ಐಫೋನ್‌ 14 ಸರಣಿಯಲ್ಲಿ ನಿರೀಕ್ಷಿಸಬಹುದಾದ ಟಾಪ್‌ 5 ಫೀಚರ್ಸ್‌ಗಳು!

|

ಆಪಲ್‌ ಕಂಪೆನಿಯ ಬಹುನಿರೀಕ್ಷಿತ ಐಫೋನ್‌ 14 ಸರಣಿ ಬಿಡುಗಡೆಯ ದಿನಾಂಕ ಈಗಾಗಲೇ ನಿಗದಿಯಾಗಿದೆ. ಹೊಸ ತಲೆಮಾರಿನ ಐಫೋನ್‌ 14 ಈಗಾಗಲೇ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಐಫೋನ್‌ 13ಗಿಂತ ಹೆಚ್ಚು ಆಕರ್ಷಕವಾದ ಫೀಚರ್ಸ್‌ಗಳನ್ನು ಐಫೋನ್‌ 14 ಅಲ್ಲಿ ಕಾಣಬಹುದು ಎಂದು ಹೇಳಲಾಗಿದೆ. ಈಗಾಗಲೇ ಐಫೋನ್‌ 14ನ ಕೆಲವು ಫೀಚರ್ಸ್‌ಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಆನ್‌ಲೈನ್‌ನಲ್ಲಿ ಸೊರಿಕೆಯಾದ ಫೀಚರ್ಸ್‌ಗಳು ಐಫೋನ್‌ 14 ಮೇಲೇ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ.

ಐಫೋನ್‌

ಹೌದು, ಸದ್ಯದಲ್ಲೇ ಮಾರುಕಟ್ಟೆಗೆ ಎಂಟ್ರಿ ನೀಡಲಿರುವ ಐಫೋನ್‌ 14 ಸಾಕಷ್ಟು ಸದ್ದು ಮಾಡುತ್ತಿದೆ. ಐಫೋನ್‌ 14 ಅಲ್ಲಿ ಏನೆಲ್ಲಾ ಹೊಸ ವಿಚಾರಗಳನ್ನು ಆಪಲ್‌ ಕಂಪೆನಿ ಪರಿಚಯಿಸಲಿದೆ ಅನ್ನೊ ವಿಚಾರ ಸಾಕಷ್ಟು ನಿರೀಕ್ಷೆಯನ್ನು ಸೃಷ್ಟಿಸಿದೆ. ಇದರ ನಡುವೆ ಐಫೋನ್‌ 14 ಐಫೋನ್‌ 13ಗಿಂತ ಭಿನ್ನವಾಗಿರುವ ಹಲವು ಫೀಚರ್ಸ್‌ಗಳನ್ನು ಹೊಂದಿರಲಿದೆ ಎನ್ನಲಾಗಿದೆ. ಹಾಗಾದ್ರೆ ಐಫೋನ್‌ 14 ಅಲ್ಲಿ ನೀವು ನೀರಿಕ್ಷಿಸಬಹುದಾದ ಪ್ರಮುಖ ಫೀಚರ್ಸ್‌ಗಳ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಸ್ಟ್ರೋಫೋಟೋಗ್ರಫಿ

ಆಸ್ಟ್ರೋಫೋಟೋಗ್ರಫಿ

ಐಫೋನ್ 14ನಲ್ಲಿ ನೀವು ನಿರೀಕ್ಷಿಸಬಹುದಾದ ಪ್ರಮುಖ ಫೀಚರ್ಸ್‌ಗಳಲ್ಲಿ ಅಸ್ಟ್ರ್ರೋಫೋಟೋಗ್ರಫಿ ಫೀಚರ್‌ ಹೈಲೈಟ್‌ ಆಗಿದೆ. ಅಂದರೆ ಐಫೋನ್‌ 14 ಕ್ಯಾಮೆರಾದಲ್ಲಿ ಆಸ್ಟ್ರೋಫೋಟೋಗ್ರಫಿ ಮೋಡ್ ಅನ್ನು ಅಳವಡಿಸುವ ಸಾದ್ಯತೆಯಿದೆ. ಇದರಿಂದ ನೈಟ್‌ ಸ್ಕೈ ಅನ್ನು ಫೋಟೋಗ್ರಫಿ ಮಾಡುವಾಗ ಲಿಮಿಟೆಡ್‌ ನಾಯ್ಸ್‌ ಲೆವೆಲ್‌ನಲ್ಲಿ ಕ್ಲಿನ್‌ ಎಕ್ಸ್‌ಪ್ಲೋರ್‌ ಮಾಡುವುದಕ್ಕೆ ಹಲವಾರು ಫ್ರೇಮ್‌ಗಳನ್ನು ಸೆರೆಹಿಡಿಯುತ್ತದೆ. ಅಂದರೆ ರಾತ್ರಿ ಆಕಾಶವನ್ನು ನೀವು ಅತ್ಯಂತ ಕ್ಲಿಯರ್‌ ಆಗಿ ಫೋಟೋ ಸೆರೆ ಹಿಡಿಯಲು ಇದು ಸಹಾಯಕವಾಗಲಿದೆ.

