ಅತಿ ವಿಸ್ಮಯದ ಫೋಟೋಗಳು ಐಫೋನ್‌ನಲ್ಲಿ
ಸ್ಮಾರ್ಟ್‌ಫೋನ್ ಕಂಪನಿಗಳು ಯಾವುದಾದರೂ ತಮ್ಮ ಗ್ರಾಹಕರಿಗೆ ಸ್ಪರ್ಧೆಗಳನ್ನು ಏರ್ಪಡಿಸುವುದನ್ನು ಎಲ್ಲಾದರೂ ಗಮನಿಸಿದ್ದೀರಾ. ಖಂಡಿತ ಇಲ್ಲಾ ಅನಿಸುತ್ತೆ. ಆದ್ರೆ ಐಫೋನ್ ತನ್ನ ಗ್ರಾಹಕರಿಗೆ ಫೋಟೋಗ್ರಫಿ ಸ್ಪರ್ಧೆಗಳನ್ನು ಏರ್ಪಡಿಸಿ ಅತ್ಯುತ್ತಮ ಫೋಟೋಗಳಿಗೆ ಪ್ರಶಸ್ತಿಗಳನ್ನು ನೀಡುತ್ತದೆ. ಅಂತಯೇ ಐಫೋನ್ 2015 ರ ಐಫೋನ್‌ಫೋಟೋಗ್ರಫಿ ಪ್ರಶಸ್ತಿಗಳನ್ನು ಲೈಫ್‌ಸ್ಟೈಲ್, ಲ್ಯಾಂಡ್‌ಸ್ಕೇಪ್, ಟ್ರಾವೆಲ್, ಮರಗಳು ಇಂತಹ 9 ವಿವಿಧ ಗುಂಪುಗಳಿಗೆ ನೀಡಿದೆ.
ಓದಿರಿ: ಭಾರತದಲ್ಲಿ ಡೇಟಿಂಗ್ ಆಪ್ಸ್ ಬಳಕೆ: ಮಹಿಳೆಯರೇ ಮೇಲುಗೈ
ಐಫೋನ್ ಫೋಟೋಗ್ರಫಿ ಸ್ಪರ್ಧೆಯು ಪ್ರತಿವರ್ಷ ನೆಡೆಯುತ್ತದೆ. ನೀವು ಸಹ 2016 ಐಫೋನ್ ಫೋಟೋಗ್ರಫಿ ಸ್ಪರ್ಧೆಗೆ ಫೋಟೋಗಳನ್ನು ಕಳುಹಿಸಬಹುದಾಗಿದೆ. ಆದರೆ ಇದು ಕೆಲವು ನಿಯಮಗಳನ್ನು ಹೊಂದಿದೆ.
ಐಫೋನ್ ಫೋಟೋಗ್ರಫಿ ಸ್ಪರ್ಧೆಗೆ ಭಾಗವಹಿಸಲು ಅನುಸರಿಸಬೇಕಾದ ನಿಯಮಗಳು
* ಫೋಟೋಗಳು ಐಫೋನ್, ಐಪ್ಯಾಡ್, ಐಫೋಡ್‌ಟಚ್ ನಿಂದಲೇ ಸೆರೆಹಿಡಿದಿರಬೇಕು.
* ಫೋಟೋಗಳನ್ನು ಯಾವುದೇ ಕಾರಣಕ್ಕೂ ಎಡಿಟ್ ಮಾಡಿರ ಬಾರದು.
* ಫೋಟೋಗಳನ್ನು ಕಲಾತ್ಮಕತೆ, ಒರಿಜಿನಾಲಿಟಿ, ವಿಷಯ ಮತ್ತು ಸ್ಟೈಲ್ ಆಧಾರದಲ್ಲಿ ಜಡ್ಜ್ ಮಾಡಲಾಗುತ್ತದೆ.
ಓದಿರಿ: ಉಚಿತ ಸಿನಿಮಾಗಳನ್ನು ತೋರಿಸುವ ವೆಬ್‌ಸೈಟ್‌ಗಳು
ನೀವು ನೋಡಿದ ತಕ್ಷಣ ಅಚ್ಚರಿ ಪಡುವಂತಹ ಫೋಟೋಗಳು ಐಫೋನ್ ಫೋಟೋಗ್ರಫಿಯ 2015 ರ ಸ್ಪರ್ಧೆಯಲ್ಲಿ ಆಯ್ಕೆಯಾಗಿವೆ. ಗಿಜ್‌ಬಾಟ್ ಅವುಗಳನ್ನು ಇಂದಿನ ಲೇಖನದಲ್ಲಿ ನಿಮ್ಮ ಮುಂದೆ ಇಡುತ್ತಿದೆ.

