ಗೂಗಲ್‌ ಪ್ಲೇ ಸ್ಟೋರ್‌ನಲ್ಲಿಯೇ ಲಭ್ಯವಾಗಲಿದೆ ಅಪ್ಲಿಕೇಶನ್ ಚಂದಾದಾರಿಕೆ ಮಾಹಿತಿ!

|

ಪ್ರಸ್ತುತ ದಿನಗಳಲ್ಲಿ ಏನೇ ಮಾಹಿತಿ ಬೇಕಿದ್ದರೂ ಮೊದಲು ನೆನಪಾಗೋದು ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌. ಅಷ್ಟರ ಮಟ್ಟಿಗೆ ಗೂಗಲ್‌ ತನ್ನ ಜನಪ್ರಿಯತೆಯನ್ನ ಎಲ್ಲಡೆ ಹೆಚ್ಚಿಸಿಕೊಂಡಿದೆ. ಇನ್ನು ನೆಗೆಲ್ಲಾ ತಿಳಿದಿರುವ ಹಾಗೇ ಗೂಗಲ್‌ ತನ್ನ ಬಳಕೆದಾರರಿಗೆ ಕಾಲಕಾಲಕ್ಕೆ ತಕ್ಕಂತೆ ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಹೊಸ ಮಾದರಿಯ ಫೀಚರ್ಸ್‌ ಅನ್ನು ಪರಿಚಯಿಸಿದೆ.

ಗೂಗಲ್‌

ಹೌದು, ಗೂಗಲ್‌ ತನ್ನ ಬಳಕೆದಾರರಿಗೆ ಕೋಡ್‌ಗಳನ್ನು ಸುಲಭವಾಗಿ ರಿಡೀಮ್ ಮಾಡಲು ಗೂಗಲ್‌ ಸುಲಭ ಮಾರ್ಗವನ್ನು ಪರಿಚಯಿಸಿದೆ. ಈ ಹೊಸ ಫೀಚರ್ಸ್‌ನಿಂದಾಗಿ ಇನ್ಮುಂದೆ ನೀವು ಆಂಡ್ರಾಯ್ಡ್ 11 ನಲ್ಲಿ, ಕೋಡ್ ಅನ್ನು ರಿಡೀಮ್ ಮಾಡುವುದಾಗಲಿ, ಯಾವುದೇ ಹೊಸ ಮಾದರಿಯ ಚಂದಾದಾರಿಕೆಯನ್ನು ಖರೀದಿಸುವುದಾಗಲಿದೆ ಸುಲಭವಾಗಲಿದೆ ಅದು ಹೇಗೆ ಸಾಧ್ಯ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌

ಗೂಗಲ್‌ ತನ್ನ ಬಳಕೆದಾರರು ಪ್ಲೇ ಸ್ಟೋರ್‌ನಲ್ಲಿ ಕೋಡ್‌ಗಳನ್ನ ರಿಡೀಮ್‌ ಮಾಡುವುದು ಮತ್ತು ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್ ಅನ್ನು ಕೆಲವೇ ಸರಳ ಹಂತಗಳಲ್ಲಿ ಖರೀದಿಸಲು ಸಾಧ್ಯವಾಗುವಂತಹ ಸುದಾರಣೆಯನ್ನ ಗೂಗಲ್‌ ಪರಿಚಯಿಸಿದೆ. ಇದಕ್ಕಾಗಿ ಗೂಗಲ್ ಕಸ್ಟಮ್ ಕೋಡ್‌ಗಳನ್ನು ಅಥವಾ ವ್ಯಾನಿಟಿ ಕೋಡ್‌ಗಳನ್ನು ಪ್ರಾರಂಭಿಸುತ್ತಿದೆ. ಇದರಿಂದಾಗಿ ಬಹು ಬಳಕೆದಾರರು ಯಾವುದೇ ಕಸ್ಟಮ್‌ ಕೋಡ್‌ಗಳನ್ನ ಪುನಃ ಪಡೆದುಕೊಳ್ಳಬಹುದಾಗಿದೆ. ಇನ್ನು ಈ ವ್ಯಾನಿಟಿ ಕೋಡ್‌ಗಳನ್ನು ಮಾರ್ಕೆಟಿಂಗ್ ಉದ್ದೇಶಗಳಿಗಾಗಿ ಸಹ ಬಳಸಬಹುದಾಗಿದೆ.

