Just In
- 29 min ago HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- 57 min ago ಇಂದು 3D ಕರ್ವ್ಡ್ ಡಿಸ್ಪ್ಲೇ ಇರುವ ಈ ಫೋನಿನ ಸೇಲ್!..ಆಫರ್ ಬೆಲೆ ಎಷ್ಟು?
- 2 hrs ago OnePlus: ಒನ್ಪ್ಲಸ್ ವಾಚ್ 2 ನಾರ್ಡಿಕ್ ಬ್ಲೂ ಆವೃತ್ತಿ ಲಾಂಚ್! ಬೆಲೆ ಎಷ್ಟು?
- 4 hrs ago ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
Don't Miss
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Automobiles ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Movies 'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡಿಸೆಂಬರ್ 1 ರಿಂದ ಮೊಬೈಲ್ ಬಳಕೆದಾರರು ಬೆಚ್ಚಿಬೀಳುವುದು ಗ್ಯಾರಂಟಿ!..ಏಕೆ ಗೊತ್ತಾ?
ಕಳೆದ ಮೂರು ವರ್ಷಗಳಿಂದ ಇಲ್ಲಿಯವರೆಗೂ ಅಗ್ಗವಾಗಿ ಡೇಟಾ ಮತ್ತು ಉಚಿತ ಕರೆಗಳನ್ನು ಬಳಸುತ್ತಿದ್ದವರಿಗೆ ಶಾಕಿಂಗ್ ನ್ಯೂಸ್ ಇದಾಗಿದ್ದು, ಡಿಸೆಂಬರ್ ಆರಂಭದಿಂದ ಟೆಲಿಕಾಂ ಕಂಪನಿಗಳು ಡೇಟಾ ಮತ್ತು ಕರೆ ದರಗಳನ್ನು ಶೇ.30 ರಿಂದ 40 ರಷ್ಟು ಏರಿಸಲಿವೆ ಎನ್ನಲಾಗಿದೆ. ಟೆಲಿಕಾಂ ಕಂಪನಿಗಳಾದ ಏರ್‌ಟೆಲ್, ಐಡಿಯಾ ವೊಡಾಫೋನ್ ನಂತರ ಇದೀಗ ರಿಲಯನ್ಸ್ ಜಿಯೋ ಕೂಡ ತನ್ನ ಟ್ಯಾರಿಫ್ ಬೆಲೆಗಳನ್ನು ಏರಿಸುವುದು ಬಹುತೇಕ ಖಚಿತವಾಗಿದ್ದು, ಡಿಸೆಂಬರ್ 1 ರಿಂದ ದೇಶದ ಟೆಲಿಕಾಂನಲ್ಲಿ ಮಹತ್ತರ ಬದಲಾವಣೆಯೇ ಆಗಲಿದೆ ಎಂದು ಹೇಳಲಾಗುತ್ತಿದೆ.
ಹೌದು, ವೊಡಾಫೋನ್ ಐಡಿಯಾ ಲಿಮಿಟೆಡ್ ಮತ್ತು ಭಾರ್ತಿ ಏರ್‌ಟೆಲ್ ಪರವಾಗಿ ಕಂಪನಿಗಳು ತಮ್ಮ ಸೇವಾ ಸುಂಕ ಯೋಜನೆಗಳನ್ನು ಡಿಸೆಂಬರ್ 1 ರಿಂದ ಹೆಚ್ಚಿಸಲಿರುವುದು ಖಚಿತವಾಗಿದೆ. ಆದರೆ, ಜಿಯೋ ಮಾತ್ರ ಈ ವರೆಗೂ ಸರ್ಕಾರ ಒಪ್ಪಿದರೆ ಮಾತ್ರ ದರ ಹೆಚ್ಚಿಸುವುದಾಗಿ ತಿಳಿಸಿದೆ. ಜಿಯೋವಿನ ನಡೆ ಏನೇ ಆದರೂ ಅದು ಟೆಲಿಕಾಂ ಬೆಲೆಗಳನ್ನು ಹೆಚ್ಚಿಸುವುದನ್ನು ತಡೆಯಲು ಸಾಧ್ಯವಿಲ್ಲ. ಡಿಸೆಂಬರ್ 1 ರಿಂದ ದೇಶದ ಟೆಲಿಕಾಂನಲ್ಲಿ ಶೇ.30-40 ರಷ್ಟು ದರ ಏರಿಕೆಯಾಗುವ ಸಾಧ್ಯತೆ ನಿಶ್ಚಿತವಾಗಿದೆ ಎಂದು ಟೆಲಿಕಾಂ ಕ್ಷೇತ್ರದ ತಜ್ಞರು ಅಂದಾಜಿಸಿದ್ದಾರೆ.
ಟೆಲಿಕಾಂ ಕ್ಷೇತ್ರದ ತಜ್ಞರ ಪ್ರಕಾರ, ಟೆಲಿಕಾಂನಲ್ಲಿನ ಬೆಲೆಗಳು ಶೇ.30-40 ರಷ್ಟು ದರ ಏರಿಕೆಯಾಗುವ ಸಾಧ್ಯತೆಯಿದೆ. ಟೆಲಿಕಾಂ ಕ್ಷೇತ್ರದಲ್ಲಿ ತಂತ್ರಜ್ಞಾನ ಬದಲಾವಣೆ ಆಗುತ್ತಲೇ ಇರುತ್ತದೆ. ಹೀಗಾಗಿ ಹೊಸತನಕ್ಕೆ ತೆರೆಯಬೇಕಾದರೆ ಕೋಟ್ಯಂತರ ರೂ. ಹಣ ಹೂಡಬೇಕಾಗುತ್ತದೆ. ನಷ್ಟದಲ್ಲಿದ್ದುಕೊಂಡು ಹೂಡಿಕೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ದರ ಏರಿಕೆ ಅನಿವಾರ್ಯ ಎಂದು ಬಹುತೇಕ ಕಂಪನಿಗಳು ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದೆ. ಇದಕ್ಕೆ ಸರ್ಕಾರ ಕೂಡ ಸಹಮತ ವ್ಯಕ್ತಪಡಿಸಿರುವುದರಿಂದ ಟೆಲಿಕಾಂ ಬೆಲೆಗಳು ಹೆಚ್ಚಳವಾಗುತ್ತವೆ ಎಂದು ತಿಳಿಸಿದ್ದಾರೆ.
