ಅಸುಸ್‌ ಕಂಪೆನಿಯಿಂದ ಹೊಸ ಸರಣಿಯ ಲ್ಯಾಪ್‌ಟಾಪ್‌ಗಳು ಬಿಡುಗಡೆ! ಬೆಲೆ ಎಷ್ಟು?

|

ಅಸುಸ್‌ ಕಂಪೆನಿ ತನ್ನ ವೈವಿಧ್ಯಮಯ ಲ್ಯಾಪ್‌ಟಾಪ್‌ಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ. ಲ್ಯಾಪ್‌ಟಾಪ್‌ ವಲಯದಲ್ಲಿ ಭಿನ್ನ ಮಾದರಿಯ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ಆಸುಸ್‌ ಕಂಪೆನಿ ಮಾರುಕಟ್ಟೆಯಲ್ಲಿ ಹೊಸ ಸರಣಿಯ ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ ಆಸುಸ್‌ ಜೆನ್‌ಬುಕ್‌ ಪ್ರೊ14 Duo OLED, ಜೆನ್‌ಬುಕ್‌ ಪ್ರೊ 16X OLED, ಪ್ರೊ ಆರ್ಟ್‌ ಸ್ಟುಡಿಯೋಬುಕ್‌ ಪ್ರೊ 16 OLED, ಪ್ರೊ ಆರ್ಟ್‌ ಸ್ಟುಡಿಯೋಬುಕ್‌ 16 OLED, ವಿವೋಬುಕ್‌ ಪ್ರೊ 15 OLED, ಮತ್ತು ವಿವೋಬುಕ್‌ ಪ್ರೊ 16X OLED ಅನ್ನು ಪರಿಚಯಿಸಿದೆ.

ಅಸುಸ್‌

ಹೌದು, ಅಸುಸ್‌ ಕಂಪೆನಿ ತನ್ನ ಹೊಸ ಸರಣಿಯ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿದೆ. ಈ ಕ್ರಿಯೇಟರ್ ಸಿರೀಸ್ ಲ್ಯಾಪ್‌ಟಾಪ್‌ಗಳನ್ನು ಕಂಟೆಂಟ್‌ ರಚನೆಕಾರರಿಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಅಸುಸ್‌ ಕಂಪೆನಿ ಹೇಳಿಕೊಂಡಿದೆ. ಇನ್ನು ಈ ಎಲ್ಲಾ ಲ್ಯಾಪ್‌ಟಾಪ್‌ಗಳು ವಿಶೇಷವಾದ ಫೀಚರ್ಸ್‌ ಹಾಗೂ ಆಕರ್ಷಕವಾದ ವಿನ್ಯಾಸವನ್ನು ಒಳಗೊಂಡಿದೆ. ಈ ಲ್ಯಾಪ್‌ಟಾಪ್‌ಗಳಲ್ಲಿ ಎಲ್ಲಾ ಲ್ಯಾಪ್‌ಟಾಪ್‌ಗಳು ಆನ್‌ಲೈನ್ ಮತ್ತು ಆಫ್‌ಲೈನ್ ಚಿಲ್ಲರೆ ರಿಟೇಲ್‌ ಸ್ಟೋರ್‌ಗಳಲ್ಲಿ ಸೇಲ್‌ ಮಾಡಲಾಗುವುದು ಎಂದು ಅಸುಸ್‌ ಕಂಪೆನಿ ಹೇಳಿಕೊಂಡಿದೆ. ಹಾಗಾದ್ರೆ ಈ ಹೊಸ ಲ್ಯಾಪ್‌ಟಾಪ್‌ಗಳ ವಿಶೇಷತೆ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಸುಸ್‌ ಜೆನ್‌ಬುಕ್‌ ಪ್ರೊ 14 Duo OLED

ಅಸುಸ್‌ ಜೆನ್‌ಬುಕ್‌ ಪ್ರೊ 14 Duo OLED

ಅಸುಸ್‌ ಜೆನ್‌ಬುಕ್‌ ಪ್ರೊ 14 Duo OLED ಲ್ಯಾಪ್‌ಟಾಪ್‌ ಸ್ಕ್ರೀನ್‌ಪ್ಯಾಡ್ ಪ್ಲಸ್ ಸೆಕೆಂಡರಿ ಟಚ್‌ಸ್ಕ್ರೀನ್‌ಹೊಂದಿರುವ ಡ್ಯುಯಲ್-ಸ್ಕ್ರೀನ್ ಲ್ಯಾಪ್‌ಟಾಪ್ ಆಗಿದೆ. ಇದು 12 ನೇ ತಲೆಮಾರಿನ ಇಂಟೆಲ್ ಕೋರ್ i9, i7 ಮತ್ತು i5 ಪ್ರೊಸೆಸರ್ ಆಯ್ಕೆಗಳನ್ನು ಒಳಗೊಂಡಿದೆ. ಈ ಲ್ಯಾಪ್‌ಟಾಪ್‌ 32GB RAM ಮತ್ತು 512GB ಅಥವಾ 1TB SSD ಶೇಖರಣಾ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇನ್ನು ಈ ಲ್ಯಾಪ್‌ಟಾಪ್‌ OLED ಟಚ್‌ಸ್ಕ್ರೀನ್ 2.8K ರೆಸಲ್ಯೂಶನ್, HDR ಬೆಂಬಲ, 16:10 ರಚನೆಯ ಅನುಪಾತ ಮತ್ತು 120Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಜೊತೆಗೆ 76WHrs ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 180W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಈ ಲ್ಯಾಪ್‌ಟಾಪ್‌ ಆರಂಭಿಕ ಬೆಲೆ 1,44,990ರೂ. ಆಗಿದೆ.

