Subscribe to Gizbot

ಭಾರತದಲ್ಲಿ ಉದ್ಯೋಗಿಗಳ ಬಗ್ಗೆ ವಿಶೇಷ ಕಾಳಜಿವಹಿಸುವ ಟಾಪ್‌ ಕಂಪನಿಗಳು

Written By:

ಪ್ರಸ್ತುತ ದಿನಗಳಲ್ಲಿ ಜಾಗತೀಕರಣದಿಂದ ಹಲವು ರೀತಿಯಲ್ಲಿ ಟೆಕ್‌ ಕಂಪನಿಗಳು ತಮ್ಮ ಕಾರ್ಯಚಟುವಟಿಕೆಯಲ್ಲಿ ಬದಲಾಗಿವೆ. ಅಲ್ಲದೇ ಕಂಪನಿಗಳು ತಮ್ಮ ಉದ್ಯೋಗಿಗಳನ್ನ ನೋಡಿಕೊಳ್ಳುವ ರೀತಿ, ಅವರಿಗೆ ನೀಡುವ ಸೌಲಭ್ಯವು ಸಹ ಬದಲಾಗಿದೆ. ಉದ್ಯೋಗಿಗಳನ್ನು ಸಂತೋಷವಾಗಿ ನೋಡಿಕೊಳ್ಳುವುದು ಇಂದು ಒಂದು ರೀತಿಯ ಟ್ರೆಂಡ್‌ ಸೆಟರ್ ಸಹ ಹೌದು.

ಉದ್ಯೋಗಿಗಳನ್ನು ಸಂತೋಷದಿಂದ ನೋಡಿಕೊಳ್ಳುವ, ಉತ್ತಮ ಸೌಲಭ್ಯ ನೀಡುವ ಕಂಪನಿಗಳಿಗೆ ಉದಾಹರಣೆಯಾಗಿ ಪ್ರಖ್ಯಾತ ಸರ್ಚ್‌ ಇಂಜಿನ್‌ ಗೂಗಲ್‌, ಆಪಲ್‌, ಫೇಸ್‌ಬುಕ್‌ಗಳನ್ನು ಹೆಸರಿಸಬಹುದು.ಉದ್ಯೋಗಿಗಳನ್ನು ಸಂತೋಷವಾಗಿ ಹಾಗೂ ಅತ್ಯಧಿಕ ಫ್ರೆಂಡ್ಲಿ ಇಂದ ನೋಡಿಕೊಳ್ಳುವ ಟ್ರೆಂಡ್‌ ಇಂದು ಭಾರತದಲ್ಲಿಯೂ ಸಹ ರೂಢಿಯಾಗಿದೆ. 'ಗೋದ್ರೇಜ್' ನಂತಹ ಕಂಪನಿಯೂ ಸಹ ತನ್ನ 4000 ಉದ್ಯೋಗಿಗಳಿಗೆ ಅನಾರೋಗ್ಯ ರಜೆಯನ್ನು ತೆಗೆಯುವ ಮುಖಾಂತರ ಭಾರತದ ಇತರೆ ಹಲವು ಟೆಕ್‌ ಕಂಪನಿಗಳಿಗೆ ಸ್ಫೂರ್ತಿದಾಯಕವಾಗಿದೆ.

ಅಂದಹಾಗೆ ಭಾರತದಲ್ಲಿ ತನ್ನ ಉದ್ಯೋಗಿಗಳನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳುವ, ಫ್ರೆಂಡ್ಲಿ ವರ್ಕ್‌ ವ್ಯವಸ್ಥೆಯನ್ನು ಕಲ್ಪಿಸಿರುವ, ಹಾಗೂ ಕೆಲಸದ ಒತ್ತಡದಿಂದ ಬೇಸರಗೊಳ್ಳದಂತೆ ಸದಾ ಸಂತೋಷವಾಗಿ ನೋಡಿಕೊಳ್ಳುವ ಟಾಪ್‌ ಕಂಪನಿಗಳು ಯಾವುವು ನಿಮಗೆ ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ.

