ಆಪಲ್‌ iOS 16.2 ಪಬ್ಲಿಕ್‌ ಬೀಟಾ ವರ್ಷನ್‌ ಬಿಡುಗಡೆ!..5Gಗೆ ಬೆಂಬಲ!

|

ಆಪಲ್‌ ಕಂಪೆನಿ ತನ್ನ ಬಹು ನಿರೀಕ್ಷಿತ iOS 16.2 ಪಬ್ಲಿಕ್‌ ಬೀಟಾ ಆವೃತ್ತಿಯನ್ನು ಪರಿಚಯಿಸಿದೆ. ಇದರಿಂದ ಭಾರತದಲ್ಲಿ ಐಫೋನ್‌ ಬಳಕೆದಾರರಿಗೆ 5G ಬೆಂಬಲವನ್ನು ಪಡೆಯುವುದಕ್ಕೆ ಮಹತ್ವದ್ದಾಗಿದೆ ಎನ್ನಲಾಗಿದೆ. ರಿಲಯನ್ಸ್‌ ಮತ್ತು ಜಿಯೋ ಬಳಕೆದಾರರು iOS 16.2 ಬಿಟಾ ಸಾಫ್ಟ್‌ವೇರ್‌ ಪ್ರೋಗ್ರಾಂನ ಭಾಗವಾಗಿದ್ದರೆ ಐಫೋನ್‌ಗಳಲ್ಲಿ 5G ಬಳಸಲು ಸಾಧ್ಯವಾಗಲಿದೆ. ಇನ್ನು ಈ ಹೊಸ ಅಪ್ಡೇಟ್‌ನಲ್ಲಿ ಹಿಂದಿನ ಆವೃತ್ತಿಯಲ್ಲಿನ ದೋಷಗಳನ್ನು ಸರಿಪಡಿಸಲಿದೆ ಎಂದು ಹೇಳಲಾಗಿದೆ.

ಆಪಲ್‌

ಹೌದು, ಆಪಲ್‌ ಕಂಪೆನಿ ಹೊಸ iOS 16.2 ಬೀಟಾ ವರ್ಷನ್‌ ಬಿಡುಗಡೆ ಮಾಡಿದೆ. ಈ ಮೂಲಕ ಭಾರತದಲ್ಲಿ ಐಫೋನ್‌ ಬಳಕೆದಾರರು 5G ನೆಟ್‌ವರ್ಕ್‌ ಸಕ್ರಿಯಗೊಳಿಸುವುದಕ್ಕೆ ಇದ್ದ ದೋಷಗಳನ್ನು ನಿವಾರಣೆ ಮಾಡಿದಂತೆ ಆಗಿದೆ. ಸದ್ಯ ಇದು ಬೀಟಾ ವರ್ಷನ್‌ನಲ್ಲಿ ಲಭ್ಯವಿರುವುದರಿಂದ ಬೀಟಾ ಪ್ರೋಗ್ರಾಂನಲ್ಲಿ ನೋಂದಾಯಿಸಿಕೊಂಡವರಿಗೆ ಮಾತ್ರ ಇದು ಸೀಮಿತವಾಗಿದೆ. ಇದು ಮುಂದಿನ ದಿನಗಳಲ್ಲಿ ಎಲ್ಲಾ ಬಳಕೆದಾರರಿಗೂ ಲಭ್ಯವಾಗಲಿದೆ. ಹಾಗಾದ್ರೆ ಆಪಲ್‌ನ iOS 16.2 ಬೀಟಾ ವರ್ಷನ್‌ ಭಾರತೀಯರಿಗೆ ಮುಖ್ಯವಾಗಿದೆ ಯಾಕೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

iOS 16.2 ಬೀಟಾ ವರ್ಷನ್‌ ನಿಂದ ಭಾರತೀಯರಿಗೆ ಏನು ಲಾಭ?

iOS 16.2 ಬೀಟಾ ವರ್ಷನ್‌ ನಿಂದ ಭಾರತೀಯರಿಗೆ ಏನು ಲಾಭ?

