ಬೋಟ್‌ನ ಏರ್‌ಡೋಪ್ಸ್ 100 ಲಾಂಚ್; 50 ಗಂಟೆಯ ಪ್ಲೇಬ್ಯಾಕ್ ಸಮಯ

|

ಬೋಟ್‌ ಕಂಪೆನಿ ಆಡಿಯೋ ವಿಭಾಗದಲ್ಲಿ ಭಾರೀ ಸದ್ದು ಮಾಡುತ್ತಿದೆ. ಅದರಲ್ಲೂ ಈ ಕಂಪೆನಿಯ ವಾಯರ್‌ಲೆಸ್‌ ಇಯರ್‌ಬಡ್‌ಗಳು ಒಂದು ಪೂರ್ಣ ಚಾರ್ಜ್‌ನಲ್ಲಿ ದೀರ್ಘ ಸಮಯದ ಬ್ಯಾಟರಿ ಬ್ಯಾಕಪ್‌ ನೀಡುವ ಮೂಲಕ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಇದರ ನಡುವೆ ಈಗ ಬೋಟ್‌ ನಿಂದ ಏರ್‌ಡೋಪ್ಸ್ 100 (boAt Airdopes 100) ಎಂಬ ಹೊಸ ಇಯರ್‌ಬಡ್ಸ್‌ ಅನ್ನು ಲಾಂಚ್‌ ಮಾಡಲಾಗಿದೆ.

 ಬೋಟ್‌ ಕಂಪೆನಿ

ಹೌದು, ಬೋಟ್‌ ಕಂಪೆನಿಯು ಕಾಲಕಾಲಕ್ಕೆ ತಕ್ಕಂತೆ ಭಿನ್ನ ಫೀಚರ್ಸ್ ಇರುವ ಆಡಿಯೋ ಸಂಬಂಧಿತ ಡಿವೈಸ್‌ಗಳನ್ನು ಲಾಂಚ್‌ ಮಾಡುತ್ತಲೇ ಬರುತ್ತಿದೆ. ಇದರ ಸಾಲಿಗೆ ಈಗ ಹೊಸ ಏರ್‌ಡೋಪ್ಸ್ 100 ಸೇರ್ಪಡೆಯಾಗಿದೆ. ಈ ಮೊದಲು ಇದೇ ಸರಣಿಯಲ್ಲಿ ಏರ್‌ಡೋಪ್ಸ್ 500 ANC ಅನ್ನು ಲಾಂಚ್‌ ಮಾಡಲಾಗಿತ್ತು. ಹೊಸ ಇಯರ್‌ಬಡ್ಸ್‌ಗಳು ENx, ಬೀಸ್ಟ್‌, IWP ಹಾಗೂ ASAP ಸೇರಿದಂತೆ ಇನ್ನಿತರೆ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಕೆಲಸ ಮಾಡಲಿದೆ. ಹಾಗಿದ್ರೆ ಇದರ ಮತ್ತಷ್ಟು ಫೀಚರ್ಸ್‌ ಹಾಗೂ ಬೆಲೆ ವಿವರವನ್ನು ಈ ಲೇಖನದ ಮೂಲಕ ತಿಳಿಸಿಕೊಡಲಾಗಿದೆ ಓದಿರಿ.

ಪ್ರಮುಖ ಫಿಚರ್ಸ್‌

ಪ್ರಮುಖ ಫಿಚರ್ಸ್‌

ಈ ಇಯರ್‌ಪಾಡ್ಸ್‌ ಪೋರ್ಟಬಲ್ ಆಗಿದ್ದು, ಉತ್ತಮ ವಿನ್ಯಾಸ ಹಾಗೂ ಆಕರ್ಷಕ ಚಾರ್ಜಿಂಗ್‌ ಕೇಸ್‌ ಅನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಯಲ್ಲಿ ಈ ಏರ್‌ಡೋಪ್ಸ್ 100 ವೇಗದ ಸಂಪರ್ಕಕ್ಕಾಗಿ ಬ್ಲೂಟೂತ್ v5.2 ಆವೃತ್ತಿಯನ್ನು ಪಡೆದುಕೊಂಡಿದೆ. ಇದರಲ್ಲಿರುವ ಬೀಸ್ಟ್‌ ಮೋಡ್ 50ms ನಲ್ಲಿ ಯಾವುದೇ ವಿಳಂಬವಿಲ್ಲದೆ ಬ್ಲೂಟೂತ್ ಮೂಲಕ ಅಲ್ಟ್ರಾ ಲೋ ಲೇಟೆನ್ಸಿ ಆಡಿಯೊ ಅನುಭವವನ್ನು ನೀಡುತ್ತದೆ. ಹಾಗೆಯೇ ವಾಯರ್‌ಲೆಸ್‌ ಶ್ರೇಣಿ 10 ಮೀಟರ್‌ ಇದ್ದು, ವಾಟರ್‌ ಹಾಗೂ ಸ್ಟೆಟ್‌ ರೆಸಿಸ್ಟೆಂಟ್‌ಗಾಗಿ IPX4 ರೇಟ್‌ ಪಡೆದುಕೊಂಡಿದೆ.