ವ್ಯಾನಿಟಿ ಕೋಡ್

ಅಲ್ಲದೆ ವ್ಯಾನಿಟಿ ಕೋಡ್ ಅನ್ನು ಜಾಹೀರಾತುಗಳಲ್ಲಿ ಅಥವಾ ಸಾಮಾಜಿಕ ಪ್ರಚಾರಗಳಲ್ಲಿ ಬಳಸಬಹುದು. ಜೊತೆಗೆ ಬಳಕೆದಾರರು ಅಪ್ಲಿಕೇಶನ್‌ಗಾಗಿ ಮತ್ತೊಂದು ಕಸ್ಟಮ್ ಕೋಡ್ ಅನ್ನು ರಿಡೀಮ್ ಮಾಡಲು ಸಹ ಇದನ್ನು ಬಳಸಬಹುದಾಗಿದೆ. ಇದಲ್ಲದೆ ನೀವು ಈಗಾಗಲೇ ಯಾವುದಾದರೂ ಆಪ್‌ ಸೇವೆಗಳ ಮೇಲೆ ಚಂದಾದಾರಿಕೆ ತೆಗೆದುಕೊಂಡಿದ್ದರೆ, ಅದರ ಪ್ರಯೋಜನಗಳನ್ನು ರದ್ದುಗೊಳಿಸಲು ಅವರು ಯೋಜಿಸಿದರೆ ಅದನ್ನು ಗೂಗಲ್ ನಿಮಗೆ ನೆನಪಿಸುವ ಪ್ರಯತ್ನವನ್ನ ಮಾಡುತ್ತದೆ ಎನ್ನಲಾಗಿದೆ.

ಗೂಗಲ್‌

ಇನ್ನು ಗೂಗಲ್‌ ಪ್ಲೇ ಸ್ಟೋರ್‌ನಿಂದಲೇ ಅವಧಿ ಮೀರಿದ ಚಂದಾದಾರಿಕೆಗಳಿಗೆ ಬಳಕೆದಾರರು ಮರು ಚಂದಾದಾರರಾಗಲು ಗೂಗಲ್ ಇನ್ಮುಂದೆ ಅವಕಾಶವನ್ನ ನೀಡಲಿದೆ. ಈಗಾಗಲೇ ಅವಧಿ ಮೀರಿರುವ ಚಂದಾದರಿಕೆಗಳನ್ನ ಮತ್ತೊಂದು ಅವಧಿಗೆ ನವೀಕರಣ ಮಾಡಿಕೊಳ್ಳುವುದಕ್ಕೆ ಮುಂಬರುವ ಬೆಲೆ ಇಳಿಕೆಯ ಬಗ್ಗೆ ಬಳಕೆದಾರರಿಗೆ ಗೂಗಲ್‌ ನಿಂದ ಬಳಕೆದಾರರಿಗೆ ತಿಳಿಸಲಾಗುತ್ತದೆ. ಅಲ್ಲದೆ ಡೆವಲಪರ್‌ಗಳಿಗಾಗಿ ಸಹ ಗೂಗಲ್ ಕೆಲವು ಬದಲಾವಣೆಗಳನ್ನು ಮಾಡುತ್ತಿದೆ. ನವೆಂಬರ್ 1 ರಿಂದ, ಎಲ್ಲಾ ಡೆವಲಪರ್‌ಗಳಿಗೆ ಖಾತೆ ಮತ್ತು ಪುನಃಸ್ಥಾಪನೆ ಕಡ್ಡಾಯವಾಗಲಿದೆ. ಇದರಿಂದಾಗಿ ಡೆವಲಪರ್‌ಗಳು ತಮ್ಮ ಅಪ್ಲಿಕೇಶನ್‌ಗಳಲ್ಲಿ ಬದಲಾವಣೆಗಳನ್ನು ಸಹ ಮಾಡಬೇಕು. ಆದ್ದರಿಂದ ಬಳಕೆದಾರರು ಚಂದಾದಾರಿಕೆಗಳಿಗೆ ಪ್ರವೇಶವನ್ನು ಕಳೆದುಕೊಂಡಾಗ ಅಥವಾ ಅದನ್ನು ಮರಳಿ ಪಡೆದಾಗ ಅವರಿಗೆ ಗೂಗಲ್‌ನಿಂದ ತಿಳಿಸಲಾಗುತ್ತದೆ ಎನ್ನಲಾಗ್ತಿದೆ.

Most Read Articles
Best Mobiles in India

English summary
Google is making it easier to easily redeem codes for users. On Android 11, you’ll be able to redeem the code, purchase the subscription and purchase the app from Play Store in just a few simple steps.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X