ಆಪಲ್‌ ಸಂಸ್ಥೆಯಿಂದ ಭಾರತದಲ್ಲಿ ಹೊಸ ಆಲ್‌ ನ್ಯೂ ಆಪಲ್‌ ಟಿವಿ 4K ಬಿಡುಗಡೆ!

|

ಆಪಲ್‌ ಕಂಪೆನಿ ಭಾರತದಲ್ಲಿ ಹೊಸ ಆಲ್‌ ನ್ಯೂ ಆಪಲ್‌ ಟಿವಿ 4K ಲಾಂಚ್‌ ಮಾಡಿದೆ. ಇದು A15 ಬಯೋನಿಕ್ ಚಿಪ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಟಿವಿ ಬಾಕ್ಸ್‌ HDR10 ಪ್ಲಸ್ ಮತ್ತು ಡಾಲ್ಬಿ ವಿಷನ್‌ ಪ್ಲೇಬ್ಯಾಕ್ ಅನ್ನು ನೀಡಲಿದೆ. ಅಲ್ಲದೆ ಆಪಲ್‌ ಸಿರಿ-ಬೆಂಬಲಿತ ರಿಮೋಟ್ ಕಂಟ್ರೋಲ್ ಅನ್ನು ಹೊಂದಿದೆ. ಆದರಿಂದ ವಾಯ್ಸ್‌ ಕಂಟ್ರೋಲ್‌ ಮೂಲಕ ನಿಮ್ಮ ಮೆಚ್ಚಿನ ಶೋಗಳನ್ನು ವೀಕ್ಷಿಸಲು ನಿಮಗೆ ಅವಕಾಶ ಸಿಗಲಿದೆ.

ಆಪಲ್‌

ಹೌದು, ಆಪಲ್‌ ಕಂಪೆನಿ ಮೂರನೇ ತಲೆಮಾರಿನ ಆಲ್‌ ನ್ಯೂ ಆಪಲ್‌ ಟಿವಿ 4K ಬಿಡುಗಡೆ ಮಾಡಿದೆ. ಈ ಟಿವಿ ಬಾಕ್ಸ್‌ 4K ವೀಡಿಯೊ ಪ್ಲೇಬ್ಯಾಕ್, 4K ವೀಡಿಯೊ ಜೊತೆಗೆ HDR ಸ್ಟ್ರೀಮಿಂಗ್ ಬೆಂಬಲವನ್ನು ಸಹ ನೀಡಲಿದೆ. ನೀವು ಸಿನಿಮಾಗಳನ್ನು ಡೌನ್‌ಲೋಡ್‌ ಮಾಡುವುದಕ್ಕಾಗಿ ಇದರಲ್ಲಿ 128GB ಸ್ಟೋರೇಜ್‌ ಸಾಮರ್ಥ್ಯವನ್ನು ಕೂಡ ನೀಡಲಾಗಿದೆ. ಹಾಗಾದ್ರೆ ಹೊಸ ಆಲ್‌ ನ್ಯೂ ಆಪಲ್‌ ಟಿವಿ 4K ಏನೆಲ್ಲಾ ವಿಶೇಷತೆ ಪಡೆದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಪಲ್‌

ಅಲ್‌ ನ್ಯೂ ಆಪಲ್‌ ಟಿವಿ 4K ಹೊಸ ತಲೆಮಾರಿನ ಟಿವಿ ಬಾಕ್ಸ್‌ ಆಗಿದೆ. ಇದು ಡಾಲ್ಬಿ ವಿಷನ್‌ ಮತ್ತು 4K ವೀಡಿಯೊ ಪ್ಲೇಬ್ಯಾಕ್ ಅನ್ನು ನೀಡಲಿದೆ. ಅಂದರೆ 2160p ನಲ್ಲಿ 60 fps ಪ್ಲೇಬ್ಯಾಕ್ ಅನ್ನು ಬೆಂಬಲಿಸುತ್ತದೆ. ಅಲ್ಲದೆ 4K ವೀಡಿಯೊ ಜೊತೆಗೆ HDR ಸ್ಟ್ರೀಮಿಂಗ್ ಬೆಂಬಲವನ್ನು ಸಹ ಹೊಂದಿದೆ. ಇನ್ನು ಈ ಟಿವಿ ಬಾಕ್ಸ್ ಆಪಲ್ A15 ಬಯೋನಿಕ್ ಚಿಪ್‌ಸೆಟ್‌ ಪ್ರೊಸೆಸರ್‌ ವೇಗವನ್ನು ಹೊಂದಿದ್ದು, tvOS 16ನಲ್ಲಿ ಕಾರ್ಯನಿರ್ವಹಿಸಲಿದೆ.

