ಉಚಿತ ಸ್ಮಾರ್ಟ್‌ಫೋನ್ ಗೆಲ್ಲಲು 'ಶಿಯೋಮಿ' ಭರ್ಜರಿ ಆಫರ್!...20 ದಿನ ಟೈಮ್!

|

ಭಾರತದಲ್ಲಿ ತನ್ನ ಐದನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುವ ಸಂಭ್ರಮದಲ್ಲಿರುವ ಶಿಯೋಮಿ ಭರ್ಜರಿ ಸಿಹಿಸುದ್ದಿ ನೀಡಿದೆ. ಐದನೇ ವಾರ್ಷಿಕೋತ್ಸವದ ಸಂಭ್ರಮದ ಅಡಿಯಲ್ಲಿ ಕಂಪನಿಯು ತನ್ನ ಬಳಕೆದಾರರಿಗೆ ಒಂದು ಯುನಿಟ್ ರೆಡ್ಮಿ ನೋಟ್ 7 ಎಸ್ (3 ಜಿಬಿ + 32 ಜಿಬಿ), ಎರಡು ಯುನಿಟ್ ರೆಡ್ಮಿ ನೋಟ್ 7 ( ಪ್ರತಿ ವಾರ 3 ಜಿಬಿ + 32 ಜಿಬಿ) ಮತ್ತು ಎರಡು ಯೂನಿಟ್ ರೆಡ್‌ಮಿ 7 (3 ಜಿಬಿ + 32 ಜಿಬಿ). ಸೇರಿದಂತೆ ಒಟ್ಟು 20 ಸ್ಮಾರ್ಟ್‌ಫೋನ್‌ಗಳನ್ನು ಗ್ರಾಹಕರಿಗೆ ಉಚಿತವಾಗಿ ನೀಡಲು ಮುಂದಾಗಿದೆ.

ಉಚಿತ ಸ್ಮಾರ್ಟ್‌ಫೋನ್ ಗೆಲ್ಲಲು 'ಶಿಯೋಮಿ' ಭರ್ಜರಿ ಆಫರ್!...20 ದಿನ ಟೈಮ್!

ಹೌದು, ಇದೇ ಜೂನ್ 28 ರಿಂದ ಜುಲೈ 19 ರವರೆಗೆ 20 ದಿನಗಳ ಅವಧಿಯಲ್ಲಿ 20 ಶಿಯೋಮಿ ಮೊಬೈಲ್ಗಳನ್ನು ಗ್ರಾಹಕರು ಗೆಲ್ಲಬಹುದಾಗಿದ್ದು, ಲಕ್ಕಿಡ್ರಾ ಆಧಾರದ ಮೇಲೆ ಸ್ಮಾರ್ಟ್‌ಫೋನ್ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ಆದರೆ ಅದಕ್ಕಿಂತ ಮೊದಲು ಗ್ರಾಹಕರು 1,000 ರೂಪಾಯಿಗಳನ್ನು ಪೂರ್ವ ಪಾವತಿ ಮಾಡಿ ಸ್ಮಾರ್ಟ್‌ಫೋನ್ ಬುಕ್ ಮಾಡಿದರಷ್ಟೇ ಆ ಕೂಪನ್ ಅನ್ನು ಚೆಕ್ ಔಟ್ ಸಮಯದಲ್ಲಿ ಪಡೆಯಬಹುದು ಎಂದು ಕಂಪೆನಿಯು ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ಇಷ್ಟು ಮಾತ್ರವಲ್ಲದೇ, ಶಿಯೋಮಿಯು ಶೀಘ್ರದಲ್ಲೇ ಬರಲಿವರುವ ನೂತನ ಉತ್ಪನ್ನಗಳನ್ನುಸಹ ಪಟ್ಟಿ ಮಾಡಿ ಗಮನಸೆಳೆದಿದೆ. ಎಲ್ಇಡಿ ಬಲ್ಬ್, ಮಿ ಟ್ರಕ್ಕರ್ ಲೋಡರ್, ಶಿಯೋಮಿ ಮಿ ಹೆಡ್‌ಫೋನ್‌ಗಳು, ಮಿ ವೈರ್‌ಲೆಸ್ ಇಯರ್‌ಫೋನ್‌ಗಳು ಮತ್ತು ಫಾಸ್ಟ್‌ಚಾರ್ಜರ್ ಅನ್ನು ಪಟ್ಟಿ ಮಾಡಿದೆ. ಈ ಉತ್ಪನ್ನಗಳು ಮುಂದಿನ ನಾಲ್ಕು ವಾರಗಳಲ್ಲಿ ದೇಶದಲ್ಲಿ ಬಿಡುಗಡೆಯಾಗುವ ಬಗ್ಗೆ ಸಹ ಮಾಹಿತಿ ನೀಡಿದೆ. ಹಾಗಾದರೆ, ಶಿಯೋಮಿ ಪಟ್ಟಿ ಮಾಡಿರುವ ಎಲ್ಲಾ ಹೊಸ ಉತ್ಪನ್ನಗಳ ಬಗ್ಗೆ ಮುಂದೆ ಓದಿ ತಿಳಿಯಿರಿ.

