ಬೌಲ್ಟ್ ಆಡಿಯೋದಿಂದ ಹೊಸ ಇಯರ್‌ಬಡ್ಸ್‌ ಲಾಂಚ್‌; 999ರೂ.ಗಳ ಕೊಡುಗೆ ಬೆಲೆ!

|

ಬೌಲ್ಟ್ ಆಡಿಯೊ ಕಂಪೆನಿಯು ಆಡಿಯೋ ವಿಭಾಗದ ಉತ್ಪನ್ನಗಳನ್ನು ವಿಭಿನ್ನ ವಿನ್ಯಾಸದಲ್ಲಿ ತಯಾರಿಸಿ ಗ್ರಾಹಕರಿಗೆ ಪರಿಚಯಿಸುತ್ತದೆ. ಹಾಗೆಯೇ ಈ ಕಂಪೆನಿಯ ಎಲ್ಲಾ ಉತ್ಪನ್ನಗಳನ್ನು ಭಾರತ ಹಾಗೂ ಚೀನಾದಲ್ಲಿ ತಯಾರು ಮಾಡಲಾಗುತ್ತಿದ್ದು, ಪ್ರಮುಖ ವಿಷಯ ಎಂದರೆ ನಟ ಸೈಫ್ ಅಲಿ ಖಾನ್ ಮತ್ತು ಭಾರತೀಯ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಅವರನ್ನು ಬ್ರಾಂಡ್ ಅಂಬಾಸಿಡರ್‌ಗಳಾಗಿ ಇತ್ತೀಚೆಗಷ್ಟೇ ಬೌಲ್ಟ್ ಆಯ್ಕೆ ಮಾಡಿಕೊಂಡಿದೆ. ಈ ನಡುವೆ ಈಗ ಭಾರತೀಯರಿಗೆ ಬೌಲ್ಟ್ ಬೊಂಬಾಟ್ ಆಫರ್‌ ನೀಡಿದೆ.

ಗುಣಮಟ್ಟ

ಹೌದು, ಬೌಲ್ಟ್ ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳ ಮೂಲಕ ಬಳಕೆದಾರರಿಗೆ ಮೈನವಿರೇಳಿಸುವ ಆಡಿಯೊ ಅನುಭವವನ್ನು ನೀಡುತ್ತದೆ. ಇದರ ನಡುವೆ ಈಗ ಆಕರ್ಷಕವಾದ ಎರಡು ಜೊತೆ ಹೊಸ ಇಯರ್‌ಬಡ್ಸ್‌ಗಳಾದ ಬೌಲ್ಟ್ ಆಡಿಯೋ X30 ಮತ್ತು X50 ಇಯರ್‌ಬಡ್‌ ಲಾಂಚ್‌ ಮಾಡಲಾಗಿದೆ. ಈ ಇಯರ್‌ಬಡ್ಸ್‌ ವಿಶೇ‍ವಾದ ಶೈಲಿಯನ್ನು ಹೊಂದಿವೆ, ಅದೆಲ್ಲಕ್ಕೂ ಮಿಗಿಲಾಗಿ ಸೂಪರ್ ಫಾಸ್ಟ್ ಚಾರ್ಜಿಂಗ್, ಮೂರು ಈಕ್ವಲೈಜರ್ ಮೋಡ್‌, 40 ಗಂಟೆಗಳ ಪ್ಲೇ ಬ್ಯಾಕ್‌ ಸಮಯವನ್ನು ಇವು ಪಡೆದುಕೊಂಡಿವೆ. ಹಾಗಿದ್ರೆ ಇವುಗಳ ಇತರೆ ಫೀಚರ್ಸ್ ಏನು?, ಬೆಲೆ ಎಷ್ಟು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಡಿವೈಸ್‌ ಶೈಲಿ