ದೇಶದ ಮಾರುಕಟ್ಟೆಯಲ್ಲಿ ಜಿಯೋಗೆ ಸ್ಪರ್ಧೆ ನೀಡಲು ಮೂರು ವರ್ಷಗಳಿಂದ ದರವನ್ನು ಇಳಿಸಿದ್ದ ಟೆಲಿಕಾಂ ಕಂಪನಿಗಳು ಭಾರೀ ನಷ್ಟವನ್ನು ಅನುಭವಿಸಿವೆ. ವೊಡಾಫೋನ್ ಐಡಿಯಾ ಸೆಪ್ಟೆಂಬರಿಗೆ ಅಂತ್ಯಗೊಂಡ ದ್ವಿತೀಯ ತ್ರೈಮಾಸಿಕದಲ್ಲಿ 50,921 ರೂ. ಕೋಟಿಗಳ ದಾಖಲೆಯಷ್ಟು ನಷ್ಟವನ್ನು ಅನುಭವಿಸಿದ್ದರೆ, ಭಾರ್ತಿ ಏರ್ಟೆಲ್ ಕೂಡ 23,045 ಕೋಟಿ ರೂ. ನಷ್ಟ ಅನುಭವಿಸಿದೆ. ಇವೆಲ್ಲದರ ಪರಿಣಾಮದಿಂದಾಗಿ ಈ ಟೆಲಿಕಾಂ ಕಂಪೆನಿಗಳು ಬೆಲೆಗಳನ್ನು ಹೆಚ್ಚಿಸುತ್ತಿವೆ. ಇದಕ್ಕೆ ಸರ್ಕಾರ ಕೂಡ ಸಹಮತ ವ್ಯಕ್ತಪಡಿಸಿ ಸಹಾಯಮಾಡಲು ಮುಂದಾಗಿದೆ.
ವೊಡಾಫೋನ್ ಐಡಿಯಾ ಮತ್ತು ಏರ್‌ಟೆಲ್ ಕಂಪೆನಿಗಳು ನಷ್ಟದಿಂದ ಹೊರಬರಲು ಹೆಚ್ಚು ಆದಾಯ ಬೇಕಿದೆ. ಆದರೆ, ಜಿಯೋ ನೀಡುತ್ತಿರುವ ಕಡಿಮೆ ಬೆಲೆಯ ಯೋಜನೆಗಳಿಂದಾಗಿ ಆ ಕಂಪೆನಿಗಳು ಹೆಚ್ಚು ಆದಾಯ ಗಳಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಜಿಯೋ ಕೂಡ ದರಗಳನ್ನು ಹೆಚ್ಚಿಸುವಂತೆ ಮಾಡಲು ಸರ್ಕಾರ ಮುಂದಾಗಿದೆ ಎಂದು ಹೇಳಲಾಗುತ್ತಿವೆ. ಹೀಗೆ ಮಾಡಿದರೆ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪೆನಿಗಳು ನಷ್ಟದಿಂದ ಮೇಲೆದ್ದು ದೇಶದ ಟೆಲಿಕಾಂ ಸ್ಥಿರವಾಗಬಹುದು ಎಂದು ಸರ್ಕಾರ ಯೋಜಿಸಿದೆ ಎಮದು ಹೇಳಲಾಗುತ್ತಿದೆ.
ಡಿಸೆಂಬರ್ 1 ರಿಂದ ಟ್ಯಾರಿಫ್ ಪ್ಲ್ಯಾನ್ ಹೆಚ್ಚಿಸುವುದಾಗಿ ತಿಳಿಸಿರುವ ಟೆಲಿಕಾಂ ಕಂಪೆನಿಗಳು, ದರಗಳಲ್ಲಿ ಯಾವ ರೀತಿಯ ಬದಲಾವಣೆಗಳನ್ನು ತರುತ್ತಿರುವುದಾಗಿ ತಿಳಿಸಿಲ್ಲ. ಆದರೆ, ಟೆಲಿಕಾಂನಲ್ಲಿನ ಬೆಲೆಗಳು ಶೇ.30-40 ರಷ್ಟು ದರ ಏರಿಕೆಯಾಗುವ ಸಾಧ್ಯತೆಯಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಅಂದರೆ, ಇದೀಗ 300 ರೂ.ಗೆ ಸಿಗುತ್ತಿರುವ ಯೋಜನೆಗಳ ಬೆಲೆ 50೦ ರೂ. ವರೆಗೆಗೆ ಏರಿಕೆಯಾಗಬಹುದು ಅಥವಾ ಇದೀಗ ಮೂರು ತಿಂಗಳು ಲಭ್ಯವಿರುವ ಯೋಜನೆಗಳ ವ್ಯಾಲಿಡಿಟಿ ಪ್ಲ್ಯಾನ್‌ಗಳು ಎರಡು ತಿಂಗಳಿಗೆ ಇಳಿಯಬಹುದು ಎಂದು ಹೇಳಲಾಗುತ್ತಿದೆ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999