ನಕಲಿ ಮೊಬೈಲ್ ಆಪ್‌ಗಳಿಂದ ನಿಮ್ಮ ಹಣ ಲೂಟಿಯಾಗುತ್ತದೆ!

|

ಡಿಜಿಟಲ್ ವಹಿವಾಟು ಹೆಚ್ಚಾದಂತೆ ಅಜ್ಞಾತ ಸ್ಥಳದಲ್ಲೇ ಕುಳಿತು ಗ್ರಾಹಕರ ಬ್ಯಾಂಕ್ ಖಾತೆಗೆ ಕನ್ನ ಹಾಕುವವರ ಸಂಖ್ಯೆ ಏರುತ್ತಿದೆ. ಖಾಸಗಿ ವೆಬ್​ಸೈಟ್​ಗಳನ್ನು ಹ್ಯಾಕ್ ಮಾಡುವ ಜತೆಗೆ ನಕಲಿ ಮೊಬೈಲ್ ಅಪ್ಲಿಕೇಷನ್​ಗಳನ್ನು ಸೃಷ್ಟಿಸಿ ಸಾರ್ವಜನಿಕರ ವೈಯಕ್ತಿಕ ಮಾಹಿತಿಗೂ ಕನ್ನ ಹಾಕುತ್ತಿರುವುದು ಆತಂಕ ಸೃಷ್ಟಿಸಿದೆ. ನಕಲಿ ಆಪ್​ಗಳಿಂದ ಮೊಬೈಲ್​ನಲ್ಲಿರುವ ವೈಯಕ್ತಿಕ ಮಾಹಿತಿ ಕದಿಯಲಾಗುತ್ತದೆ ಮತ್ತು ವೈರಸ್ ದಾಳಿ ನಡೆಸಲಾಗುತ್ತದೆ ಎಂದು ಇತ್ತೀಚಿನ ಅಧ್ಯಯನವೊಂದು ಎಚ್ಚರಿಸಿದೆ.

ಹೌದು, ಸೈಬರ್ ಅಟ್ಯಾಕ್ ಎನ್ನುವುದು ದಿನದಿಂದ ದಿನಕ್ಕೆ ಬದಲಾಗುತ್ತಿರುವ ವಂಚನೆ ಮಾರ್ಗವಾಗುತ್ತಿದ್ದು, ಇತ್ತೀಚಿಗೆ ನಕಲಿ ಆಪ್​ಗಳಿಂದ ಮೊಬೈಲ್​ನಲ್ಲಿರುವ ವೈಯಕ್ತಿಕ ಮಾಹಿತಿ ಕದಿಯುವುದು ಹೆಚ್ಚಾಗಿದೆ. ಒಂದು ವೇಳೆ ನಕಲಿ ಮೊಬೈಲ್ ಆಪ್ ಇನ್​ಸ್ಟಾಲ್ ಮಾಡಿಕೊಂಡರೆ ಮೊಬೈಲ್​ನಲ್ಲಿರುವ ಎಲ್ಲ ಮಾಹಿತಿ ಅವರಿಗೆ ಸಿಗುತ್ತದೆ ವೆಬ್​ಸೈಟ್, ಕಂಪ್ಯೂಟರ್​ಗಳ ಮೇಲೆ ದಾಳಿ ನಡೆಸಿ ಗೌಪ್ಯ ಮಾಹಿತಿ ಕಳವು ಮಾಡಲಾಗುತ್ತಿದೆ ಎಂದು ಸೈಬರ್ ಸೆಕ್ಯುರಿಟಿ ಏಜೆನ್ಸಿಯೊಂದು ವರದಿ ಮಾಡಿದೆ.

ನಕಲಿ ಮೊಬೈಲ್ ಆಪ್‌ಗಳಿಂದ ನಿಮ್ಮ ಹಣ ಲೂಟಿಯಾಗುತ್ತದೆ!