ಮಿ ಟ್ರಕ್ ಲೋಡರ್

ಮಿ ಟ್ರಕ್ ಲೋಡರ್

ನಿಮ್ಮ ಮಗುವಿನ ಹೊಸ ನೆಚ್ಚಿನ ಆಟಿಕೆ ಎಂದು ಹೇಳಿಕೊಳ್ಳಲಾಗಿರುವ 'ಮಿ ಟ್ರಕ್ಕರ್ ಲೋಡರ್' ಎಂಬ ಆಟದ ಗ್ಯಾಜೆಟ್ ಅನ್ನು ಶಿಯೋಮಿ ಪಟ್ಟಿ ಮಾಡಿದೆ. ಇದು 500 ಭಾಗಗಳೊಂದಿಗೆ ಬರಲಿದೆ ಎಂದು ಕಂಪೆನಿ ಹೇಳಿಕೊಂಡಿದ್ದು, ಸ್ಟೀರಿಂಗ್ ವೀಲ್ ಕಂಟ್ರೋಲ್ ಸಿಸ್ಟಮ್ನೊಂದಿಗೆ ಬರಲಿದೆ ಎಂದು ಶಿಯೋಮಿ ಇಂಡಿಯಾ ಬಹಿರಂಗಪಡಿಸಿರುವು ಗ್ಯಾಜೆಟ್ ಪ್ರಿಯರ ಗಮನಸೆಳೆದಿದೆ.

ಮಿ ಎಲ್ಇಡಿ ಬಲ್ಬ್

ಮಿ ಎಲ್ಇಡಿ ಬಲ್ಬ್

ಶಿಯೋಮಿಯು ಇದೇ ಮೊದಲಬಾರಿಗೆ ಪುನರ್ಭರ್ತಿ ಮಾಡಬಹುದಾದ ಎಲ್ಇಡಿ ಬಲ್ಬ್ ಬರಲಿದೆ ಎಂದು ಹೇಳಿಕೊಂಡಿದೆ. ಈ ಸ್ಮಾರ್ಟ್‌ ಬಲ್ಬ್‌ 800 ಲುಮಿನಸ್ ಬ್ರೈಟ್‌ನೆಸ್ ಸಾಮರ್ಥ್ಯವನ್ನು ಪಡೆದುಕೊಳ್ಳಲಿದ್ದು, ಹೆಚ್ಚು ಪ್ರಕಾಶಮಾನವಾಗಿ ಬೆಳಕನ್ನು ಒದಗಿಸುತ್ತವೆ. ಇನ್ನು ಈ ಬಲ್ಬ್ 10W ವ್ಯಾಟ್ಸ್ ವಿದ್ಯುತ್ ಶಕ್ತಿಯನ್ನು ಬಳಸಿಕೊಳ್ಳಲಿದ್ದು, ಇದರಿಂದ ವಿದ್ಯುತ್ ಉಳಿತಾಯವಾಗಲಿದೆ.