ವೋಡಾಫೋನ್ ಗ್ರಾಹಕರಿಗೆ 10 ನಿಮಿಷ ಉಚಿತ ಟಾಕ್‌ಟೈಮ್‌ ಆಫರ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಟಿಸಿ

ಐಟಿಸಿ

ಸಂಘಟಿತ ವ್ಯಾಪಾರಿ ಕಂಪನಿಯಾಗಿರುವ 'ಐಟಿಸಿ' ತನ್ನ ಹಿರಿಯ ಉದ್ಯೋಗಿಗಳಿಗೆ ಹೆಚ್ಚು ಸಹಾಯಕವಾಗಿರುವ ಕಂಪನಿಯಾಗಿದೆ. ಅಲ್ಲದೇ ಯಂಗ್‌ ಟ್ಯಾಲೆಂಟ್‌ಗಳಿಗೆ ಉತ್ತಮ ಅವಕಾಶ ನೀಡುವ, ಹೊಸ ಹೊಸ ಬ್ರ್ಯಾಂಡ್‌ ಕ್ರಿಯೇಟ್‌ ಮಾಡುವ, ಅದನ್ನು ಪ್ರಖ್ಯಾತಗೊಳಿಸಲು ಉತ್ತಮ ಅವಕಾಶ ನೀಡುವ ಯೋಜನೆಯನ್ನು ಹಿರಿಯ ಉದ್ಯೋಗಿಗಳು ರೂಪಿಸುತ್ತಾರೆ. ಚಿತ್ರ ಕೃಪೆ : : BCCL

ಫ್ಲಿಪ್‌ಕಾರ್ಟ್‌

ಫ್ಲಿಪ್‌ಕಾರ್ಟ್‌

ಮಹಿಳೆಯರಿಗೆ "ಮೆಟರ್ನಿಟಿ" ರಜೆ ನೀಡುವಂತೆ ಪುರುಷರಿರೂ ಸಹ ಪಿತೃತ್ವ ನೀತಿಯನ್ನು ಹೊಂದುವುದರ ಮೂಲಕ ಉತ್ತಮ ಕಂಪನಿ ಎನಿಸಿಕೊಂಡಿದೆ. ಫ್ಲಿಪ್‌ಕಾರ್ಡ್ ತನ್ನ ಪುರುಷ ಉದ್ಯೋಗಿಗಳಿಗೆ 10 ದಿನಗಳ ರಜೆಯನ್ನು ಮಗು ಜನಿಸುವ ಮುನ್ನ ಅಥವಾ ಮಗು ಜನಿಸಿದ ನಂತರದ 6 ತಿಂಗಳ ಒಳಗೆ ರಜೆ ತೆಗೆದುಕೊಳ್ಳಬಹುದಾದ ಅವಕಾಶ ನೀಡಿದೆ. ಅಲ್ಲದೇ ಮೊದಲ ಮೂರು ತಿಂಗಳು 4 ಗಂಟೆಗಳ ಕಾಲ ಕಂಪನಿಯಲ್ಲಿ ಕೆಲಸ ಮಾಡಿ, 4 ಗಂಟೆಗಳ ಕಾಲ ಮನೆಯಿಂದ ಕೆಲಸ ಮಾಡಬಹುದಾದ ಅವಕಾಶವನ್ನು ಸಹ ನೀಡಿದೆ.
ಚಿತ್ರ ಕೃಪೆ :BCCL

ಅಸೆಂಚರ್

ಅಸೆಂಚರ್

ಬಹುರಾಷ್ಟ್ರೀಯ ವ್ಯವಸ್ಥಾಪನೆಯ ಸಮಾಲೋಚಕ ಸೇವೆಗಳಿಗೆ ಹೆಸರುವಾಸಿಯಾದ ಅಸೆಂಚರ್ ಕಂಪನಿ ತನ್ನ ಉದ್ಯೋಗಿಗಳಿಗೆ "Hours That Help" ಎಂಬ "Sharing and Caring" ನೀತಿಯನ್ನು ಹೊಂದಿದೆ. ಉದ್ಯೋಗಿಗಳು ತಮ್ಮ ಸಹೋದ್ಯೋಗಿಗಳಿಗೆ ತಮ್ಮ ರಜೆಯನ್ನು ಹಂಚಬಹುದಾಗಿದೆ. ಇದು ಒಂದು ಉತ್ತಮ ನೀತಿಯಾಗಿದ್ದು, ಅಲ್ಲಿನ ಉದ್ಯೋಗಿಗಳು ಹೆಮ್ಮೆಪಡುತ್ತಾರಂತೆ. ಚಿತ್ರ ಕೃಪೆ :livemint

ಗೂಗಲ್‌

ಗೂಗಲ್‌

ಇಂಡಿಯಾ ಗೂಗಲ್‌ ಉದ್ಯೋಗಿಗಳ ಆರೈಕೆ ವಿಷಯಕ್ಕೆ ಬಂದಾಗ ಅದು ಯಾವಾಗಲು ಪ್ರತ್ಯೇಕ. ಕಾರಣ ಊಟದ ವಿಷಯದಿಂದ ಹಿಡಿದು ಮನರಂಜನಾ ಚಟುವಟಿಕೆಗಳಿಗೂ ಸಹ ಗೂಗಲ್‌ ಅತ್ಯುತ್ತಮ. ಕೆಲಸದ ಜೊತೆಗೆ ತನ್ನ ಉದ್ಯೋಗಿಗಳ ರಹಸ್ಯ ಪ್ರತಿಭೆಗಳನ್ನು ಹೊರತೆಗೆಯಲು ಪ್ರಯತ್ನಿಸುತ್ತದೆ. ಚಿತ್ರ ಕೃಪೆ : BCCL

