5ಜಿ ಯುಗದತ್ತ ಕಾಲಿಟ್ಟ ಜಗತ್ತು!..5G ಇಂಟರ್‌ನೆಟ್ ಹೇಗಿರುತ್ತೆ ಗೊತ್ತಾ?!

|

ಈ ವರ್ಷ ಬಾರ್ಸಿಲೋನಾದಲ್ಲಿ ನಡೆದ ಮೊಬೈಲ್‌ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಫೋಲ್ಡೆಬಲ್ ಫೋನ್‌ಗಳ ಜೊತೆಗೆ ಭಾರೀ ಸದ್ದು ಮಾಡಿದ ತಂತ್ರಜ್ಞಾನವೆಂದರೆ 5ಜಿ ತಂತ್ರಜ್ಞಾನ ಎಂದರೆ ತಪ್ಪಾಗಲಾರದು. ಮೊಬೈಲ್‌ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಸ್ಯಾಮ್‌ಸಂಗ್‌ ಕಂಪೆನಿ ಫೋಲೆಬಲ್ ಮತ್ತು 5ಜಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದರೆ, ಅದಾದ ಕೆಲವೇ ಸಮಯದ ನಂತರ ಚೀನಾದ ಜನಪ್ರಿಯ ಮೊಬೈಲ್ ಕಂಪೆನಿ ಹುವಾವೆ 'ಹುವಾಯಿ ಮ್ಯಾಟ್ ಎಕ್ಸ್‌ 5ಜಿ' ಎಂಬ ಫೋನ್‌ ಅನ್ನು ಬಿಡುಗಡೆಗೊಳಿಸಿ ಆಶ್ಚರ್ಯ ಮೂಡಿಸಿದೆ.

ಅಮೆರಿಕ, ಚೀನಾ, ಜಪಾನ್, ಬ್ರಿಟನ್, ಬ್ರೆಜಿಲ್, ಸ್ವೀಡನ್, ಆಸ್ಟ್ರೇಲಿಯಾದಲ್ಲಿ 5ಜಿ ತಂತ್ರಜ್ಞಾನದ ಸೇವೆ ನೀಡುವ ಭರದ ಸಿದ್ಧತೆಯಲ್ಲಿ ತೊಡಗಿವೆ. ನಾವಿನ್ನು 4G ತಂತ್ರಜ್ಞಾನದ ಯುಗದಲ್ಲೇ ಇರುವಾಗ(5G ಈಗಲೂ ಅಭಿವೃದ್ದಿಯಾಗುತ್ತಿದೆ) 5ಜಿ ತಂತ್ರಜ್ಞಾನವನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳು ತಯಾರಿಸಿರುವುದು ಸಾಮಾನ್ಯರಿಗೆ ಆಶ್ಚರ್ಯವಾಗಿದೆ. ಆದರೆ, 5ನೇ ತಲೆಮಾರಿನ ಸೆಲ್ಯುಲರ್ ತಂತ್ರಜ್ಞಾನದ ಬಗ್ಗೆ ಮೊಬೈಲ್‌ ಕಂಪೆನಿಗಳ ಮಧ್ಯೆ ಸ್ಪರ್ಧೆ ಏರ್ಪಟ್ಟಿದ್ದು 5ಜಿ ಸೇವೆಗೆ ತೆರೆದುಕೊಳ್ಳಲು ಜಗತ್ತು ಸಿದ್ಧವಾಗಿದೆ.

5ಜಿ ಯುಗದತ್ತ ಕಾಲಿಟ್ಟ ಜಗತ್ತು!..5G ಇಂಟರ್‌ನೆಟ್ ಹೇಗಿರುತ್ತೆ ಗೊತ್ತಾ?!