ಸ್ಯಾಟ್‌ಲೈಟ್‌ ಕನೆಕ್ಟಿವಿಟಿ

ಸ್ಯಾಟ್‌ಲೈಟ್‌ ಕನೆಕ್ಟಿವಿಟಿ

ಆಪಲ್‌ ಐಫೋನ್‌ 14 ಪಡೆದುಕೊಳ್ಳಬಹುದಾದ ಮತ್ತೊಂದು ಹೈಲೈಟ್‌ ಫೀಚರ್ಸ್‌ ಅಂದರೆ ಅದು ಸ್ಯಾಟ್‌ಲೈಟ್‌ ಕನೆಕ್ಟಿವಿಟ ಫೀಚರ್ಸ್‌ ಆಗಿದೆ. ಇದರಿಂದ ಯಾವುದೇ ಸೆಲ್ಯುಲಾರ್ ಸೇವೆ ಲಭ್ಯವಿಲ್ಲದಿದ್ದಾಗ ತುರ್ತು ಸೇವೆಗಳು ಮತ್ತು ಸಂಪರ್ಕಗಳಿಗೆ ಅಥವಾ ತುರ್ತು ಪರಿಸ್ಥಿತಿಯನ್ನು ವರದಿ ಮಾಡುವುದಕ್ಕೆ ಇದರಿಂದ ಸಹಾಯವಾಗಲಿದೆ. ಈ ಫೀಚರ್ಸ್‌ ಅನ್ನು ನೇರವಾಗಿ iMessage ನಲ್ಲಿ ನಿರ್ಮಿಸುವ ನಿರೀಕ್ಷೆಯಿದೆ. ಇನ್ನು ಐಫೋನ್‌ನಲ್ಲಿ ಸ್ಯಾಟ್‌ಲೈಟ್‌ ಕನೆಕ್ಟಿವಿಟಿಗಾಗಿ ಆಪಲ್ ಗ್ಲೋಬಲ್‌ಸ್ಟಾರ್‌ನೊಂದಿಗೆ ಪಾಲುದಾರರಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಆಲ್‌ವೇಸ್‌ ಆನ್ ಡಿಸ್ಪ್ಲೇ

ಆಲ್‌ವೇಸ್‌ ಆನ್ ಡಿಸ್ಪ್ಲೇ

ಐಫೋನ್‌ 14 ಆಂಡ್ರಾಯ್ಡ್ ಫೋನ್‌ ಮಾದರಿಯಲ್ಲಿಯೇ ಆಲ್‌ವೇಸ್‌ ಆನ್‌ ಡಿಸ್‌ಪ್ಲೇ ಮೋಡ್‌ ಅನ್ನು ಹೊಂದಿರಲಿದೆ ಎನ್ನಲಾಗಿದೆ. ಆಲ್‌ವೇಸ್‌ ಆನ್‌ ಮೋಡ್‌ ನಿಮ್ಮ ಐಫೋನ್‌ನಲ್ಲಿ ಡಿಸ್‌ಪ್ಲೇ ಟೈಂ ಅಥವಾ ನೋಟೀಫಿಕೇಶನ್‌ಗಳನ್ನು ಸ್ಕ್ರೀನ್‌ ಮೇಲೆ ತೋರಿಸಲಿದೆ. ಫೋನ್ ಲಾಕ್ ಆಗಿದ್ದರೂ ಸಹ ನೀವು ಡಿಸ್‌ಪ್ಲೇ ಟೈಂ ಅನ್ನು ನೋಡಬಹುದಾಗಿದೆ. ಈಗಾಗಲೇ ಆಪಲ್ ವಾಚ್ ಸರಣಿ 5 ಮತ್ತು ಹೊಸ ಮಾದರಿಗಳಲ್ಲಿ ಈ ಫೀಚರ್ಸ್‌ ಅನ್ನು ಕಾಣಬಹುದಾಗಿದೆ. ಆದರೆ ಈ ಫೀಚರ್ಸ್‌ ಅನ್ನು ಐಫೋನ್‌ 14 ಪ್ರೊಗೆ ಸೀಮಿತವಾಗಿರಲಿದೆ ಎಂದು ಹೇಳಲಾಗಿದೆ.

