Just In
- 18 min ago
ಸೋನಿ ಸಂಸ್ಥೆಯಿಂದ ಹೊಸ ಮಾದರಿಯ ವಾಕ್ಮ್ಯಾನ್ ಲಾಂಚ್!..ಜಬರ್ದಸ್ತ್ ಫೀಚರ್ಸ್!
- 48 min ago
ಸ್ಯಾಮ್ಸಂಗ್ ಗ್ಯಾಲಕ್ಸಿ S22 ಬೆಲೆಯಲ್ಲಿ ಏಕಾಏಕಿ ಭಾರೀ ಇಳಿಕೆ!..ಸಖತ್ ಆಫರ್!
- 1 hr ago
ಬ್ಯಾಂಕ್ ಹೆಸರಲ್ಲಿ ಬಂದ SMS ನಲ್ಲಿನ ಲಿಂಕ್ ಕ್ಲಿಕ್ ಮಾಡಿದ ಮಹಿಳೆ; ಮುಂದಾಗಿದ್ದೇನು?
- 2 hrs ago
ಸ್ಯಾಮ್ಸಂಗ್ನ ಈ ಹೊಸ ಡಿವೈಸ್ ನೋಡಿದ್ರೆ ನಿಮಗೆ ಏನನ್ನಿಸುತ್ತೆ? ಇದೇನು ಸಾಬೂನಾ?
Don't Miss
- News
Kashmir Snowfall: ರಾಷ್ಟ್ರೀಯ ಹೆದ್ದಾರಿ ಬಂದ್- ವಿಮಾನಗಳು ವಿಳಂಬ, ರೈಲು ಸೇವೆ ಸ್ಥಗಿತ
- Movies
ಮೊದಲ ವೀಕೆಂಡ್ನಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ದಾಖಲೆಯಲ್ಲಿ ಕೆಜಿಎಫ್ 2 ಹಿಂದಿಕ್ಕಿತಾ ಪಠಾಣ್?
- Sports
ಟೀಮ್ ಇಂಡಿಯಾಗೆ ಹೊಸ ತಲೆನೋವು: ಮಂಕಾಗಿದ್ದಾರೆ ಭರವಸೆ ಮೂಡಿಸಿದ್ದ ಆಟಗಾರರು
- Automobiles
130 km ರೇಂಜ್ ನೀಡುವ 'ecoDryft' ಬೈಕ್ ಬಿಡುಗಡೆ... .ರೂ.99,999ಕ್ಕೆ ಸಿಗುತ್ತೆ!
- Lifestyle
ಒಂಟಿಯಾಗಿ ಅಂಟಾರ್ಟಿಕಾ ಯಾತ್ರೆ ಮಾಡಿದ ಮೊದಲ ಮಹಿಳೆ: ಕ್ಯಾಪ್ಟನ್ ಪ್ರೀತ್ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನೆಟ್‌ಫ್ಲಿಕ್ಸ್, ಹಾಟ್‌ಸ್ಟಾರ್, ಅಮೆಜಾನ್ ವಿಡಿಯೋ ವೀಕ್ಷಣೆಗೆ ಬೆಸ್ಟ್ ಡೇಟಾ ಪ್ಲಾನ್ಸ್..!
ಭಾರತೀಯ ಟೆಲಿಕಾಂ ಲೋಕಕ್ಕೆ 2016ರಲ್ಲಿ ರಿಲಾಯನ್ಸ್ ಜಿಯೋ ಕಾಲಿಟ್ಟ ನಂತರ ದೇಶದಲ್ಲಿ ಇಂಟರ್‌ನೆಟ್ ಬಳಕೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಭಾರತೀಯರು ತಮ್ಮ ಮೊಬೈಲ್‌ಗಳ ಮೂಲಕ ಪ್ರತಿ ತಿಂಗಳು ಸರಾಸರಿ 11GB ಡೇಟಾವನ್ನು ಬಳಸುತ್ತಿದ್ದಾರೆ. ವೇಗದ ಇಂಟರ್‌ನೆಟ್ ಹಾಗೂ ಆನ್ ಡಿಮಾಂಡ್ ಕಂಟೆಂಟ್‌ಗಳು ಡೇಟಾ ಬಳಕೆಯನ್ನು ಹೆಚ್ಚಿಸುತ್ತಿವೆ. ಡೇಟಾದ ಹೆಚ್ಚಿನ ಬಳಕೆಯಿಂದ ದೇಶದಲ್ಲಿ ಒಟಿಟಿ ಮಾರುಕಟ್ಟೆ ಬೆಳೆಯುತ್ತಿದೆ.
