ಕೈಗೆಟಕುವ ಬೆಲೆಯಲ್ಲಿ 5G ಫೋನ್‌ ಖರೀದಿಸಬೇಕೆ?...ಇಲ್ಲಿವೆ ನೋಡಿ!

|

ಭಾರತದಲ್ಲಿ ಈಗ 5G ಸೇವೆ ಲಭ್ಯವಿದ್ದು, ಇದರ ನಡುವೆ ಕೆಲವರು ತಮ್ಮ ಸ್ಮಾರ್ಟ್‌ಫೋನ್‌ ಅನ್ನು ಅಪ್‌ಗ್ರೇಡ್‌ ಮಾಡುವ ಆಲೋಚನೆಯಲ್ಲಿರಬಹುದು. ಅದರಲ್ಲೂ ಸಹ 5G ಅಂದಮೇಲೆ ಇದರ ಇಂಟರ್ನೆಟ್‌ ವೇಗಕ್ಕೆ ತಕ್ಕ ಬ್ಯಾಟರಿ ಇರುವುದು ಅತ್ಯಾವಶ್ಯಕ. ಇದರೊಂದಿಗೆ ಬೆಲೆಯ ಕಡೆಗೂ ಗಮನಹರಿಸಬೇಕಿರುವುದು ಪ್ರಮುಖವಾದ ಅಂಶವಾಗಿದೆ. ಇದೆಲ್ಲವನ್ನೂ ಒಳಗೊಂಡಂತೆ ನಿಮಗೆ ಅನುಕೂಲ ಆಗುವ ಹಾಗೆ 5G ಬೆಂಬಲಿತ 25,000 ರೂ. ಒಳಗೆ ಲಭ್ಯ ಇರುವ ಹಾಗೂ 6000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಇರುವ ಸ್ಮಾರ್ಟ್‌ ಫೋನ್‌ಗಳ ವಿವರ ನೀಡಿದ್ದೇವೆ.

5G

ಹೌದು, ಮಾರುಕಟ್ಟೆಯಲ್ಲಿ ಪ್ರಸ್ತುತ 5G ಬೆಂಬಲಿತ ಹಲವಾರು ಸ್ಮಾರ್ಟ್‌ಫೋನ್‌ಗಳು ಲಾಂಚ್‌ ಆಗಿವೆ. ಅದರಲ್ಲೂ ಆಪಲ್ ಐಫೋನ್ 14 ಪ್ರೊ ಮ್ಯಾಕ್ಸ್, ರೆಡ್ಮಿ ನೋಟ್ 11 SE, ಆಪಲ್ ಐಫೋನ್ 14 ಫೋನ್‌ ಸೇರಿದಂತೆ ಇನ್ನಿತರೆ ಫೋನ್‌ಗಳು ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತಿವೆಯಾದರೂ ದುಬಾರಿ ಬೆಲೆ ಹೊಂದಿದೆ. ಈ ಆಯ್ಕೆಯಲ್ಲಿ ನೀವೇನಾದರೂ 6000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಇರುವ 25,000 ರೂ.ಒಳಗೆ ಲಭ್ಯವಾಗುವ ಸ್ಮಾರ್ಟ್‌ಫೋನ್‌ ಖರೀದಿಸಲು ಮುಂದಾದರೆ ಈ ಲೇಖನ ಸಹಾಯಕವಾಗಲಿದೆ ಓದಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M33 5G

