ಜಿಯೋ ಎಫೆಕ್ಟ್ ನಿಂದ ಬಿಎಸ್ಎನ್ಎಲ್ ರೀಚಾರ್ಜ್ ಪ್ಲಾನ್ ನಲ್ಲಿ ಬದಲಾವಣೆ

|

ಖಾಸಗಿ ಟೆಲಿಕಾಂ ಸಂಸ್ಥೆಗಳಾದ ರಿಲಯನ್ಸ್ ಜಿಯೋ ಮತ್ತು ಭಾರತೀ ಏರ್ ಟೆಲ್ ಗಳ ಜೊತೆಗೆ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಹೆಚ್ಚು ಡಾಟಾ ಮತ್ತು ಹಲವು ಬೆನಿಫಿಟ್ ಗಳನ್ನು ಪ್ರಿಪೇಯ್ಡ್ ಬಳಕೆದಾರರಿಗೆ ನೀಡುವ ಮೂಲಕ ನೇರವಾಗಿ ಸ್ಪರ್ಧಿಸುತ್ತದೆ.ಇದೀಗ ರಿಲಯನ್ಸ್ ಜಿಯೋ ಹೊಸ ವರ್ಷದ ಆಫರ್ ನ್ನು ಪ್ರಕಟಿಸಿದ ನಂತರ ಬಿಎಸ್ಎನ್ಎಲ್ ಕೂಡ ತನ್ನ ಪ್ರಿಪೇಯ್ಡ್ STV ನ್ನು ಮರುಪರಿಶೀಲನೆ ಮಾಡಿ ಬಿಡುಗಡೆಗೊಳಿಸಿದ್ದು ಇದರ ಅನ್ವಯ ಚಂದಾದಾರರಿಗೆ ಹೆಚ್ಚುವರಿ ಟಾಕ್ ಟೈಮ್ ಮತ್ತು ಡಾಟಾಗಳು ಲಭ್ಯವಾಗುತ್ತದೆ.

ಹೊಸ ಆಫರ್ ನ ಬೆಲೆ:

ಹೊಸ ಆಫರ್ ನ ಬೆಲೆ:

ಟೆಲ್ಕೋ ಟಾಕ್ ನ ವರದಿಯ ಪ್ರಕಾರ ಬಿಎಸ್ಎನ್ಎಲ್ ಪ್ರಮೋಷನಲ್ ಆಫರ್ ನ್ನು ಪ್ರಕಟಿಸಿದ್ದು 4ಜಿಬಿಯಷ್ಟು ಹೆಚ್ಚುವರಿ ಡಾಟಾ ಮತ್ತು ಹೆಚ್ಚುವರಿ ಟಾಕ್ ಟೈಮ್ ನ್ನು ತನ್ನ ಪ್ರಿಪೇಯ್ಡ್ ಕೋಂಬೊ STV ರೀಚಾರ್ಜ್ ಪ್ಯಾಕ್ ನ ಅಡಿಯಲ್ಲಿ ನೀಡುತ್ತಿದೆ. ಈ ಆಫರ್ ಬಿಎಸ್ಎನ್ಎಲ್ ನ Rs. 252, Rs. 402, Rs. 175, ಮತ್ತು Rs. 219 STV ಗಳಲ್ಲಿ ಲಭ್ಯವಿರುತ್ತದೆ.

30 ದಿನಗಳ ಅವಧಿಯ ಆಫರ್:

30 ದಿನಗಳ ಅವಧಿಯ ಆಫರ್:

ಬಿಎಸ್ಎನ್ಎಲ್ ನ Rs. 252 STV ರೀಚಾರ್ಜ್ ಪ್ಯಾಕ್ ಸಾಮಾನ್ಯವಾಗಿ 200 ರುಪಾಯಿಯ ಟಾಕ್ ಟೈಮ್ ಮತ್ತು 1ಜಿಬಿ ಹೈ-ಸ್ಪೀಡ್ ಡಾಟಾವನ್ನು 30 ದಿನಗಳ ಅವಧಿಗೆ ನೀಡುತ್ತದೆ. ಆದರೆ ಬಿಎಸ್ಎನ್ಎನ್ ನ ಪ್ರಮೋಷನಲ್ ಆಫರ್ ನ ಅನ್ವಯ ಇದೀಗ Rs. 350 ಬೆಲೆಬಾಳುವ ಟಾಕ್ ಟೈಮ್ ಮತ್ತು 2ಜಿಬಿ ಹೈ ಸ್ಪೀಡ್ ಡಾಟಾ 30 ದಿನಗಳ ಅವಧಿಗೆ ಲಭ್ಯವಾಗುತ್ತದೆ. Rs. 402 STV ರೀಚಾರ್ಜ್ ಪ್ಯಾಕ್ ನಲ್ಲಿ ಇದೀಗ Rs. 600 ಬೆಲೆಬಾಳುವ ಟಾಕ್ ಟೈಮ್ ಮತ್ತು 4GBಡಾಟಾ 30 ದಿನಗಳ ಅವಧಿಗೆ ಲಭ್ಯವಾಗುತ್ತದೆ.

 60 ದಿನಗಳ ಅವಧಿಯ ಆಫರ್:

60 ದಿನಗಳ ಅವಧಿಯ ಆಫರ್:

ಬಿಎಸ್ಎನ್ಎಲ್ ನ Rs. 175 ರೀಚಾರ್ಜ್ ಪ್ಯಾಕ್ ನ ಪ್ರಕಾರ ಇದೀಗ Rs. 200 ಬೆಲೆಬಾಳುವ ಟಾಕ್ ಟೈಮ್ ಜೊತೆಗೆ 0.5GB ಡಾಟಾ ಸಿಗುತ್ತದೆ. ಇನ್ನೊಂದೆಡೆ Rs. 219 ಬಿಎಸ್ಎನ್ಎಲ್ ನ ರೀಚಾರ್ಜ್ ಪ್ಯಾಕ್ ಪ್ರಕಾರ Rs. 250 ಬೆಲೆಬಾಳುವ ಟಾಕ್ ಟೈಮ್ ಜೊತೆಗೆ 0.5GB ಡಾಟಾ ಸಿಗುತ್ತದೆ. ಈ ಎರಡೂ STV ಪ್ಲಾನ್ ಗಳು 60 ದಿನಗಳ ಅವಧಿಯನ್ನು ಹೊಂದಿರುತ್ತದೆ.

ಆಂಧ್ರ ಮತ್ತು ತೆಲಂಗಾಣದವರಿಗೆ ಮಾತ್ರ:

ಆಂಧ್ರ ಮತ್ತು ತೆಲಂಗಾಣದವರಿಗೆ ಮಾತ್ರ:

ಆದರೆ ಎಲ್ಲರೂ ತಿಳಿದಿರಬೇಕಾಗಿರುವ ಪ್ರಮುಖ ಅಂಶವೇನೆಂದರೆ ಬಿಎಸ್ಎನ್ಎಲ್ ನ ಈ ಎಲ್ಲಾ ಪ್ರಮೋಷನಲ್ ಆಫರ್ ಗಳು ಆಂಧ್ರಪ್ರದೇಶ ಮತ್ತು ತೆಲಂಗಾಣದ ಚಂದಾದಾರರಿಗೆ ಮಾತ್ರವೇ ಸಿಗುತ್ತದೆ.

Most Read Articles
Best Mobiles in India

Read more about:
English summary
BSNL revises prepaid STV recharges to offer additional talk time and data

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X