ಮೊಬೈಲ್ ಸ್ಪೋಟದ ತೀರ್ವತೆ ಹೇಗಿರುತ್ತದೆ ಗೊತ್ತಾ?..ಬೆಚ್ಚಿಬೀಳಿಸುವ ಸಿಸಿಟಿವಿ ದೃಶ್ಯ!!

|

ನಿಮ್ಮ ಮೊಬೈಲ್ ಅನ್ನು ರಾತ್ರಿಯೆಲ್ಲಾ ಚಾಜ್೯ಗೆ ಹಾಕುವ ಅಭ್ಯಾಸ ನಿಮಗೆ ಇದ್ದರೆ ತಪ್ಪದೇ ಈ ವಿಡಿಯೋ ನೋಡಿ. ಏಕೆಂದರೆ, ಒಂದು ಮೊಬೈಲ್ ಸ್ಪೋಟಗೊಂಡರೆ ಏನಾಗಬಹುದು ಎಂಬುದಕ್ಕೆ ಇತ್ತೀಚಿನ ಒಂದು ವಿಡಿಯೋ ಸಾಕ್ಷಿಯಾಗಿದೆ. ರಾತ್ರಿವೇಳೆಯಲ್ಲಿ ಇದ್ದಕ್ಕಿದ್ದಂತೆ ಸ್ಪೋಟಗೊಂಡ ಮೊಬೈಲ್ ಹೇಗೆ ಸ್ಪೋಟವಾಯಿತು ಮತ್ತು ಆ ಸ್ಪೋಟದ ತೀರ್ವತೆ ಹೇಗಿದೆ ಎಂಬ ಬೆಚ್ಚಿಬೀಳಿಸುವ ದೃಶ್ಯವನ್ನು ಸಿಸಿಟಿವಿ ವಿಡಿಯೋ ತುಣುಕೊಂದು ತೋರಿಸಿಕೊಟ್ಟಿದೆ.

ಯೂಟ್ಯೂಬ್‌ನಲ್ಲಿ ನೆನ್ನೆ (ಜೂನ್ 10) ಅಪ್‌ಲೋಡ್ ಆಗಿರುವ ಈ ವಿಡಿಯೋದಲ್ಲಿ ಮನೆಯ ಹಾಲ್‌ನಲ್ಲಿ ಮೊಬೈಲ್ ಅನ್ನು ಚಾರ್ಜ್‌ಗೆ ಹಾಕಲಾಗಿದೆ. ಈ ವೇಳೆಯಲ್ಲಿ ಇದ್ದಕ್ಕಿದ್ದಂತೆ ಮೊಬೈಲ್ ಸ್ಪೋಟವಾಗಿದ್ದು, ನಂತರ ಸಣ್ಣ ಪ್ರಮಾಣದಲ್ಲಿ ಹೊಗೆ ಕಾಣಿಸಿದಂತಿದೆ. ಅಯ್ಯೋ ಇಷ್ಟೇ ಸಧ್ಯ ಅನಿಸುವ ವೇಳೆಗೆ ಮನೆಯಲ್ಲಾ ಹೊಗೆ ತುಂಬಿಕೊಂಡು ಮತ್ತೊಮ್ಮೆ ಬ್ಯಾಟರಿ ಸ್ಪೋಟವಾಗಿದೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಮೊಬೈಲ್ ಬಳಕೆದಾರರಿಗೆ ಎಚ್ಚರಿಕೆಯ ಘಂಟೆಯಾಗಿದೆ.

ಮೊಬೈಲ್ ಸ್ಪೋಟದ ತೀರ್ವತೆ ಹೇಗಿರುತ್ತದೆ?..ಬೆಚ್ಚಿಬೀಳಿಸುವ ಸಿಸಿಟಿವಿ ದೃಶ್ಯ!!