2ಜಿ, 3ಜಿ, 4ಜಿ ಆಯ್ತು ಈಗ ೫ಜಿ ಯುಗ. ಜಾಗತಿಕ ರಂಗದಲ್ಲಿ ಹೊಸ ಕ್ರಾಂತಿಗೆ 5ಜಿ ದೂರಸಂಪಕ ಸೇವೆ ಮುನ್ನುಡಿ ಬರೆಯಲಿದೆ. ವಿಶ್ವದಲ್ಲೇ ಅತಿ ವೇಗದ ಮೊಬೈಲ್ ಮತ್ತು ವೈರ್ ಲೆಸ್ ಇಂಟರ್‌ನೆಟ್ ಸೇವೆ ಒದಗಿಸುತ್ತಿರುವ ದಕ್ಷಿಣ ಕೊರಿಯಾದಲ್ಲಿ ಈಗಾಗಲೇ 5ಜಿ ದೂರ ಸಂಪರ್ಕ ಪರೀಕ್ಷಾ ಸಿಗ್ನಲ್‌ಗಳನ್ನು ನೀಡಲಾಗಿದೆ. ಹಾಗಾಗಿ, ಇಂದಿನ ಲೇಖನದಲ್ಲಿ ದೂರ ಸಂಪರ್ಕ ರಂಗದಲ್ಲಿ ಹೊಸಕ್ರಾಂತಿಯನ್ನೇ ಮಾಡುವುದರ ಜತೆಗೆ, ಆರ್ಥಿಕ ಬೆಳವಣಿಗೆಯಲ್ಲಿ 5ಜಿ ಪ್ರಮುಖ ಪಾತ್ರವೇನು ಎಂಬುದನ್ನು ಮುಂದೆ ಓದಿ ತಿಳಿಯಿರಿ.

5ಜಿ ತಂತ್ರಜ್ಞಾನ ಎಂದರೇನು?

5ಜಿ ತಂತ್ರಜ್ಞಾನ ಎಂದರೇನು?

5ಜಿ ಎಂದರೆ 5ನೇ ತಲೆಮಾರಿನ ಸೆಲ್ಯುಲರ್ ತಂತ್ರಜ್ಞಾನ ಎಂದರ್ಥ. 5ಜಿ ನೆಟ್‌ವರ್ಕ್‌ ಸಂಪೂರ್ಣ ಅಳವಡಿಕೆ ಯಾದಾಗ ಸೆಕೆಂಡಿಗೆ 1 ಜಿಬಿ ಡೌನ್‌ಲೋಡ್‌ ವೇಗವನ್ನು ಒದಗಿಸಲಿದೆ ಎಂದು ಹೇಳಲಾಗಿದೆ. ಇದು ಪ್ರಸ್ತುತ ಇರುವ ಡೇಟಾ ವೇಗದ 100 ಪಟ್ಟು ಹೆಚ್ಚಿರುತ್ತದೆ. ಈಗಾಗಲೇ ಅಮೆರಿಕ ಹೊರತುಪಡಿಸಿ ದಕ್ಷಿಣ ಕೊರಿಯಾ, ಜಪಾನ್‌ಗಳಲ್ಲಿ 5ಜಿ ನೆಟ್‌ವರ್ಕ್‌ ಅನ್ನು ಪರೀಕ್ಷಾರ್ಥವಾಗಿ ಪರಿಚಯಿಸಿರುವುದನ್ನು ನಾವು ನೋಡಬಹುದು.

