ಫ್ಲಿಪ್‌ಕಾರ್ಟ್‌ನಲ್ಲಿ ಕೇವಲ 999ರೂ. ಬೆಲೆಯಲ್ಲಿ ಸಿಗಲಿದೆ ರಿಯಲ್‌ಮಿ ಸ್ಮಾರ್ಟ್‌ಟಿವಿ!

|

ಸ್ಮಾರ್ಟ್‌ಟಿವಿ ಖರೀದಿಸುವವರಿಗೆ ಇದು ಸೂಕ್ತ ಸಮಯವಾಗಿದೆ. ವಿಶ್ವದೆಲ್ಲೆಡೆ ಫಿಫಾ ಫುಟ್ಬಾಲ್‌ ವರ್ಲ್ಡ್‌ಕಪ್‌ನ ಜ್ವರ ಏರಿದೆ. ಇದೇ ಸಮಯದಲ್ಲಿ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ತಾಣಗಳು ಸ್ಮಾರ್ಟ್‌ಟಿವಿಗಳಿಗೆ ಬಂಫರ್‌ ಅಫರ್‌ ಘೋಷಿಸಿವೆ. ಅದರಲ್ಲೂ ಫ್ಲಿಪ್‌ಕಾರ್ಟ್‌ನಲ್ಲಿ ರಿಯಲ್‌ಮಿ ನಿಯೋ ಹೆಚ್‌ಡಿ ರೆಡಿ ಎಲ್‌ಇಡಿ ಸ್ಮಾರ್ಟ್‌ ಲಿನಕ್ಸ್‌ ಟಿವಿ ಭಾರಿ ಡಿಸ್ಕೌಂಟ್‌ ಪಡೆದುಕೊಂಡಿದೆ. ಈ ಸ್ಮಾರ್ಟ್‌ಟಿವಿಯನ್ನು ಫ್ಲಿಪ್‌ಕಾರ್ಟ್‌ನಲ್ಲಿ ಕೇವಲ 999ರೂ. ಬೆಲೆಯಲ್ಲಿ ಖರೀದಿಸುವುದಕ್ಕೆ ಅವಕಾಶವಿದೆ.

ಫ್ಲಿಪ್‌ಕಾರ್ಟ್‌

ಹೌದು, ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌ ತಾಣಗಳಲ್ಲಿ ಹಲವು ಜನಪ್ರಿಯ ಸ್ಮಾರ್ಟ್‌ಟಿಟಿವಿಗಳು ಭರ್ಜರಿ ಆಫರ್‌ ಪಡೆದುಕೊಂಡಿದೆ. ಇ-ಕಾಮರ್ಸ್‌ ತಾಣಗಳ ಈ ಆಫರ್‌ ಸೇಲ್‌ ಎಷ್ಟು ದಿನ ಇರಲಿದೆ ಎಂಬುದು ತಿಳಿದಿಲ್ಲ. ಆದರೆ ಈ ಸಮಯದಲ್ಲಿ ಎರಡೂ ತಾಣಗಳು ಕೂಡ ಸ್ಮಾರ್ಟ್‌ಟಿವಿಗಳಿಗೆ ಆಕರ್ಷಕ ಡಿಸ್ಕೌಂಟ್‌ ನೀಡುತ್ತಿವೆ. ಇದರ ಜೊತೆಗೆ ಬ್ಯಾಂಕ್‌ ಆಫರ್‌ ಹಾಗೂ ಕ್ರೆಡಿಟ್‌ ಕಾರ್ಡ್‌ ಆಫರ್‌ ದೊರೆಯಲಿದೆ. ಹಾಗಾದ್ರೆ ಸ್ಮಾರ್ಟ್‌ಟಿವಿಗಳ ಮೇಲೆ ಲಭ್ಯವಿರುವ ಡಿಸ್ಕೌಂಟ್‌ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರಿಯಲ್‌ಮಿ ನಿಯೋ 32-ಇಂಚು ಹೆಚ್‌ಡಿ ರೆಡಿ ಎಲ್‌ಇಡಿ ಸ್ಮಾರ್ಟ್‌ ಲಿನಕ್ಸ್‌ ಟಿವಿ