ಒಂದು ವೇಳೆ ಇಂತಹ ನಕಲಿ ಮೊಬೈಲ್ ಅಪ್ಲಿಕೇಷನ್ ಇನ್​ಸ್ಟಾಲ್ ಮಾಡಿಕೊಂಡರೆ ಮೊಬೈಲ್​ನಲ್ಲಿರುವ ಎಲ್ಲ ಮಾಹಿತಿ ಕದ್ದು ಹಣಕ್ಕೆ ಬೇಡಿಕೆ ಇಡಬಹುದು ಅಥವಾ ನಿಮ್ಮೆಲ್ಲ ಮಾಹಿತಿ ಅಳಿಸಲೂಬಹುದು. ಇನ್ನು ಕೆಲವು ಆಪ್‌ಗಳು ನಿಮ್ಮ ಖಾಸಾಗಿ ಮಾಹಿತಿಗಳನ್ನು ಮಾರಿಕೊಳ್ಳಬಹುದು. ಹಾಗಾಗಿ, ಯಾವುದೇ ಅಪ್ಲಿಕೇಷನ್ ಸಂಪೂರ್ಣವಾಗಿ ಪರಿಶೀಲಿಸದೆ ಡೌನ್​ಲೋಡ್ ಮಾಡಿಕೊಳ್ಳದಂತೆ ಎಚ್ಚರಿಕೆ ನೀಡಲಾಗಿದೆ. ಹಾಗಾದರೆ, ಸೈಬರ್ ಅಟ್ಯಾಕ್ ಆಗದಂತೆ ಎಚ್ಚರಿಕೆ ವಹಿಸುವುದು ಹೇಗೆ ಎಂದು ಮುಂದೆ ಓದಿ ತಿಳಿಯಿರಿ.

Unknown Sources ಡಿಸೇಬಲ್ ಮಾಡಿಬಿಡಿ

Unknown Sources ಡಿಸೇಬಲ್ ಮಾಡಿಬಿಡಿ

ಯಾವುದೇ ಸ್ಮಾರ್ಟ್‌ಫೋನ್ ಬಳಸುತ್ತಿದ್ದರೂ ಸೆಟ್ಟಿಂಗ್ಸ್‌ನ ತೆರೆದು ಸೆಕ್ಯುರಿಟಿ ವಿಭಾಗದಲ್ಲಿ ಇದೆ. Unknown Sources ಎಂಬ ಆಯ್ಕೆಯನ್ನು ಡಿಸೇಬಲ್ ಮಾಡಿಬಿಡಿ. ಯಾರಾದರೂ ಆಪ್‌ ಮೂಲಕ ನಿಮ್ಮ ಫೋನ್ ಮಾಹಿತಿ ತಿಳಿಯಲು ಅಥವಾ ವೈರಸ್ ಕಳುಹಿಸಲು ಪ್ರಯತ್ನಿಸಿದರೆ ಈ ಆಪ್ ಅವುಗಳ ಇನ್‌ಸ್ಟಾಲ್ ಆಗುವುದನ್ನು ತಡೆಯುತ್ತದೆ.ಆಪ್‌ಗಳ ಡೆವಲಪರ್‌ಗಳು ಆಗಾಗ್ಗೆ ಅಪ್‌ಡೇಟ್‌ ಮಾಡುತ್ತಿರುತ್ತಾರೆ. ಅವುಗಳನ್ನು ಅಪ್‌ಡೇಟ್ ಮಾಡಿಕೊಳ್ಳಿ.