ಮಿಲಿ ಸೆಕೆಂಡ್‌ನಲ್ಲಿ ಅಂತರ್ಜಾಲ ಸಂಪರ್ಕ

ಮಿಲಿ ಸೆಕೆಂಡ್‌ನಲ್ಲಿ ಅಂತರ್ಜಾಲ ಸಂಪರ್ಕ

ಮಿಲಿ ಸೆಕೆಂಡ್‌ನಲ್ಲಿ ಅಂತರ್ಜಾಲ ಸಂಪರ್ಕ ಪಡೆಯುವ ತಾಂತ್ರಿಕತೆಯನ್ನು 5G ನೆಟ್‌ವರ್ಕ್‌ ಹೊಂದಿದೆ. ಅಂದರೆ, ನೀವು ಕಣ್ಣುಮುಚ್ಚಿ ಕಣ್ಣು ಬಿಡುವುದರ ಒಳಲಾಗಿ ಅಂತರ್ಜಾಲ 10 ಬಾರಿ ಲೋಡಿಂಗ್ ಆಗಿರಲಿದೆ. ಪರಸ್ಪರ ಸಂವಹನ ಸಾಧಿಸುವ ಡಿಜಿಟಲ್‌ ಉಪಕರಣಗಳು ಆಗ್ಯುಮೆಂಟ್ ರಿಯಾಲಿಟಿ ಹಾಗೂ ವರ್ಚುವಲ್ ರಿಯಾಲಿಟಿಯಂತಹ ತಂತ್ರಜ್ಞಾನ ಬಳಕೆ ಮತ್ತಷ್ಟು ಹೆಚ್ಚಾಗಲಿದೆ. ಮನೆ, ಕಾರುಗಳೆಲ್ಲವೂ ಸ್ಮಾರ್ಟ್‌ ಆಗಲಿವೆ.

ಸಂವಹನ ವೇಗ 100ಪಟ್ಟು ಹೆಚ್ಚು

ಸಂವಹನ ವೇಗ 100ಪಟ್ಟು ಹೆಚ್ಚು

5ಜಿ ಪೂರ್ಣ ಪ್ರಮಾಣದಲ್ಲಿ ಬಳಕೆಗೆ ಬಂದರೆ ಸಂವಹನ ವೇಗ 4ಜಿಗಿಂತ 100ಪಟ್ಟು ಹೆಚ್ಚಾಗಲಿದೆ. 4ಜಿ ನೆಟ್‌ವರ್ಕ್‌ನ ಸೌಲಭ್ಯಗಳ ಜತೆಗೆ, OFDM, MC-CDMA, LAS-CDMA, UWB, LMDS ನೆಟ್‌ವರ್ಕ್ ಮತ್ತು IPV6ನಂತಹ ಹಲವು ಸೌಲಭ್ಯಗಳು ಬಳಕೆದಾರರಿಗೆ ಸಿಗಲಿವೆ. 5ಜಿ ಬಂದ ಬಳಿಕ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಸಾಕಷ್ಟು ಮುಂದುವರಿಯಲಿದ್ದು, 5ಜಿ ತಂತ್ರಜ್ಞಾನ ಅಡಿ ಒಂದೇ ಡಿವೈಸ್‌ನಿಂದ ನೂರಾರು ಸಂಪರ್ಕಗಳನ್ನು ಪಡೆಯಬಹುದಾಗಿದೆ.

ಸೆಕೆಂಡ್ಸ್‌ನಲ್ಲಿ ಸಿನಿಮಾ ಡೌನ್‌ಲೋಡ್!

ಸೆಕೆಂಡ್ಸ್‌ನಲ್ಲಿ ಸಿನಿಮಾ ಡೌನ್‌ಲೋಡ್!