ಸ್ಮಾರ್ಟ್‌ಫೋನ್ ಬ್ಯಾಟರಿ ನಿರ್ವಹಣೆ ಆ ಸ್ಮಾರ್ಟ್‌ಫೋನಿಗಿಂತಲೂ ಹೆಚ್ಚು ಎಂದು ಹೇಳಬಹುದು. ಸ್ಮಾರ್ಟ್‌ಫೋನಿನ ಎಲ್ಲಾ ಶಕ್ತಿಯೂ ಬ್ಯಾಟರಿಯೇ ಆಗಿರುವುದರಿಂದ ಅದರ ನಿರ್ವಹಣೆ ಅತ್ಯಗತ್ಯ, ಇಲ್ಲವಾದಲ್ಲಿ ಇಂತಹ ಘಟನೆಗಳು ಜರುಗಬಹುದು. ಹಾಗಾಗಿ, ಈ ವಿಡಿಯೋ ಜೊತೆಗೆ ಇಂದಿನ ಲೇಖನದಲ್ಲಿ ಟೆಕ್ ತಜ್ಞರು ಹೇಳಿದಂತೆ ಬ್ಯಾಟರಿ ನಿರ್ವಹಣೆ ಹೇಗೆ ಎಂಬುದನ್ನು ತಿಳಿಯೋಣ. ಇವು ಬ್ಯಾಟರಿ ಹೆಚ್ಚು ಕಾಲ ಬಾಳಿಕೆ ಬರುವಿಕೆಗೂ ಸಹಾಯಕವಾಗಿವೆ.

1) ಕಳಪೆ ಚಾರ್ಜರ್

1) ಕಳಪೆ ಚಾರ್ಜರ್

ಹಣ ಉಳಿಸಲು ಕಳಪೆ ಚಾರ್ಜರ್'ಗಳನ್ನು ಬಳಸಬೇಡಿ. ಅವುಗಳು ವಿದ್ಯುತ್ ಪ್ರವಾಹದ ಏರಿಳಿತಗಳಿಂದ ಅಥವಾ ಚಾರ್ಜ್ ಸಂಪೂರ್ಣವಾದ ಬಳಿಕ ಆಗುವ ಹಾನಿಯಿಂದ ರಕ್ಷಿಸುವ ಸುರಕ್ಷತಾ ತಂತ್ರಜ್ಞಾನವನ್ನು ಹೊಂದಿರುವುದಿಲ್ಲ. ಅಂತಹ ಚಾರ್ಜರ್'ಗಳಿಂದ ನಿಮ್ಮ ಫೋನ್ ಶಾಶ್ವತವಾಗಿ ಹಾಳಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ.

2) ರಕ್ಷಣಾ ಕವಚ

2) ರಕ್ಷಣಾ ಕವಚ

ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವ ವೇಳೆ ಫೋನ್ ಮೇಲಿರುವ ರಕ್ಷಣಾ ಕವಚವನ್ನು ತೆಗೆಯಿರಿ. ಚಾರ್ಜ್ ಆಗುವ ಸಮಯದಲ್ಲಿ ಫೋನ್ ಬ್ಯಾಟರಿಗಳು ಬಿಸಿಯಾಗುವುದು ಸಾಮಾನ್ಯ. ಆ ಬಿಸಿ ಕಡಿಮೆಯಾಗಲು ನೀವು ಅಳವಡಿಸಿರುವ ರಕ್ಷಣಾ ಕವಚಗಳು ತಡೆಯಾಗಬಹುದು. ಹಾಗಾಗಿ, ಇದು ನಿಮ್ಮ ನೆನಪಿನಲ್ಲಿರಲಿ.

