ಬಿಎಸ್ಎನ್ಎಲ್ 98 ರೂಪಾಯಿ ಪ್ಲಾನ್ ನಲ್ಲಿ ಬದಲಾವಣೆ

By Gizbot Bureau
|

ಬಿಎಸ್ಎನ್ಎಲ್ ತನ್ನ ರುಪಾಯಿ 98ರ ಡಾಟಾ ಮಾತ್ರ ಪ್ಲಾನಿನಲ್ಲಿ ಬದಲಾವಣೆ ಮಾಡಿದೆ. ಈ ಪ್ಲಾನ್ ದೇಶದಾದ್ಯಂತ ಎಲ್ಲಾ ಕಡೆಗಳಲ್ಲೂ ಲಭ್ಯವಿತ್ತು. ಬಿಎಸ್ಎನ್ಎಲ್ ಈ ಪ್ಲಾನಿನ ಡಾಟಾ ಮತ್ತು ವ್ಯಾಲಿಡಿಟಿ ಎರಡರಲ್ಲೂ ಬದಲಾವಣೆ ಮಾಡಿದೆ.

ಬಿಎಸ್ಎನ್ಎಲ್ 98 ರೂಪಾಯಿ ಪ್ಲಾನ್ ನಲ್ಲಿ ಬದಲಾವಣೆ

ಟೆಲಿಕಾಂ ಟಾಕ್ ನ ವರದಿಯು ತಿಳಿಸುವಂತೆ ಈ ಪ್ಲಾನ್ ಇದೀಗ ಯುರೋಸ್ ನೌ ಚಂದಾದಾರಿಕೆಯನ್ನು ಕೂಡ ಬಳಕೆದಾರರಿಗೆ ಆಫರ್ ಮಾಡುತ್ತದೆ. ಇದು ಚಾನಲ್ ನ ಕಟೆಂಟ್ ಗಳನ್ನು ಉಚಿತವಾಗಿ ನೋಡುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ಈ ಪ್ಲಾನ್ ನ್ನು ಮೇ ನಲ್ಲಿ ಡಾಟಾ ಸುನಾಮಿ ಆಫರ್ ಎಂದು ಬಿಡುಗಡೆಗೊಳಿಸಲಾಗಿತ್ತು.

ಬಿಎಸ್ಎನ್ಎಲ್ ನ 98 ರುಪಾಯಿ ಪ್ರಿಪೇಯ್ಡ್ ಪ್ಲಾನ್ – ಬದಲಾಗಿರುವುದು ಏನು?

ಬಿಎಸ್ಎನ್ಎಲ್ ನ 98 ರುಪಾಯಿ ಪ್ರಿಪೇಯ್ಡ್ ಪ್ಲಾನ್ – ಬದಲಾಗಿರುವುದು ಏನು?

ಬಿಎಸ್ಎನ್ಎಲ್ ನ ರುಪಾಯಿ 98 ಪ್ರಿಪೇಯ್ಡ್ ಪ್ಲಾನ್ ನಲ್ಲಿ ಈ ಹಿಂದೆ 1.5ಜಿಬಿ ಡಾಟಾವನ್ನು 26 ದಿನಗಳ ಅವಧಿಗೆ ಆಫರ್ ಮಾಡಲಾಗಿತ್ತು. ಇದೀಗ 0.5ಜಿಬಿ ಡಾಟಾವು ಹೆಚ್ಚುವರಿಯಾಗಿ ಸಿಗುತ್ತದೆ ಅಂದರೆ 2ಜಿಬಿ 3ಜಿ ಡಾಟಾವನ್ನು ಪ್ರತಿದಿನ ಬಳಕೆ ಮಾಡಬಹುದು ಮತ್ತು ಅದರ ವ್ಯಾಲಿಡಿಟಿ 24 ದಿನಗಳ ಅವಧಿಗೆ ಆಗಿರುತ್ತದೆ. ಒಮ್ಮೆ ಬಳಕೆದಾರರ 2ಜಿಬಿ ಡಾಟಾ ಖಾಲಿಯಾದ ನಂತರ ಅದರ ಸ್ಪೀಡ್ 80Kbps ಗೆ ಇಳಿಮುಖವಾಗುತ್ತದೆ.

