ಇನ್ಮುಂದೆ ಗೂಗಲ್ ಕ್ರೋಮ್‌ನಲ್ಲಿ ಇಂಟರ್‏ನೆಟ್ ಇಲ್ಲದೆಯೂ ಬ್ರೌಸ್ ಮಾಡಬಹುದು!!

|

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಿಗಾಗಿ ಗೂಗಲ್ ಕಂಪೆನಿ ಮತ್ತೊಂದು ಸಿಹಿಸುದ್ದಿಯನ್ನು ಪ್ರಕಟಿಸಿದೆ. ಇನ್ಮುಂದೆ ಆಂಡ್ರಾಯ್ಡ್ ಮೊಬೈಲ್ ಬಳಕೆದಾರರು ಇಂಟರ್‌ನೆಟ್ ಇಲ್ಲದೆಯೂ ಗೂಗಲ್ ಕ್ರೋಮ್‌ನಲ್ಲಿ ಬ್ರೌಸ್ ಮಾಡುವ ವಿಶಿಷ್ಟ ಆಯ್ಕೆಯನ್ನು ಗೂಗಲ್ ಪರಿಚಯಿಸಿದ್ದು, ಇಂಟರ್‌ನೆಟ್ ಇಲ್ಲದೆಯೂ ಆಂಡ್ರಾಯ್ಡ್ ಬಳಕೆದಾರರು ಅಪ್‌ಡೇಟ್ ಅನ್ನು ಪಡೆಯಬಹುದಾಗಿದೆ.

ನಿರಂತರ ಇಂಟರ್ನೆಟ್ ಸಂಪರ್ಕ ಇಲ್ಲದೆಯೂ ಬ್ರೌಸ್ ಮಾಡಬಹುದಾದ ಆಯ್ಕೆಯನ್ನು ಗೂಗಲ್ ಇದೇ ಜೂ.21 ರಿಂದ ಪರಿಚಯಿಸಿದ್ದು, ವೈಫೈ ಅಥವಾ ನೆಟ್ವರ್ಕ್ ಕನೆಕ್ಟ್ ಆದ ಕೂಡಲೇ ಆ ಪ್ರದೇಶದಲ್ಲಿನ ಜನಪ್ರಿಯ ಸುದ್ದಿಗಳು ಡೌನ್‌ಲೋಡ್ ಆಗಿರುತ್ತದೆ. ಈ ಸುದ್ದಿಗಳನ್ನು ಇಂಟರ್‌ನೆಟ್ ಸಂಪರ್ಕವಿಲ್ಲದೇ ವೀಕ್ಷಿಸಬಹುದು ಎಂದು ಗೂಗಲ್ ಕ್ರೋಮ್‌ನ ನಿಯಂತ್ರಕರು ತಿಳಿಸಿದ್ದಾರೆ.

 ಇನ್ಮುಂದೆ ಗೂಗಲ್ ಕ್ರೋಮ್‌ನಲ್ಲಿ ಇಂಟರ್‏ನೆಟ್ ಇಲ್ಲದೆಯೂ ಬ್ರೌಸ್ ಮಾಡಬಹುದು!!

ನೀವು ಉಚಿತ, ಅನಪೇಕ್ಷಿತ ವೈಫೈಗೆ ಸಂಪರ್ಕಗೊಂಡಾಗ, ನಿವು ಇರುವ ಸ್ಥಳದಲ್ಲಿ ಯಾವ ವಿಷಯವು ಹೆಚ್ಚು ಜನಪ್ರಿಯವಾಗಿದೆ ಎಂಬುದರ ಆಧಾರದ ಮೇಲೆ ಗೂಗಲ್ ಕ್ರೋಮ್ ಸೂಕ್ತವಾದ ಲೇಖನಗಳನ್ನು ಸ್ವಯಂಚಾಲಿತವಾಗಿ ಡೌನ್ಲೋಡ್ ಮಾಡುತ್ತದೆ. ಇದು ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಎಂದು ಕ್ರೋಮ್‌ನ ಪ್ರಾಡಕ್ಟ್ ಮ್ಯಾನೇಜರ್ ಅಮಂಡಾ ಬಾಸ್ ಅವು ಹೇಳಿದ್ದಾರೆ.

ಸ್ವಯಂಚಾಲಿತವಾಗಿ ಡೌನ್ಲೋಡ್ ಮಾಡಲಾದ ವಿಷಯವು ಡೌನ್ಲೋಡ್ ಮಾಡಲಾದ ಎಲ್ಲಾ ವಿಷಯಗಳ ಜೊತೆಗೆ ಲಭ್ಯವಿರುತ್ತದೆ. ಕ್ರೋಮ್‌ಗೆ ಸೈನ್‌ಇನ್ ಆದರೆ ಎಲ್ಲಾ ಲೇಖನಗಳನ್ನೂ ಬ್ರೌಸಿಂಗ್ ಹಿಸ್ಟರಿ ಮೂಲಕ ಓದಬಹುದು ಎಂದು ಗೂಗಲ್ ಹೇಳಿದೆ. ಇದು ಬಳಕೆದಾರರಿಗೆ ಸ್ಥಿರ ಇಂಟರ್ನೆಟ್ ಸಂಪರ್ಕವಿಲ್ಲದೆ ವೆಬ್ ಅನ್ನು ಸರ್ಫ್ ಮಾಡಲು ಅವಕಾಶ ನೀಡುತ್ತದೆ.

 ಇನ್ಮುಂದೆ ಗೂಗಲ್ ಕ್ರೋಮ್‌ನಲ್ಲಿ ಇಂಟರ್‏ನೆಟ್ ಇಲ್ಲದೆಯೂ ಬ್ರೌಸ್ ಮಾಡಬಹುದು!!

ಭಾರತ, ನೈಜೀರಿಯಾ, ಇಂಡೋನೇಷ್ಯಾ ಮತ್ತು ಬ್ರೆಜಿಲ್ ಸೇರಿದಂತೆ 100 ದೇಶಗಳಲ್ಲಿ ಇಂಟರ್‌ನೆಟ್ ಇಲ್ಲದೆಯೂ ಗೂಗಲ್ ಕ್ರೋಮ್‌ನಲ್ಲಿ ಬ್ರೌಸ್ ಮಾಡುವ ವಿಶಿಷ್ಟ ಆಯ್ಕೆ ಲಭ್ಯವಿರುತ್ತದೆ. ಗೂಗಲ್ ಪ್ಲೇಸ್ಟೋರ್‌ನಲ್ಲಿ ಇತ್ತೀಚಿನ ಕ್ರೋಮ್ನ ಆವೃತ್ತಿಗೆ ನವೀಕರಿಸುವ ಬಳಕೆದಾರರು ಈ ವೈಶಿಷ್ಟ್ಯವನ್ನು ಬಳಸಲು ಸಾಧ್ಯವಾಗುತ್ತದೆ ಎಂದು ಗೂಗಲ್ ಸ್ಪಷ್ಟಪಡಿಸಿದೆ.

Best Mobiles in India

English summary
The automatically downloaded content would be available alongside all of the downloaded content available for access anytime, even without an Internet connection.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X