ಇದೀಗ ಗೂಗಲ್ ಹೇಳುವುದನ್ನೆಲ್ಲ ನಂಬುವ ಸಮಯವಿಲ್ಲ!..ಬೆಂಗಳೂರು ಪೊಲೀಸರಿಂದ ಎಚ್ಚರಿಕೆ!!

|

ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಹಲವು ರೀತಿಯ ದೂರುಗಳು ದಾಖಲಾಗಿವೆ. ಆದರೆ, ಇತ್ತೀಚಿಗೆ ವೆಬ್‌ಸೈಟ್‌ಗಳಲ್ಲಿ ದೂರವಾಣಿ ಸಂಖ್ಯೆಯನ್ನು ತಿದ್ದುಪಡಿ ಮಾಡಿ ಸಹಾಯವಾಣಿಗೆ ಕರೆ ಮಾಡುವವರನ್ನು ದಾರಿತಪ್ಪಿಸುತ್ತಿರುವ ಹಲವು ಪ್ರಕರಣಗಳು ದಾಖಲಾಗುತ್ತಿವೆ ಎಂದು ನಗರದ ಸೈಬರ್ ಪೊಲೀಸರು ಸಾರ್ವಜನಿಕರನ್ನು ಎಚ್ಚರಿಸುತ್ತಿದ್ದಾರೆ.

ಹೌದು, ಸೈಬರ್ ಕ್ರೈಮ್ ವಿಧಾನದಲ್ಲಿ, ಸರ್ಚ್ ಎಂಜಿನ್ ನಲ್ಲಿ ಜನರನ್ನು ಮೋಸ ಮಾಡುತ್ತಿದ್ದ ತಂಡವೊಂದನ್ನು ಪೊಲೀಸರು ಕಂಡುಹಿಡಿದಿದ್ದಾರೆ. ಗೂಗಲ್ ಮತ್ತು ಇತರ ವೆಬ್‌ಸೈಟ್‌ಗಳಲ್ಲಿ ಮಾಹಿತಿ ಬಯಸುವವರನ್ನು ಗುರಿಯಾಗಿಟ್ಟುಕೊಂಡ ತಂಡವೊಂದು ಅದರಲ್ಲಿ ತೋರಿಸಿದ ಸಂಪರ್ಕ ವಿವರಗಳನ್ನು ತಿದ್ದುಪಡಿ ಮಾಡಿ ಜನರನ್ನು ಮೋಸ ಮಾಡುತ್ತಿರುವವರ ಬಗ್ಗೆ ತಿಳಿಸಿದ್ದಾರೆ.

ಇದೀಗ ಗೂಗಲ್ ಹೇಳುವುದನ್ನೆಲ್ಲ ನಂಬುವ ಸಮಯವಿಲ್ಲ!.ಬೆಂಗಳೂರು ಪೊಲೀಸರಿಂದ ಎಚ್ಚರಿಕೆ!

ಇಂತಹ 20ಕ್ಕೂ ಹೆಚ್ಚು ಕೇಸುಗಳು ಬೆಂಗಳೂರು ನಗರದ ಸೈಬರ್ ಕ್ರೈಂ ವಿಭಾಗದಲ್ಲಿ ಇತ್ತೀಚೆಗೆ ದಾಖಲಾಗಿರುವುದರಿಂದ ಜನರು ಜನರು ಎಚ್ಚೆತ್ತುಕೊಳ್ಳಬೇಕಿದೆ. ಈ ಬಗ್ಗೆ ಅರಿತುಕೊಂಡು ಜಾಗ್ರತೆಯಿಂದಿದ್ದರೆ ಈ ರೀತಿ ಮೋಸ ಹೋಗುವುದನ್ನು ತಡೆಯಬಹುದು ಎನ್ನುತ್ತಿದ್ದಾರೆ, ಹಾಗಾದರೆ, ಏನಿದು ಗೂಗಲ್ ಸರ್ಚ್ ವಂಚನೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ವಂಚನೆ ಪ್ರಕರಣ 1

ವಂಚನೆ ಪ್ರಕರಣ 1

ನಂದಿನ ಲೆಔಟ್‌ನ ನಿವಾಸಿಯೊಬ್ಬರು ಇತ್ತೀಚಿಗೆ ವಿಮಾನ ಟಿಕೆಟ್ ಮಾಡಲು ಗೂಗಲ್ ಸರ್ಚ್ ನಲ್ಲಿ ವಿಮಾನಯಾನದ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಫೋನ್ ಕರೆ ಸ್ವೀಕರಿಸಿದವರು ಕಾರ್ಡು ವಿವರ ಒಟಿಪಿ ಸಂಖ್ಯೆ ಬರೆದು ಹಣವನ್ನು ಆನ್ ಲೈನ್ ನಲ್ಲಿ ಪಡೆದುಕೊಂಡಿದ್ದಾರೆ. ನಂತರ ಅವರ ಖಾತೆಯಿಂದ 38 ಸಾವಿರದ 799 ರೂಪಾಯಿ ಕಳೆದುಕೊಂಡಿದ್ದಾರೆ.