ಬ್ಯಾಂಕ್‌ನಿಂದ ಯಾವುದೇ ಕರೆ ಬರುವುದಿಲ್ಲ

ಬ್ಯಾಂಕ್‌ನಿಂದ ಯಾವುದೇ ಕರೆ ಬರುವುದಿಲ್ಲ

ನಿಮ್ಮ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು ಹಾಳಾಗಿದ್ದು ಅವುಗಳನ್ನು ಬಹಲಿಸಬೇಕಿದೆ ಅಥವಾ ನಿಮ್ಮ ಕಾರ್ಡ್ ಸೆಕ್ಯುರಿಟಿ ಚೆಕ್ ಮಾಡಬೆಕಿದೆ ಎನ್ನುವ ಕಾಲ್‌ಗಳನ್ನು ಸೈಬರ್ ಕ್ರಿಮಿನಲ್‌ಗಳು ಮಾಡಿರುತ್ತಾರೆ. ಅಂತವರಿಗೆ ನಿಮ್ಮ ಯಾವುದೇ ಡೀಟೆಲ್ಸ್ ಅನ್ನು ನೀಡಬೇಡಿ. ಯಾವುದೇ ಬ್ಯಾಂಕ್‌ನಲ್ಲಿಯೂ ಸಹ ಫೋನ್ ಮೂಲಕ ವ್ಯವಹರಿಸುವುದಿಲ್ಲ ಎಂಬುದನ್ನು ನೀವು ತಿಳಿದಿರಿ.

ಪಿನ್‌ ಮತ್ತು ಒಟಿಪಿಯನ್ನು ನೀಡಲೇಬೇಡಿ!

ಪಿನ್‌ ಮತ್ತು ಒಟಿಪಿಯನ್ನು ನೀಡಲೇಬೇಡಿ!

ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ ಅಥವಾ ಆನ್‌ಲೈನ್ ಬ್ಯಾಂಕಿಂಗ್ ವ್ಯವಹಾರ ಮಾಡುವಾಗ ಯಾರಿಗೂ ನಿಮ್ಮ ಪಿನ್ ಮತ್ತು ಒಟಿಪಿಯನ್ನು ನೀಡಲೇಬೇಡಿ. ಸೈಬರ್‌ಗಳಿಗೆ ನಿಮ್ಮ ಪಿನ್ ಸಂಖ್ಯೆ ಅಥವಾ ಒಟಿಪಿ ಸಂಖ್ಯೆ ಸಿಕ್ಕರೆ ಸಾಕು ನಿಮ್ಮ ಹಣಕ್ಕೆ ಪಂಗನಾಮ ಹಾಕುತ್ತಾರೆ. ಹಾಗಾಗಿ, ಯಾವುದೇ ಕಾರಣಕ್ಕೂ ನಿಮ್ಮ ಒಟಿಪಿ ಸಂಖ್ಯೆ ನಿಮ್ಮನ್ನು ಬಿಟ್ಟು ಅನ್ಯರಿಗೆ ತಿಳಿಯಲೇಬಾರದು.

ಗೂಗಲ್ ಅನ್ನು ಸಹ ನಂಬಬೇಡಿ!

ಗೂಗಲ್ ಅನ್ನು ಸಹ ನಂಬಬೇಡಿ!

ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ ಸಿಗುವ ಎಲ್ಲಾ ವಿಷಯಗಳು ಸಹ ನಿಜ ಎಂದು ನಂಬಬೇಡಿ. ಗೂಗಲ್‌ನಲ್ಲಿ ಖಾಸಾಗಿ ಜನರು ಸಹ ಮಾಹಿತಿಯನ್ನು ಎಡಿಟ್ ಮಾಡುವ ಆಯ್ಕೆ ಇದೆ. ಕೆಲವು ವೆಬ್‌ಸೈಟ್‌ಗಳು ನಂಬಿಕೆ ಬರುವಂತಹ ಬರಗಳಿಂದ ನಿಮ್ಮನ್ನು ಸಂಪರ್ಕಿಸಲು ಪ್ರಯತ್ನಿಸುತ್ತವೆ. ಹೀಗೆ ಮಾಡಿ ನಿಮ್ಮಿಂದ ಖಾಸಾಗಿ ಮಾಹಿತಿಯನ್ನು ಸಂಗ್ರಹಿಸುತ್ತವೆ ಎಂಬುದು ಗೊತ್ತಿರಲಿ.

