ಜಿಯೋಗೆ ಸ್ಪರ್ಧೆಯೊಡ್ಡಲು ಬಿಎಸ್ಎನ್ಎಲ್ ನ 899 ರುಪಾಯಿ ಪ್ಲಾನ್

|

ಸದ್ಯ ಬಿಎಸ್ಎನ್ಎಲ್ ತನ್ನ ಟೆಲಿಕಾಂ ಮತ್ತು ಬ್ರಾಡ್ ಬ್ಯಾಂಡ್ ಸೇವೆಗಳ ಪ್ಲಾನ್ ಗಳ ವಿಚಾರದಲ್ಲಿ ಭಾರೀ ಆಕ್ಟೀವ್ ಆಗುತ್ತಿದೆ. ಇತ್ತೀಚೆಗಷ್ಟೇ ಕಂಪೆನಿಯು ಹೊಸ ಹೊಸ ಮೊಬೈಲ್ ರೀಚಾರ್ಜ್ ಪ್ಲಾನ್ ಮತ್ತು ಬ್ರಾಡ್ ಬ್ಯಾಂಡ್ ಪ್ಲಾನ್ ಗಳು ಪರಿಚಯಿಸಿ ಇತರೆ ಟೆಲಿಕಾಂ ಆಪರೇಟರ್ ಗಳ ಜೊತೆಗೆ ನೇರ ಸ್ಪರ್ಧೆಗೆ ನಿಂತಿತ್ತು.

ಜಿಯೋಗೆ ಸ್ಪರ್ಧೆಯೊಡ್ಡಲು ಬಿಎಸ್ಎನ್ಎಲ್ ನ 899 ರುಪಾಯಿ ಪ್ಲಾನ್

ಕಂಪೆನಿಯು ಜಿಯೋ ಪ್ಲಾನ್ ಗೆ ಸ್ಪರ್ಧೆಯೊಡ್ಡುವ ನಿಟ್ಟಿನಲ್ಲಿ ವಾರ್ಷಿಕ ಪ್ಲಾನ್ ನ್ನು ಪರಿಚಯಿಸಿದ್ದ ಬಿಎಸ್ಎನ್ಎಲ್ ಇದೀಗ ಅರ್ಧ ವಾರ್ಷಿಕ ಪ್ಲಾನ್ ನ್ನು ಬಿಡುಗಡೆಗೊಳಿಸಿದೆ. ಅದಕ್ಕಾಗಿ ನೀವು 899 ರುಪಾಯಿಯ ರೀಚಾರ್ಜ್ ಮಾಡಬೇಕಾಗುತ್ತದೆ.

ಹೊಸ ಪ್ಲಾನ್:

ಹೊಸ ಪ್ಲಾನ್:

ಬಿಎಸ್ಎನ್ಎಲ್ ನ ಈ ಹೊಸ 899 ರೀಚಾರ್ಜ್ ಪ್ಲಾನ್ ನಲ್ಲಿ 180 ದಿನಗಳ ಅವಧಿಯನ್ನು ನೀವು ಪಡೆಯಲಿದ್ದು ಇದರ ಲಾಭವನ್ನು ಕೇವಲ ಪ್ರಿಪೇಯ್ಡ್ ಬಳಕೆದಾರರು ದಕ್ಕಿಸಿಕೊಳ್ಳಬಹುದು. ಆದರೆ ಹೆಚ್ಚಿನ ಬಿಎಸ್ಎನ್ಎಲ್ ಪ್ಲಾನ್ ಗಳು ತೆರದ ಮಾರುಕಟ್ಟೆಯ ಪ್ಲಾನ್ ಗಳಾಗಿರುವುದಿಲ್ಲ. ಸದ್ಯ ಈ ಪ್ಲಾನ್ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಸರ್ಕಲ್ ನಲ್ಲಿ ಮಾತ್ರವೇ ಲಭ್ಯವಿರುತ್ತದೆ.