ಏರ್ ಟೆಲ್ ನ ರುಪಾಯಿ 98 ರ ಪ್ರಿಪೇಯ್ಡ್ ಪ್ಲಾನ್ :

ಏರ್ ಟೆಲ್ ನ ರುಪಾಯಿ 98 ರ ಪ್ರಿಪೇಯ್ಡ್ ಪ್ಲಾನ್ :

ಬಿಎಸ್ಎನ್ಎಲ್ ನ ಈ ಪ್ಲಾನ್ ಗೆ ಹೋಲಿಕೆ ಮಾಡಿ ಹೇಳುವುದಾದರೆ ಏರ್ ಟೆಲ್ ನ 98 ರುಪಾಯಿ ಡಾಟಾ ಮಾತ್ರ ಪ್ಲಾನ್ ಕೂಡ ಲಭ್ಯವಿದೆ. ಇದು 28 ದಿನಗಳ ಅವಧಿಯನ್ನು ಹೊಂದಿದ್ದು 5ಜಿಬಿ 3ಜಿ/4ಜಿ ಡಾಟಾ ಲಭ್ಯವಾಗುತ್ತದೆ.ಬಳಕೆದಾರರಿಗೆ 5ಜಿಬಿ ಡಾಟಾ ಮಾತ್ರ ಲಭ್ಯವಾಗುತ್ತದೆ ಇದರ ಜೊತೆಗೆ ಉಚಿತ ಕರೆಗಳ ಬೆನಿಫಿಟ್ ಇರುವುದಿಲ್ಲ. ಈ 98 ರುಪಾಯಿ ಪ್ಲಾನ್ ಗೆ ಡೈಲಿ ಡಾಟಾ ಕ್ಯಾಪ್ ಇರುವುದಿಲ್ಲ. ಅಂದರೆ ಬಳಕೆದಾರರು ಸಂಪೂರ್ಣ 5ಜಿಬಿ ಡಾಟಾವನ್ನು ಒಂದೇ ದಿನದಲ್ಲಿ ಬಳಕೆ ಮಾಡಲು ಅವಕಾಶವಿರುತ್ತದೆ. ಆದರೆ ಈ ಪ್ಲಾನ್ ಸದ್ಯ ಆಂದ್ರಪ್ರದೇಶ ಮತ್ತು ತೆಲಂಗಾಣ ಸರ್ಕಲ್ ಗಳಲ್ಲಿ ಮಾತ್ರವೇ ಲಭ್ಯವಿದೆ ಎಂಬುದಾಗಿ ಏರ್ ಟೆಲ್. ಇನ್ ವೆಬ್ ಸೈಟ್ ತಿಳಿಸುತ್ತದೆ.

ರಿಲಯನ್ಸ್ ಜಿಯೋ ರುಪಾಯಿ 98 ಪ್ರಿಪೇಯ್ಡ್ ಪ್ಲಾನ್ :

ರಿಲಯನ್ಸ್ ಜಿಯೋ ರುಪಾಯಿ 98 ಪ್ರಿಪೇಯ್ಡ್ ಪ್ಲಾನ್ :

ರಿಲಯನ್ಸ್ ಜಿಯೋದಲ್ಲಿ ಕೂಡ ಇದೇ ರೀತಿಯ ಪ್ಲಾನ್ ಲಭ್ಯವಿದ್ದು ಅದರ ಬೆಲೆಯೂ 98 ರುಪಾಯಿ ಗಳಾಗಿದೆ. ಜಿಯೋದಲ್ಲಿ 2ಜಿಬಿ 4ಜಿ ಡಾಟಾವು 28 ದಿನಗಳ ಅವಧಿಗೆ ಲಭ್ಯವಿರುತ್ತದೆ. ಏರ್ ಟೆಲ್ ನಂತೆಯೇ ಇದರಲ್ಲೂ ಕೂಡ ಪ್ರತಿದಿನದ ಡಾಟಾ ಲಿಮಿಟ್ ಇರುವುದಿಲ್ಲ. ಆದರೆ ಏರ್ ಟೆಲ್ ಮತ್ತು ಬಿಎಸ್ಎನ್ಎಲ್ ನಲ್ಲಿ ಇಲ್ಲದ ವಾಯ್ಸ್ ಕಾಲಿಂಗ್ ಬೆನಿಫಿಟ್ ಜಿಯೋ ಪ್ಲಾನ್ ನಲ್ಲಿ ಲಭ್ಯವಿದೆ. ಇದರಲ್ಲಿ ಸ್ಥಳೀಯ, ರಾಷ್ಟ್ರೀಯ ಮತ್ತು ರೋಮಿಂಗ್ ಕರೆಗಳ ಸೌಲಭ್ಯವೂ ಇರುತ್ತದೆ. ಇದರ ಜೊತೆಗೆ ಜಿಯೋ ಆಪ್ಸ್ ಗಳಿಗೆ ಕಾಂಪ್ಲಿಮೆಂಟರಿ ಚಂದಾದಾರಿಕೆ ಕೂಡ ಈ ಪ್ಲಾನ್ ನಲ್ಲಿ ಬಳಕೆದಾರರಿಗೆ ಲಭ್ಯವಾಗುತ್ತದೆ.

Best Mobiles in India

English summary
BSNL revises Rs 98 prepaid plan: Here's how it compares to Rs 98 plan from Airtel and Vodafone

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X