ಆಂಡ್ರಾಯ್ಡ್‌ P ಬಂದ್ರೆ ಬೇರೆ ಆಪ್‌ಗಳಿಗೆ ಕಂಟಕ..!

By Prateeksha Hosapattankar
|

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಮಿಲಿಯನ್ ಗಟ್ಟಲೆ ಅಪ್ಲಿಕೇಷನ್ ಗಳಿವೆ. ಇದರಲ್ಲಿ ಬಹಳಷ್ಟು ಬಿಡುಗಡೆಯ ನಂತರ ಯಾವುದೇ ಅಪಡೇಟ್ ಪಡೆದಿಲ್ಲಾ, ಹಾಗೆಯೇ ಇನ್ನೂ ಕೆಲವು ಹಲವು ವರ್ಷಗಳಿಂದ ಪಡೆದಿರಲಿಕ್ಕಿಲ್ಲಾ. ಬಹುಶಃ ಕೆಲ ಆಪ್ ಗಳು ಅಪಡೇಟ್ ಇಲ್ಲದೆ ಕೆಲಸ ಮಾಡಲು ಶಕ್ಯವಿರಬಹುದು. ಆಂಡ್ರಾಯ್ಡ್ ಪಿ ಅಪಡೇಟ್ ಈ ಎಲ್ಲಾ ಪರಿಸ್ಥಿತಿಗಳನ್ನು ಬದಲಾಯಿಸಬಹುದೆಂಬ ನಂಬಿಕೆಯಿದೆ.

ಆಂಡ್ರಾಯ್ಡ್‌ P ಬಂದ್ರೆ ಬೇರೆ ಆಪ್‌ಗಳಿಗೆ ಕಂಟಕ..!


ಆಂಡ್ರಾಯ್ಡ್ ಪೋಲಿಸ್ ವರದಿ ಪ್ರಕಾರ, ನಂಬಿರುವ ಹಾಗೆ ಆಂಡ್ರಾಯ್ಡ್ ಪಿ ನಲ್ಲಿ ಒಂದು ಫೀಚರ್ ಇರಲಿದೆ ಇದರಿಂದ ಆಂಡ್ರಾಯ್ಡ್ 4.1 ಜೆಲ್ಲಿಬೀನ್ ಒಎಸ್ ಅಥವಾ ಅದಕ್ಕಿಂತ ಕೆಳಗಿನ ವರ್ಷನ್ ನಲ್ಲಿ ಕೆಲಸ ಮಾಡುತ್ತಿರುವ ಅಪ್ಲಿಕೇಷನ್ ಗಳನ್ನು ಗೂಗಲ್ ಬ್ಲಾಕ್ ಮಾಡಲು ಅವಕಾಶವಿದೆ. ಕಾಣುವ ಹಾಗೆ ಆಂಡ್ರಾಯ್ಡ್ ಪಿ ಹೊಂದಿರುವ ಸ್ಮಾರ್ಟ್‍ಫೋನುಗಳು ಹಳೆಯ ಆಪ್ ಗಳನ್ನು ಸಹಕರಿಸಲಿಕ್ಕಿಲ್ಲಾ. ನಿಮ್ಮ ಬಳಿ ಹಳೆಯ ಆಪ್ ಗಳಿದ್ದಲ್ಲಿ ನಿಮ್ಮ ಡಿವೈಜ್ ಅನ್ನು ಆಂಡ್ರಾಯ್ಡ್ ಪಿ ಗೆ ಅಪಗ್ರೇಡ್ ಮಾಡುವ ಮೊದಲು ಯೋಚಿಸಿ.