ಪ್ಲಾನ್ ಬೆನಿಫಿಟ್:

ಪ್ಲಾನ್ ಬೆನಿಫಿಟ್:

ಈ ಹೊಸ ರೀಚಾರ್ಜ್ ಪ್ಲಾನ್ ನಲ್ಲಿ 1.5ಜಿಬಿ ಡಾಟಾ ಪ್ರತಿದಿನ ಉಚಿತವಾಗಿ ಲಭ್ಯವಾಗುತ್ತದೆ ಜೊತೆಗೆ ಅನಿಯಮಿತ ವಾಯ್ಸ್ ಕರೆಗಳ ಲಾಭವಿದೆ ಮತ್ತು 50ಎಸ್ಎಂಎಸ್ ಪ್ರತಿದಿನ 180 ದಿನಗಳ ವರೆಗೆ ಉಚಿತವಾಗಿ ಕಳುಹಿಸಬಹುದು. ಅಂದರೆ ಈ ಪ್ಲಾನ್ ನ ಅಡಿಯಲ್ಲಿ ನೀವು 270ಜಿಬಿ ಡಾಟಾವನ್ನು ಉಚಿತವಾಗಿ ಬಳಸುವ ಅವಕಾಶವಿರುತ್ತದೆ.

ಹಳೆ ಪ್ಲಾನ್:

ಹಳೆ ಪ್ಲಾನ್:

ಇದು ಬಿಎಸ್ಎನ್ಎಲ್ ಬಿಡುಗಡೆಗೊಳಿಸುತ್ತಿರುವ ಎರಡನೇ ಮಹತ್ವಾಕಾಂಕ್ಷಿ ಪ್ಲಾನ್ ಆಗಿದೆ.ಕಳೆದ ವರ್ಷ ಕಂಪೆನಿಯು 999 ರುಪಾಯಿ ರೀಚಾರ್ಜ್ ಪ್ಲಾನ್ ನ್ನು ಬಿಡುಗಡೆಗೊಳಿಸಿತ್ತು ಮತ್ತು ಅದರಲ್ಲಿ ಅನಿಯಮಿತ ಡಾಟಾ ಬೆನಿಫಿಟ್ 365 ದಿನಗಳ ಅವಧಿಗೆ ಲಭ್ಯವಾಗುತ್ತದೆ ಮತ್ತು ಅನಿಯಮಿತ ಸ್ಥಳೀಯ ವಾಯ್ಸ್ ಕರೆಗಳು ಮತ್ತು ಎಸ್ ಟಿಡಿ ಕರೆಗಳು 181 ದಿನಗಳ ಅವಧಿಗೆ ಸಿಗುತ್ತದೆ. ಪ್ರತಿದಿನ ಒಂದು ಜಿಬಿ ಡಾಟಾವನ್ನು ಬಳಸಲು ಬಳಕೆದಾರರಿಗೆ ಅವಕಾಶವಿರುತ್ತದೆ. ಸ್ಥಳೀಯ, ಎಸ್ ಟಿಡಿ ಮತ್ತು ರೋಮಿಂಗ್ ಕರೆಗಳು ಅದರಲ್ಲಿ ದೆಹಲಿ ಮತ್ತು ಮುಂಬೈ ಸರ್ಕಲ್ ಹೊರತುಪಡಿಸಿ ಉಳಿದೆಲ್ಲ ಕಡೆಗಳಿಗೆ ಉಚಿತವಾಗಿ ಮಾತನಾಡಬಹುದು ಮತ್ತು ಈ ಮೇಲಿನ ಸರ್ಕಲ್ ನಲ್ಲಿ ಮಾತನಾಡುವುದಾದರೆ 60 ಪೈಸೆ ಪ್ರತಿ ನಿಮಿಷಕ್ಕೆ ಪಾವತಿಸಬೇಕಾಗುತ್ತದೆ.