3) ಅದರದ್ದೇ ಆದ ಚಾರ್ಜರ್

3) ಅದರದ್ದೇ ಆದ ಚಾರ್ಜರ್

ನಿಮ್ಮ ಫೋನನ್ನು ಅದರದ್ದೇ ಆದ ಚಾರ್ಜರ್'ನಿಂದ ಚಾರ್ಜ್ ಮಾಡಿ. ಮೊಬೈಲ್ ಫೋನ್'ಗಳು ಇತರ ಚಾರ್ಜರ್'ಗಳಿಂದ ಚಾರ್ಜ್ ಆಗುವುದಾದರೂ, ಅದು ಅಸಲಿ ಫೋನ್ ಚಾರ್ಜರ್‌ಗೆ ಹೋಲಿಕೆಯಾಗದಿದ್ದಲ್ಲಿ ನಿಮ್ಮ ಫೋನ್ ಬ್ಯಾಟರಿ ಸಾಮರ್ಥ್ಯದ ಮೇಲೆ ಅದು ದುಷ್ಪರಿಣಾಮ ಬೀಳುತ್ತದೆ. ಬಹುತೇಕ ಬೇರೆ ಯಾವ ಚಾರ್ಜರ್ ಕೂಡ ಸರಿಯಾಗಿ ಹೋಲಿಕೆಯಾಗುವುದಿಲ್ಲ.

4) ಥರ್ಡ್ ಪಾರ್ಟಿ ಬ್ಯಾಟರಿ ಆಪ್‌

4) ಥರ್ಡ್ ಪಾರ್ಟಿ ಬ್ಯಾಟರಿ ಆಪ್‌

ಥರ್ಡ್ ಪಾರ್ಟಿ ಬ್ಯಾಟರಿ ಆಪ್‌ಗಳನ್ನು ಬಳಸದಿರುವುದು ಉತ್ತಮ. ಥರ್ಡ್ ಪಾರ್ಟಿ ಬ್ಯಾಟರಿ ಆಪ್‌ಗಳೂ ಜಾಹೀರಾತುಗಳನ್ನು ನಿಮ್ಮ ಸ್ಮಾರ್ಟ್‌ಫೋನಿಗೆ ಲೋಡ್ ಮಾಡುವುದಲ್ಲದೇ, ಇತರ ಆಪ್‌ಗಳನ್ನು ಡೌನ್‌ಲೋಡ್ ಮಾಡಲು ನಿಮಗಾಗಿ ಶಿಫಾರಸ್ಸು ಮಾಡುತ್ತಲೇ ಇರುತ್ತವೆ. ಜೊತೆಗೆ ಫೋನ್ ಬ್ಯಾಟರಿಯನ್ನು ತಾನು ಬಳಸಿಕೊಳ್ಳುತ್ತವೆ.

5) ಪದೇ ಪದೇ ಮೊಬೈಲ್ ಚಾರ್ಜ್

5) ಪದೇ ಪದೇ ಮೊಬೈಲ್ ಚಾರ್ಜ್

ಪದೇ ಪದೇ ಮೊಬೈಲ್ ಚಾರ್ಜ್ ಮಾಡುವ ಅಭ್ಯಾಸ ಬಿಟ್ಟುಬಿಡಿ. ಮೊಬೈಲ್ ಬ್ಯಾಟರಿಯನ್ನು ಒಮ್ಮೆ ( 80%)ಪೂರ್ತಿಯಾಗುವವರೆಗೂ ಚಾರ್ಜ್ ಮಾಡಿ. ಪದೇ ಪದೇ ಚಾರ್ಜ್ ಮಾಡುವುದರಿಂದ ಬ್ಯಾಟರಿ ಮೇಲೆ ಪರಿಣಾಮ ಬೀರುತ್ತದೆ ಮತ್ತು ಸ್ಮಾರ್ಟ್‌ಫೋನಿನ ಬ್ಯಾಟರಿ ಚಾರ್ಜ್ ಪಿನ್ ಸಹ ಹಾಳಾಗಿಬಿಡುತ್ತದೆ.