ಸ್ಯಾಮ್‌ಸಂಗ್ ಗ್ಯಾಲಕ್ಸಿ M33 5G

ಸ್ಯಾಮ್‌ಸಂಗ್ ಗ್ಯಾಲಕ್ಸಿ M33 5G ಸ್ಮಾರ್ಟ್‌ಫೋನ್‌ ನೀವು ಅಂದುಕೊಂಡ ಬೆಲೆಗೆ ಹಾಗೂ ಫೀಚರ್ಸ್‌ಗೆ ತಕ್ಕಂತೆ ಇರುವ ಸ್ಮಾರ್ಟ್‌ಫೋನ್‌ ಆಗಿದೆ. ಈ ಫೋನ್ 6.60 ಇಂಚಿನ FHD+ ಡಿಸ್‌ಪ್ಲೇ ಹೊಂದಿದ್ದು, 1080 x 2408 ಸ್ಕ್ರೀನ್ ರೆಸಲ್ಯೂಶನ್ ಪಡೆದಿದೆ. ಹಾಗೆಯೇ 400ppi ಪಿಕ್ಸೆಲ್ ಸಾಂದ್ರತೆ, 120 Hz ನ ರಿಫ್ರೆಶ್ ರೇಟ್‌ ಜೊತೆಗೆ ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್ ಹಾಗೂ 20:9 ಆಕಾರ ಅನುಪಾತದ ಈ ಡಿಸ್‌ಪ್ಲೇ ಹೊಂದಿದೆ.

ಪ್ರೊಸೆಸರ್‌ ಬಲ

ಪ್ರೊಸೆಸರ್‌ ಬಲ

ಈ ಸ್ಮಾರ್ಟ್‌ಫೋನ್ ಸುಗಮ ಕಾರ್ಯಕ್ಷಮತೆಗಾಗಿ ಡ್ಯುಯಲ್‌ ಕೋರ್ ಹಾಗೂ ಹೆಕ್ಸಾಕೋರ್ ಪ್ರೊಸೆಸರ್‌ ರಚನೆ ಪಡೆದುಕೊಂಡಿದೆ. ಜೊತೆಗೆ ಈ ಫೋನ್‌ ಆಂಡ್ರಾಯ್ಡ್‌ ಓಎಸ್‌ 12 ರಲ್ಲಿ ರನ್‌ ಆಗಲಿದೆ. ಇನ್ನುಳಿದಂತೆ 8 GB RAM ಹಾಗೂ 128GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯ ಪಡೆದುಕೊಂಡಿದೆ.

ಕ್ಯಾಮೆರಾ ರಚನೆ

ಕ್ಯಾಮೆರಾ ರಚನೆ

ಈ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾಗಳನ್ನು ಪಡೆದಿದ್ದು, ಇದರಲ್ಲಿ 50MP ಪ್ರಮುಖ ಕ್ಯಾಮೆರಾ ಸೇರಿದಂತೆ 5MP, 2MP ಹಾಗೂ 2MP f/2.4 ಡೆಪ್ತ್ ಸೆನ್ಸರ್‌ ಕ್ಯಾಮೆರಾ ಆಯ್ಕೆ ಹೊಂದಿದೆ. ಈ ಕ್ಯಾಮೆರಾಗಳು ಆಟೋಫೋಕಸ್, ಡಿಜಿಟಲ್ ಜೂಮ್, ಹೆಚ್‌ಡಿಆರ್‌ ಮೋಡ್ ಹಾಗೂ ಸ್ವಯಂ ಫ್ಲ್ಯಾಶ್ ಫೀಚರ್ಸ್‌ ಅನ್ನು ಪಡೆದುಕೊಂಡಿದ್ದು, ಸೆಲ್ಫಿಗಾಗಿ 8MP ಕ್ಯಾಮೆರಾ ನೀಡಲಾಗಿದೆ.

ಬ್ಯಾಟರಿ ಹಾಗೂ ಬೆಲೆ

ಬ್ಯಾಟರಿ ಹಾಗೂ ಬೆಲೆ

ಈ ಫೋನ್ 6000 mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಅಗಿದ್ದು, 25W ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲ ನೀಡಲಿದೆ. ಇನ್ನು ಈ ಫೋನ್‌ ಆರಂಭಿಕ ಬೆಲೆ 15,090 ರೂ. ಗಳಿಂದ ಆರಂಭವಾಗಲಿದ್ದು, ಇ- ಕಾಮರ್ಸ್‌ ಸೈಟ್‌ಗಳಲ್ಲಿ ಆಫರ್‌ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.