ಇಲ್ಲಿವರೆಗೆ ಸ್ಪಷ್ಟವಾಗಿ ತಿಳಿದು ಬಂದಿಲ್ಲಾ ಆಂಡ್ರಾಯ್ಡ್ ಪಿ ಯಾಕಾಗಿ ಹಳೆ ಆಪ್ಸ್ ಗಳನ್ನು ಬ್ಲಾಕ್ ಮಾಡಲಿದೆಯೆಂದು. ಅಂದಾಜಿನ ಪ್ರಕಾರ ಸುರಕ್ಷತೆಗೆ ಸಂಬಂಧಪಟ್ಟಂತ ಅಪಾಯಗಳನ್ನು ಕಡಿಮೆಗೊಳಿಸಲು ಈ ನಿರ್ಧಾರ ತೆಗೆದುಕೊಂಡಿರಬಹುದು. ಬಹಳಷ್ಟು ಆಪ್‍ಗಳು ಸುರಕ್ಷತೆಗೆ ಧಕ್ಕೆ ತರವಂತಹುಗಳಾಗಿವೆ. ಅಂತಹುಗಳು ಈ ಅಪಡೇಟ್ ನಂತರ ಇಲ್ಲವಾಗಲಿದೆ.

ಮತ್ತೊಂದು ಕಾರಣವೆಂದರೆ ಹಳೆ ಆಪ್‍ಗಳು ಫುಲ್ ಸ್ಕ್ರೀನ್ ಡಿಸೈಸ್, 18:9 ಡಿಸ್ಪ್ಲೇಸ್ ಮತ್ತು ಇತರ ಫೀಚರ್ ಗಳನ್ನು ಹೊಂದಿರುವ ಹೊಸ ಸ್ಮಾರ್ಟ್‍ಫೋನುಗಳ ಜೊತೆ ಹೊಂದಾಣಿಕೆ ಆಗಲಿಕ್ಕಿಲ್ಲಾ. ಅದೇನೆ ಇರಲಿ ನಾವು ಗೂಗಲ್ ನ ಅಧಿಕೃತ ಧೃಢಿಕರಣಕ್ಕಾಗಿ ಕಾಯಬೇಕಾಗಿದೆ.

Xiaomi Mi TV 4A ಹೇಗಿದೆ?..ಖರೀದಿಸಲು ಬೆಸ್ಟ್ ಟಿವಿ ಇದೇನಾ?

ಈ ವಿಡಿಯೋ ನೋಡಿದರೆ ಇನ್ನೆಂದು ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ತೆಗೆಯುವುದಿಲ್ಲ..!ಈ ವಿಡಿಯೋ ನೋಡಿದರೆ ಇನ್ನೆಂದು ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ತೆಗೆಯುವುದಿಲ್ಲ..!

ಗಮನಿಸುವ ಅಂಶವೆಂದರೆ, ಗೂಗಲ್ ಒಂದೇ ತನ್ನ ಹೊಸ ಆಪರೇಟಿಂಗ್ ಸಿಸ್ಟಮ್ ಮೂಲಕ ಹಳೆ ಅಪ್ಲಿಕೇಷನ್ ಗಳಿಗೆ ಪೂರ್ಣ ವಿರಾಮ ನೀಡಿಲ್ಲಾ. ಮೊದಲು ಈ ಕೆಲಸ ಮಾಡಿದ್ದು ಆಪಲ್. ಆಪಲ್ ಎಲ್ಲಾ ಡೆವೆಲೊಪರ್ಸ್ ಗೆ ಐಟ್ಯೂನ್ಸ್ ಸ್ಟೋರ್ಸ್ ನಲ್ಲಿ ಉಳಿಯಬೇಕು ಎಂದಾದಲ್ಲಿ ತಮ್ಮ ಅಪ್ಲಿಕೇಷನನ್ನು 64 ಬಿಟ್ ಗೆ ಅಪಡೇಟ್ ಮಾಡಲೇ ಬೇಕೆಂದು ಸೂಚನೆ ನೀಡಿತು. ಆಂಡ್ರೊಯಿಡ್ ಪಿ ಡೆವೆಲೊಪರ್ ಪ್ರಿವ್ಯು ವರ್ಷನ್ ಲಭ್ಯವಿದೆ ಮತ್ತು ಇದು ಬಹುಶಃ ಸಹಕರಿಸಬಹುದಾದ ಡಿವೈಜ್ ಗಳಿಗೆ ಈ ವರ್ಷದ ಕೊನೆಯಲ್ಲಿ ಲಭ್ಯವಾಗಬಹುದು.

Best Mobiles in India

Read more about:
English summary
Android P is said to be capable of letting Google block old and dated applications built for the dated Android 4.1 Jellybean OS or lower from running. There is no clarity on why the upcoming version of Android will block the old apps from functioning.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X