ವಾಟ್ಸಾಪ್‌ನಲ್ಲಿನ ಈ ಫೀಚರ್ಸ್‌ಗಳ ಬಗ್ಗೆ ನಿಮಗೆ ತಿಳಿದಿದೆಯೇ?

|

ಮೆಟಾ ಒಡೆತನದ ವಾಟ್ಸಾಪ್‌ ವಿಶ್ವದಲ್ಲಿಯೇ ಅತಿ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿದೆ. ಬಳಕೆದಾರರ ಅನುಕೂಲಕ್ಕಾಗಿ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸುವ ಮೂಲಕ ನೆಚ್ಚಿನ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಇನ್ನು ವಾಟ್ಸಾಪ್‌ ಕೂಡ ಬಳಕೆದಾರರ ಅನುಭವ ಸುದಾರಿಸುವುದಕ್ಕಾಗಿ ಹೊಸ ಮಾದರಿಯ ಫೀಚರ್ಸ್‌ಗಳನ್ನು ಅಪ್ಡೇಟ್‌ ಮಾಡುತ್ತಲೇ ಬಂದಿದೆ. ಹೊಸ ಹೊಸ ಫೀಚರ್ಸ್‌ಗಳನ್ನು ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಅಭಿವೃದ್ದಿಪಡಿಸುತ್ತಾ ಬಂದಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಅನೇಕ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಕೆಲವು ಫೀಚರ್ಸ್‌ಗಳ ಬಗ್ಗೆ ಎಷ್ಟೋ ಮಂದಿಗೆ ತಿಳಿದೇ ಇಲ್ಲ. ಅದರಲ್ಲೂ ಕ್ರಾಸ್‌ ಪ್ಲಾಟ್‌ಫಾರ್ಮ್‌ ಹೊಂದಾಣಿಕೆಯಂತಹ ವಿಚಾರಗಳ ಬಗ್ಗೆ ಹೆಚ್ಚು ತಿಳಿಯುವುದೇ ಇಲ್ಲ. ದೀರ್ಘಾವಧಿಯಿಂದಲೂ ವಾಟ್ಸಾಪ್‌ ಬಳಸುವವರು ಕೂಡ ಈ ಮಾದರಿಯ ಫೀಚರ್ಸ್‌ಗಳನ್ನು ಮರೆತುಬಿಟ್ಟಿರುತ್ತಾರೆ. ಹೊಸ ಫೀಚರ್ಸ್‌ಗಳ ಎಂಟ್ರಿಯಿಂದ ಈ ಫೀಚರ್ಸ್‌ಗಳು ಸಾಮಾನ್ಯವಾಗಿ ಮರೆತು ಬಿಡುತ್ತೇವೆ. ಹೀಗೆ ನಮ್ಮ ಅರಿವಿಗೆ ಬಾರದ ವಾಟ್ಸಾಪ್‌ನ ಪ್ರಮುಖ ಫೀಚರ್ಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್‌ ಚಾಟ್‌ ಫಾರ್ಮ್ಯಾಟ್ ಬದಲಾಯಿಸುವುದು ಹೇಗೆ?

ವಾಟ್ಸಾಪ್‌ ಚಾಟ್‌ ಫಾರ್ಮ್ಯಾಟ್ ಬದಲಾಯಿಸುವುದು ಹೇಗೆ?

