ಗೂಗಲ್‌ನಲ್ಲಿ ಉದ್ಯೋಗ ಪಡೆದ ಬೆಂಗಳೂರಿನಲ್ಲಿ ಓದುತ್ತಿರುವ 22 ವರ್ಷದ ವಿದ್ಯಾರ್ಥಿ!!

|

ಗೂಗಲ್, ಆಪಲ್, ಅಮೆಜಾನ್ ಮತ್ತು ಫೇಸ್‌ಬುಕ್‌ನಂತಹ ವಿಶ್ವದ ಕೆಲವು ದೊಡ್ಡ ದೊಡ್ಡ ಟೆಕ್ ಕಂಪೆನಿಗಳಲ್ಲಿ ಉದ್ಯೋಗ ಪಡೆಯುವುದು ಹಲವರ ಕನಸಾಗಿರುತ್ತದೆ. ಇಂತಹ ಕಂಪನಿಗಳಲ್ಲಿ ಕೆಲಸ ಪಡೆಯುವುದು ಅಷ್ಟು ಸುಲಭವಲ್ಲ ಎಂಬುದು ಸಹ ತಿಳಿದಿರುತ್ತದೆ. ಆದರೆ, ಇಂತಹ ಸವಾಲುಗಳನ್ನು ಕೆಲವರು ಕ್ರ್ಯಾಕ್ ಮಾಡುತ್ತಾರೆ. ಇದೀಗ ಬೆಂಗಳೂರಿನಲ್ಲಿ ಓದುತ್ತಿರುವ 22 ವರ್ಷದ ವಿದ್ಯಾರ್ಥಿಯೋರ್ವ ಹಲವಾರು ಸುತ್ತಿನ ಸಂದರ್ಶನಗಳನ್ನು ಮುರಿದು ಗೂಗಲ್‌ನಲ್ಲಿ ಭಾರೀ ಸಂಬಳದ ಉದ್ಯೋಗವನ್ನು ಗಿಟ್ಟಿಸಿಕೊಂಡಿದ್ದಾನೆ.

ಗೂಗಲ್‌ನಲ್ಲಿ ಉದ್ಯೋಗ ಪಡೆದ ಬೆಂಗಳೂರಿನಲ್ಲಿ ಓದುತ್ತಿರುವ 22 ವರ್ಷದ ವಿದ್ಯಾರ್ಥಿ!!

ಹೌದು, ನಗರದಲ್ಲಿರುವ ಇಂಟರ್ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿಯಲ್ಲಿ ಓದುತ್ತಿರುವ ಕೆ.ಬಿ.ಶ್ಯಾಮ್ ಎಂಬ ವಿದ್ಯಾರ್ಥಿಗೆ 60 ಲಕ್ಷ ರೂ.ಗಳ ಪ್ಯಾಕೇಜ್‌ನೊಂದಿಗೆ ಗೂಗಲ್‌ನಲ್ಲಿ ಉದ್ಯೋಗ ದೊರೆತಿದೆ. ಇಂಟರ್ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿಯಲ್ಲಿ ಐದು ವರ್ಷಗಳ ಡ್ಯುಯಲ್ ಡಿಗ್ರಿ ಕೋರ್ಸ್ ಅನ್ನು ಪೂರ್ಣಗೊಳಿಸಿರುವ ಕೆ.ಬಿ.ಶ್ಯಾಮ್ ಅವರು ಗೂಗಲ್ ಕಂಪೆನಿ ಸೇರಲು ಇದೇ ವರ್ಷದ ಅಕ್ಟೋಬರ್‌ನಲ್ಲಿ ಪೋಲೆಂಡ್‌ನ ವಾರ್ಸಾಗೆ ಹಾರಲಿದ್ದಾರೆ ಎಂದು ತಿಳಿದುಬಂದಿದೆ.

ಅತಿದೊಡ್ಡ ಟೆಕ್ ಕಂಪೆನಿಯಲ್ಲಿ ತನ್ನ ಕನಸಿನ ಕೆಲಸವನ್ನು ಪಡೆದುಕೊಳ್ಳುವುದು ಸುಲಭವಲ್ಲ. ಕಳೆದ ಐದು ತಿಂಗಳ ಅವಧಿಯಲ್ಲಿ, ಶ್ಯಾಮ್ ಅವರು ಗೂಗಲ್ ಉದ್ಯೋಗದ ಪ್ರತಿ ಹಂತವನ್ನು ಪೂರ್ಣಗೊಳಿಸಿದ ನಂತರವೇ ಅವರು ಗೂಗಲ್‌ನಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿದೆಯಂತೆ. ಆನ್‌ಲೈನ್ ಸಂದರ್ಶನ, ಜರ್ಮನಿಯ ಮ್ಯೂನಿಚ್‌ನಲ್ಲಿ ಆನ್-ಸೈಟ್ ಸಂದರ್ಶನ ಮತ್ತು ತನ್ನ ತಂಡವನ್ನು ನಿರ್ಧರಿಸಲು ತಂಡ ಹೊಂದಾಣಿಕೆಯ ಪ್ರಕ್ರಿಯೆಯನ್ನು ತೆರವುಗೊಳಿಸಬೇಕಾಗಿತ್ತು ಎಂದು ಶ್ಯಾಮ್ ಅವರು ತಿಳಿಸಿದ್ದಾರೆ.