ಅಂದಾಜು 300 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಹಾಟ್‌ಸ್ಟಾರ್ ಒಟಿಟಿ ಕ್ಷೇತ್ರದಲ್ಲಿ ಬಹಳ ಜನಪ್ರಿಯವಾದ ಪ್ಲಾಟ್‌ಫಾರ್ಮ್ ಆಗಿದೆ. ಹಾಟ್‌ಸ್ಟಾರ್‌ನ ಪ್ರತಿಸ್ಪರ್ಧಿಗಳಾಗಿ ನೆಟ್‌ಫ್ಲಿಕ್ಸ್, ಜೀ5, ಅಮೆಜಾನ್ ಪ್ರೈಮ್ ವಿಡಿಯೋ, ಆಲ್ಟ್ ಬಾಲಾಜಿ ಮತ್ತಿತರರು ಬಳಕೆದಾರರನ್ನು ಸೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆ.

ಒಟಿಟಿ ಪ್ಲಾಟ್‌ಫಾರ್ಮ್‌ಗಳು ವಿಡಿಯೋಗಳ ದೊಡ್ಡ ಗ್ರಂಥಾಲಯವನ್ನು ಹೊಂದಿದ್ದು, ಸ್ಮಾರ್ಟ್‌ಫೋನ್ ಡಿಸ್‌ಪ್ಲೇಗಳಿಗೆ ಹೊಂದಿಕೊಳ್ಳುವಂತೆ ನಿರ್ಮಿಸಲಾಗಿರುತ್ತದೆ. ಒಟಿಟಿ ಪ್ಲಾಟ್‌ಫಾರ್ಮ್ ವಿಶಾಲವಾದ ಅವಕಾಶಗಳನ್ನು ಹೊಂದಿದೆ. ಇತ್ತೀಚಿಗಷ್ಟೇ ನೆಟ್‌ಫ್ಲಿಕ್ಸ್ ಮಾಸಿಕ 199 ರೂ. ಬೆಲೆಯ ಹೊಸ ಯೋಜನೆಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
ಹೊಸ ಯೋಜನೆಯು ಮೊಬೈಲ್‌ಗೆ ಮಾತ್ರ ಸೀಮಿತವಾಗಿದ್ದು, ಟ್ಯಾಬ್ಲೆಟ್‌ನಲ್ಲಿ ಕೂಡ ವಿಡಿಯೋ ವೀಕ್ಷಿಸಲು ಅನುಮತಿ ನೀಡುತ್ತದೆ. ಇಲ್ಲಿ ಸಂಪೂರ್ಣ ಕ್ಯಾಟಲಾಗ್ ವೀಕ್ಷಿಸಲು ನಿಮಗೆ ಅನುಮತಿ ನೀಡುತ್ತದೆ. ಆದರೆ, ಇತರ ಸಾಧನಗಳಲ್ಲಿ ಸ್ಟ್ರೀಮ್ ಮಾಡಲು ನಿಮಗೆ ನೆಟ್‌ಫ್ಲಿಕ್ಸ್ ಅನುಮತಿಸುವುದಿಲ್ಲ. ಈ ಸ್ಟ್ರೀಮಿಂಗ್ ಸೇವೆಗಳಲ್ಲಿ ವಿಡಿಯೋಗಳು ಸಮೃದ್ಧವಾಗಿದ್ದರೂ, ಆ ವಿಡಿಯೋಗಳನ್ನು ವೀಕ್ಷಿಸಲು ನಿಮಗೆ ಸಾಕಷ್ಟು ಪ್ರಮಾಣದಲ್ಲಿ ಡೇಟಾ ಅಗತ್ಯವಾಗಿರುತ್ತದೆ. ಇದಕ್ಕಾಗಿಯೇ, ಹೆಚ್ಚಿನ ಪ್ರಮಾಣದ ಡೇಟಾ ಬಳಸುವವರಿಗೆ ಪ್ರಮುಖ ಟೆಲಿಕಾಂ ಕಂಪನಿಗಳು ಅನೇಕ ಪ್ಲಾನ್‌ಗಳನ್ನು ನೀಡುತ್ತಿವೆ. ಆ ಯೋಜನೆಗಳ ಒಂದಿಷ್ಟು ಮಾಹಿತಿ ಇಲ್ಲಿದೆ.