ವಾಟ್ಸಾಪ್‌ನಲ್ಲಿ ಬಳಕೆದಾರರು ಚಾಟ್‌ ಮಾಡುವಾಗ ಕೆಲವು ಪದಗಳನ್ನು ಹೈಲೈಟ್ ಮಾಡಲು ಬಯಸುತ್ತಾರೆ. ಇದಕ್ಕಾಗಿ ತಮ್ಮ ಟೆಕ್ಸ್ಟ್‌ ಅನ್ನು ಫಾರ್ಮ್ಯಾಟ್ ಮಾಡಲು ಬಿಗ್‌ ಫಾಂಟ್‌ನಲ್ಲಿ ಸಂದೇಶ ಕಳುಹಿಸುತ್ತಾರೆ. ವಾಟ್ಸಾಪ್ ಚಾಟ್‌ನಲ್ಲಿ ಫಾರ್ಮ್ಯಾಟ್‌ ಬದಲಾಯಿಸಲು ನಿಮಗೆ ಅನೇಕ ಅವಕಾಶಗಳಿವೆ. ಇದರಿಂದ ನಿಮ್ಮ ಚಾಟ್ ಅನ್ನು ಇಟಾಲಿಕ್ಸ್‌ನಲ್ಲಿ ಫಾರ್ಮ್ಯಾಟ್ ಮಾಡಬಹುದು. ಇದಕ್ಕಾಗಿ ನೀವು ಈ ಹಂತಗಳನ್ನು ಅನುಸರಿಸಿದರೆ ಸಾಕು.
*ಬೋಲ್ಡ್: ನೀವು ಚಾಟ್‌ ಮಾಡುವಾಗ ಟೆಕ್ಸ್ಟ್‌ನ ಎರಡು ಬದಿಯಲ್ಲಿ ಸ್ಟಾರ್‌ ಮಾರ್ಕ್‌ ಅನ್ನು ಹಾಕುವ ಮೂಲಕ ಪಠ್ಯದಲ್ಲಿ ನಿಮ್ಮ ಚಾಟ್ ಅನ್ನು ಬೋಲ್ಡ್ ಮಾಡಬಹುದು.
*ಇಟಾಲಿಕ್ಸ್: ನಿಮ್ಮ ಟೆಕ್ಸ್ಟ್‌ನ ಎರಡೂ ಬದಿಯಲ್ಲಿ ಅಂಡರ್‌ಸ್ಕೋರ್‌ಗಳನ್ನು ಸೇರಿಸುವ ಮೂಲಕ ನಿಮ್ಮ ಚಾಟ್‌ಗೆ ನೀವು ಇಟಾಲಿಕ್ಸ್ ಅನ್ನು ಸೇರಿಸಬಹುದು.
*ಸ್ಟ್ರೈಕ್-ಥ್ರೂ: ಇದಲ್ಲದೆ ನಿಮ್ಮ ಟೆಕ್ಸ್ಟ್‌ ಅನ್ನು ಟಿಲ್ಡ್‌ನೊಂದಿಗೆ ಮುಚ್ಚುವ ಮೂಲಕ ನೀವು ಸ್ಟ್ರೈಕ್ ಮಾಡಬಹುದಾಗಿದೆ.
ಇದರಿಂದ ನಿಮ್ಮ ವಾಟ್ಸಾಪ್‌ ಚಾಟ್‌ ಅನ್ನು ನಿಮ್ಮ ಆಯ್ಕೆಗೆ ತಕ್ಕಂತೆ ಫಾರ್ಮ್ಯಾಟ್ ಮಾಡಬಹುದಾಗಿದೆ.

ವಾಟ್ಸಾಪ್‌ನಲ್ಲಿ ಡೇಟಾ ಬಳಕೆಯನ್ನು ಪರಿಶೀಲಿಸುವುದು ಹೇಗೆ?

ವಾಟ್ಸಾಪ್‌ನಲ್ಲಿ ಡೇಟಾ ಬಳಕೆಯನ್ನು ಪರಿಶೀಲಿಸುವುದು ಹೇಗೆ?