ಅಸುಸ್‌ ಜೆನ್‌ಬುಕ್‌ ಪ್ರೊ 16X OLED

ಅಸುಸ್‌ ಜೆನ್‌ಬುಕ್‌ ಪ್ರೊ 16X OLED

ಅಸುಸ್‌ ಜೆನ್‌ಬುಕ್‌ ಪ್ರೊ 16X OLED ಲ್ಯಾಪ್‌ಟಾಪ್‌ ಸ್ಪೋರ್ಟ್ಸ್ ಆಕ್ಟಿವ್ ಏರೋಡೈನಾಮಿಕ್ ಸಿಸ್ಟಮ್ ಅನ್ನು ಹೊಂದಿದೆ. ಈ ಲ್ಯಾಪ್‌ಟಾಪ್‌ 16-ಇಂಚಿನ ಟಚ್‌ಸ್ಕ್ರೀನ್ ಅನ್ನು ಹೊಂದಿದೆ. ಇದು 60Hz ರಿಫ್ರೆಶ್ ರೇಟ್ ಅನ್ನು ಹೊಂದಿದ್ದು, HDR ಮತ್ತು ಸ್ಟೈಲಸ್ ಅನ್ನು ಬೆಂಬಲಿಸಲಿದೆ. ಈ ಲ್ಯಾಪ್‌ಟಾಪ್‌ 12ನೇ ತಲೆಮಾರಿನ ಇಂಟೆಲ್ ಕೋರ್‌ i9-12900H ಹಾಗೂ ಇಂಟೆಲ್‌ ಕೋರ್‌i7-12700H ಪ್ರೊಸೆಸರ್ ಆಯ್ಕೆಗಳಲ್ಲಿ ಬರಲಿದೆ. ಹಾಗೆಯೇ 32GB RAM, 16GB RAM ಆಯ್ಕೆಗಳಲ್ಲಿ ದೊರೆಯಲಿದೆ. ಈ ಲ್ಯಾಪ್‌ಟಾಪ್ ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ThunderBolt 4 ಮತ್ತು USB ಟೈಪ್-ಸಿ ಪೋರ್ಟ್‌ಗಳನ್ನು ಹೊಂದಿದೆ. ಈ ಲ್ಯಾಪ್‌ಟಾಪ್‌ ಆರಂಭಿಕ ಬೆಲೆ 2,49,990ರೂ. ಆಗಿದೆ.

ಅಸುಸ್‌ ಪ್ರೊಆರ್ಟ್‌ ಸ್ಟುಡಿಯೋಬುಕ್‌ ಪ್ರೊ 16 OLED

ಅಸುಸ್‌ ಪ್ರೊಆರ್ಟ್‌ ಸ್ಟುಡಿಯೋಬುಕ್‌ ಪ್ರೊ 16 OLED

ಅಸುಸ್‌ ಪ್ರೊಆರ್ಟ್‌ ಸ್ಟುಡಿಯೋಬುಕ್‌ ಪ್ರೊ 16 OLED ಲ್ಯಾಪ್‌ಟಾಪ್‌ 16 ಇಂಚಿನ OELD ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ HDR ಬೆಂಬಲ ಮತ್ತು 16:10 ರಚನೆಯ ಅನುಪಾತವನ್ನು ಹೊಂದಿದೆ. ಇದಲ್ಲದೆ ಈ ಡಿಸ್‌ಪ್ಲೇ 550 ನಿಟ್ಸ್‌ ಬ್ರೈಟ್‌ನೆಸ್‌ ಅನ್ನು ನೀಡಲಿದೆ. ಇದು 12 ನೇ ತಲೆಮಾರಿನ ಇಂಟೆಲ್‌ ಕೋರ್‌ i9-12900H ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 2TB + 2TB ಶೇಖರಣಾ ಸಾಮರ್ಥ್ಯವನ್ನು ಬೆಂಬಲಿಸುವ ಎರಡು SSD ಸ್ಲಾಟ್‌ಗಳನ್ನು ಹೊಂದಿದೆ. ಈ ಲ್ಯಾಪ್‌ಟಾಪ್‌ ಭಾರತದಲ್ಲಿ 3,29,990ರೂ. ಬೆಲೆಯನ್ನು ಹೊಂದಿದೆ.