ಮೈಕೆಲ್ ಕೊರಲೆವೆಸ್ಕಿ-ಈ ವರ್ಷದ ಐಫೋನ್ ಫೋಟೋಗ್ರಾಫರ್
ಮೈಕೆಲ್, ಒಬ್ಬ ಸಂಗೀತಗಾರನ ಫೋಟೊ ಸೆರೆಹಿಡಿದಿದ್ದು, ಅವರ ಬಗ್ಗೆ '' ಆತ ತುಂಬಾ ಎಕ್ಸ್‌ಪ್ರೆಸ್ಸಿವ್ ಮತ್ತು ಸುಂದರವಾಗಿ ಕಾಣುತ್ತಿದ್ದಾರೆ, ಅವರ ಮುಖದಲ್ಲಿನ ಸುಕ್ಕುಗಳಿಂದ ಲೈಫ್ ಸ್ಟೋರಿ ಓದಬಹುದಾಗಿದೆ'' ಎಂದಿದ್ದಾರೆ.

ಡೇವಿಡ್ ಕ್ರೈಕ್- 2ನೇ ಸ್ಥಾನ
ಈ ಪಕ್ಷಿಗಳು ಕೆಫೆಯಿಂದ ಬ್ರೆಡ್ ಅಪಹರಿಸಿ ಹಾರುವಾಗ ತೆಗೆದ ಫೋಟೋ ಆಗಿದ್ದು, ಹಿಂದಿನ ಬಿಳಿಗೋಡೆಯಲ್ಲಿನ ಪಕ್ಷಿಯ ನೆರಳು ಸ್ಫೂರ್ತಿದಾಯಕವಾಗಿದೆ ಎಂದು ಕ್ರೈಕ್ ಹೇಳಿದ್ದಾರೆ.

ವ್ಯೋನ್ ಲು- 3ನೇ ಸ್ಥಾನ
ವ್ಯೋನ್ ಲು ತೆಗೆದ ಈ ಫೋಟೋವನ್ನು '' ಪ್ರೇಮಿಗಳಿಬ್ಬರು ಪ್ರವಾಸದಿಂದ ಹಿಂದಿರುಗುವಾಗ ವಿಂಟೇಜ್ ಫೀಲ್ ಪಡೆಯುತ್ತಾ ಪ್ರಪಂಚದಲ್ಲಿ ಇನ್ನೇನು ಬೇಡ ಎಂಬಂತೆ ಕಾಣುತ್ತಿರುವ ಬಗ್ಗೆ'' ಹೇಳಿದ್ದಾರೆ.

ಬೆನ್ ಸ್ಕೈಲರ್ - "ಅಬ್ಸ್ಟ್ರಾಕ್ಟ್" ವರ್ಗ ವಿಜೇತ
''ಕಮ್ ಆಲ್ ಯೇ ಸೇಂಟ್ಸ್'' ಎಂಬ ಸೀರೀಸ್‌ನಲ್ಲಿ ಬೆನ್ ತೆಗೆದ ಫೋಟೋ.

ರಿನೈ ರಾಬರ್ಟ್ಸ್ -" ಪ್ರಾಣಿ" ವರ್ಗ ವಿಜೇತ
ರಿನೈ ಆಸ್ಟ್ರೇಲಿಯಾದ ಸೆಲ್ಫ್ ಥಾಟ್ ಫೋಟೋಗ್ರಾಫರ್.

ಕ್ರಿಸ್ಟಿನ್ ಫ್ರ್ಯಾಂಕ್- "ಕಲಾತ್ಮಕ" ವರ್ಗ ವಿಜೇತರು
ಕ್ರಿಸ್ಟಿನ್ ಇಂಟೇರಿಯರ್ ಮತ್ತು ಪ್ರಾಡಕ್ಟ್ ಡಿಸೈನ್ ಬಗ್ಗೆ ಅಧ್ಯಯನ ಮಾಡಿದ್ದು, ಈ ಫೋಟೋ ವನ್ನು ತಮ್ಮ ಹೋಮ್ ಟೌನ್ ಸ್ಟಟ್ಗಾರ್ಟ್ ನಲ್ಲಿನ ಲೈಬ್ರಿರಿಯಲ್ಲಿ ಸೆರೆಹಿಡಿದಿದ್ದಾರೆ.

ಜೆರೆಮಿ ಕರ್ನ್ - "ಮಕ್ಕಳ" ವರ್ಗ ವಿಜೇತರು
ಜೆರೆಮಿ ಕರ್ನ್ - "ಮಕ್ಕಳ" ವರ್ಗ ವಿಜೇತರು

ಆಮಿ-ಲೇಘ್ ಪ್ಯಾಟರ್ಸನ್ -"ಹೂ" ವರ್ಗದ ವಿಜೇತರು
ಆಮಿ ಲೇಘ್ ಕೇಪ್ ನಗರದಲ್ಲಿ ಒಮ್ಮೆ ಬೆಂಕಿ ಬಿದ್ದು ಹಾರಿದ ನಂತರದಲ್ಲಿ ಸ್ಥಿತಿಸ್ಥಾಪಕತ್ವ ಮತ್ತು ರೂಪಾಂತರದಿಂದ ಸ್ಫೂರ್ತಿಗೊಂಡ ರಾಷ್ಟ್ರೀಯ ಹೂಗಳನ್ನು ಹೀಗೆ ಸೆರೆಹಿಡಿದಿದ್ದರು.