ರಿಲಾಯನ್ಸ್ ಜಿಯೋ
ವಿಡಿಯೋ ಕಂಟೆಂಟ್ ಸ್ಟ್ರೀಮ್ ಮಾಡುವಾಗ ಬಹಳಷ್ಟು ಡೇಟಾ ಬೇಕಾಗುತ್ತದೆ. ಆದ್ದರಿಂದ ನಾವು ದಿನಕ್ಕೆ 2GB ಡೇಟಾ ಅಥವಾ ಅದಕ್ಕಿಂತ ಹೆಚ್ಚಿನ ಡೇಟಾ ನೀಡುವ ಪ್ಯಾಕ್‌ಗಳನ್ನು ಮಾತ್ರ ಪರಿಗಣಿಸುತ್ತಿದ್ದೇವೆ.
ದಿನಕ್ಕೆ 2GB ಡೇಟಾದೊಂದಿಗೆ, ನೀವು ಮೂರರಿಂದ ನಾಲ್ಕು ಗಂಟೆಗಳವರೆಗೆ ವಿಡಿಯೋಗಳನ್ನು ವೀಕ್ಷಿಸಬಹುದು. ನೀವು ಹೆಚ್ಚಿನ ಡೇಟಾವನ್ನು ವಿಡಿಯೋ ಖರ್ಚು ಮಾಡಿದರೂ, ಇತರ ಅಪ್ಲಿಕೇಶನ್‌ಗಳಿಗೆ ಸಾಕಷ್ಟು ಡೇಟಾ ಉಳಿದಿರುತ್ತದೆ. ಈ ವಿಭಾಗದಲ್ಲಿ ರಿಲಾಯನ್ಸ್ ಜಿಯೋ ಹಲವಾರು ಆಫರ್‌ಗಳನ್ನು ನೀಡುತ್ತಿದೆ.
198 ರೂ. ಪ್ರಿಪೇಯ್ಡ್ ಯೋಜನೆಯಿಂದ ದಿನಕ್ಕೆ 2GB ಡೇಟಾ ನೀಡಲಾಗುತ್ತದೆ. 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಗ್ರಾಹಕರು ಒಟ್ಟು 56GB ಡೇಟಾವನ್ನು ಪಡೆಯುತ್ತಾರೆ. 398 ರೂ. ಪ್ಲಾನ್ ಕೂಡ ಗ್ರಾಹಕರಿಗೆ 2GB ಡೇಟಾವನ್ನು ನೀಡುತ್ತದೆ. 70 ದಿನಗಳ ವ್ಯಾಲಿಡಿಟಿ ಹೊಂದಿರುವ ಪ್ಲಾನ್‌ನಲ್ಲಿ ಒಟ್ಟು 140GB ಡೇಟಾ ಸಿಗುತ್ತದೆ. 448 ಮತ್ತು 498 ರೂ. ಪ್ರಿಪೇಯ್ಡ್ ಪ್ಲಾನ್‌ಗಳು ಕ್ರಮವಾಗಿ 84 ದಿನ ಮತ್ತು 91 ದಿನಗಳ ವ್ಯಾಲಿಡಿಟಿ ಹೊಂದಿವೆ.
ಈ ಪ್ಲಾನ್‌ಗಳು ಕ್ರಮವಾಗಿ 168GB ಮತ್ತು 182GB ಡೇಟಾವನ್ನು ದಿನಕ್ಕೆ 2GBಯಂತೆ ನೀಡುತ್ತವೆ. ಇದರ ಜೊತೆ ರಿಲಾಯನ್ಸ್ ಜಿಯೋ ಅನ್‌ಲಿಮಿಟೆಡ್ ಡೇಟಾವನ್ನು ಸಹ ನೀಡುತ್ತಿದ್ದು, 2GB ಡೇಟಾ ಬಳಕೆಯ ನಂತರ 64kbps ವೇಗದಲ್ಲಿ ಇಂಟರ್‌ನೆಟ್ ಬಳಸಬಹುದು.