ಭವಿಷ್ಯದ 5G ನೆಟ್‌ವರ್ಕ್‌ ಬಳಕೆಗೆ ಬಂದರೆ ಎರಡೂವರೆ ಗಂಟೆ ಅವಧಿಯ ಚಲನಚಿತ್ರ ಡೌನ್‌ಲೋಡ್ ಆಗಲು ಕೇವಲ 5 ಸೆಕೆಂಡುಗಳಲ್ಲಿ ಸಾಕಾಗುತ್ತವೆ. ಪ್ರಸ್ತುತ 4ಜಿ ನೆಟ್‌ವರ್ಕ್‌ ಸಾಮರ್ಥ್ಯ 100ಎಂಬಿಪಿಎಸ್‌ನಿಂದ 1ಜಿಬಿವರೆಗೆ ಇದ್ದರೆ ಇದರ ಹತ್ತು ಪಟ್ಟು ವೇಗವನ್ನು 5G ನೆಟ್‌ವರ್ಕ್‌ ಇನ್ನೆರಡು ವರ್ಷದಲ್ಲಿ ಪಡೆಯಲಿದೆ ಎಂದು ಹೇಳಲಾಗಿದೆ. ನಿಮಗೆ ಗೊತ್ತಾ?, ಸಂಪೂರ್ಣ 5G ತಂತ್ರಜ್ಞಾನ ಅಭಿವೃದ್ದಿಯಾದರೆ, ಈಗಿನ 4ಜಿ ಎಲ್‌ಟಿಇಗಿಂತ 5G ನೂರಾರು ಪಟ್ಟು ವೇಗ ಹೊಂದಲಿದೆ ಎನ್ನಲಾಗಿದೆ.

5G ತಂತ್ರಜ್ಞಾನದ ಲಾಭವೇನು?

5G ತಂತ್ರಜ್ಞಾನದ ಲಾಭವೇನು?

ವಿಶ್ವದಲ್ಲಿ 5ಜಿ ದೊಡ್ಡ ಕ್ರಾಂತಿಯನ್ನೇ ಮಾಡಲಿದೆ. 2026ಕ್ಕೆ ಅಂದಾಜು 123 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು 5ಜಿ ಹೊಂದಿರಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಅಲ್ಲದೇ 2035ರ ಸುಮಾರಿಗೆ 2.20 ಕೋಟಿ ಜನರಿಗೆ 5ಜಿ ತಂತ್ರಜ್ಞಾನದಿಂದ ಉದ್ಯೋಗಾವಕಾಶಗಳು ಲಭ್ಯವಾಗಲಿವೆ ಎಂದು ಅಂದಾಜು ಮಾಡಲಾಗಿದೆ. ವರ್ಚುಯಲ್ ರಿಯಾಲಿಟಿ, ಸೆಲ್ಫ್ ಡ್ರೈವಿಂಗ್ ವಾಹನಗಳು 5ಜಿ ಮೂಲಕ ಚಾಲನೆಗೆ ಬರಲಿವೆ. ಒಟ್ಟಿನಲ್ಲಿ 5G ತಂತ್ರಜ್ಞಾನ ಜಾಗತಿಕ ರಂಗದಲ್ಲಿ ದೊಡ್ಡ ಕ್ರಾಂತಿಯನ್ನೇ ಉಂಟು ಮಾಡಲಿದೆ.

ದಕ್ಷಿಣ ಕೊರಿಯಾ ಮುಂಚೂಣಿ

ದಕ್ಷಿಣ ಕೊರಿಯಾ ಮುಂಚೂಣಿ

2014ರಲ್ಲೇ ದಕ್ಷಿಣ ಕೊರಿಯಾ 5ಜಿ ತಂತ್ರಜ್ಞಾನ ಜಾರಿಯ ಬಗ್ಗೆ ಘೋಷಿಸಿದೆ. ಅಲ್ಲಿನ ಸೌತ್ ಕೊರಿಯಾ ಟೆಲಿಕಾಂ (ಎಸ್‌ಕೆಟಿ), ಕೊರಿಯಾ ಟೆಲಿಕಾಂ (ಕೆಟಿ) ದೂರಸಂಪರ್ಕ ಕಂಪನಿಗಳು ಈಗಾಗಲೇ ಜನರಿಗೆ ಟೆಸ್ಟ್ ಸಿಗ್ನಲ್‌ಗಳನ್ನು ನೀಡುತ್ತಿವೆ. ಜತೆಗೆ ಎಲ್‌ಜಿ ಯುಪ್ಲಸ್ ಕಂಪನಿ ಕೂಡ 5ಜಿಗೆ ಕೈಜೋಡಿಸಿದೆ. ಇದೇ ವರ್ಷ ದಕ್ಷಿಣ ಕೊರಿಯಾದಲ್ಲಿ ವಾಣಿಜ್ಯ 5ಜಿ ಸೇವೆ ಕೊಡಲು ಅಲ್ಲಿನ ಕಂಪನಿಗಳು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿವೆ ಎಂದರೆ ನೀವು ನಂಬಲೇಬೇಕು.