ವಂಚನೆ ಪ್ರಕರಣ 2

ವಂಚನೆ ಪ್ರಕರಣ 2

ಪೇಟಿಎಂ ಮೂಲಕ ವಿದ್ಯುತ್ ಬಿಲ್ ಪಾವತಿಸಲು ಹೊರಟ ವ್ಯಕ್ತಿಯೋರ್ವರು ಮೋಸ ಹೋಗಿದ್ದಾರೆ. ಪೇಟಿಎಂನಲ್ಲಿ ಹಣ ಪಾವತಿಸಲು ಸಾಧ್ಯವಾಗದಾಗ ಕಸ್ಟಮರ್ ಕೇರ್ ಸಂಖ್ಯೆಗೆ ಫೋನ್ ಮಾಡಿದರು. ಕರೆ ಮಾಡಿದಾಗ ಉಮೇಶ್ ಬಳಿ ಡೆಬಿಟ್ ಕಾರ್ಡು ಸಂಖ್ಯೆ ಮತ್ತು ಒಟಿಪಿ ನಂಬರ್ ಕೇಳಿದ್ದಾರೆ. ಅದನ್ನು ನೀಡಿದ ತಕ್ಷಣ 49,999 ರೂಪಾಯಿ ಕಳೆದುಕೊಂಡಿದ್ದಾರೆ.

ವಂಚನೆ ಪ್ರಕರಣ 3

ವಂಚನೆ ಪ್ರಕರಣ 3

ಮಹಿಳೆಯೊಬ್ಬರಿಗೆ ತಮ್ಮ ಇ-ವ್ಯಾಲೆಟ್ ಅಕೌಂಟ್ ನಲ್ಲಿ ಕೆಲವು ಸಮಸ್ಯೆ ಕಾಣಿಸಿದೆ ಹಾಗಾಗಿ ಆಕೆ ಕಸ್ಟಮರ್ ಕೇರ್ ನಂಬರ್ ಅನ್ನು ಗೂಗಲ್‌ನಲ್ಲಿ ಹುಡುಕಾಡಿದ್ದಾರೆ. ಈ ವೇಳೆ ದೊರೆತ ನಂಬರ್‌ಗೆ ಕರೆ ಮಾಡಿದ ಅವರು ಕಾಲ್ ರಿಸೀವ್ ಮಾಡಿದವರಿಗೆ ತಮ್ಮ ಡೆಬಿಟ್ ಕಾರ್ಡು ಸಂಖ್ಯೆ ಮತ್ತು ಒಟಿಪಿ ನಂಬರ್ ತಿಳಿಸಿದ್ದಾರೆ. ಇದರಿಂದ ಅವರು 1,00,000 ಕಳೆದುಕೊಂಡಿದ್ದಾರೆ.

ಸ್ಕ್ಯಾಮರ್‌ಗಳ ಫೇಕ್ ಕಾರ್ಯತಂತ್ರ!

ಸ್ಕ್ಯಾಮರ್‌ಗಳ ಫೇಕ್ ಕಾರ್ಯತಂತ್ರ!