ಏರ್‌ಟೆಲ್
ಏರ್‌ಟೆಲ್‌ನಲ್ಲಿ ಅಗ್ಗದ 2GB ಡೇಟಾ ಪ್ಲಾನ್ 249 ರೂ.ಗೆ ದೊರೆಯುತ್ತಿದ್ದು, 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಇದು ಶಾ ಅಕಾಡೆಮಿ ಮತ್ತು ಜೀವ ವಿಮೆಯಂತಹ ಹೆಚ್ಚುವರಿ ಪ್ರಯೋಜನಗಳನ್ನು ಒಳಗೊಂಡಿದೆ. ದಿನಕ್ಕೆ 2GB ಡೇಟಾದ 499 ರೂ.ಗಳ ಪ್ರಿಪೇಯ್ಡ್ ಪ್ಲಾನ್ ಇದ್ದು, 82 ದಿನಗಳ ವ್ಯಾಲಿಡಿಟಿ ಹೊಂದಿದೆ. ಇದು ಜಿಯೋದ 448 ರೂ.
ಯೋಜನೆಗೆ ಸ್ಪರ್ಧೆನೀಡುವ ಪ್ಲಾನ್ ಆಗಿದೆ. ಇನ್ನು, 299 ಪ್ರಿಪೇಯ್ಡ್ ಪ್ಯಾಕ್ ಸಹ ನಿಮಗಾಗಿ ಇದ್ದು, ಈ ಪ್ಲಾನ್‌ನಲ್ಲಿ ದಿನಕ್ಕೆ 2.5GB ಡೇಟಾ ದೊರೆಯುತ್ತಿದ್ದು, 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಇದರ ಜೊತೆಗೆ ತಿಂಗಳ ಅಮೆಜಾನ್ ಪ್ರೈಮ್ ವಿಡಿಯೋ ನಿಮ್ಮದಾಗುತ್ತದೆ. ಇನ್ನು, 28 ದಿನಗಳವರೆಗೆ ದಿನಕ್ಕೆ 3GB ಡೇಟಾ ನೀಡುವ 349 ರೂ. ಪ್ರಿಪೇಯ್ಡ್ ಯೋಜನೆಯೂ ಕೂಡ ನಿಮಗೆ ಸಿಗುತ್ತದೆ.

ವೊಡಾಫೋನ್
ವೊಡಾಫೋನ್‌ನಲ್ಲಿಯೂ ದಿನಕ್ಕೆ 2GB ಡೇಟಾವನ್ನು ನೀಡುವ ಅಗ್ಗದ ಯೋಜನೆಯ ಬೆಲೆ 229 ರೂ. ಆಗಿದ್ದು, ಇಲ್ಲಿ 28 ದಿನಗಳ ವ್ಯಾಲಿಡಿಟಿಯಲ್ಲಿ 56GB ಡೇಟಾ ಸಿಗುತ್ತದೆ. ಇನ್ನು, 349 ರೂ. ಪ್ರಿಪೇಯ್ಡ್ ಯೋಜನೆಯಲ್ಲಿ 28 ದಿನಗಳಿಗೆ ದಿನಕ್ಕೆ 3GB ಡೇಟಾ ದೊರೆಯುತ್ತದೆ. 255 ರೂ. ಪ್ರಿಪೇಯ್ಡ್ ಪ್ಲಾನ್‌ನಲ್ಲಿ 28 ದಿನಗಳಿಗೆ ದಿನಕ್ಕೆ 2.5GB ಡೇಟಾ ಸಿಗುತ್ತದೆ. 84 ದಿನಗಳ ವ್ಯಾಲಿಡಿಟಿಯಲ್ಲಿ ದಿನಕ್ಕೆ 2GB ಡೇಟಾ ನೀಡುವ 511 ರೂ. ಪ್ರಿಪೇಯ್ಡ್ ಪ್ಲಾನ್ ಕೂಡ ಇದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470