ಅಸುಸ್‌ ಪ್ರೊಆರ್ಟ್‌ ಸ್ಟುಡಿಯೋಬುಕ್‌ 16 OLED

ಅಸುಸ್‌ ಪ್ರೊಆರ್ಟ್‌ ಸ್ಟುಡಿಯೋಬುಕ್‌ 16 OLED

ಈ ಲ್ಯಾಪ್‌ಟಾಪ್‌ ಕೂಡ 16 ಇಂಚಿನ OELD ಡಿಸ್‌ಪ್ಲೇಯನ್ನು ಹೊಂದಿದೆ. ರೂಪಾಂತರದಂತೆಯೇ ಅದೇ ಡಿಸ್ಪ್ಲೇ ವಿಶೇಷಣಗಳನ್ನು ಹೊಂದಿದೆ. ಇದು 12ನೇ ತಲೆಮಾರಿನ ಇಂಟೆಲ್‌ ಕೋರ್‌i9-12900H ಪ್ರೊಸೆಸರ್ ಮತ್ತು 12ನೇ ತಲೆಮಾರಿನ ಇಂಟೆಲ್‌ ಕೋರ್‌ i7-12700H ಪ್ರೊಸೆಸರ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಹಾಗೆಯೇ ಎನ್‌ವಿಡಿಯಾ ಜಿಪೋರ್ಸ್‌ RTX 3070Ti GPU ಜೊತೆಗೆ 8GB RAM ಮತ್ತು ಎನ್‌ವಿಡಿಯಾ ಜಿಫೋರ್ಸ್‌ RTX 3060 GPU ಜೊತೆಗೆ 6GB RAM ಆಯ್ಕೆಗಳನ್ನು ಹೊಂದಿದೆ. ಇದರ ಬೆಲೆ 1,99,990ರೂ. ಆಗಿದೆ.

ಅಸುಸ್‌ ವಿವೋಬುಕ್‌ ಪ್ರೊ 16X OLED

ಅಸುಸ್‌ ವಿವೋಬುಕ್‌ ಪ್ರೊ 16X OLED

ಅಸುಸ್‌ ವಿವೋಬುಕ್‌ ಪ್ರೊ 16X OLED 16 ಇಂಚಿನ OLED ಡಿಸ್‌ಪ್ಲೇಯನ್ನು ಹೊಂದಿದೆ. ಇದು 12ನೇ ತಲೆಮಾರಿನ ಇಂಟೆಲ್‌ ಕೋರ್‌ i9-12900H ಪ್ರೊಸೆಸರ್‌ ಬಲದಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 32GB RAM ಅನ್ನು ಒಳಗೊಂಡಿದೆ. ಈ ಲ್ಯಾಪ್‌ಟಾಪ್‌ ಫುಲ್‌ ಹೆಚ್‌ಡಿ ರೆಸಲ್ಯೂಶನ್ ವೆಬ್‌ಕ್ಯಾಮ್, ಡಾಲ್ಬಿ ಅಟ್ಮಾಸ್‌ನೊಂದಿಗೆ ಹರ್ಮನ್ ಕಾರ್ಡನ್ ಸ್ಪೀಕರ್ ಸೆಟಪ್, ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು 140W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ಇದು 1,59,990ರೂ. ಬೆಲೆಯಲ್ಲಿ ಬರಲಿದೆ.

ಅಸುಸ್‌ ವಿವೋಬುಕ್‌ ಪ್ರೊ 15 OLED

ಅಸುಸ್‌ ವಿವೋಬುಕ್‌ ಪ್ರೊ 15 OLED

ಅಸುಸ್‌ ವಿವೋಬುಕ್‌ ಪ್ರೊ 15 OLED ಲ್ಯಾಪ್‌ಟಾಪ್‌ 15.6 ಇಂಚಿನ OLED ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 16:9 ರಚನೆಯ ಅನುಪಾತವನ್ನು ಹೊಂದಿದ್ದು, ಫುಲ್‌ ಹೆಚ್‌ಡಿ ರೆಸಲ್ಯೂಶನ್‌ ಅನ್ನು ಹೊಂದಿದೆ. ಈ ಲ್ಯಾಪ್‌ಟಾಪ್‌ 12ನೇ ತಲೆಮಾರಿನ ಇಂಟೆಲ್‌ ಕೋರ್‌ i7-12650H ಪ್ರೊಸೆಸರ್‌ ಅನ್ನು ಹೊಂದಿದೆ. ಇದು ವೆಬ್‌ಕ್ಯಾಮ್, ಡಾಲ್ಬಿ ಅಟ್ಮಾಸ್‌ನೊಂದಿಗೆ ಹರ್ಮನ್ ಕಾರ್ಡನ್ ಸ್ಪೀಕರ್ ಸೆಟಪ್, ಭದ್ರತೆಗಾಗಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು 140W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ಇದರ ಬೆಲೆ 89,990ರೂ. ಆಗಿದೆ.

Best Mobiles in India

Read more about:
English summary
The series includes the Asus Zenbook Pro 14 Duo OLED, Zenbook Pro 16X OLED, ProArt StudioBook Pro 16 OLED, ProArt StudioBook 16 OLED, Vivobook Pro 15 OLED, and Vivobook Pro 16X OLED.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X