ಆಪಲ್‌ ಕಂಪೆನಿ iOS 16.2 ಬೀಟಾ ವರ್ಷನ್‌ ಬಿಡುಗಡೆ ಮಾಡಿರುವುದರಿಂದ ಐಫೋನ್‌ ಬಳಕೆದಾರರು ಭಾರತದಲ್ಲಿ 5G ನೆಟ್‌ವರ್ಕ್‌ ಸಕ್ರಿಯಗೊಳಿಸಬಹುದು. ಐಒಎಸ್‌ 16.2 ನಲ್ಲಿರುವ ಫೀಚರ್ಸ್‌ಗಳು ಭಾರತದ 5Gಯನ್ನು ಬೆಂಬಲಿಸಲಿದೆ. ಆದರಿಂದ ಜಿಯೋ ಮತ್ತು ಏರ್‌ಟೆಲ್ ಬಳಕೆದಾರರು iOS 16 ಬೀಟಾ ಸಾಫ್ಟ್‌ವೇರ್ ಪ್ರೋಗ್ರಾಂನ ಭಾಗವಾಗಿದ್ದರೆ ತಮ್ಮ ಐಫೋನ್‌ಗಳಲ್ಲಿ 5G ಬಳಸಬಹುದಾಗಿದೆ.

ಯಾವೆಲ್ಲಾ ಐಫೋನ್‌ಗಳು 5G-ಬೆಂಬಲಿಸಲಿವೆ?

ಯಾವೆಲ್ಲಾ ಐಫೋನ್‌ಗಳು 5G-ಬೆಂಬಲಿಸಲಿವೆ?

ಇನ್ನು ಭಾರತದಲ್ಲಿ ಐಫೋನ್‌ 14, ಐಫೋನ್‌ 13 ಮತ್ತು ಐಫೋನ್‌ 12 ಸರಣಿಯ ಎಲ್ಲಾ ಮಾದರಿಗಳಲ್ಲಿ 5G ಯನ್ನು ಸಕ್ರಿಯಗೊಳಿಸಲಾಗಿದೆ. ಇದಲ್ಲದೆ ಐಫೋನ್‌ SE (2022) ಕೂಡ ಭಾರತದಲ್ಲಿ 5G ಯನ್ನು ಬೆಂಬಲಿಸಲಿದೆ. ಆದರೆ ನೀವು ಹಳೆಯ ಐಫೋನ್ ಹೊಂದಿದ್ದರೂ ಮತ್ತು ಬೀಟಾ ಪ್ರೋಗ್ರಾಂನಲ್ಲಿದ್ದರೂ ಸಹ, ನೀವು 5G ಅನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ ಎಂಬುದು ಗಮನಿಸಬೇಕಾದ ವಿಚಾರ.

ಆಪಲ್‌ ಬೀಟಾ ಸಾಫ್ಟ್‌ವೇರ್‌ಗೆ ನೋಂದಾಯಿಸಲು ಹೀಗೆ ಮಾಡಿರಿ?

ಆಪಲ್‌ ಬೀಟಾ ಸಾಫ್ಟ್‌ವೇರ್‌ಗೆ ನೋಂದಾಯಿಸಲು ಹೀಗೆ ಮಾಡಿರಿ?

* ಮೊದಲಿಗೆ ಆಪಲ್ ಬೀಟಾ ಸಾಫ್ಟ್‌ವೇರ್ ಪ್ರೋಗ್ರಾಂ ಪೇಜ್‌ ತೆರೆದು ಸೈನ್ ಅಪ್ ಕ್ಲಿಕ್ ಮಾಡಿ
* ನಿಮ್ಮ Apple ID ಯೊಂದಿಗೆ ನೋಂದಾಯಿಸಿ ಮತ್ತು ಬೀಟಾ ಸಾಫ್ಟ್‌ವೇರ್ ಪ್ರೋಗ್ರಾಂಗೆ ಲಾಗ್ ಇನ್ ಮಾಡಿ
* ಇದೀಗ "ನಿಮ್ಮ iOS ಡಿವೈಸ್‌ ಅನ್ನು ನೋಂದಾಯಿಸಿ" ಆಯ್ಕೆಯನ್ನು ಟ್ಯಾಪ್ ಮಾಡಿ
* ನಂತರ ನಿಮ್ಮ ಐಫೋನ್‌ನಲ್ಲಿ tobeta.apple.com/profile ಗೆ ಹೋಗಿ.
* ನಂತರ ಸೆಟ್ಟಿಂಗ್ಸ್‌ ಹೋಗಿ ಮತ್ತು ಕಾನ್ಫಿಗರೇಶನ್ ಪ್ರೊಫೈಲ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್‌ ಮಾಡಿ
* ಪ್ರೊಫೈಲ್ ಅನ್ನು ಡೌನ್‌ಲೋಡ್ ಮಾಡಿದ ನಂತರ, ಜನರಲ್‌> ಸಾಫ್ಟ್‌ವೇರ್ ಅಪ್ಡೇಟ್‌> ಬೀಟಾ ಆವೃತ್ತಿಯನ್ನು ಇನ್‌ಸ್ಟಾಲ್‌ ಮಾಡಿ

