ಆಂಡ್ರಾಯ್ಡ್, ಐಓಎಸ್‌ಗೆ ಪ್ರತಿಯಾಗಿ ಚೀನಾದಿಂದ ಹೊಸ ಮೊಬೈಲ್‌ ಓಎಸ್ ಅಭಿವೃದ್ಧಿ

By Ashwath
|

ತಂತ್ರಜ್ಞಾನ ಕ್ಷೇತ್ರದಲ್ಲಿ ಅಮೆರಿಕಕ್ಕೆ ಪ್ರತಿಸ್ಪರ್ಧಿ‌ಯಾಗಿರುವ ಚೀನಾ ಈಗ ಮೊಬೈಲ್‌ ಆಪರೇಟಿಂಗ್‌ ಸಿಸ್ಟಂನಲ್ಲೂ ಅಮೆರಿಕ್ಕೆ ಸಡ್ಡು ಹೊಡೆಯಲು ಮುಂದಾಗಿದೆ.ಅಮೆರಿಕದ ಗೂಗಲ್‌,ಆಪಲ್‌,ಮೈಕ್ರೋಸಾಫ್ಟ್‌‌‌ ಕಂಪೆನಿಗಳ ಮೊಬೈಲ್‌ ಆಪರೇಟಿಂಗ್‌ ಸಿಸ್ಟಂಗೆ ಪ್ರತಿಯಾಗಿ ಚೀನಾ ಸರ್ಕಾರ ಈಗ ಹೊಸ ಮೊಬೈಲ್‌ ಆಪರೇಟಿಂಗ್‌ ಸಿಸ್ಟಂನ್ನು ಅಭಿವೃದ್ಧಿ ಪಡಿಸಿದೆ.

ಚೀನಾ ಆಪರೇಟಿಂಗ್ ಸಿಸ್ಟಂ(ಸಿಓಎಸ್‌) ಹೆಸರಿನ ಓಎಸ್‌ನ್ನು ಚೀನಾದ ಲಿಯಾನ್‌‌ಟಂಗ್‌ ನೆಟ್‌‌‌ವರ್ಕ್‌ ಕಮ್ಯೂನಿಕೇಶನ್‌‌ ಟೆಕ್ನಾಲಜಿ ಅಭಿವೃದ್ಧಿ ಪಡಿಸಿದೆ. ಆಂಡ್ರಾಯ್ಡ್‌(ಗೂಗಲ್‌), ಐಓಎಸ್‌(ಆಪಲ್‌)‌,ವಿಂಡೋಸ್‌‌ ಮೊಬೈಲ್ ಓಎಸ್‌ನಂತೆ ಯೂಸರ್‌ ಇಂಟರ್‌ಫೇಸ್‌ ಹೊಂದಿದ್ದು,ಈ ಆಪರೇಟಿಂಗ್‌ ಸಿಸ್ಟಂ ಟಚ್‌ಸ್ಕ್ರೀನ್ ಸ್ಮಾರ್ಟ್‌ಫೋನ್‌ ಮತ್ತು ಗೃಹ ಬಳಕೆಯ ಸಾಧನದಲ್ಲಿ ಬಳಸಬಹುದು ಎಂದು ಇದನ್ನು ಅಭಿವೃದ್ಧಿ ಪಡಿಸಿದ ಸಂಸ್ಥೆ ಹೇಳಿದೆ.