ಟಾಟಾ ಟೆಲಿಸರ್ವಿಸಸ್ ಲಿಮಿಟೆಡ್

ಟಾಟಾ ಟೆಲಿಸರ್ವಿಸಸ್ ಲಿಮಿಟೆಡ್

ವಿಶೇಷದಲ್ಲಿ ವಿಶೇಷ ಅಂದ್ರೆ ಟಾಟಾ ಟೆಲಿಸರ್ವಿಸಸ್ ಲಿಮಿಟೆಡ್. ಯಾಕಂದ್ರೆ ಸಂಪೂರ್ಣವಾಗಿ ಹಾಜರಾತಿ ನೀತಿಯನ್ನು ನಾಶಗೊಳಿಸಿದೆ. ಅಲ್ಲದೇ ಯಾವುದೇ ಸ್ವೈಪಿಂಗ್‌ ಸಹ ಕಡ್ಡಾಯವಲ್ಲ. ಟಾಟಾ ಟೆಲಿಸರ್ವಿಸಸ್‌ ಲಿಮಿಟೆಡ್‌ ತನ್ನ ಉದ್ಯೋಗಿಗಳಿಗೆ ತಮ್ಮ ಗುರಿ ಮುಟ್ಟಲು ಮತ್ತು ಪ್ರಾಡಕ್ಟಿವಿಟಿ ಕಾಪಾಡಿಕೊಳ್ಳಲು ಮುಕ್ತ ಅವಕಾಶ ನೀಡಿದೆ ಅಷ್ಟೆ. ಚಿತ್ರ ಕೃಪೆ : dlnengg.com

BHEL

BHEL

BHEL ಹಲವು ವರ್ಷಗಳಿಂದ ತನ್ನ ಉದ್ಯೋಗಿಗಳನ್ನು ಉಳಿಸಿಕೊಳ್ಳುವಲ್ಲಿ ಪ್ರಖ್ಯಾತವಾಗಿದೆ. ತಮಗೆ ಸರಿ ಏನಿಸಿದ ಉದ್ಯೋಗವನ್ನು ತಾವೇ ಆರಿಸಿಕೊಳ್ಳುವ ಉತ್ತಮ ಅವಕಾಶವನ್ನು ಕಂಪನಿ ನೀಡಿದೆ. ಇಂಜಿನಿಯರ್‌ ಆಗಿದ್ದರೂ ಸಹ ಹಣಕಾಸಿನ ವ್ಯವಹಾರವನ್ನು ನೋಡಿಕೊಳ್ಳುವಂತಹ ಅವಕಾಶಗಳನ್ನು ಈ ಕಂಪನಿ ತನ್ನ ಉದ್ಯೋಗಿಗಳಿಗೆ ನೀಡುತ್ತದೆ. ಚಿತ್ರ ಕೃಪೆ : businesstoday.intoday.in

ಗೋದ್ರೇಜ್‌

ಗೋದ್ರೇಜ್‌

ವ್ಯಾಪಾರಿ ಸಂಘಟನೆಯ ಉತ್ತಮ ಕಂಪನಿ ಎಂದು ಪ್ರಸಿದ್ಧಿಯಾದ ಗೋದ್ರೇಜ್‌ ಕಂಪನಿಯು ತನ್ನ ಉದ್ಯೋಗಿಗಳಿಗೆ ಅನಾರೋಗ್ಯ ರಜೆ ತೆಗೆಯುವ ಉತ್ತಮ ನೀತಿಯಿಂದ ಇತರೆ ಎಲ್ಲಾ ಕಂಪನಿಗಳಿಗೆ ಸ್ಫೂರ್ತಿಯಾಗಿದೆ.