iOS 16 ಬೀಟಾ ಸಾಫ್ಟ್‌ವೇರ್ ಪ್ರೋಗ್ರಾಂಗೆ ಯಾರೆಲ್ಲಾ ಸೇರ್ಪಡೆಯಾಗಬಹುದು?

iOS 16 ಬೀಟಾ ಸಾಫ್ಟ್‌ವೇರ್ ಪ್ರೋಗ್ರಾಂಗೆ ಯಾರೆಲ್ಲಾ ಸೇರ್ಪಡೆಯಾಗಬಹುದು?

ಆಪಲ್‌ ಐಡಿಯನ್ನು ಹೊಂದಿರುವ ಎಲ್ಲಾ ಬಳಕೆದಾರರು ಕೂಡ iOS 16 ಬೀಟಾ ಸಾಫ್ಟ್‌ವೇರ್ ಗೆ ಸೇರ್ಪಡೆಯಾಗಬಹುದು. ಆದರೆ ಸೈನ್-ಅಪ್ ಪ್ರಕ್ರಿಯೆಯ ಸಮಯದಲ್ಲಿ ನೀವು ಆಪಲ್‌ ಬೀಟಾ ಸಾಫ್ಟ್‌ವೇರ್ ಪ್ರೋಗ್ರಾಂ ಅಗ್ರಿಮೆಂಟ್‌ ಅನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಅಲ್ಲದೆ ನೀವು ಐಕ್ಲೌಡ್‌ ಅಕೌಂಟ್‌ ಅನ್ನು ಹೊಂದಿದ್ದರೆ, ಅದು ಆಪಲ್‌ ಐಡಿ ಆಗಿದ್ದರೆ, ನೀವು ಅದನ್ನು ಬಳಸಬಹುದು ಎಂದು ಕೂಡ ಹೇಳಲಾಗಿದೆ.

iOS 16 ಬೀಟಾ

ಇದಲ್ಲದೆ iOS 16 ಬೀಟಾ ಸಾಫ್ಟ್‌ವೇರ್ ಪ್ರೋಗ್ರಾಂ ಅನ್ನು ನಖೀವು ತೊರೆಯಲು ಬಯಸಿದರೆ ಅದಕ್ಕೆ ಕೂಡ ಅವಕಾಶವನ್ನು ನೀಡಲಾಗಿದೆ. ಇದಕ್ಕಾಗಿ ನೀವು iOS 16 ಬೀಟಾ ಸಾಫ್ಟ್‌ವೇರ್ ಅನ್‌ ಎನ್‌ರೋಲ್ ಪೇಜ್‌ಗೆ ಭೇಟಿ ನೀಡಬೇಕಾಗುತ್ತದೆ. ಇದರಲ್ಲಿ ನೀವು ಆಪಲ್‌ ಬೀಟಾ ಸಾಫ್ಟ್‌ವೇರ್ ಪ್ರೋಗ್ರಾಂನಿಂದ ನಿಮ್ಮ ಆಪಲ್‌ ಐಡಿ ತೆಗೆದುಹಾಕಲು ಬೇಕಾದ ಸೂಚನೆಗಳನ್ನು ಅನುಸರಿಸಬೇಕಾಗುತ್ತದೆ.

Best Mobiles in India

Read more about:
English summary
Apple has rolled out the public beta version of iOS 16.2

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X