ಗೂಗಲ್‌ನಲ್ಲಿ ಉದ್ಯೋಗ ಪಡೆದ ಬೆಂಗಳೂರಿನಲ್ಲಿ ಓದುತ್ತಿರುವ 22 ವರ್ಷದ ವಿದ್ಯಾರ್ಥಿ!!

ಗೂಗಲ್‌ನಲ್ಲಿ ನಾನು ಉದ್ಯೋಗ ನಿರ್ವಹಿಸುವ ಕ್ಷೇತ್ರವು ಗೂಗಲ್ ಕ್ಲೌಡ್ ಪ್ಲಾಟ್‌ಫಾರ್ಮ್ ಆಗಿರುತ್ತದೆ ಮತ್ತು ಇದು ನನ್ನ ಅಪೇಕ್ಷಿತ ಉದ್ಯೋಗ ಕೂಡ ಎಂದು ಶ್ಯಾಮ್ ಅವರು ಹೇಳಿದ್ದಾರೆ. ಕಂಪ್ಯೂಟರ್ ಸೈನ್ಸ್ ಮೂಲಭೂತ ವಿಷಯಗಳ ಬಗ್ಗೆ ಉತ್ತಮ ಜ್ಞಾನವನ್ನು ಹೊಂದಿರುವುದು ಮತ್ತು ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳನ್ನು ಸುಧಾರಿಸುವುದು ಗೂಗಲ್‌ಗೆ ಪ್ರವೇಶಿಸಲು ಬಯಸುವ ವಿದ್ಯಾರ್ಥಿಗಳ ಸಾಧ್ಯತೆಗಳನ್ನು ಸುಧಾರಿಸುತ್ತದೆ ಎಂದು ಟೆಕ್ಕಿಗಳಿಗೆ ಅವರು ಮಾಧ್ಯಮಗಳ ಮೂಲಕ ಸಲಹೆಯನ್ನು ನೀಡಿದ್ದಾರೆ.

ಓದಿರಿ: ಉಚಿತ ಸ್ಮಾರ್ಟ್‌ಫೋನ್ ಗೆಲ್ಲಲು 'ಶಿಯೋಮಿ' ಭರ್ಜರಿ ಆಫರ್!...20 ದಿನ ಟೈಮ್!

ಇನ್ನು ಭಾರತದಿಂದ ಪ್ರತಿಭೆಗಳನ್ನು ನೇಮಿಸಿಕೊಳ್ಳಲು ಗೂಗಲ್ ದೊಡ್ಡ ಮೊತ್ತವನ್ನು ಖರ್ಚು ಮಾಡುವುದು ಇದೇ ಮೊದಲಲ್ಲ. ಟೆಕ್ ದೈತ್ಯ ಈ ವರ್ಷದ ಆರಂಭದಲ್ಲಿ ಮುಂಬೈನಿಂದ 21 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ನೇಮಿಸಿಕೊಂಡಿದೆ. ಪ್ರೋಗ್ರಾಮಿಂಗ್ ಸವಾಲುಗಳನ್ನು ಆಯೋಜಿಸುವ ವೆಬ್‌ಸೈಟ್‌ನಲ್ಲಿ ಟೆಕ್ ದೈತ್ಯರಿಂದ ಗುರುತಿಸಲ್ಪಟ್ಟ ಅಬ್ದುಲ್ಲಾ ಖಾನ್ ಅವರನ್ನು ಗೂಗಲ್ ಸೈಟ್ ವಿಶ್ವಾಸಾರ್ಹತೆ ಎಂಜಿನಿಯರ್ ಆಗಿ ವಾರ್ಷಿಕ 1.2 ಕೋಟಿ ರೂ. ಪ್ಯಾಕೇಜ್ ಪಡೆದಿದ್ದರು.

Best Mobiles in India

English summary
he 22-year-old student from IIIT-Bangalore, KB Shyam, has been hired at an annual package of Rs 60 lakh. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X