ರಿಯಲ್‌ಮಿ ನಿಯೋ 32-ಇಂಚು ಹೆಚ್‌ಡಿ ರೆಡಿ ಎಲ್‌ಇಡಿ ಸ್ಮಾರ್ಟ್‌ ಲಿನಕ್ಸ್‌ ಟಿವಿ

ರಿಯಲ್‌ಮಿ ನಿಯೋ 32-ಇಂಚು ಹೆಚ್‌ಡಿ ರೆಡಿ ಎಲ್‌ಇಡಿ ಸ್ಮಾರ್ಟ್‌ ಲಿನಕ್ಸ್‌ ಟಿವಿ 21,999ರೂ. ಮೂಲ ಬೆಲೆ ಹೊಂದಿದೆ. ಆದರೆ ಈ ಸ್ಮಾರ್ಟ್‌ಟಿವಿ ಫ್ಲಿಪ್‌ಕಾರ್ಟ್‌ನಲ್ಲಿ 45% ಡಿಸ್ಕೌಂಟ್‌ ಪಡೆದುಕೊಂಡಿದ್ದು, 11,999 ರೂ.ಗೆ ಲಭ್ಯವಿದೆ. ಇದಲ್ಲದೆ 11,000ರೂ. ವರೆಗಿನ ಎಕ್ಸ್‌ಚೇಂಜ್‌ ಅಫರ್‌(ಡಿವೈಸ್‌ಗಳ ಗುಣಮಟ್ಟದ ಆಧಾರದ ಮೇಲೆ) ಅನ್ನು ಕೂಡ ನೀಡುತ್ತಿದೆ. ಇದೆಲ್ಲವನ್ನು ಪರಿಗಣಿಸಿದರೆ ಈ ಸ್ಮಾರ್ಟ್‌ಟಿವಿಯನ್ನು ನೀವು ಕೇವಲ 999 ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿ 1366 x 768 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 32 ಇಂಚು ಹೆಚ್‌ಡಿ ರೆಡಿ ಎಲ್ಇಡಿ ಡಿಸ್‌ಪ್ಲೇಯನ್ನು ಹೊಂದಿದೆ.

ರಿಯಲ್‌ಮಿ 32-ಇಂಚು ಹೆಚ್‌ಡಿ ರೆಡಿ ಎಲ್‌ಇಡಿ ಸ್ಮಾರ್ಟ್‌ ಆಂಡ್ರಾಯ್ಡ್ ಟಿವಿ

ರಿಯಲ್‌ಮಿ 32-ಇಂಚು ಹೆಚ್‌ಡಿ ರೆಡಿ ಎಲ್‌ಇಡಿ ಸ್ಮಾರ್ಟ್‌ ಆಂಡ್ರಾಯ್ಡ್ ಟಿವಿ

ಫ್ಲಿಪ್‌ಕಾರ್ಟ್‌ 17,999ರೂ. ಮೂಲಬೆಲೆಯ ರಿಯಲ್‌ಮಿ 32-ಇಂಚು ಹೆಚ್‌ಡಿ ರೆಡಿ ಎಲ್‌ಇಡಿ ಸ್ಮಾರ್ಟ್‌ ಆಂಡ್ರಾಯ್ಡ್ ಟಿವಿ 22% ಡಿಸ್ಕೌಂಟ್‌ ಪಡೆದುಕೊಂಡಿದೆ. ಆದರಿಂದ ಈ ಸ್ಮಾರ್ಟ್‌ಟಿವಿ 13,999ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ. ಈ ಸ್ಮಾರ್ಟ್‌ಟಿವಿ 1366 x 768 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು ನೆಟ್‌ಫ್ಲಿಕ್ಸ್‌, ಪ್ರೈಮ್‌ ವೀಡಿಯೋ, ಡಿಸ್ನಿ+ಹಾಟ್‌ಸ್ಟಾರ್, ಅಪ್ಲಿಕೇಶನ್‌ಗಳನ್ನು ಬೆಂಬಲಿಸಲಿದೆ. ಇದಲ್ಲದೆ ಇನ್ನು ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಇದರಿಂದ ಸ್ಮಾರ್ಟ್‌ಟಿವಿ ಪ್ರಿಯರು ಇದನ್ನು ಕೂಡ ತಮ್ಮ ಆಯ್ಕೆಯಲ್ಲಿ ಪರಿಗಣಿಸಬಹುದಾಗಿದೆ.

