ವೋಡಾಫೋನ್ ಗ್ರಾಹಕರಿಗೆ 10 ನಿಮಿಷ ಉಚಿತ ಟಾಕ್‌ಟೈಮ್‌ ಆಫರ್

By Suneel
|

ವೋಡಾಫೋನ್‌ ಇಂಡಿಯಾ ತನ್ನ ಇತ್ತೀಚಿನ ಎಲ್ಲಾ ಆಫರ್‌ಗಳ ಜೊತೆಗೆ 10 ನಿಮಿಷ ಉಚಿತ ಟಾಕ್‌ಟೈಮ್ ಆಫರ್‌ ನೀಡುತ್ತಿದೆ. 10 ನಿಮಿಷ ಉಚಿತ ಟಾಕ್‌ಟೈಮ್‌ ಆಫರ್ ಅನ್ನು ಯಾವ ಗ್ರಾಹಕ ಕರೆನಿರತವಾಗಿದ್ದಾಗ ಅಡಚಣೆ ಸಮಸ್ಯೆಯನ್ನು ಪಡೆಯುತ್ತಾರೋ ಅಂತಹವರು ಈ ಆಫರ್‌ ಅನ್ನು ಪಡೆಯುತ್ತಾರೆ ಎಂದು ಕಂಪನಿ ಶುಕ್ರವಾರ ಹೇಳಿದೆ.

ವೋಡಾಫೋನ್ ಗ್ರಾಹಕರಿಗೆ 10 ನಿಮಿಷ ಉಚಿತ ಟಾಕ್‌ಟೈಮ್‌ ಆಫರ್

"ವೋಡಾಫೋನ್ ನೆಟ್‌ವರ್ಕ್‌ನಲ್ಲಿ ಪ್ರತಿಯೊಂದು ಕರೆಯ ಸಂಭಾಷಣೆಯು ಮುಖ್ಯವಾಗಿದ್ದು, ನೆಟ್‌ವರ್ಕ್‌ನಿಂದ ಅಡಚಣೆ ಉಂಟಾಗದಂತೆ ಕಾಪಾಡಿಕೊಳ್ಳಬೇಕಾಗಿದೆ. ಕೆಲವೊಮ್ಮೆ ಸಂಭಾಷಣೆ ಅಡಚಣೆ ಪಡೆಯಬಹುದು. ಅಂತಹ ಕರೆಗಳನ್ನು ಮುಂದುವರೆಸಲು 10 ನಿಮಿಷಗಳ ಟಾಕ್‌ಟೈಮ್‌ ಬೆನಿಫಿಟ್‌ ಅನ್ನು ಆಫರ್‌ ಮಾಡುತ್ತಿದ್ದೇವೆ ಎಂದು ಯಾವುದೇ ಪ್ರಶ್ನೆಗಳನ್ನು ಕೇಳದೆ" ವೋಡಾಫೋನ್‌ ಇಂಡಿಯಾ ಬ್ಯುಸಿನೆಸ್ ನಿರ್ದೇಶಕ 'ಸಂದೀಪ್‌ ಕಟಾರಿಯಾ' ಹೇಳಿದ್ದಾರೆ.

ವೋಡಾಫೋನ್ ದರಕಡಿತ; ಗ್ರಾಹಕರಿಗೆ ಶೇ.67 ಹೆಚ್ಚು ಡಾಟಾ ಬೆನಿಫಿಟ್

ಕರೆ ಸಂಭಾಷಣೆಯಲ್ಲಿ ಅಡಚಣೆ ಪಡೆದ ವೋಡಾಫೋನ್‌ ಗ್ರಾಹಕ 10 ನಿಮಿಷಗಳ ಉಚಿತ ಟಾಕ್‌ಟೈಮ್‌ ಪಡೆಯಲು 'BETTER' ಎಂದು ಟೈಪಿಸಿ 199 ನಂಬರ್‌ಗೆ ಮೆಸೇಜ್‌ ಮಾಡಬೇಕು. ಮೆಸೇಜ್‌ ಮಾಡಿದ 30 ನಿಮಿಷಗಳ ಒಳಗಾಗಿ ಉಚಿತ 10 ನಿಮಿಷ ಟಾಕ್‌ಟೈಮ್‌ ಗ್ರಾಹಕನಿಗೆ ಕ್ರೆಡಿಟ್‌ ಆಗುತ್ತದೆ.

ವೋಡಾಫೋನ್ ಗ್ರಾಹಕರಿಗೆ 10 ನಿಮಿಷ ಉಚಿತ ಟಾಕ್‌ಟೈಮ್‌ ಆಫರ್

ಪ್ರೀಪೇಡ್ ಗ್ರಾಹಕ ಈ 10 ನಿಮಿಷಗಳ ಉಚಿತ ಟಾಕ್‌ಟೈಮ್‌ ಆಫರ್‌ ಪಡೆದ ಎರಡನೇ ದಿನದ ಮಧ್ಯರಾತ್ರಿವರೆಗೆ ವ್ಯಾಲಿಡ್‌ ಆಗಿರುತ್ತದೆ. ಪೋಸ್ಟ್‌ ಪೇಡ್‌ ಗ್ರಾಹಕರಿಗೆ ಬಿಲ್ಲಿಂಗ್‌ ಸೈಕಲ್‌ ಮುಗಿಯುವವರೆಗೆ ವ್ಯಾಲಿಡ್‌ ಆಗಿರುತ್ತದೆ. ಅಂದಹಾಗೆ ಈ ಆಫರ್ ಸಿಗುವುದು ಒಂದೇ ವೃತ್ತದ ವೋಡಾಫೋನ್‌ ಗ್ರಾಹಕ ಇನ್ನೊಂದು ವೋಡಾಫೋನ್‌ ಗ್ರಾಹಕನಿಗೆ ಕರೆ ಮಾಡಿ ನೆಟ್‌ವರ್ಕ್‌ ಅಡಚಣೆ ಉಂಟಾದಾಗ ಮಾತ್ರ.

ವೋಡಾಫೋನ್ ಬಳಕೆದಾರರು ಉಚಿತ ಇಂಟರ್ನೆಟ್‌ ಬಳಸುವುದು ಹೇಗೆ?

ವೋಡಾಫೋನ್ ತನ್ನ ಉಚಿತ 10 ನಿಮಿಷಗಳ ಟಾಕ್‌ಟೈಮ್‌ ಬೆನಿಫಿಟ್ ಆಫರ್ ಅನ್ನು ಎಲ್ಲಾ ಮಾಧ್ಯಮಗಳಲ್ಲೂ ತಿಳಿಸಲಿದೆಯಂತೆ. ಅಂದಹಾಗೆ ಇದೇ ಖುಷಿಯಲ್ಲಿ ಆಗಸ್ಟ್‌ ತಿಂಗಳಲ್ಲಿ ಫ್ರೆಂಡ್‌ಶಿಪ್‌ ಡೇ, ಸ್ವಾತಂತ್ರ ದಿನಾಚರಣೆ, ರಕ್ಷಾ ಬಂಧನವನ್ನು ತನ್ನ ಗ್ರಾಹಕರೊಂದಿಗೆ ಆಚರಿಸಲಿದೆಯಂತೆ.

ಕ್ಯಾನ್ಸರ್‌ ಸಂಶೋಧನೆಗೆ ವೋಡಾಫೋನ್‌ ಡ್ರೀಮ್‌ಲ್ಯಾಬ್ ಅಪ್ಲಿಕೇಶನ್‌

Best Mobiles in India

Read more about:
English summary
Vodafone to offer 10 minutes of free talk time for interrupted calls. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X