ನಾಯ್ಸ್‌ ಕ್ಯಾನ್ಸಲೇಶನ್‌ ಆಯ್ಕೆ

ನಾಯ್ಸ್‌ ಕ್ಯಾನ್ಸಲೇಶನ್‌ ಆಯ್ಕೆ

ಇನ್ನು 10mm ಡೈನಾಮಿಕ್ ಡ್ರೈವರ್‌ ಈ ಬಡ್ಸ್‌ಗಳಲ್ಲಿದ್ದು, ಇವು ಹೆಚ್ಚಿನ ಅದರಲ್ಲೂ ನಿಮ್ಮನ್ನು ಸಂಗೀತ ಲೋಕದಲ್ಲಿ ತೇಲುವಂತೆ ಮಾಡುವ ಬೇಸ್‌ ಅನುಭವವನ್ನು ನೀಡುತ್ತದೆ. ಜೊತೆಗೆ ಇದು ಬೋಟ್ ಸಿಗ್ನೇಚರ್ ಸೌಂಡ್ ಆಯ್ಕೆ ಪಡೆದುಕೊಂಡಿದ್ದು, ನಾಯ್ಸ್‌ ಕ್ಯಾನ್ಸಲೇಶನ್‌ ಆಯ್ಕೆ ಇರುವ ಕ್ವಾಡ್ ಮೈಕ್ರೊಫೋನ್‌ಗಳು ನಿಮ್ಮ ಕರೆಯ ಸಮಯದಲ್ಲಿ ಆಕರ್ಷಕ ಅನುಭವ ನೀಡಲಿವೆ.

ಇನ್‌ಬಿಲ್ಟ್‌ ಒನ್‌ ಟಚ್‌ ಫೀಚರ್ಸ್‌

ಇನ್‌ಬಿಲ್ಟ್‌ ಒನ್‌ ಟಚ್‌ ಫೀಚರ್ಸ್‌

ಬಡ್ಸ್‌ಗಳಲ್ಲಿ ಟಚ್‌ ಕಂಟ್ರೋಲ್‌ ಫೀಚರ್ಸ್‌ ನೀಡಲಾಗಿದ್ದು, ಈ ಮೂಲಕ ನೀವು ಕರೆಗಳಿಗೆ ಪ್ರತಿಕ್ರಿಯಿಸಬಹುದು, ಮ್ಯೂಸಿಕ್‌ ಕಂಟ್ರೋಲ್‌ ಮಾಡಬಹುದು. ಇದೆಲ್ಲಕ್ಕೂ ಮಿಗಿಲಾಗಿ ಗೂಗಲ್‌ ಅಸಿಸ್ಟೆಂಟ್‌ ಹಾಗೂ ಸಿರಿ ಫೀಚರ್ಸ್‌ ಅನ್ನು ಬಳಕೆ ಮಾಡಿಕೊಳ್ಳಬಹುದು. ಹಾಗೆಯೇ ಇನ್‌ಬಿಲ್ಟ್‌ ಒನ್‌ ಟಚ್‌ ಫೀಚರ್ಸ್‌ ಹವಾಮಾನ ವರದಿ, ಸುದ್ದಿ ಹಾಗೂ ಕ್ರಿಕೆಟ್‌ ಸಂಬಂಧಿತ ಮಾಹಿತಿಯನ್ನು ಒದಗಿಸಲಿದೆ.

ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ಸಾಮರ್ಥ್ಯ

ಈ ಇಯರ್‌ ಬಡ್ಸ್‌ಅನ್ನು ಒಂದು ಬಾರಿ ಪೂರ್ಣವಾಗಿ ಚಾರ್ಜ್‌ ಮಾಡಿದರೆ 50 ಗಂಟೆಗಳವರೆಗೆ ಬಳಕೆ ಮಾಡಬಹುದಾಗಿದೆ. ಅದರಲ್ಲೂ ಈ ಚಾರ್ಜಿಂಗ್‌ ವ್ಯವಸ್ಥೆಗೆ ASAP ತಂತ್ರಜ್ಞಾನ ಪರಿಚಯಿಸಲಾಗಿದ್ದು, ಚಾರ್ಜಿಂಗ್‌ ಕೇಸ್‌ ಬಡ್ಸ್‌ಗಳನ್ನು ಅತೀ ಬೇಗನೆ ಚಾರ್ಜ್‌ ಮಾಡುತ್ತದೆ. ಪರಿಣಾಮ ನೀವು 5 ನಿಮಿಷಗಳ ಚಾರ್ಜ್ ನಲ್ಲಿ ಒಂದು ಗಂಟೆಯವರೆಗೆ ಬಳಕೆ ಮಾಡಬಹುದು. ಚಾರ್ಜಿಂಗ್‌ ಕೇಸ್‌ನಲ್ಲಿ ಯುಎಸ್‌ಬಿ-C ಪೋರ್ಟ್ ನೀಡಲಾಗಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಈ ಇಯರ್‌ಬಡ್ಸ್‌ಗೆ 1,299 ಬೆಲೆ ನಿಗದಿ ಮಾಡಲಾಗಿದೆ. ಹಾಗೆಯೇ ಇಂದಿನಿಂದ ಬೋಟ್‌ನ ಅಧಿಕೃತ ಜಾಲತಾಣ ಹಾಗೂ ಫ್ಲಿಪ್‌ಕಾರ್ಟ್‌ ಸೈಟ್‌ಗೆ ಭೇಟಿ ನೀಡಿ ಖರೀದಿ ಮಾಡಬಹುದಾಗಿದೆ. ಅದರಂತೆ ಈ ಇಯರ್‌ಬಡ್ಸ್ ಸಫೈರ್ ಬ್ಲೂ, ಓಪಲ್ ಬ್ಲ್ಯಾಕ್ ಮತ್ತು ಎಮರಾಲ್ಡ್ ಗ್ರೀನ್‌ನಲ್ಲಿ ಲಭ್ಯವಾಗಲಿದ್ದು, ಖರೀದಿಸುವವರಿಗೆ ವಿವಿಧ ಆಯ್ಕೆ ನೀಡಲಿದೆ.

Best Mobiles in India

English summary
boAt Company is making a lot of noise in the audio segment. Meanwhile, boAt Airdopes 100 has now been unveiled.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X