ಅಷ್ಟೇ ಅಲ್ಲದೇ ಈ ಓಎಸ್‌ನ ಆಪ್‌ಗಳನ್ನು ಒಂದೇ ಸ್ಟೋರ್‌ನಲ್ಲಿ ಮಾರಾಟ ಮಾಡಲು ಚೀನಿ ಸಂಶೋಧಕರು ಮುಂದಾಗಿದ್ದಾರೆ.ಗೂಗಲ್‌ನ ಅಧಿಕೃತ ಆಂಡ್ರಾಯ್ಡ್ ಪ್ಲೇ ಸ್ಟೋರ್‌‌‌ ಇದ್ದರೂ ಕೆಲವೊಂದು ಕಂಪೆನಿಗಳು ತಮ್ಮದೇ ಆದ ಆಂಡ್ರಾಯ್ಡ್ ಸ್ಟೋರ್‌‌ಗಳನ್ನು ತೆರೆದಿವೆ. ಗೂಗಲ್‌ನಂತೆ ಈ ರೀತಿ ಅವಕಾಶ ನೀಡಿದ್ದರೆ,ಆಪ್‌ ತಯಾರಿಸಿದ ಕಂಪೆನಿಗಳು ಬಳಕೆದಾರರ ಮಾಹಿತಿಗಳನ್ನು ಕದಿಯುವ ಸಾಧ್ಯತೆ ಇರುತ್ತದೆ.ಹೀಗಾಗಿ ಆಪ್‌ಗಳನ್ನು ಕಂಪೆನಿಗಳು ತಯಾರಿಸಿದ್ದರೂ, ಮತ್ತೆ ಆಪ್‌ನ್ನು ಪರೀಕ್ಷಿಸಿ ಬಳಿಕವಷ್ಟೇ ಆಪ್‌ಸ್ಟೋರ್‌ನಲ್ಲಿ ಸಿಗುವಂತೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಚೀನಾದ ಕಂಪೆನಿಗಳು ಮೊಬೈಲ್ ಓಎಸ್‌ನ್ನು ತಯಾರಿಸುವುದು ಹೊಸದೆನಲ್ಲ. ಇದೇ ಜನವರಿಯಲ್ಲಿ ಕಾಶಿಪ್‌ ಎಲೆಕ್ಟ್ರಾನಿಕ್ಸ್‌ 960ಓಎಸ್‌ ಹೆಸರಿನ ಮೊಬೈಲ್‌ ಓಎಸ್‌ನ್ನು ಅಭಿವೃದ್ಧಿ ಪಡಿಸಿದೆ. 2012ರಲ್ಲಿ ಅಲಿಬಾಬಾ ಸಮೂಹ Aliyun ಹೆಸರಿನ ಓಎಸ್‌ನ್ನು ಅಭಿವೃದ್ಧಿ ಪಡಿಸಿತ್ತು. ತೈವಾನ್‌ ಮೂಲದ ಏಸರ್‌ ಕಂಪೆನಿ ಆಲಿಬಾಬ Aliyun ಓಎಸ್‌ನಲ್ಲಿ ಸ್ಮಾರ್ಟ್‌‌ಫೋನ್‌ ತಯಾರಿಸಲು ಸಿದ್ದತೆ ನಡೆಸಿತ್ತು.ಆದರೆ ಗೂಗಲ್‌ ಕಂಪೆನಿಯ ಒತ್ತಡಕ್ಕೆ ಮಣಿದು ಏಸರ್‌ ಸೇರಿದಂತೆ ಆಂಡ್ರಾಯ್ಡ್‌ ಸ್ಮಾರ್ಟ್‌‌ಫೋನ್‌ ತಯಾರಕ ಕಂಪೆನಿಗಳು ಈ ಓಎಸ್‌ನಲ್ಲಿ ಸ್ಮಾರ್ಟ್‌ಫೋನ್‌ ತಯಾರಿಸುವ ಯೋಜನೆಯನ್ನು ಕೈಬಿಟ್ಟಿವೆ ಎಂದು ಹೇಳಲಾಗುತ್ತಿದೆ.