ಮಿ ಹೆಡ್‌ಫೋನ್‌

ಮಿ ಹೆಡ್‌ಫೋನ್‌

ಶಿಯೋಮಿ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ವೈರ್‌ಲೆಸ್ ಹೆಡ್‌ಫೋನ್‌ ಅನ್ನು ತರಲು ಮುಂದಾಗಿದೆ. ಕಂಪೆನಿ ಪ್ರಕಟಿಸಿರುವ ಚಿತ್ರಗಳಿಂದ ವೈರ್‌ಲೆಸ್ ಓವರ್ ದಿ ಇಯರ್ ಹೆಡ್‌ಫೋನ್‌ ಬರುವುದನ್ನು ಶಿಯೋಮಿ ಖಚಿತಪಡಿಸಿದೆ. ಇದರಿಂದ ಗೇಮಿಂಗ್ ಮತ್ತು ಮ್ಯೂಸಿಕ್ ಪ್ರಿಯರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ವೈರ್‌ಲೆಸ್ ಹೆಡ್‌ಫೋನ್‌ ಸಿಗುವ ಆಶಯ ಮೂಡಿದೆ.

ಮಿ ಫಾಸ್ಟ್ ಚಾರ್ಜರ್

ಮಿ ಫಾಸ್ಟ್ ಚಾರ್ಜರ್

ಶಿಯೋಮಿಯು ಶೀಘ್ರದಲ್ಲೇ ಕಂಪನಿಯ ತನ್ನ ಮೊದಲ 27W ಫಾಸ್ಟ್ ಚಾರ್ಜರ್ ಆಗಿರಬಹುದು ಅಥವಾ ಅದೇ ವೈಶಿಷ್ಟ್ಯವನ್ನು ನೀಡುವ ಹೊಸ ಪವರ್ ಬ್ಯಾಂಕ್ ಆಗಿರಬಹುದಾದ ‘ಸೂಪರ್-ಫಾಸ್ಟ್ ಚಾರ್ಜರ್' ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ತಿಳಿಸಿಳದೆ. ಶಿಯೋಮಿಯು ಭಾರತದಲ್ಲಿ ಈಗಾಗಲೇ ಭಾರತದಲ್ಲಿ 18W ಫಾಸ್ಟ್ ಚಾರ್ಜರ್ ಅನ್ನು ಮಾರಾಟ ಮಾಡುತ್ತಿದೆ.

ಮಿ ನೆಕ್‌ಬ್ಯಾಂಡ್

ಮಿ ನೆಕ್‌ಬ್ಯಾಂಡ್

ಶಿಯೋಮಿ ಕಂಪೆನಿಯ ವೈರ್‌ಲೆಸ್ ಇಯರ್‌ಫೋನ್‌ಗಳ ಮೊದಲ ನೆಕ್‌ಬ್ಯಾಂಡ್ ಇಯರ್‌ಫೋನ್‌ ಆಗಿ ಮಿ ನೆಕ್‌ಬ್ಯಾಂಡ್ ಬಿಡುಗಡೆಯಾಗಲಿದೆ ಎಂದು ಶಿಯೋಮಿ ತಿಳಿಸಿದೆ. ಕೆಲಸ ಮಾಡುವಾಗಲೂ ಸರಾಗವಾಗಿ ಬಳಸಬಹುದಾದ ಈ ನೆಕ್‌ಬ್ಯಾಂಡ್ಗೆ ಹೆಚ್ಚು ಬೇಡಿಕೆ ಇರುವುದನ್ನು ಕಂಡುಕೊಂಡಿರುವ ಶಿಯೋಮಿ ನೆಕ್‌ಬ್ಯಾಂಡ್ ವಿನ್ಯಾಸವನ್ನು ಪ್ರಕಟಿಸಿದೆ ಎನ್ನಲಾಗಿದೆ.

Best Mobiles in India

English summary
Xiaomi India to launch new headphones, LED lamp, wireless earphones and fast charger soon. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X