ಡಿವೈಸ್‌ ಶೈಲಿ

ಈ ಇಯರ್‌ಬಡ್ಸ್‌ ಅನ್ನು ಸ್ಪೋರ್ಟಿಯಾಗಿ ಕಾಣುವಂತೆ ವಿನ್ಯಾಸಗೊಳಿಸಲಾಗಿದ್ದು, ದಿನವಿಡೀ ಬಳಕೆ ಮಾಡಿದರೂ ಕಿವಿಗೆ ಯಾವುದೇ ಹಾನಿಯಾಗಂತೆ ಹಾಗೂ ನೋವು ಉಂಟಾಗದಂತೆ ಇರುವ ಶೈಲಿಯನ್ನು ಇವು ಪಡೆದುಕೊಂಡಿವೆ. ಜೊತೆಗೆ ಹಗುರವಾದ ಚಾರ್ಜಿಂಗ್ ಕೇಸ್ ಆಯ್ಕೆ ಪಡೆದಿವೆ.

ಪ್ರಮುಖ ಫಿಚರ್ಸ್‌

ಪ್ರಮುಖ ಫಿಚರ್ಸ್‌

ಬೌಲ್ಟ್ ಆಡಿಯೋ X30 ಮತ್ತು X50 ಇಯರ್‌ಬಡ್‌ ವಾಟರ್‌ ಹಾಗೂ ಡಸ್ಟ್‌ ರೆಸಿಸ್ಟೆಂಟ್‌ಗಾಗಿ IPX5 ರೇಟ್‌ ಪಡೆದಿದ್ದು, ಬ್ಲೂಟೂತ್ ಆವೃತ್ತಿ 5.1 ರಲ್ಲಿ ಕಾರ್ಯನಿರ್ವಹಿಸಲಿವೆ. ಹಾಗೆಯೇ ಬಡ್ಸ್‌ಗಳನ್ನು ಚಾರ್ಜಿಂಗ್‌ ಕೇಸ್‌‌ನಿಂದ ಹೊರತೆಗೆದ ತಕ್ಷಣ ನಿಮ್ಮ ಸ್ಮಾರ್ಟ್‌ಫೋನ್‌ಗೆ ಸಂಪರ್ಕಿತಗೊಳ್ಳುತ್ತವೆ. ಹಾಗೆಯೇ ಎರಡೂ ಜೋಡಿ ಇಯರ್‌ಬಡ್‌ಗಳು 10mm ಡ್ರೈವರ್‌ಗಳನ್ನು ಹೊಂದಿವೆ.

X30 ಮತ್ತು X50

X30 ಮತ್ತು X50 ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಬೌಲ್ಟ್ ಆಡಿಯೊ X50 ಕ್ವಾಡ್ ಮೈಕ್ ಎನ್ವಿರಾನ್ಮೆಂಟಲ್ ನಾಯ್ಸ್ ಕ್ಯಾನ್ಸಲೇಶನ್‌ ಫೀಚರ್ಸ್‌ ಪಡೆದುಕೊಂಡಿದ್ದು, ಈ ಇಯರ್‌ಬಡ್‌ಗಳು ಸೂಪರ್-ಫಾಸ್ಟ್ ಚಾರ್ಜಿಂಗ್ ಆಯ್ಕೆ ಹೊಂದಿವೆ. ಇದರ ಜೊತೆಗೆ ಮೂರು ಈಕ್ವಲೈಜರ್ ಮೋಡ್‌ಗಳು ಇದರಲ್ಲಿದ್ದು, ಹೈಫೈ, ರಾಕ್ ಮತ್ತು ಬೇಸ್‌ ಬೂಸ್ಟ್ ಪ್ರಮುಖವಾದವುಗಳಾಗಿವೆ. ಇನ್ನು ಗೇಮಿಂಗ್‌ಗಾಗಿ 45ms ಕಡಿಮೆ ಲೇಟೆನ್ಸಿ ಕಾಂಬ್ಯಾಟ್ ಮೋಡ್ ಫೀಚರ್ಸ್‌ ಇವುಗಳಲ್ಲಿದೆ.