ಗಾರ್ಟ್‌‌‌ನರ್‌ ವರದಿಯಂತೆ ವಿಶ್ವದ ಟಾಪ್‌ ಸ್ಮಾರ್ಟ್‌ಫೋನ್‌ ಮಾರಾಟದ ಟಾಪ್‌ 10 ಕಂಪೆನಿಗಳ ಪಟ್ಟಿಯಲ್ಲಿ ಚೀನಾದ ಝಡ್‌ಟಿಇ,ಹುವಾವೇ, ಲೆನೊವೊ,ಟಿಸಿಎಲ್‌ ಕಮ್ಯೂನಿಕೇಶನ್‌ ಸ್ಥಾನ ಪಡೆದಿವೆ. ಈ ಕಂಪೆನಿಗಳು ಮುಂದಿನ ದಿನಗಳಲ್ಲಿ ಯಾವ ಓಎಸ್‌ನಲ್ಲಿ ಸ್ಮಾರ್ಟ್‌ಫೋನ್‌ ತಯಾರಿಸುತ್ತದೆ ಎನ್ನುವುದರ ಆಧಾರದ ಮೇಲೆ ಈ ಓಎಸ್‌ನ ಬೆಳವಣಿಗೆ ನಿಂತಿದೆ.

ಚೀನಾ ತಮ್ಮದೇ ಆದ ಮೊಬೈಲ್‌ ಓಎಸ್‌ ತಯಾರಿಸಲು ಅಮೆರಿಕ ಕಾರಣವಂತೆ.!ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ(ಎನ್ಎಸ್ಎ) ಮಾಜಿ ಗುತ್ತಿಗೆದಾರ ಎಡ್ವರ್ಡ್ ಸ್ನೋಡೆನ್ ಅಮೆರಿಕ, ಭಾರತ ಸೇರಿದಂತೆ ವಿಶ್ವದ ಇತರ ರಾಷ್ಟ್ರಗಳ ಮಾಹಿತಿಯನ್ನು ಗೂಗಲ್‌,ಮೈಕ್ರೋಸಾಫ್ಟ್‌‌,ಆಪಲ್‌ ಕಂಪೆನಿಗಳಿಂದ ಕದಿಯುತ್ತಿದೆ ಎಂದು ಆಧಾರ ಸಮೇತ ಬಹಿರಂಗ ಪಡಿಸಿದ್ದ.ಈ ರೀತಿ ಚೀನಿ ಜನರ ಮಾಹಿತಿ ಅಮೆರಿಕಕ್ಕೆ ಸಿಗದಂತೆ ಮಾಡಲು ಚೀನಾ ಮೊಬೈಲ್‌ ಆಪರೇಟಿಂಗ್‌ ಸಿಸ್ಟಂ ಅಭಿವೃದ್ಧಿ ಪಡಿಸಿದೆ ಎಂದು ಹೇಳಲಾಗುತ್ತಿದೆ.

ಅಮೆರಿಕನ್‌ ಕಂಪೆನಿಗಳಿಗೆ ಸಡ್ಡು ಹೊಡೆದು ಉತ್ಪನ್ನ ತಯಾರಿಸುವುದು ಚೀನಿಯರಿಗೆ ಹೊಸದೆನಲ್ಲ.ಈ ಹಿಂದಿನಿಂದಲೂ ಅಮೆರಿಕನ್‌ ಕಂಪೆನಿಗಳ ಉತ್ಪನ್ನಗಳಂತೆ ಚೀನಿ ಕಂಪೆನಿಗಳು ತಮ್ಮ ಉತ್ಪನ್ನಗಳನ್ನು ತಯಾರಿಸಿವೆ. ಅಷ್ಟೇ ಅಲ್ಲದೇ ಕೆಲವೊಂದು ಕಂಪೆನಿಗಳ ಉತ್ಪನ್ನಕ್ಕೆ ಚೀನಾ ಸರ್ಕಾರ ನಿಷೇಧ ಸಹ ಹಾಕಿದೆ. ಮುಂದಿನ ಪುಟದಲ್ಲಿ ಅಮೆರಿಕನ್ ಟೆಕ್‌ ಕಂಪೆನಿ ವರ್ಸಸ್‌ ಚೀನಾ ಟೆಕ್‌ ಕಂಪೆನಿಗಳ ವಿವರವಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ ನಿಮ್ಮ ಅಭಿಪ್ರಾಯ ದಾಖಲಿಸಿ.