ಬೆಂಗಳೂರಲ್ಲೇ ಮೊದಲು 5ಜಿ

ಬೆಂಗಳೂರಲ್ಲೇ ಮೊದಲು 5ಜಿ

ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಲ್ಲಿ 5ಜಿ ಸೇವೆ ನೀಡುವುದಾಗಿ ಭಾರ್ತಿ ಏರ್‌ಟೆಲ್ ಕಳೆದ ವರ್ಷವೇ ಘೋಷಿಸಿದೆ. ಆದರೆ, ಇದು ಈಗಿನ 5ಜಿ ತಂತ್ರಜ್ಞಾನಕ್ಕಿಂತ 5ರಿಂದ 7 ಪಟ್ಟು ವೇಗವನ್ನು ಮಾತ್ರ ಹೊಂದಿರಲಿದೆ. ಬೆಂಗಳೂರಿನ ಜೊತೆಗೆ ಕೋಲ್ಕತಾದಲ್ಲೂ 5ಜಿ ತಂತ್ರಜ್ಞಾನ ಲಭ್ಯವಾಗಲಿದೆ. ಬೃಹತ್ ಮಲ್ಟಿಪಲ್ ಇನ್‌ಪುಟ್ ಮತ್ತು ಮಲ್ಟಿಪಲ್ ಔಟ್‌ಪುಟ್ ತಂತ್ರಜ್ಞಾನವನ್ನು ಏರ್‌ಟೆಲ್ ಬಳಸಿಕೊಳ್ಳವುದಾಗಿ ಏರ್‌ಟೆಲ್ ತಿಳಿಸಿದೆ. ಆದರೆ, ಜಿಯೋ ಬಿಡುತ್ತಾ ಎಂಬುದನ್ನು ಕಾದು ನೋಡಬೇಕು.

5G ಸ್ಮಾರ್ಟ್‌ಫೋನ್ ತಯಾರಿಕೆ

5G ಸ್ಮಾರ್ಟ್‌ಫೋನ್ ತಯಾರಿಕೆ

5ಜಿ ಬಂದ ಬಳಿಕ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಸಾಕಷ್ಟು ಮುಂದುವರಿಯಲಿದೆ. ಜಗತ್ತಿನ ಅಗ್ರ ಮೊಬೈಲ್‌ ತಯಾರಕ ಸಂಸ್ಥೆಗಳಾದ ಸ್ಯಾಮ್‌ಸಂಗ್‌, ಒನ್‌ಪ್ಲಸ್‌, ಕ್ಸಿಯೋಮಿ, ಒಪ್ಪೋ, ಸೋನಿ, ಹುವಾಯಿ ಮತ್ತು ಮೋಟರೋಲಾ ಈ ವರ್ಷವೇ ಇಂಥ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಉತ್ಸುಕವಾಗಿವೆ. ಸ್ಯಾಮ್‌ಸಂಗ್‌ ಮತ್ತು ಹುವಾವೆ ಮೊಬೈಲ್ ಕಂಪೆನಿಗಳು ಇದರಲ್ಲಿ ಮೊದಲು ಯಶಸ್ಸು ಕಂಡಿದ್ದರೂ, ಇನ್ನುಳಿದ ಕಂಪೆನಿಗಳು ಕೈಕೊಟ್ಟಿ ಕುಳಿತಿವೆ ಎಂದು ಹೇಳುವಂತಿಲ್ಲ.

Best Mobiles in India

English summary
Every Mobile World Conference has phone releases, but some of the phones released this week in Barcelona represent the first batch that will 5G World. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X