ವಾಟ್ಸಾಪ್‌ನಲ್ಲಿ ಟೆಕ್ಸ್ಟ್‌ ಸಂದೇಶ, ಮೀಡಿಯಾ ಸಂದೇಶ ಮತ್ತು ವಾಟ್ಸಾಪ್‌ ವಾಯ್ಸ್‌ ಹಾಗೂ ವೀಡಿಯೋ ಕಾಲ್‌ ಮಾಡಿದ ನಂತರ ನೀವು ವಾಟ್ಸಾಪ್‌ನಲ್ಲಿ ಎಷ್ಟು ಡೇಟಾ ಬಳಸಿದ್ದೀರಿ ಅನ್ನೊದನ್ನ ಕೂಡ ತಿಳಿಯುವುದಕ್ಕೆ ಅವಕಾಶವಿದೆ. ಇದಕ್ಕಾಗಿ ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕಾಗುತ್ತದೆ.
* ಮೊದಲಿಗೆ ವಾಟ್ಸಾಪ್‌ ಸೆಟ್ಟಿಂಗ್ಸ್‌ಗೆ ಹೋಗಿ
* ನಂತರ ಸ್ಟೋರೇಜ್‌ ಮತ್ತು ಡೇಟಾವನ್ನು ಆಯ್ಕೆಮಾಡಿ.
* ಇದರಲ್ಲಿ ನೆಟ್‌ವರ್ಕ್ ಯೂಸೇಜ್‌ ತೆರೆಯಿರಿ.
* ಇದೀಗ ನೀವು ವಾಟ್ಸಾಪ್‌ಗಾಗಿ ಬಳಸಿದ ಡೇಟಾ ವಿವರ ಸೇರಿದಂತೆ ಎಲ್ಲಾ ಅಂಕಿಅಂಶಗಳನ್ನು ತಿಳಿದುಕೊಳ್ಳಬಹುದಾಗಿದೆ.

ವಾಟ್ಸಾಪ್‌ನಲ್ಲಿ ಬಿಗ್‌ ಫೈಲ್‌ಗಳನ್ನು ಡಿಲೀಟ್‌ ಮಾಡುವುದು ಹೇಗೆ?

ವಾಟ್ಸಾಪ್‌ನಲ್ಲಿ ಬಿಗ್‌ ಫೈಲ್‌ಗಳನ್ನು ಡಿಲೀಟ್‌ ಮಾಡುವುದು ಹೇಗೆ?

ವಾಟ್ಸಾಪ್‌ ಫೋನ್‌ ಸ್ಟೋರೇಜ್‌ನಲ್ಲಿ ಬಿಗ್‌ ಸ್ಪೇಸ್‌ ತೆಗೆದುಕೊಳ್ಳುತ್ತದೆ. ಆದರಿಂದ ನಿಮ್ಮ ಫೋನ್‌ನಲ್ಲಿ ಸ್ಪೇಸ್‌ ಅನ್ನು ಫ್ರೀ ಮಾಡಬೇಕಾದರೆ ನಿಮ್ಮ ವಾಟ್ಸಾಪ್‌ನಲ್ಲಿ ನಿರ್ದಿಷ್ಟ ಚಾಟ್‌ಗಳಿಂದ ಆಯ್ದ ಫೈಲ್‌ಗಳನ್ನು ನೀವು ಡಿಲೀಟ್‌ ಮಾಡಬೇಕಾಗುತ್ತದೆ. ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.
* ಮೊದಲಿಗೆ ವಾಟ್ಸಾಪ್‌ ಸೆಟ್ಟಿಂಗ್ಸ್‌ ತೆರೆಯಿರಿ.
* ಓಪನ್ ಸ್ಟೋರೇಜ್ ಮತ್ತು ಡೇಟಾ ತೆರೆಯಿರಿ.
* ಮ್ಯಾನೇಜ್ ಸ್ಟೋರೇಜ್ ಮೇಲೆ ಟ್ಯಾಪ್ ಮಾಡಿ.
* ನೀವು ಇದೀಗ ನಿಮ್ಮ ವಾಟ್ಸಾಪ್‌ ಕಂಟ್ಯಾಕ್ಟ್‌ ಲಿಸ್ಟ್‌ಗಳನ್ನು ಕಾಣಬಹುದು.
* ನೀವು ದೊಡ್ಡ ಫೈಲ್‌ಗಳನ್ನು ಅಳಿಸಲು ಬಯಸುವ ಚಾಟ್ ಅನ್ನು ಆಯ್ಕೆಮಾಡಿ ಮತ್ತು ತೆರೆಯಿರಿ.
* ಡಿಲೀಟ್‌ ಮಾಡಲು ಬಯಸಿದ ಫೈಲ್ ಅನ್ನು ಆಯ್ಕೆಮಾಡಿ.
* ಮೇಲೆ ಕಾಣುವ ಡಿಲೀಟ್‌ ಐಕಾನ್‌ ಅನ್ನು ಟ್ಯಾಪ್‌ ಮಾಡುವ ಮೂಲಕ ಡಿಲೀಟ್‌ ಮಾಡಿ.