ನಕಲಿ ಫೋನ್, ಇ-ಮೇಲ್‌ಗಳ ಬಗ್ಗೆ ಎಚ್ಚರ

ನಕಲಿ ಫೋನ್, ಇ-ಮೇಲ್‌ಗಳ ಬಗ್ಗೆ ಎಚ್ಚರ

ನಿಮ್ಮ ಮೊಬೈಲ್ ನಂಬರ್‌ಗೆ ಗಿಫ್ಟ್ ಬಂದಿದೆ. ನಿಮಗೆ ಫಾರಿನ್ ಟ್ರಿಪ್ ಟಿಕೆಟ್ ಉಚಿತವಾಗಿ ಸಿಕ್ಕಿದೆ. ಉತ್ತಮ ಕೆಲಸ ಕೊಡಿಸುತ್ತೇನೆ ಎಂದು ಫೋನ್ ಅಥವಾ ಇಮೇಲ್‌ಗಳ ಮೂಲಕ ಸಂಪರ್ಕಿಸುವವರ ಬಗ್ಗೆ ಎಚ್ಚರವಾಗಿ. ಅವರೆಲ್ಲರೂ ನಿಮ್ಮ ಬಳಿ ಹಣವನ್ನು ದೂಚುವ ಸಲುವಾಗಿಯೇ ನಾಟಕ ಮಾಡುತ್ತಿರುತ್ತಾರೆ. ಇಂತಹ ಮೇಲ್‌ಗಳಿಗೆ ತಲೆಕೆಡಿಸಿಕೊಳ್ಳಲೇಬೇಡಿ.

ಪಾಸ್‌ವರ್ಡ್ ಬದಲಿಸುತ್ತಿರಿ.

ಪಾಸ್‌ವರ್ಡ್ ಬದಲಿಸುತ್ತಿರಿ.

ಬ್ಯಾಂಕಿಂಗ್ ಮತ್ತು ಆನ್‌ಲೈನ್ ಪ್ರಪಂಚದಲ್ಲಿ ಈಗ ಸುರಕ್ಷಿತ ಪಾಸ್‌ವರ್ಡ್‌ಗಳೇ ಮುಖ್ಯ. ಹಾಗಾಗಿ, ಯಾವಾಗಲೂ ಆನ್‌ಲೈನ್ ಬ್ಯಾಂಕಿಂಗ್ ಪಾಸ್‌ವರ್ಡ್ ಹಾಗೂ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗೆ ನೀಡಿರುವ ಪಿನ್ ಸಂಖ್ಯೆಯನ್ನು ಬದಲಿಸುತ್ತಿರಿ. ಹೀಗೆ ಮಾಡುವುದರಿಂದ ಸೈಬರ್ ಕಳ್ಳರಿಗೆ ನಿಮ್ಮ ಪಾಸ್‌ವರ್ಡ್ ಕದಿಯಲು ಸುಲಭ ಸಾಧ್ಯವಾಗುವುದಿಲ್ಲ ಎಂಬುದನ್ನು ತಿಳಿದಿರಿ.

ಆಂಟಿವೈರೆಸ್ ಸಾಫ್ಟವೇರ್ ಬಳಸಿ.

ಆಂಟಿವೈರೆಸ್ ಸಾಫ್ಟವೇರ್ ಬಳಸಿ.

ಮೊಬೈಲ್ ಅಥವಾ ಲ್ಯಾಪ್‌ಟಾಪ್ ಮೂಲಕವೇ ನೀವು ಹೆಚ್ಚು ಆನ್‌ಲೈನ್ ಬ್ಯಾಂಕಿಂಗ್ ವ್ಯವಹಾರ ಹೆಚ್ಚು ಮಾಡುತ್ತಿದ್ದರೆ ಅವುಗಳ ಸೆಕ್ಯುರಿಟಿ ಬಗ್ಗೆ ಎಚ್ಚರವಾಗಿರಿ. ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳಿಗೆ ಉತ್ತಮ ಗುಣಮಟ್ಟದ ಆಂಟಿವೈರೆಸ್ ಸಾಫ್ಟ್‌ವೇರ್ ಬಳಸಿದರೆ ಒಳ್ಳೆಯದು. ಇದರಿಂದ ಸೈಬರ್ ಫೈಲ್‌ಗಳು ನಿಮ್ಮ ಡಿವೈಸ್ ಅನ್ನು ಕ್ರಾಕ್ ಮಾಡಲು ಸಾಧ್ಯವಿಲ್ಲ.

Best Mobiles in India

English summary
New malware attacks the Android users in the name of popular apps steals the sensitive information. to know more visit to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X