ಬಿಎಸ್ಎನ್ಎಲ್ ನ 1,312 ವಾರ್ಷಿಕ ಪ್ರಿಪೇಯ್ಡ್ ಪ್ಲಾನ್

ಬಿಎಸ್ಎನ್ಎಲ್ ನ 1,312 ವಾರ್ಷಿಕ ಪ್ರಿಪೇಯ್ಡ್ ಪ್ಲಾನ್

ಬಿಎಸ್ಎನ್ಎಲ್ ಇತ್ತೀಚೆಗೆ ಹೊಸದಾಗಿ ರುಪಾಯಿ 1,312 ವಾರ್ಷಿಕ ಪ್ಲಾನ್ ನ್ನು ಬಿಡುಗಡೆಗೊಳಿಸಿದ್ದು 5ಜಿಬಿ ಡಾಟಾ ಬಳಕೆ ಮತ್ತು ಅನಿಯಮಿತ ವಾಯ್ಸ್ ಕರೆಗಳ ಬೆನಿಫಿಟ್ ನ್ನು ಇದು ನೀಡುತ್ತದೆ. ಚಂದಾದಾರರಿಗೆ ಅನಿಯಮಿತ STD,ಸ್ಥಳೀಯ ಮತ್ತು ರೋಮಿಂಗ್ ವಾಯ್ಸ್ ಕರೆಗಳನ್ನು ಇದು ನೀಡುತ್ತದೆ ಆದರೆ ದೆಹಲಿ ಮತ್ತು ಮುಂಬೈ ಸರ್ಕಲ್ ಗೆ ಈ ಆಯ್ಕೆ ಇರುವುದಿಲ್ಲ. 1000 ಉಚಿತ ಎಸ್ಎಂಎಸ್ ಗಳು ಇದರಲ್ಲಿ ಸಿಗುತ್ತದೆ ಮತ್ತು ಇದರ ಅವಧಿ ಈಗಾಗಲೇ ತಿಳಿಸಿರುವಂತೆ 365 ದಿನಗಳಾಗಿರುತ್ತದೆ.

ಹೊಸ ಸೇರ್ಪಡೆ:

ಹೊಸ ಸೇರ್ಪಡೆ:

ರುಪಾಯಿ 1,699 ಮತ್ತು ರುಪಾಯಿ2,099 ರ ಪ್ಲಾನಿನ ಲಿಸ್ಟ್ ಗೆ ಈ ಹೊಸ ಪ್ಲಾನ್ ಕೂಡ ಸೇರ್ಪಡೆಯಾಗುತ್ತಿದೆ.ರುಪಾಯಿ 1,699 ಪ್ಲಾನ್ ನಲ್ಲಿ 1,536ಜಿಬಿವರೆಗಿನ ಡಾಟಾ ಉಚಿತವಾಗಿರುತ್ತದೆ ಮತ್ತು ರುಪಾಯಿ 2,099 ಪ್ಯಾಕ್ ನ ಪ್ಲಾನ್ ನಲ್ಲಿ 2,266ಜಿಬಿ ಡಾಟಾ ಸಿಗುತ್ತದೆ. ಎರಡೂ ಪ್ಲಾನ್ ಗಳೂ ಕೂಡ 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ.

ಜಿಯೋ ರುಪಾಯಿ 1699 ವಾರ್ಷಿಕ ಪ್ಲಾನ್

ಜಿಯೋ ರುಪಾಯಿ 1699 ವಾರ್ಷಿಕ ಪ್ಲಾನ್

ಜಿಯೋ ಕೂಡ ವಾರ್ಷಿಕ ಪ್ಲಾನ್ ರುಪಾಯಿ1699 ನ್ನು ಆಫರ್ ಮಾಡುತ್ತಿದ್ದು ಅದರಲ್ಲಿ 1.5ಜಿಬಿ ಡಾಟಾ ಪ್ರತಿದಿನ,ಅನಿಯಮಿತ ವಾಯ್ಸ್ ಕರೆಗಳು, 100ಎಸ್ಎಂಎಸ್ ಪ್ರತಿದಿನ ಮತ್ತು ಜಿಯೋ ಆಪ್ ಗಳಿಗೆ ಕಾಂಪ್ಲಿಮೆಂಟರಿ ಚಂದಾದಾರಿಕೆ 365 ದಿನಗಳ ಅವಧಿಗೆ ಲಭ್ಯವಾಗುತ್ತದೆ ಅಂದರೆ ಒಟ್ಟು 547.5ಜಿಬಿ ಡಾಟಾ ಈ ಪ್ಲಾನ್ ನ ಅಡಿಯಲ್ಲಿ ಲಭ್ಯವಾಗುತ್ತದೆ.

Best Mobiles in India

Read more about:
English summary
BSNL launches new prepaid plan at Rs 899: Data, calling and other benefits explained

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X