ಬ್ಯಾಟರಿ ವಿವರ

ಬ್ಯಾಟರಿ ವಿವರ

ಇಯರ್‌ಬಡ್‌ಗಳು 40 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತವೆ ಎಂದು ಕಂಪೆನಿ ಹೇಳಿಕೊಂಡಿದೆ. ಹಾಗೆಯೇ ಈ ಎರಡೂ ಜೋಡಿ ಇಯರ್‌ಬಡ್‌ಗಳು ಕೇವಲ 10 ನಿಮಿಷಗಳ ಚಾರ್ಜ್‌ನಲ್ಲಿ 100 ನಿಮಿಷಗಳವರೆಗೆ ಪ್ಲೇಟೈಮ್ ನೀಡಲಿದೆಯಂತೆ.

ಬೆಲೆ ಹಾಗೂ ಇತರೆ

ಬೆಲೆ ಹಾಗೂ ಇತರೆ

ಈ ಎರಡೂ ಜೋಡಿ ಇಯರ್‌ಬಡ್‌ಗಳನ್ನು ಬೌಲ್ಟ್ ಆಡಿಯೊ ವೆಬ್‌ಸೈಟ್‌ನಲ್ಲಿ 999ರೂ. ಗಳಿಗೆ ಖರೀದಿ ಮಾಡಬಹುದು. ಇದರಲ್ಲಿ X30 ಬ್ಲೂ ಮತ್ತು ವಾರ್ಮ್ ಗ್ರೇ ಬಣ್ಣ ಆಯ್ಕೆಗಳನ್ನು ಹೊಂದಿದ್ದು, X50 ಕಪ್ಪು ಹಾಗೂ ಬಿಳಿ ಬಣ್ಣಗಳಲ್ಲಿ ಲಭ್ಯವಿರಲಿದೆ. ಈ ಎರಡೂ ಜೊತೆ ಇಯರ್‌ಬಡ್ಸ್‌ ಅಮೆಜಾನ್‌, ಫ್ಲಿಪ್‌ಕಾರ್ಟ್‌ ನಲ್ಲಿ ಶೀಘ್ರದಲ್ಲೇ ಲಭ್ಯವಾಗಲಿವೆ.

ನೆಕ್‌ಬ್ಯಾಂಡ್

ಬೌಲ್ಟ್ ಆಡಿಯೋ ಕೆಲವು ದಿನಗಳ ಹಿಂದೆಯಷ್ಟೇ ಬೌಲ್ಟ್ ಎಫ್‌ಎಕ್ಸ್‌ಚಾರ್ಜ್ ಎಂಬ ನೆಕ್‌ಬ್ಯಾಂಡ್ ಅನ್ನು ಸಹ ಬಿಡುಗಡೆ ಮಾಡಿದೆ. ಈ ನೆಕ್‌ಬ್ಯಾಂಡ್ ಝೆನ್ ಟೆಕ್ನಾಲಜಿಯನ್ನು ಹೊಂದಿದ್ದು, ವಾಟರ್‌ ರೆಸಿಸ್ಟೆಂಟ್‌ಗಾಗಿ IPX5 ರೇಟಿಂಗ್‌ ಪಡೆದುಕೊಂಡಿದೆ. ಹಾಗೆಯೇ ಕೇವಲ ಐದು ನಿಮಿಷಗಳ ಕಾಲ ಚಾರ್ಜ್ ಮಾಡಿದರೆ 7 ಗಂಟೆಗಳ ಪ್ಲೇಟೈಮ್ ನೀಡಲಿದೆ. ಅಮೆಜಾನ್‌ನಲ್ಲಿ ಈ ಡಿವೈಸ್‌ ಲಭ್ಯವಿದ್ದು, ಕೊಡುಗೆ ಬೆಲೆಯಾಗಿ 899 ರೂ.ಗಳಲ್ಲಿ ಇದನ್ನು ಖರೀದಿ ಮಾಡಬಹುದು. ಇದರ ಮೂಲ ದರ 4,499 ರೂ. ಗಳಾಗಿದೆ. ಈ ನೆಕ್‌ಬ್ಯಾಂಡ್‌ ಕಪ್ಪು ಮತ್ತು ಹಸಿರು ಬಣ್ಣದಲ್ಲಿ ಲಭ್ಯ ಇದೆ.

Best Mobiles in India

Read more about:
English summary
Boult Audio Company manufactures and markets audio segment products in a variety of designs. Meanwhile, it has now unveiled new earbuds with Rs 999.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X