ಇದನ್ನೂ ಓದಿ: ಚೀನಾ ಕಂಪೆನಿಯಿಂದ ವಿಶ್ವದ ಮೊದಲ 2ಕೆ ಸ್ಮಾರ್ಟ್‌ಫೋನ್‌ ಬಿಡುಗಡೆ
ಇದನ್ನೂ ಓದಿ: ಮೇಡ್‌ ಇನ್‌ ಚೈನಾ ವಸ್ತುಗಳ ಬೆಲೆ ಕಡಿಮೆ ಯಾಕೆ ?

  ಗೂಗಲ್‌ ವರ್ಸಸ್‌  ಬೈದು

ಗೂಗಲ್‌ ವರ್ಸಸ್‌ ಬೈದು

ಆರಂಭಗೊಂಡ ವರ್ಷ‌: 1998
ಸರ್ಚ್‌: ಪ್ರತಿ ತಿಂಗಳು114.7 ಶತಕೋಟಿ ಸರ್ಚ್‌
Alexa Rank:01

ಆದಾಯದ ಮೂಲ:ಗೂಗಲ್‌ನ ಪ್ರಮುಖ ಆದಾಯದ ಮೂಲ ಅಡ್‌ವರ್ಡ್ಸ‌.ಜಾಹೀರಾತುದಾರರು ಅವರ ಜಾಹೀರಾತಿಗೆ ಸಂಬಂಧಿಸಿದ ಪದವನ್ನು (ಕೀವರ್ಡ್‌) ಆಯ್ಕೆ ಮಾಡಿಕೊಳ್ಳುತ್ತಾರೆ.ಆ ಕೀವರ್ಡ್‌ ಟೈಪ್‌ ಆದಾಗ ಗೂಗಲ್‌ ಈ ಜಾಹೀರಾತನ್ನು ಬಳಕೆದಾರರ ಸ್ಕ್ರೀನ್‌ ಮೇಲೆ ಕಾಣುವಂತೆ ಮಾಡುತ್ತದೆ. ಜೊತೆಗ ಬಳಕೆದಾರರು ಜಾಹೀರಾತಿನ ಮೇಲೆ ಪ್ರತಿ ಕ್ಲಿಕ್‌ ಮಾಡಿದಾಗಲೂ ಗೂಗಲ್‌ ಜಾಹೀರಾತು ಕಂಪೆನಿಗಳಿಗೆ ಶುಲ್ಕ ಪಾವತಿಸುತ್ತದೆ.

  ಗೂಗಲ್‌ ವರ್ಸಸ್‌  ಬೈದು

ಗೂಗಲ್‌ ವರ್ಸಸ್‌ ಬೈದು


ಆರಭಗೊಂಡ ವರ್ಷ‌:2000
ಸರ್ಚ್‌: ಪ್ರತಿ ತಿಂಗಳು 14.5 ಶತಕೋಟಿ ಸರ್ಚ್‌
Alexa Rank:05

ಆದಾಯದ ಮೂಲ:
ಬೈದು ಸರ್ಚ್ ಎಂಜಿನ್‌ ಚೈನಾ ಭಾಷೆಯಲ್ಲಿರುವ ಫಲಿತಾಂಶಗಳನ್ನು ಮಾತ್ರ ತೋರಿಸುತ್ತದೆ. ಬೈದು ಚೀನಾದಲ್ಲಿ ಮಾತ್ರ ಹೆಚ್ಚಿನ ಬಳಕೆಯಾಗುವುದರಿಂದ ಕೆಲವು ಮೊಬೈಲ್‌ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ವ್ಯಾಪ್‌ ಮತ್ತುಪಿಡಿಎ ಸೇವೆಯನ್ನು ನೀಡುತ್ತಿದೆ. ಇನ್ನೂ ಗೂಗಲ್‌‌ನಂತೆ ಜಾಹೀರಾತಿನಿಂದ ಬೈದುಗೆ ಆದಾಯ ಬರುತ್ತಿದೆ.

