಿ ಹೆಚ್ಚಿನ ಬೇಡಿಕೆ ನಿರ್ಮಾಣ ಆಗಿದೆ. ಇದು‌ ಆರಂಭಿಕ ಹಂತದಲ್ಲಿರುವುದರಿಂದ ಕೆಲವು ಆಪ್‌ಗಳಿಗೆ ಸರಿಯಾಗಿ ಸಪೋರ್ಟ್‌ ಮಾಡುವುದಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯ ಆಪ್‌ಗಳಲ್ಲೂ ಈ ಸೇವೆ ಲಭ್ಯವಾಗುತ್ತದೆ ಎನ್ನಲಾಗಿದೆ. ಗೂಗಲ್‌ ಸಹ ಈ ಫೀಚರ್ಸ್‌ ಅಭಿವೃದ್ಧಿ ಬಗ್ಗೆ ಹೆಚ್ಚಿನ ಗಮನ ಹರಿಸಿದೆ.

Best Mobiles in India

English summary
Google has already introduced attractive features in its smartphones. Now Per-App Language features have been introduced in Android 13.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X