ಗೂಗಲ್‌ನಲ್ಲಿ ಸಿಕ್ಕ ಬ್ಯಾಂಕ್/ಸಂಸ್ಥೆ/ಸಂಘ ಇತ್ಯಾದಿಗಳ ಫೋನ್ ನಂಬರ್ ಅನ್ನು ಅಧಿಕೃತ ಎಂದು ಭಾವಿಸಿ ಜನರು ಆ ಫೋನ್ ನಂಬರ್ ಗೆ ಕರೆ ಮಾಡುತ್ತಾರೆ ಮತ್ತು ಅದು ಮೋಸಗಾರರ ನಂಬರ್ ಆಗಿರುತ್ತದೆ ಎಂಬ ಸುಳಿವು ಅವರಿಗೆ ಸಿಗುವುದೇ ಇಲ್ಲ. ಕರೆಗಳನ್ನು ವೆರಿಫೈ ಮಾಡುವ ನೆಪದಲ್ಲಿ, ಬ್ಯಾಂಕ್ ಉದ್ಯೋಗಿಗಳ ನೆಪದಲ್ಲಿ ಮೋಸಗಾರರು ನಿಮ್ಮ ಬಳಿ ಕೆಲವು ಬ್ಯಾಂಕಿಂಗ್ ಗೆ ಸಂಬಂಧಿಸಿದ ವಯಕ್ತಿಕ ವಿವರಗಳನ್ನು ಪಡೆದುಕೊಂಡು ಮೋಸ ಮಾಡುತ್ತಿರುವ ಘಟನೆಗಳು ಇವಾಗಿವೆ.

ಬದಲಿಸುವುದಕ್ಕೆ ಹೇಗೆ ಸಾಧ್ಯ?

ಬದಲಿಸುವುದಕ್ಕೆ ಹೇಗೆ ಸಾಧ್ಯ?

ಉತ್ತಮ ಸೇವೆಯ ಕಾರಣದಿಂದಾಗಿ ಗೂಗಲ್ ಬಳಕೆದಾರರಿಗೆ ಯಾವುದೇ ಶಾಪ್/ಬ್ಯಾಂಕ್ ಅಥವಾ ಸಂಸ್ಥೆಯ ಕಾಂಟ್ಯಾಕ್ಟ್ ವಿವರಗಳನ್ನು ಎಡಿಟ್ ಮಾಡುವುದಕ್ಕೆ ಅವಕಾಶ ನೀಡುತ್ತದೆ. ಸ್ಕ್ಯಾಮರ್ ಗಳು ಆ ಕಾಂಟ್ಯಾಕ್ಟ್ ವಿವರಗಳನ್ನು ಬದಲಾಯಿಸಿ ತಮ್ಮ ಫೋನ್ ನಂಬರ್ ನೀಡುತ್ತಾರೆ ಮತ್ತು ಜನರನ್ನು ಅದರ ಮೂಲಕ ಟ್ರ್ಯಾಪ್ ಮಾಡುತ್ತಾರೆ. ಗೂಗಲ್‌ನಲ್ಲಿ ಇರುವುದೆಲ್ಲಾ ನಿಜ ಎಂದು ಸಾರ್ವಜನಿಕರು ಬಹುಬೇಗ ವಂಚನೆಗೆ ಒಳಗಾಗುತ್ತಿದ್ದಾರೆ.

ಇದೀಗ ಗೂಗಲ್ ಹೇಳುವುದನ್ನೆಲ್ಲ ನಂಬುವ ಸಮಯವಿಲ್ಲ

ಇದೀಗ ಗೂಗಲ್ ಹೇಳುವುದನ್ನೆಲ್ಲ ನಂಬುವ ಸಮಯವಿಲ್ಲ

ತಮಗೂ ಕೂಡ ಸೇವೆ ಮೊಬೈಲ್ ನಲ್ಲಿ ಲಭ್ಯವಾಗಬೇಕು ಎಂಬ ಕಾರಣಕ್ಕೆ ಬಳಕೆದಾರರು ತಮ್ಮ ಕಾರ್ಡ್ ವಿವರ, ಎಟಿಎಂ ಪಿನ್ ಮತ್ತು ಇತರೆ ಮಾಹಿತಿಗಳನ್ನು ಹಂಚಿಕೊಂಡು ಬಿಡುತ್ತಾರೆ. ಇದರಿಂದ ಜನರ ಹಣವು ಸುಲಭವಾಗಿ ವಂಚಕರ ಪಾಲಾಗುತ್ತಿದೆ. ಈ ಬಗ್ಗೆ ಗೂಗಲ್ ಕ್ಷಮೆಯಾಚಿಸಿದೆ. ಆದರೆ, ಕಾಂಟ್ಯಾಕ್ಟ್ ನಂಬರ್ ಅನ್ನು ಎಡಿಟ್ ಮಾಡುವ ಆಯ್ಕೆ ಇದುವರೆಗೂ ಲಭ್ಯವಿದೆ. ಈ ಬಗ್ಗೆ ನೀವು ಎಚ್ಚರದಿಂದ ಇರುವುದು ಒಳಿತು.

Best Mobiles in India

English summary
Don't believe everything you search on Google. to know visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X