 ಫೇಸ್‌ಬುಕ್‌ ವರ್ಸಸ್‌ ರೆನ್‌ರೆನ್‌

ಫೇಸ್‌ಬುಕ್‌ ವರ್ಸಸ್‌ ರೆನ್‌ರೆನ್‌

ಆರಂಭಗೊಂಡ ವರ್ಷ‌:2004
ಬಳಕೆದಾರರು:ಪ್ರತಿ ತಿಂಗಳು 1.15 ಶತಕೋಟಿ ಸಕ್ರೀಯ ಬಳಕೆದಾರರು(ಜೂನ್‌2013)
Alexa Rank: 2

ಆದಾಯದ ಮೂಲ:
ಫೇಸ್‌ಬುಕ್‌ ಶೇ.49ರಷ್ಟು ಆದಾಯ ಮೊಬೈಲ್‌ ಜಾಹೀರಾತಿನಿಂದ ಬರುತ್ತದೆ. ಜೊತೆಗೆ ಫಾರ್‌ವಿಲ್ಲೆ ಸಿಟಿವಿಲ್ಲೆ ಗೇಮ್ಸ್‌ನಿಂದ ಹೆಚ್ಚಿನ ಆದಾಯವನ್ನು ಫೇಸ್‌ಬುಕ್‌ಗಳಿಸುತ್ತಿದೆ.

 ಫೇಸ್‌ಬುಕ್‌ ವರ್ಸಸ್‌ ರೆನ್‌ರೆನ್‌

ಫೇಸ್‌ಬುಕ್‌ ವರ್ಸಸ್‌ ರೆನ್‌ರೆನ್‌


ಬಳಕೆದಾರರ ಸಂಖ್ಯೆ:54 ದಶಲಕ್ಷ ಪ್ರತಿ ತಿಂಗಳಬಳಕೆದಾರರು(ಜೂನ್‌2013)
ಆರಂಭಗೊಂಡ ವರ್ಷ‌:2004
Alexa Rank: 605

ಆದಾಯದ ಮೂಲ: ಚೀನಾದ ಫೇಸ್‌ಬುಕ್‌ ಎಂದೇ ಪ್ರಸಿದ್ದವಾಗಿರುವ ರೆನ್‌ರೆನ್‌ನಲ್ಲಿ ಕೆಲವೊಂದು ವಿಶೇಷತೆಗಳಿವೆ. ಅತಿ ಹೆಚ್ಚು ಸಕ್ರಿಯರಾದ ಬಳಕೆದಾರರಿಗೆ ಇಲ್ಲಿ ಪಾಯಿಂಟ್‌‌ ನೀಡಲಾಗುತ್ತದೆ. ರೆನ್‌ ಉಚಿತವಾಗಿ ಲಭ್ಯವಾಗುವ ಸೋಶಿಯಲ್‌ ನೆಟ್‌ವರ್ಕ್‌ ಅಲ್ಲ.ಬದಲಾಗಿ ಪ್ರತಿ ತಿಂಗಳು ಇಲ್ಲಿ ನಿಗದಿತ ಶುಲ್ಕವನ್ನು ನೀಡಬೇಕಾಗುತ್ತದೆ.ಆದರೆ ರೆನ್‌ರೆನ್‌ನಲ್ಲಿ ಸಕ್ರೀಯವಾಗಿ ಬಳಸಿದ ಗ್ರಾಹಕರು ಹೆಚ್ಚಿನ ಪಾಯಿಂಟ್‌ ಗಳಿಸಿದ್ದರೆ ಅವರಿಗೆ ಶುಲ್ಕದಲ್ಲಿ ರಿಯಾಯಿತಿ ಇದೆ.