ಸುಧಾರಿತ ಸೆಲ್ಫಿ ಕ್ಯಾಮೆರಾ

ಸುಧಾರಿತ ಸೆಲ್ಫಿ ಕ್ಯಾಮೆರಾ

ಐಫೋನ್‌ 14 ನಲ್ಲಿ ಉತ್ತಮ-ಗುಣಮಟ್ಟದ ಸೆಲ್ಫಿ ಕ್ಯಾಮೆರಾವನ್ನು ಕಾಣಬಹುದಾಗಿದೆ. ಆಟೋಫೋಕಸ್ ಸೇರಿದಂತೆ ಇನ್ನು ಅಪ್ಡೇಟ್‌ ಫೀಚರ್‌ಗಳನ್ನು ಸೆಲ್ಫಿ ಕ್ಯಾಮೆರಾದಲ್ಲಿ ನಿರೀಕ್ಷಿಸಬಹುದು. ಇದರಲ್ಲಿ ಪೋರ್ಟ್ರೇಟ್ ಮೋಡ್ ಮತ್ತು ವೀಡಿಯೊ ಕರೆಗಳಲ್ಲಿ ಉತ್ತಮ ಡೆಪ್ತ್-ಆಫ್-ಫೀಲ್ಡ್‌ಗಾಗಿ ಅಪ್‌ಗ್ರೇಡೇಶನ್ ಸುಧಾರಿತ ಲೆನ್ಸ್‌ ಅನ್ನು ನೀಡಲಿದೆ ಎನ್ನಲಾಗಿದೆ. ಅಂದರೆ ಐಫೋನ್ 14 ಫ್ರಂಟ್ ಕ್ಯಾಮೆರಾದ ಯುನಿಟ್ ಬೆಲೆ ಹಿಂದಿನ ಮಾದರಿಗಳಿಗೆ ಹೋಲಿಸಿದರೆ ಸುಮಾರು ಮೂರು ಪಟ್ಟು ಹೆಚ್ಚಾಗಿದೆ ಎಂದು ಸುದ್ದಿಯಾಗಿದೆ.

ಬೆಟರ್‌ ಕ್ಯಾಮೆರಾ

ಬೆಟರ್‌ ಕ್ಯಾಮೆರಾ

ಐಫೋನ್‌ನ ಕ್ಯಾಮೆರಾಗಳ ಗುಣಮಟ್ಟದ ಬಗ್ಗೆ ನಿಮಗೆಲ್ಲಾ ತಿಳಿದಿದೆ. ಐಫೋನ್ 14 ಸರಣಿಯಲ್ಲಿ ಕ್ಯಾಮೆರಾಗಳ ಗುಣಮಟ್ಟವನ್ನು ಇನ್ನಷ್ಟು ಅಪ್‌ಗ್ರೇಡ್‌ ಮಾಡಲಿದೆ ಎಂದು ಹೇಳಲಾಗಿದೆ. ಅದರಲ್ಲೂ ಉತ್ತಮ ಕಡಿಮೆ-ಬೆಳಕಿನ ಕಾರ್ಯಕ್ಷಮತೆಯನ್ನು ಸಾಧಿಸುವತ್ತ ಗಮನಹರಿಸಲಾಗಿದೆ. ಆಪಲ್ ಉನ್ನತ-ಮಟ್ಟದ ಐಫೋನ್‌ 14 ಪ್ರೊ ಮತ್ತು ಪ್ರೊ ಮ್ಯಾಕ್ಸ್‌ ಗೆ ಪೆರಿಸ್ಕೋಪ್ ಲೆನ್ಸ್ ಅನ್ನು ಸೇರಿಸಬಹುದು ಎನ್ನಲಾಗಿದೆ. ಇದಲ್ಲದೆ ಕ್ಯಾಮೆರಾ ಸೆನ್ಸಾರ್‌ಗಳಲ್ಲಿ ಸಾಕಷ್ಟು ಬದಲಾವಣೆಯನ್ನು ಕೂಡ ನಿರೀಕ್ಷಿಸಲಾಗಿದೆ. ಇದೆಲ್ಲದಕ್ಕೂ ಉತ್ತರ ಸಿಗಬೇಕಾದರೆ ಸೆಪ್ಟೆಂಬರ್ 7 ರಂದು ನಡೆಯುವ ಆಪಲ್‌ ಐಫೋನ್‌ 14 ಲಾಂಚ್‌ ಈವೆಂಟ್‌ ತನಕ ಕಾಯಬೇಕಾಗಿದೆ.

Best Mobiles in India

Read more about:
English summary
here are five big features reportedly coming to the iPhone 14 series.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X