ಬಿಎಸ್ಎನ್ಎಲ್ ಪ್ಲಾನ್ ಗಳಿಗೆ ಮೇಜರ್ ಸರ್ಜರಿ – 666 ರುಪಾಯಿ ಪ್ಲಾನ್ ಬದಲಾವಣೆ, ಎರಡು ಪ್ಲಾನ್ ಗಳು ಸ್ಥಗಿತ

By Gizbot Bureau
|

ಬಿಎಸ್ಎನ್ಎಲ್ ಪುನಃ ತನ್ನ ಪ್ರಿಪೇಯ್ಡ್ ಪ್ಲಾನ್ ನಲ್ಲಿ ಬದಲಾವಣೆ ಮಾಡಿದೆ.ಇದರ ಜೊತೆಗೆ ತನ್ನ ಎರಡು ಪ್ಲಾನ್ ಗಳನ್ನು ಸ್ಥಗಿತಗೊಳಿಸಿದೆ. ಟೆಲಿಕಾಂ ಸಂಸ್ಥೆ ತನ್ನ ಸಿಕ್ಸರ್ ಪ್ಲಾನ್ 666 ರುಪಾಯಿ ಪ್ಲಾನ್ ನಲ್ಲಿ ಬದಲಾವಣೆಯನ್ನು ಮಾಡಿದೆ ಮತ್ತು 999 ರುಪಾಯಿ ಮತ್ತು 2,099 ರುಪಾಯಿಯ ಎರಡು ಪ್ಲಾನ್ ಗಳನ್ನು ಸ್ಥಗಿತಗೊಳಿಸುವ ತೀರ್ಮಾನ ಮಾಡಿದೆ.

ಅವಧಿ ವಿಸ್ತರಣೆ:

ಅವಧಿ ವಿಸ್ತರಣೆ:

666 ರುಪಾಯಿಯ ಪ್ಲಾನಿನ ಬದಲಾವಣೆಯ ನಂತರ ಟೆಲಿಕಾಂ ಆಪರೇಟರ್ ಇದರ ವ್ಯಾಲಿಡಿಟಿಯನ್ನು ಅಧಿಕಗೊಳಿಸಿದ್ದಾರೆ. ಈ ಪ್ಲಾನ್ ನ್ನು 129 ದಿನಗಳ ಅವಧಿ ನೀಡಿ ಪರಿಚಯಿಸಲಾಗಿತ್ತು. ನಂತರ ಈ ವರ್ಷದ ಫೆಬ್ರವರಿಯಲ್ಲಿ 122 ದಿನಗಳಿಗೆ ಇಳಿಕೆ ಮಾಡಲಾಗಿತ್ತು. ಇದೀಗ ಪುನಃ 666 ರುಪಾಯಿ ಪ್ಲಾನಿನ ವ್ಯಾಲಿಡಿಟಿಯ ಅವಧಿಯನ್ನು ವಿಸ್ತರಿಸಲಾಗಿದ್ದು 134 ದಿನಗಳ ವ್ಯಾಲಿಡಿಟಿಯನ್ನು ಇದು ಹೊಂದಿರುತ್ತದೆ.

ಇತರೆ ಬೆನಿಫಿಟ್ ಗಳು:

ಇತರೆ ಬೆನಿಫಿಟ್ ಗಳು:

ಇದರ ಜೊತೆಗೆ ಅನಿಯಮಿತ ರಾಷ್ಟ್ರೀಯ ಮತ್ತು ಸ್ಥಳೀಯ ಕರೆಗಳ ಬೆನಿಫಿಟ್ ನ್ನು ಹೊಂದಿದ್ದು ಇದರಲ್ಲಿ ಮುಂಬೈ ಮತ್ತು ದೆಹಲಿ ಸರ್ಕಲ್ ನ್ನು ಹೊರಗಿಡಲಾಗಿರುತ್ತದೆ. ಈ ಪ್ಲಾನ್ ನಲ್ಲಿ ಡಾಟಾ ಬೆನಿಫಿಟ್ ಕೂಡ ಲಭ್ಯವಿದ್ದು 3.5ಜಿಬಿ ಡಾಟಾ ಪ್ರತಿ ದಿನ ಲಭ್ಯವಿರುತ್ತದೆ ಜೊತೆಗೆ 100ಎಸ್ಎಂಎಸ್ ಲಾಭವೂ ಇರುತ್ತದೆ. ಒಂದು ವೇಳೆ ಪ್ರತಿದಿನ ಲಿಮಿಟ್ ನ್ನು ಬಳಕೆದಾರ ಪೂರ್ಣಗೊಳಿಸಿದರೆ ಇಂಟರ್ನೆಟ್ ಸ್ಪೀಡ್ 40Kbps ಗೆ ಇಳಿಮುಖವಾಗುತ್ತದೆ.