ಚಿತ್ರ ಕೃಪೆ : officechai.com

ಭಾರತದ ಮ್ಯಾರಿಯೊಟ್ ಹೊಟೇಲ್

ಭಾರತದ ಮ್ಯಾರಿಯೊಟ್ ಹೊಟೇಲ್

ಭಾರತದ ಮ್ಯಾರಿಯೊಟ್‌ ಹೊಟೇಲ್‌ ಉದ್ಯೋಗಿಗಳನ್ನು, ಉದ್ಯೋಗಿಗಳು ಎಂದು ಕರೆಯದೇ ಅಸೋಸಿಯೇಟ್ಸ್‌ ಎಂದು ಕರೆಯಲಾಗುತ್ತದೆ. ಅಲ್ಲದೇ ವಿದೇಶ ಪ್ರಯಾಣಕ್ಕೆ ತನ್ನ ಉದ್ಯೋಗಿಗಳಿಗೆ ಉತ್ತಮ ಪ್ರೋತ್ಸಾಹ ಧನ ನೀಡುತ್ತದೆ. 5 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳಿರುವ ಮ್ಯಾರಿಯೊಟ್‌ ಹೊಟೇಲ್‌ ಉದ್ಯೋಗಿಗಳು ಸಂತೋಷದಿಂದ ಕೆಲಸ ನಿರ್ವಹಿಸುತ್ತಾರೆ.
ಚಿತ್ರ ಕೃಪೆ : : natgeotraveller.in

ಎಸ್‌ಎಪಿ ಲ್ಯಾಬ್ಸ್ ಇಂಡಿಯಾ

ಎಸ್‌ಎಪಿ ಲ್ಯಾಬ್ಸ್ ಇಂಡಿಯಾ

ವಿಶಾಲ ಸಾಫ್ಟ್‌ವೇರ್‌ ಮಾರಾಟಗಾರ ಕಂಪನಿಯಾದ " ಎಸ್‌ಎಪಿ ಲ್ಯಾಬ್ಸ್ ಇಂಡಿಯಾ " ಹೆಚ್ಚುವರಿ ಮಾತೃತ್ವ ರಜೆ ಯನ್ನು ತನ್ನ ಮಹಿಳಾ ಉದ್ಯೋಗಿಗಳಿಗೆ ನೀಡಿದೆ. ಅಲ್ಲದೇ ಕಂಪನಿಯೂ ತನ್ನ ಉದ್ಯೋಗಿಗಳಿಗೆ ಸಾರಿಗೆ ವ್ಯವಸ್ಥೆ, ಮನೆಯಿಂದ ಕೆಲಸ ನಿರ್ವಹಿಸುವ ವ್ಯವಸ್ಥೆ ನೀಡಿದೆ. ಉದ್ಯೋಗಿಗಳಿಗೆ ಮನರಂಜನೆ ನೀಡಲು ನಾಟಕ, ಸಂಗೀತ, ಕಲೆ ಮತ್ತು ನೃತ್ಯ ಚಟುವಟಿಕೆಗಳನ್ನು ಪರಿಚಯಿಸಿದೆ.
ಚಿತ್ರ ಕೃಪೆ : : BCCL

ಕೋಕಾ ಕೋಲಾ ಇಂಡಿಯಾ

ಕೋಕಾ ಕೋಲಾ ಇಂಡಿಯಾ

ಕೋಕಾ ಕೋಲಾ ಇಂಡಿಯಾ ಕಂಪನಿಗೆ ಸೇರಿನ ಯಾವುದೇ ಉದ್ಯೋಗಿಯನ್ನು ಜಡತ್ವವಾಗಿ ಇಡಲು ಕಂಪನಿ ಬಿಡುವುದಿಲ್ಲವಂತೆ. ತನ್ನ ಉದ್ಯೋಗಿಯ ಬೆಳವಣಿಗೆಗೆ ಉತ್ತಮ ಅವಕಾಶವನ್ನು ಕಂಪನಿ ಕಲ್ಪಿಸುತ್ತದಂತೆ. ಪೆಗಾಸಸ್, ಕ್ರಿಸಾಲಿಸ್ ಮತ್ತು ಕೋರ್ ಎಂಬ ಪ್ರೋಗ್ರಾಮ್‌ಗಳನ್ನು ಏರ್ಪಡಿಸಿ ತರಬೇತಿ ನೀಡಿ ಉದ್ಯೋಗಿಯ ಬೆಳವಣಿಗೆಗೆ ಯೋಜನೆ ರೂಪಿಸುತ್ತದಂತೆ. ಮಹಿಳೆಯರಿಗೆ ಯಂಗ್‌ ಟ್ಯಾಲೆಂಟ್‌ಗಳಿಗೆ ಅವಕಾಶ ನೀಡಿ ಅವರ ಸೃಜನಶೀಲತೆಯನ್ನು ಬೆಳೆಸಲು ಸಹಕರಿಸುತ್ತದಂತೆ.
ಚಿತ್ರ ಕೃಪೆ : : BCCL

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Companies That Take Great Care Of Their Employees In India. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot