ಬಿಎಸ್ಎನ್ಎಲ್ ರೂ.666ರ ಪ್ರಿಪೇಯ್ಡ್ ಪ್ಲಾನ್ ನಲ್ಲಿ ಬದಲಾವಣೆ

By Gizbot Bureau
|

ಪ್ರಮುಖ ಟೆಲಿಕಾಂ ಆಪರೇಟರ್ ಬಿಎಸ್ಎನ್ಎಲ್ ತನ್ನ 666 ರುಪಾಯಿಯ ಪ್ರಿಪೇಯ್ಡ್ ಪ್ಲಾನ್ ನಲ್ಲಿ ಬದಲಾವಣೆ ಮಾಡಿದೆ. ಇದನ್ನು ಬಿಎಸ್ಎನ್ಎಲ್ ಸಿಕ್ಸರ್ 666 ಪ್ಲಾನ್ ಎಂದು ಕರೆಯಲಾಗುತ್ತಿತ್ತು. ಬದಲಾವಣೆಯಲ್ಲಿ ಪ್ರಮುಖವಾಗಿ ಪ್ಲಾನ್ ನಲ್ಲಿ ಒಟ್ಟು ಸಿಗುವ ಅವಧಿಯಲ್ಲಿ ವ್ಯತ್ಯಾಸ ಮಾಡಲಾಗಿದೆ. ಬದಲಾಗಿರುವ ಅವಧಿಯು ಬಿಎಸ್ಎನ್ಎಲ್ ಆಂಧ್ರಪ್ರದೇಶ ಮತ್ತು ಕಲ್ಕತ್ತಾ ವೆಬ್ ಸೈಟ್ ಗಳಲ್ಲಿ ಈಗಾಗಲೇ ಕಾಣಿಸುತ್ತಿದೆ.

ಬಿಎಸ್ಎನ್ಎಲ್ ಸಿಕ್ಸರ್ 666: ಬದಲಾಗಿದ್ದು ಏನು?

ಬಿಎಸ್ಎನ್ಎಲ್ ಸಿಕ್ಸರ್ 666: ಬದಲಾಗಿದ್ದು ಏನು?

ಜೂನ್ 2017 ರಲ್ಲಿ ಬಿಡುಗಡೆಗೊಂಡಿದ್ದ ಪ್ರಿಪೇಯ್ಡ್ ಪ್ಲಾನ್ ಜೂನ್ 2018 ರಲ್ಲಿ ಒಮ್ಮೆ ಬದಲಾವಣೆ ಕಂಡಿತ್ತು. 129 ದಿನಗಳ ಅವಧಿಯ ಬದಲಾಗಿ ಈ ಪ್ಲಾನ್ ಇನ್ನು ಮುಂದೆ ನಿಮಗೆ 122 ದಿನಗಳ ಅವಧಿಯನ್ನು ಹೊಂದಿರುತ್ತದೆ. ಉಳಿದ ಬೆನಿಫಿಟ್ ಗಳು ಉದಾಹರಣೆಗೆ ಅನಿಯಮಿತ ಸ್ಥಳೀಯ, ರಾಷ್ಟ್ರೀಯ ಮತ್ತು ರೋಮಿಂಗ್ ಸರ್ಕರ್ (ದೆಹಲಿ ಮತ್ತು ಮುಂಬೈ ಹೊರತುಪಡಿಸಿ), 100 ಎಸ್ಎಂಎಸ್ ಪ್ರತಿ ದಿನ ಮತ್ತು 1.5ಜಿಬಿ ಡಾಟಾ 3ಜಿ/2ಜಿ ಇವುಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

666 ರುಪಾಯಿ ಪ್ರಿಪೇಯ್ಡ್ ಪ್ಲಾನ್ ನ ಬದಲಾವಣೆಯು ಹೆಚ್ಚುವರಿ ಡಾಟಾ ಆಫರ್ ನೀಡುವ ಉದ್ದೇಶದಿಂದ ಮಾಡಲಾಗುತ್ತಿರುವ ಬದಲಾವಣೆಯ ಒಂದು ಭಾಗವಾಗಿರುತ್ತದೆ. .5ಜಿಬಿ ಡಾಟಾ ಬದಲಾಗಿ 3.7ಜಿಬಿ ಡಾಟಾ ಪ್ರತಿ ದಿನ ಅಂದರೆ ಎಪ್ರಿಲ್ 30 ರ ವರೆಗೆ ನೀಡುವ ಪ್ಲಾನಿನ ಒಂದು ಬದಲಾವಣೆ ಇದಾಗಿರುತ್ತದೆ.ಒಮ್ಮೆ ಬಳಕೆದಾರರು ತಮ್ಮ ದಿನನಿತ್ಯದ FUP ಲಿಮಿಟ್ ನ್ನು ತಲುಪಿದರೆ ಡಾಟಾ ಸ್ಪೀಡ್ 40Kbps ಆಗುತ್ತದೆ.

ಜಿಯೋ 498 ರುಪಾಯಿ ಪ್ರಿಪೇಯ್ಡ್ ಪ್ಲಾನ್

ಜಿಯೋ 498 ರುಪಾಯಿ ಪ್ರಿಪೇಯ್ಡ್ ಪ್ಲಾನ್

ಭಾರತೀಯ ಟೆಲಿಕಾಂ ಇಂಡಸ್ಟ್ರಿಯಲ್ಲಿ ರಿಲಯನ್ಸ್ ಜಿಯೋ ರೂಪಾಯಿ 498 ರ ಪ್ಲಾನ್ ಇತ್ತೀಚಿನ ಬಹುದೊಡ್ಡ ಚರ್ಚಿತ ಪ್ಲಾನ್ ಆಗಿದೆ. ಈ ಪ್ಲಾನಿನ ಅಡಿಯಲ್ಲಿ ಅನಿಯಮಿತ ಸ್ಥಳೀಯ ಮತ್ತು ರಾಷ್ಟ್ರೀಯ ಕರೆಗಳು ಮತ್ತು 100 ಎಸ್ಎಂಎಸ್ ಗಳನ್ನು ಗ್ರಾಹಕರು ಪಡೆಯಲಿದ್ದಾರೆ. ಅವರಿಗೆ ಪ್ರತಿದಿನ 2ಜಿಬಿ ಡಾಟಾ 91 ದಿನಗಳ ಅವಧಿಗೆ ಲಭ್ಯವಾಗುತ್ತದೆ.ಆದಾದ ನಂತರ ರಿಲಯನ್ಸ್ ಜಿಯೋ ಕಾಂಪ್ಲಿಮೆಂಟರಿ ಚಂದಾದಾರಿಕೆಯು ಜಿಯೋ ಆಪ್ ಗಳಿಗೆ ಲಭ್ಯವಾಗುತ್ತದೆ.

ಏರ್ ಟೆಲ್ 499 ರುಪಾಯಿ ಪ್ರಿಪೇಯ್ಡ್ ಪ್ಲಾನ್

ಏರ್ ಟೆಲ್ 499 ರುಪಾಯಿ ಪ್ರಿಪೇಯ್ಡ್ ಪ್ಲಾನ್

ಭಾರತದ ಪ್ರಮುಖ ಟೆಲಿಕಾಂ ಆಪರೇಟರ್ ಎನ್ನಿಸಿಕೊಂಡಿರುವ ಏರ್ ಟೆಲ್ ನಲ್ಲೂ ಕೂಡ ಇದೇ ರೀತಿಯ ಪ್ಲಾನ್ ಇದ್ದು ಅದರ ಬೆಲೆ 499 ರುಪಾಯಿಗಳು. ಈ ಪ್ಲಾನಿನ ಅಡಿಯಲ್ಲಿ 2ಜಿಬಿ ಡಾಟಾ ಪ್ರತಿದಿನ 82 ದಿನಗಳ ಅವಧಿಗೆ ಲಭ್ಯವಾಗುತ್ತದೆ. ಇದರ ಜೊತೆಗೆ ಅನಿಯಮಿತ ಸ್ಥಳೀಯ, ಎಸ್ ಟಿಡಿ ಮತ್ತು ರೋಮಿಂಗ್ ವಾಯ್ಸ್ ಕರೆಗಳ ಲಾಭವೂ ಇರುತ್ತದೆ. ಇದರಲ್ಲಿ 300 ನಿಮಿಷ ಪ್ರತಿದಿನ ಮತ್ತು 1000 ನಿಮಿಷ ವಾರಕ್ಕೆ ಎಂಬ ನಿಯಮವಿದ್ದು ಲಿಮಿಟ್ ಮುಗಿದ ನಂತರದ ಕರೆಗಳಿಗೆ 30 ಪೈಸ ಪ್ರತಿ ನಿಮಿಷಕ್ಕೆ ಚಾರ್ಜ್ ಮಾಡಲಾಗುತ್ತದೆ. ಪ್ರತಿದಿನ 100ಎಸ್ಎಂಎಸ್ ಉಚಿತವಾಗಿರಲಿದ್ದು ಇದರ ಲಾಭವನ್ನು ಬಳಕೆದಾರರು 82 ದಿನಗಳ ಅವಧಿಗೆ ಪಡೆದುಕೊಳ್ಳಬಹುದು.

Most Read Articles
Best Mobiles in India

Read more about:
English summary
BSNL revises Rs 666 prepaid plan, here's how it compares to Reliance Jio's Rs 498 plan

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X