ಫೈಸಾಲ್ ಅಲಟೀಕಿ- "ಲ್ಯಾಂಡ್‌ಸ್ಕೇಪ್" ವರ್ಗ ವಿಜೇತ
ನ್ಯೂಜಿಲ್ಯಾಂಡ್ ಪ್ರವಾಸ ಸ್ಥಳ

ಫೆಬಿಯೋ ಆಲ್ವಾರೇಜ್- "ಲೈಫ್‌ಸ್ಟೈಲ್" ವರ್ಗ ವಿಜೇತ
ಈ ಫೋಟೋದಲ್ಲಿ ಫೆಬಿಯೋ ಬ್ರೆಜಿಲಿಯನ್ ಪ್ರೀತಿಯ ಸಾಕರ್ ಫೋಟೋ ಕ್ಯಾಪ್ಚರ್ ಮಾಡಿದ್ದಾರೆ.

ವ್ಯೋನ್ ನಾಟನ್, "ಪ್ರಕೃತಿ" ವರ್ಗ ವಿಜೇತ
ವ್ಯೋನ್ ನಾಟನ್‌ತನ್ನ ನಾಯಿಯೊಂದಿಗೆ ವಾಷಿಂಗ್ಟನ್ ಬೀಚ್‌ನಲ್ಲಿ ವಾಕಿಂಗ್ ಹೋಗುವ ವೇಳೇ ಕ್ಯಾಪ್ಚರ್ ಮಾಡಿರುವ ಫೋಟೋವಾಗಿದೆ.

ಜಾನ್ ಹುಯೆಟ್- "ಸುದ್ದಿ / ಕಾರ್ಯಕ್ರಮಗಳು" ವರ್ಗದಲ್ಲಿ 2 ನೇ ಸ್ಥಾನ
ಇವರು ಅಥ್ಲೆಟಿಕ್ ಸ್ಪರ್ಧೆಯನ್ನು ಸೆರೆಹಿಡಿದಿದ್ದಾರೆ.

ಜೋಸ್ ಲೂಯಿಸ್ ಸೂಯೆಜ್ ಮಾರ್ಟಿನೆಜ್, "ಇತರೆ" ವರ್ಗ ವಿಜೇತ
ಜೋಸ್, ಈತ ಐಫೋನ್ ಫೋಟೋಗ್ರಾಫರ್ ಆಗಿದ್ದು, ಅದ್ಭುತ ಕಲಾತ್ಮಕ ಫೋಟೋ ಕ್ಯಾಪ್ಚರ್ ಮಾಡಿದ್ದಾನೆ.

ಕೈಹ್ವಾ ಲಿ- "ಪನೋರಮಾ 'ವರ್ಗದ 2 ನೇ ವಿಜೇತ
ಕೈಹ್ವಾ, ಅರಿಜೊನಾ ಮತ್ತು ಉಠಾಹ್ ನ ಮೊಕೇಷನ್ ಸಮಯದಲ್ಲಿ 1000 ಅಡಿ ಆಳದ ಕಣಿವೆಯನ್ನು ಕ್ಯಾಪ್ಚರ್ ಮಾಡಿರುವುದು.

ಬ್ರೆಂಡನ್ ಓ ಸೀ, "ಜನರು" ವರ್ಗದ 3 ನೇ ವಿಜೇತ
ಬ್ರೆಂಡನ್ ಓ ಸೀ, "ಜನರು" ವರ್ಗದ 3 ನೇ ವಿಜೇತ

ಡೇನಿಯಲ್ ಕೊಲೊಂಬೆರ -"ಭಾವಚಿತ್ರ" ವರ್ಗ ವಿಜೇತ
ಹೈಫ್ಯಾಷನ್ ಫೋಟೋವನ್ನು ಕಪ್ಪು ಮತ್ತು ಬಿಳಿ ಮೋಡ್‌ನಲ್ಲಿ ಫೋಕಸ್ ಮಾಡಿ ಡೇನಿಯಲ್ ಈ ಫೋಟೋ ತೆಗೆದಿದ್ದಾರೆ.

ಹೀದರ್ ಗಾಸ್ "ಸೀಸನ್ಸ್" ವರ್ಗ ವಿಜೇತ
ಹೀದರ್, ಮಿಚಿಗಾನ್‌ನಲ್ಲಿನ ಚಳಿಗಾಲದ ಸಮಯದಲ್ಲಿನ 12 ಅಡಿಯ ಹಿಮಚ್ಛಾದಿತ ಪ್ರದೇಶ ಫೋಟೋ ಸೆರೆಹಿಡಿದಿದ್ದಾನೆ.


Click it and Unblock the Notifications