ಜಿಯೋ 799 ರುಪಾಯಿ ಪ್ಲಾನ್ ನೊಂದಿಗೆ ಸ್ಪರ್ಧೆ:

ಜಿಯೋ 799 ರುಪಾಯಿ ಪ್ಲಾನ್ ನೊಂದಿಗೆ ಸ್ಪರ್ಧೆ:

ರುಪಾಯಿ 666 ಪ್ಲಾನ್ ರಿಲಯನ್ಸ್ ಜಿಯೋ ಸಂಸ್ಥೆಯ 799 ರುಪಾಯಿ ಪ್ಲಾನ್ ನೊಂದಿಗೆ ಸ್ಪರ್ಧಿಸುತ್ತದೆ. ಮುಖೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೋ ಸಂಸ್ಥೆ 5ಜಿಬಿ ಡಾಟಾವನ್ನು ಪ್ರತಿದಿನ, ಅನಿಯಮಿತ ರಾಷ್ಟ್ರೀಯ ಮತ್ತು ಸ್ಥಳೀಯ ಕರೆಗಳ ಬೆನಿಫಿಟ್ ನ್ನು 799 ರುಪಾಯಿ ಪ್ಲಾನಿನ ಅಡಿಯಲ್ಲಿ ನೀಡುತ್ತದೆ. ಆದರೆ ಈ ಪ್ಲಾನ್ ಕೇವಲ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ ಮತ್ತು 100ಎಸ್ಎಂಎಸ್ ನ್ನು ಪ್ರತಿದಿನ ಉಚಿತವಾಗಿ ಕಳುಹಿಸುವುದಕ್ಕೆ ಅವಕಾಶವಿರುತ್ತದೆ. ಜೊತೆಗೆ ಮೈ ಜಿಯೋ ಆಪ್ ಗೆ ಉಚಿತ ಆಕ್ಸಿಸ್ ಇದ್ದು ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಇತ್ಯಾದಿಗಳನ್ನು ವೀಕ್ಷಿಸುವ ಅವಕಾಶವಿರುತ್ತದೆ.

999 ರುಪಾಯಿ ಪ್ಲಾನ್ ಸ್ಥಗಿತ:

999 ರುಪಾಯಿ ಪ್ಲಾನ್ ಸ್ಥಗಿತ:

ಈಗಾಗಲೇ ಮೇಲೆ ತಿಳಿಸಿರುವಂತೆ 666 ರುಪಾಯಿಯ ಪ್ಲಾನ್ ನ್ನು ಹೊರತುಪಡಿಸಿ ಎರಡು ಪ್ರಮುಖ ಪ್ಲಾನ್ ಗಳನ್ನು ಬಿಎಸ್ಎನ್ಎಲ್ ಸ್ಥಗಿತಗೊಳಿಸುತ್ತಿದೆ. ರುಪಾಯಿ 999 ಮತ್ತು ರುಪಾಯಿ 2099 ಪ್ಲಾನ್ ನ್ನು ನಿಲ್ಲಿಸುತ್ತಿದೆ. 999 ರುಪಾಯಿಯ ಪ್ಲಾನ್ 365ದಿನಗಳ ವ್ಯಾಲಿಡಿಟಿಯನ್ನು ಹೊಂದಿತ್ತು ಮತ್ತು 3.2ಜಿಬಿ ಡಾಟಾವನ್ನು ಪ್ರತಿದಿನ ಉಚಿತವಾಗಿ ಉಪಯೋಗಿಸುವುದಕ್ಕೆ ಅವಕಾಶ ನೀಡುತ್ತಿತ್ತು.ಈ ಪ್ಲಾನ್ ಅನಿಯಮಿತ ಕರೆಗಳ ಬೆನಿಫಿಟ್ ಮತ್ತು 10 ಉಚಿತ ಎಸ್ಎಂಎಸ್ ನ್ನು ಪ್ರತಿದಿನ ಕಳುಹಿಸುವುದಕ್ಕೆ ಅವಕಾಶ ಕೊಡುತ್ತಿತ್ತು.

2,099 ರುಪಾಯಿ ಪ್ಲಾನ್ ಸ್ಥಗಿತ:

2,099 ರುಪಾಯಿ ಪ್ಲಾನ್ ಸ್ಥಗಿತ:

ಇನ್ನೊಂದೆಡೆ 2,099 ರುಪಾಯಿ ಪ್ಲಾನ್ ಕೂಡ ಇನ್ನು ಮುಂದೆ ಲಭ್ಯವಿರುವುದಿಲ್ಲ.ಈ ಪ್ಲಾನ್ ಕೂಡ 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿತ್ತು ಮತ್ತು ಒಟ್ಟು 6.2ಜಿಬಿ ಡಾಟಾವನ್ನು ಒದಗಿಸುತ್ತಿತ್ತು. ಅನಿಯಮಿತ ಕರೆಗಳು ಮತ್ತು ಪ್ರತಿದಿನ 100ಎಸ್ಎಂಎಸ್ ಕಳುಹಿಸುವುದಕ್ಕೆ ಈ ಪ್ಲಾನಿನ ಅಡಿಯಲ್ಲಿ ಅವಕಾಶವಿತ್ತು. ಇನ್ನು ಮುಂದೆ ಈ ದೀರ್ಘಾವಧಿ ಪ್ಲಾನ್ ಕೂಡ ಗ್ರಾಹಕರಿಗೆ ಲಭ್ಯವಿರುವುದಿಲ್ಲ.

Best Mobiles in India

English summary
BSNL revamps Rs 666 plan, discontinues these two long-term plans

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X