ವಾಟ್ಸಾಪ್‌ನಲ್ಲಿ ವಿಭಿನ್ನ ಚಾಟ್‌ಗಳಿಗೆ ವಿಭಿನ್ನ ವಾಲ್‌ಪೇಪರ್ ಸೆಟ್‌ ಮಾಡುವುದು ಹೇಗೆ?

ವಾಟ್ಸಾಪ್‌ನಲ್ಲಿ ವಿಭಿನ್ನ ಚಾಟ್‌ಗಳಿಗೆ ವಿಭಿನ್ನ ವಾಲ್‌ಪೇಪರ್ ಸೆಟ್‌ ಮಾಡುವುದು ಹೇಗೆ?

* ಮೊದಲಿಗೆ ನೀವು ವಾಲ್‌ಪೇಪರ್ ಸೆಟ್‌ ಮಾಡಲು ಬಯಸುವ ಚಾಟ್‌ ತೆರೆಯಿರಿ.
* ಮೂರು-ಡಾಟ್ ಮೆನು ಟ್ಯಾಪ್ ಮಾಡಿ.
* ವಾಲ್‌ಪೇಪರ್ ತೆರೆಯಿರಿ.
* ನಿಮ್ಮ ಫೋನ್ ಗ್ಯಾಲರಿಯಿಂದ ವಾಲ್‌ಪೇಪರ್ ಸೇರಿಸಿ.
* ನಿಮ್ಮ ಆಯ್ಕೆಯನ್ನು ಅನ್ವಯಿಸಲು ಸೆಟ್ ವಾಲ್‌ಪೇಪರ್ ಅನ್ನು ಟ್ಯಾಪ್ ಮಾಡಿ.

ವಾಟ್ಸಾಪ್‌ ಚಾಟ್‌ ಅನ್ನು ನಿಮಗೆ ಇಮೇಲ್‌ ಮಾಡಿಕೊಳ್ಳುವುದು ಹೇಗೆ?

ವಾಟ್ಸಾಪ್‌ ಚಾಟ್‌ ಅನ್ನು ನಿಮಗೆ ಇಮೇಲ್‌ ಮಾಡಿಕೊಳ್ಳುವುದು ಹೇಗೆ?

* ಮೊದಲಿಗೆ ನಿಮ್ಮ ವಾಟ್ಸಾಪ್‌ ಸೆಟ್ಟಿಂಗ್ಸ್‌ ತೆರೆಯಿರಿ.
* ಇದೀಗ ವಾಟ್ಸಾಪ್‌ ಚಾಟ್ಸ್ ಮೇಲೆ ಟ್ಯಾಪ್ ಮಾಡಿ.
* ಇದರಲ್ಲಿ ಚಾಟ್ ಹಿಸ್ಟರಿ ಆಯ್ಕೆ ಮಾಡಿ
* ಎಕ್ಸ್‌ಪೋರ್ಟ್‌ ಚಾಟ್ ತೆರೆಯಿರಿ.
* ನೀವು ಇಮೇಲ್ ಮೂಲಕ ಎಕ್ಸ್‌ಪೋರ್ಟ್‌ ಮಾಡಲು ಬಯಸುವ ಚಾಟ್ ಅನ್ನು ಆಯ್ಕೆಮಾಡಿ.
* ನಿಮಗೆ ಮೀಡಿಯಾ ಬೇಕೇ ಅಥವಾ ಟೆಕ್ಸ್ಟ್‌ ಮಾತ್ರವೇ ಎಂಬುದನ್ನು ಆಯ್ಕೆಮಾಡಿ.
ಇದೀಗ ನಿಮ್ಮ ಮೇಲ್‌ಗೆ ಕಳುಹಿಸಿಕೊಳ್ಳಿ.

Best Mobiles in India

Read more about:
English summary
Best 5 interesting facets you didn’t know in WhatsApp

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X