ಟೆಕ್ನೋ ಪೋವಾ 5G

ಟೆಕ್ನೋ ಪೋವಾ 5G

ಈ ಸ್ಮಾರ್ಟ್‌ಫೋನ್‌ ಸಹ ಕೈಗೆಟಕುವ ಹಾಗೂ ಭಿನ್ನ ಫೀಚರ್ಸ್‌ ಇರುವ ಸ್ಮಾರ್ಟ್‌ಫೊನ್‌ ಆಗಿದೆ. ಈ ಫೋನ್ 6.90 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 120 Hz ನ ರಿಫ್ರೆಶ್ ರೇಟ್‌ ಹಾಗೂ 1080×2460 ಪಿಕ್ಸೆಲ್‌ ರೆಸಲ್ಯೂಶನ್‌ ಆಯ್ಕೆ ಹೊಂದಿದೆ. ಜೊತೆಗೆ 389 ppi ಪಿಕ್ಸೆಲ್ ಸಾಂದ್ರತೆ ಹಾಗೂ 20.5:9 ರ ಆಕಾರ ಅನುಪಾತವನ್ನು ಇದು ಪಡೆದುಕೊಂಡಿದೆ.

ಮೀಡಿಯಾಟೆಕ್ ಡೈಮೆನ್ಸಿಟಿ ಪ್ರೊಸೆಸರ್

ಮೀಡಿಯಾಟೆಕ್ ಡೈಮೆನ್ಸಿಟಿ ಪ್ರೊಸೆಸರ್

ಈ ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್ ಡೈಮೆನ್ಸಿಟಿ 900 MT6877 ಚಿಪ್‌ಸೆಟ್ ನಿಂದ ಕಾರ್ಯನಿರ್ವಹಿಸಲಿದ್ದು, ಮಾಲಿ -G68 MC4 GPU ನ ಬಲ ಪಡೆದುಕೊಂಡಿದೆ. ಇದರ ಆಕ್ಟಾ ಕೋರ್ CPU ಫೋನ್‌ ನಯವಾದ ರೀತಿಯಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಇದನ್ನು ಹೊರತುಪಡಿಸಿ ಈ ಫೋನ್ 8GB RAM ಹಾಗೂ 128GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯ ಪಡೆದುಕೊಂಡಿದೆ.

ಕ್ಯಾಮೆರಾ ರಚನೆ

ಕ್ಯಾಮೆರಾ ರಚನೆ

ಈ ಫೋನ್ 50MP ಪ್ರಮುಖ ಕ್ಯಾಮೆರಾ ಹಾಗೂ 2MP ಮ್ಯಾಕ್ರೋ ಲೆನ್ಸ್ ಕ್ಯಾಮರಾ ಒಳಗೊಂತೆ ಡ್ಯುಯಲ್‌ ಕ್ಯಾಮೆರಾ ರಚನೆ ಹೊಂದಿದೆ. ಹಾಗೆಯೇ ಈ ಕ್ಯಾಮೆರಾ ಕಾನ್ಫಿಗರೇಶನ್ ಕ್ವಾಡ್ ಎಲ್ಇಡಿ ಫ್ಲ್ಯಾಶ್‌ ಫೀಚರ್ಸ್‌ ಪಡೆದಿರುವುದು ವಿಶೇಷ. ಇದರೊಂದಿಗೆ 16MP ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ.

ಬ್ಯಾಟರಿ ಸಾಮರ್ಥ್ಯ ಹಾಗೂ ಬೆಲೆ

ಬ್ಯಾಟರಿ ಸಾಮರ್ಥ್ಯ ಹಾಗೂ ಬೆಲೆ

ಈ ಟೆಕ್ನೋ ಪೋವಾ ಸ್ಮಾರ್ಟ್‌ಫೋನ್ 6000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಇದು 18W ನ ಚಾರ್ಜಿಂಗ್‌ ಗೆ ಬೆಂಬಲ ನೀಡುತ್ತದೆ. ಹಾಗೆಯೇ ಈ ಫೋನ್‌ ಅನ್ನು ನೀವು 15,999 ರೂ. ಗಳಿಗೆ ಖರೀದಿ ಮಾಡಬಹುದಾಗಿದ್ದು, ಇ-ಕಾಮರ್ಸ್ ಸೈಟ್‌ಗಳಲ್ಲಿ ಆಫರ್‌ ಸಹ ಲಭ್ಯವಿದೆ.

Best Mobiles in India

Read more about:
English summary
5G service now available in India, some may be thinking of upgrading their smartphone. For this reason, we have given the details of two 5G smart phones here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X