6) ಪವರ್ ಬ್ಯಾಂಕ್

6) ಪವರ್ ಬ್ಯಾಂಕ್

ಪವರ್ ಬ್ಯಾಂಕ್ ಬಳಸುವಾಗ ಎಚ್ಚರವಿರಲಿ. ನೀವು ಬಳಸುವ ಪವರ್ ಬ್ಯಾಂಕ್ ವಿದ್ಯುತ್ ಪ್ರವಾಹದ ಏರಿಳಿತ, ಶಾರ್ಟ್ ಸರ್ಕ್ಯೂಟ್, ದೀರ್ಘ ಚಾರ್ಜಿಂಗಳಿಂದಾಗುವ ಹಾಗೂ ಅತೀ ಬಿಸಿಯಾಗುವಿಕೆ ಸಮಸ್ಯೆಗಳಿಂದ ನಿಮ್ಮ ಸ್ಮಾರ್ಟ್‌ಫೋನಿನ ಸುರಕ್ಷತೆಯನ್ನೊದಗಿಸುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಿ. ಯುಎಸ್‌ಬಿ ಕೇಬಲ್ ಬಗ್ಗೆ ಜಾಗೃತವಾಗಿರಿ.

7) ಅಗತ್ಯಕ್ಕಿಂತ ಹೆಚ್ಚು ಚಾರ್ಜಿಂಗ್

7) ಅಗತ್ಯಕ್ಕಿಂತ ಹೆಚ್ಚು ಚಾರ್ಜಿಂಗ್

ರಾತ್ರಿಯಿಡೀ ಫೋನನ್ನು ಚಾರ್ಜ್‌ಗೆ ಇಡುವುದು ಕೂಡ ಒಳ್ಳೆಯ ಅಭ್ಯಾಸವೇನಲ್ಲ. ಮೊಬೈಲ್ ಚಾರ್ಜ್ ಮಾಡುವಾಗ ಹೆಚ್ಚೆಂದರೆ ಶೇ.80ರಷ್ಟು ಬ್ಯಾಟರಿ ಚಾರ್ಜ್ ಮಾಡಿ ಮತ್ತು ಕಡಿಮೆ ಎಂದರೂ 20 ಪರ್ಸೆಂಟ್ ಬ್ಯಾಟರಿ ಚಾರ್ಜ್ ಇರುವಂತೆ ನೋಡಿಕೊಳ್ಳಿ. ಅಗತ್ಯಕ್ಕಿಂತ ಹೆಚ್ಚು ಚಾರ್ಜಿಂಗ್ ನಿಮ್ಮ ಫೋನ್ ಬ್ಯಾಟರಿಯ ಬಾಳಿಕೆಯನ್ನು ಕುಂಠಿತಗೊಳಿಸಬಹುದು.

8) ಫಾಸ್ಟ್ ಚಾರ್ಜರ್

8) ಫಾಸ್ಟ್ ಚಾರ್ಜರ್

ಫಾಸ್ಟ್ ಚಾರ್ಜರ್‌ಗಳನ್ನು ಆ ತಂತ್ರಜ್ಞಾನ ಅಳವಡಿಕೆಯಾಗಿಲ್ಲದ ಸ್ಮಾರ್ಟ್‌ಫೋನ್‌ಗಳಲ್ಲಿ ಬಳಕೆ ಮಾಡಬೇಡಿ. ಫಾಸ್ಟ್ ಚಾರ್ಜರ್‌ನಲ್ಲಿ ಹೈ ವೋಲ್ಟೇಜ್ ಸರಬರಾಜಾಗುವುದರಿಂದ ಬ್ಯಾಟರಿ ಬೇಗನೇ ಬಿಸಿಯಾಗುತ್ತದೆ. ಫಾಸ್ಟ್ ಚಾರ್ಜರ್ ತಂತ್ರಜ್ಞಾನವಿರುವ ಸ್ಮಾರ್ಟ್‌ಫೋನ್ ಆದರೂ ಯಾವಾಗಲೂ ತ್ವರಿತ ಚಾರ್ಜರ್‌ಗಳನ್ನು ಬಳಸುವುದು ಒಳ್ಳೆಯದಲ್ಲ.

Best Mobiles in India

English summary
According to Battery University, leaving your smartphone plugged in when it's fullycharged, like you might overnight, is bad for the battery in the long run. Once your smartphone has reached 100 percent charge. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X