ಒನ್‌ಪ್ಲಸ್‌ 32-ಇಂಚಿನ Y-ಸರಣಿ

ಒನ್‌ಪ್ಲಸ್‌ 32-ಇಂಚಿನ Y-ಸರಣಿ

ಒನ್‌ಪ್ಲಸ್‌ ವೈ ಸರಣಿಯ 32-ಇಂಚಿನ HD ರೆಡಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿ ಅಮೆಜಾನ್‌ ತಾಣದಲ್ಲಿ ವಿಶೇಷ ಡಿಸ್ಕೌಂಟ್‌ ಪಡೆದುಕೊಂಡಿದೆ. ಈ ಸ್ಮಾರ್ಟ್‌ಟಿವಿ ಮೂಲಬೆಲೆ 19,999ರೂ. ಆಗಿದೆ. ಅದರೆ ಅಮೆಜಾನ್‌ನಲ್ಲಿ ಇದು 30% ಡಿಸ್ಕೌಂಟ್‌ ಪಡೆದಿರುವುದರಿಂದ 13,999ರೂ. ಬೆಲೆಗೆ ಖರೀದಿಸಬಹುದಾಗಿದೆ. ಒನ್‌ಕಾರ್ಡ್‌ ಕ್ರೆಡಿಟ್ ಕಾರ್ಡ್‌ ಮೂಲಕ 10% ತ್ವರಿತ ರಿಯಾಯಿತಿ ಅಥವಾ ಅಮೆಜಾನ್‌ ಪೇ ICICI ಕ್ರೆಡಿಟ್ ಕಾರ್ಡ್‌ನಲ್ಲಿ 200ರೂ. ಕ್ಯಾಶ್‌ಬ್ಯಾಕ್ ಪಡೆದುಕೊಳ್ಳಬಹುದಾಗಿದೆ. ಅಲ್ಲದೆ ಅಮೆಜಾನ್‌ ಪೇ ಲೇಟರ್‌ನಲ್ಲಿ 1,500 ಇನ್ವೈಟ್‌ ರಿವಾರ್ಡ್‌ಗಳ ಮೂಲಕ ಈ ಟಿವಿಯನ್ನು 9,849ರೂ. ಗಳಿಗೆ ಖರೀದಿಸಬಹುದಾಗಿದೆ. ಅಷ್ಟೇ ಅಲ್ಲ ಈ ಸ್ಮಾರ್ಟ್‌ಟಿವಿಯ ಮೇಲೆ ಅಮೆಜಾನ್ 2,820ರೂ.ವರೆಗಿನ ಎಕ್ಸ್‌ಚೇಂಜ್‌ ಆಫರ್‌ ಕೂಡ ನೀಡುತ್ತಿದೆ. ಆದರಿಂದ ಈ ಸ್ಮಾರ್ಟ್‌ಟಿವಿಯನ್ನು ಇನ್ನಷ್ಟು ಕಡಿಮೆ ಬೆಲೆಯಲ್ಲಿ ಖರೀದಿಸಲು ಅವಕಾಶವನ್ನು ನೀಡಿದೆ.

ಆಫರ್‌ ಅವಧಿ ಎಷ್ಟಿದೆ?

ಆಫರ್‌ ಅವಧಿ ಎಷ್ಟಿದೆ?

ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ಗಳು ಸ್ಮಾರ್ಟ್‌ಟಿವಿಗಳ ಮೇಲೆ ನೀಡುತ್ತಿರುವ ಆಫರ್‌ಗಳ ಸಮಯ ಮಿತಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಅತಿ ಕಡಿಮೆ ಬೆಲೆಗೆ ಸ್ಮಾರ್ಟ್‌ಟಿವಿ ಖರೀದಿಸಬೇಕೆಂದುಕೊಂಡವರಿಗೆ ಇದು ಸೂಕ್ತ ಸಮಜಯವಾಗಿದೆ.

Best Mobiles in India

Read more about:
English summary
Buy Smart TVs from Realme, OnePlus and More Starting from ₹999

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X