  ಯೂ ಟ್ಯೂಬ್‌ ವರ್ಸಸ್‌ ಯೂ ಕ್ಯೂ

ಯೂ ಟ್ಯೂಬ್‌ ವರ್ಸಸ್‌ ಯೂ ಕ್ಯೂ

ಆರಂಭಗೊಂಡ ವರ್ಷ‌:2005
Alexa Rank:3

ಆದಾಯದ ಮೂಲ: ಬಹುತೇಕ ಆದಾಯ ವಿಡಿಯೋ ಜಾಹೀರಾತಿನಿಂದಲೇ ಬರುತ್ತದೆ. ಜೊತೆಗೆ ಈ ವರ್ಷದಿಂದ ಹೊಸ ಸೇವೆ ನೀಡುವ ಮೂಲಕ ಆದಾಯ ವೃದ್ಧಿಸುವ ಕಾರ್ಯಕ್ಕೆ ಯೂ ಟ್ಯೂಬ್‌ ಕೈ ಹಾಕಿದ್ದು,ಬಾಡಿಗೆ ದರದಲ್ಲಿ ಚಲನ ಚಿತ್ರ ಮತ್ತು ಎಕ್ಸ್‌ಕ್ಲ್ಯೂಸಿವ್‌ ವಿಡಿಯೋಗಳನ್ನುಬಳಕೆದಾರರಿಗೆ ನೀಡಿ ಆದಾಯವನ್ನು ಗಳಿಸುತ್ತಿದೆ.

ಯೂ ಟ್ಯೂಬ್‌ ವರ್ಸಸ್‌ ಯೂ ಕ್ಯೂ

ಯೂ ಟ್ಯೂಬ್‌ ವರ್ಸಸ್‌ ಯೂ ಕ್ಯೂ


ಆರಂಭವಾದ ವರ್ಷ‌: 2006
Alexa Rank: 84

ಆದಾಯದ ಮೂಲ: ಚೀನಾ ಸರ್ಕಾರ ಯೂ ಟ್ಯೂಬ್‌ನ ಮೇಲೆ ನಿಷೇಧ ಹೇರಿರುವುದರಿಂದ ಯೂ ಕ್ಯೂನ ಚೀನಾದಲ್ಲಿ ಪ್ರಸಿದ್ಧಿಯಾಗಿದೆ. ವಿಡಿಯೋ ಜಾಹೀರಾತಿನಿಂದ ಯೂ ಕ್ಯೂ ಆದಾಯಗಳಿಸುತ್ತಿದೆ.

ಇ-ಬೇ ವರ್ಸ‌ಸ್‌ ಅಲಿಬಾಬಾ

ಇ-ಬೇ ವರ್ಸ‌ಸ್‌ ಅಲಿಬಾಬಾ

ಇ-ಬೇ

ಆರಂಭಗೊಂಡ ವರ್ಷ‌:1995
Alexa Rank :21
ಆದಾಯದ ಮೂಲ: ಚಿಲ್ಲರೆ ವಹಿವಾಟಿನಲ್ಲಿನಡೆಸುವ ಇ-ಬೇ ಭಾರತ ಸೇರಿದಂತೆ ವಿಶ್ವದ 30 ದೇಶಗಳಲ್ಲಿ ಆನ್‌ಲೈನ್‌ಲ್ಲಿ ಉತ್ಪನ್ನಗಳನ್ನು ಮಾರುತ್ತಿದೆ. ಕಳೆದ ವರ್ಷ‌14.07 ಶತಕೋಟಿ ಆದಾಯವನ್ನು ಇ-ಬೇಗಳಿಸಿದೆ.