ಆಪಲ್‌ ಟಿವಿ 4K

ಆಪಲ್‌ ಟಿವಿ 4K ಸಿರಿಯನ್ನು ಬೆಂಬಲಸಲಿದೆ. ಇದಕ್ಕಾಗಿ ಸಿರಿ ಬಟನ್ ಹೊಂದಿರುವ ಹೊಸ ರಿಮೋಟ್‌ ಅನ್ನು ಕೂಡ ನೀಡಲಾಗಿದೆ. ಇದರಿಂದ ವಾಯ್ಸ್‌ ಕಂಟ್ರೋಲ್‌ ಮೂಲಕವೇ ನಿಮ್ಮ ಆಯ್ಕೆಯ ಚಲನಚಿತ್ರ ಇಲ್ಲವೇ ಶೋ ಅನ್ನು ಪ್ಲೇ ಮಾಡಬಹುದಾಗಿದೆ. ಇದಲ್ಲದೆ ನೀವು ಶೋ ಗಳು ಹಾಗೂ ಚಲನಚಿತ್ರಗಳನ್ನು ಡೌನ್‌ಲೋಡ್‌ ಮಾಡಲು ಬಯಸಿದರೆ ಇದಕ್ಕಾಗಿ 128GB ವರೆಗಿನ ಸ್ಟೋರೇಜ್‌ ಅನ್ನು ನೀಡಲಾಗಿದೆ. ಇನ್ನು ಈ ಟಿವಿ ಬಾಕ್ಸ್‌ ಶೇರ್‌ಪ್ಲೇಗೆ ಕೂಡ ಅವಕಾಶ ನೀಡಿದೆ. ಜೊತೆಗೆ ನೇರವಾಗಿ ಆರ್ಕೇಡ್ ಗೇಮ್‌ಗಳನ್ನು ಪ್ಲೇ ಮಾಡಲು ಅನುಮತಿಸುವ ಟಿವಿಗಾಗಿ Apple ಆರ್ಕೇಡ್ ಅನ್ನು ಸಹ ಹೊಂದಿದೆ.

ಡಾಲ್ಬಿ ಅಟ್ಮಾಸ್

ಇದು ಡಾಲ್ಬಿ ಅಟ್ಮಾಸ್ ಮತ್ತು ಡಾಲ್ಬಿ ಡಿಜಿಟಲ್ 7.1/5.1 ಸರೌಂಡ್ ಸೌಂಡ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 2×2 MIMO ಜೊತೆಗೆ Wi-Fi 6 ಮತ್ತು ಬ್ಲೂಟೂತ್ 5.0 ಅನ್ನು ಹೊಂದಿದೆ. ಇದಲ್ಲದೆ ವೈಫೈ ಮಾದರಿಯಲ್ಲಿ HDMI 2.1 ಪೋರ್ಟ್ ಮತ್ತು ಪವರ್‌ ಸಪ್ಲೇ ಪವರ್ ಅನ್ನು ಕೂಡ ನೀಡಲಾಗಿದೆ. ಜೊತೆಗೆ ಈಥರ್ನೆಟ್ ಮಾದರಿಯಲ್ಲಿ (128GB) ಮೀಸಲಾದ ಗಿಗಾಬಿಟ್ ಈಥರ್ನೆಟ್ ಪೋರ್ಟ್ ಅನ್ನು ಕೂಡ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಆಪಲ್‌ ಟಿವಿ 4K ಎರಡು ರೂಪಾಂತರದ ಆಯ್ಕೆಗಳಲ್ಲಿ ಬರಲಿದೆ. ಇದರಲ್ಲಿ ವೈಫೈ (64GB) ಮಾದರಿಯ ಆಯ್ಕೆಗೆ 14,900ರೂ. ಬೆಲೆಯನ್ನು ಹೊಂದಿದೆ. ಆದರೆ ವೈಫೈ ಪ್ಲಸ್‌ ಈಥರ್ನೆಟ್(128GB) ಮಾದರಿಯ ಆಯ್ಕೆಗೆ 16,900ರೂ. ಬೆಲೆಯನ್ನು ಪಡೆದುಕೊಂಡಿದೆ. ಇನ್ನು ಈ ಡಿವೈಸ್‌ AppleCare+ ನೊಂದಿಗೆ ಬರುತ್ತದೆ. ಇದನ್ನು ಖರೀದಿಸುವಾಗ ನಿಮಗೆ ನೋ ಕಾಸ್ಟ್‌ ಇಎಂಐ ಆಯ್ಕೆಗಳು ಕೂಡ ಲಭ್ಯವಾಗಲಿದೆ. ಈ ಡಿವೈಸ್‌ ನವೆಂಬರ್ 4 ರಿಂದ ಭಾರತದಲ್ಲಿ ಮಾರಾಟಕ್ಕೆ ಬರಲಿದೆ.

Best Mobiles in India

English summary
Apple TV 4K Launched In India With HDR 10+ and Dolby Vision Support

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X