ಇ-ಬೇ ವರ್ಸ‌ಸ್‌ ಅಲಿಬಾಬಾ

ಇ-ಬೇ ವರ್ಸ‌ಸ್‌ ಅಲಿಬಾಬಾ

ಆರಂಭಗೊಂಡ ವರ್ಷ‌:1999
Alexa Rank :63

ಆದಾಯದ ಮೂಲ: ಅಲಿಬಾಬ.ಕಾಂ ಈಗಾಗಲೇ ಇಬೇ ಮತ್ತು ಅಮೆಜಾನ್‌.ಕಾಂಗಳನ್ನು ಹಿಂದಿಕ್ಕಿದೆ. ಅಲಿಬಾಬಾ ಸದ್ಯದ ಮಾರುಕಟ್ಟೆಯ ವೇಗ ಗಮನಿಸಿದರೆ ಚಿಲ್ಲರೆ ವಹಿವಾಟಿನಲ್ಲಿ ವಿಶ್ವದಲ್ಲೇ ಅತ್ಯಂತ ದೊಡ್ಡ ಕಂಪನಿಯಾಗಿರುವ ವಾಲ್‌ಮಾರ್ಟ್‌ನ್ನು 2016ರಲ್ಲಿ ಹಿಂದಿಕ್ಕುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ವರ್ಷ‌ 4.1 ಶತಕೋಟಿ ಆದಾಯವನ್ನು ಅಲಿಬಾಬಾ ಕಂಪೆನಿ ಗಳಿಸಿದೆ.

ಟ್ವೀಟರ್‌ ವರ್ಸಸ್‌ ಸಿನಾ ವೈಬೊ

ಟ್ವೀಟರ್‌ ವರ್ಸಸ್‌ ಸಿನಾ ವೈಬೊ

ಆರಂಭಗೊಂಡ ವರ್ಷ‌:2006
ಬಳಕೆದಾರರ ಸಂಖ್ಯೆ: ಪ್ರತಿ ದಿನ ಒಂದು ಶತಕೋಟಿ ಬಳಕೆದರರು
Alexa Rank:11

ಆದಾಯದ ಮೂಲ: ಗೂಗಲ್‌,ಫೇಸ್‌ಬುಕ್‌ಗಳಿಗೆ ಹೇಗೆ ಜಾಹೀರಾತಿನಿಂದ ಆದಾಯ ಬರುತ್ತದೋ ಟ್ವೀಟರ್‌ಗೆ ಜಾಹೀರಾತುದಾರರ ಪ್ರೊಮೊಟೆಡ್‌ ಟ್ವೀಟ್‌ನಿಂದ ಆದಾಯ ಬರುತ್ತಿದೆ.

ಟ್ವೀಟರ್‌ ವರ್ಸಸ್‌ ಸಿನಾ ವೈಬೊ

ಟ್ವೀಟರ್‌ ವರ್ಸಸ್‌ ಸಿನಾ ವೈಬೊ

ಆರಂಭಗೊಂಡ ವರ್ಷ:2009
Alexa Rank :18

ಆದಾಯದ ಮೂಲ: ಚೀನಾ ಸರ್ಕಾರ 2009ರಿಂದ ಟ್ವೀಟರ್‌ಗೆ ದೇಶದಲ್ಲಿ ನಿಷೇಧ ಹಾಕಿದೆ.ಹೀಗಾಗಿ ಚೀನಾದಲ್ಲಿ ಸಿನಾ ವೈಬೊ ಹೆಚ್ಚಿನ ಜನ ಬಳಸುತ್ತಿದ್ದಾರೆ. ಫೇಸ್‌ಬುಕ್‌ ಮತ್ತು ಟ್ವೀಟರ್‌ನಲ್ಲಿರುವ ಎರಡು ವಿಶೇಷತೆಗಳು ಈ ಸೋಶಿಯಲ್‌ ಮೀಡಿಯಾದಲ್ಲದೆ. 140 ಪದದಲ್ಲಿ ಸಂದೇಶ ಕಳುಹಿಸುವ ಜೊತೆಗೆ ಇದರಲ್ಲಿ ಫೇಸ್‌ಬುಕ್‌ನಂತೆ ಚಾಟ್‌ ಸಹ ಮಾಡಬಹುದು.ಹೆಚ್ಚಿನ ಆದಾಯ ಜಾಹೀರಾತಿನಿಂದಲೇ ಬರುತ್ತಿದ್ದು,ಈ ತಾಣವನ್ನು ಅಲಿಬಾಬಾ ಕಂಪೆನಿ ಖರೀದಿಸಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X